17 ವರ್ಷದ ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕಿರುತೆರೆ ನಟಿ..!

ಕಿರುತೆರೆ ನಟಿ ತಮ್ಮ 17 ವರ್ಷದ ಅಪ್ರಾಪ್ತ ವಯಸ್ಸಿನ ಮಗಳನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ. ಘಟನೆ ನಡೆದಾಗ ನಟಿಯ ಗಂಡ ಮನೆಯಲ್ಲಿ ಇರಲಿಲ್ಲ ಎನ್ನಲಾಗುತ್ತಿದೆ.

Anitha E | news18
Updated:August 10, 2019, 5:01 PM IST
17 ವರ್ಷದ ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕಿರುತೆರೆ ನಟಿ..!
ಪ್ರಾತಿನಿಧಿಕ ಚಿತ್ರ
  • News18
  • Last Updated: August 10, 2019, 5:01 PM IST
  • Share this:
ಕಿರುತೆರೆ ಕಲಾವಿದರು ಆತ್ಮಹತ್ಯೆಗೆ ಶರಣಾಗುವ ಘಟನೆಗಳು ಇತ್ತೀಚೆಗೆ ಹೆಚ್ಚುತ್ತಿವೆ ಎಂದರೆ ತಪ್ಪಾಗದು. 'ಬಾಹುಬಲಿ' ಸಿನಿಮಾದಲ್ಲಿ ಅಭಿನಯಿಸಿದ್ದ ನಟ ಹೆಂಡತಿ ಸಹ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಈಗ ಮತ್ತೊಂದು ಘಟನೆ ನಡೆದಿದೆ.

ಕಿರುತೆರೆ ನಟಿ ತಮ್ಮ 17 ವರ್ಷದ ಅಪ್ರಾಪ್ತ ವಯಸ್ಸಿನ ಮಗಳನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ. ಈ ಘಟನೆಗೆ ಕಾರಣ ಏನು ಎಂದು ಇನ್ನೂ ತಿಳಿದು ಬಂದಿಲ್ಲ. ಗಂಟ ಮನೆಯಲ್ಲಿ ಇಲ್ಲದಾಗ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

TV actress kills daughter then commit suicide in Maharashtra thane
ಆತ್ಮಹತ್ಯೆಗೆ ಶರಣಾದ ಕಿರುತೆರೆ ನಟಿ ಹಾಗೂ ಅವರ ಮಗಳು


ಮರಾಠಿ ಧಾರಾವಾಹಿಗಳಲ್ಲಿ ಅಭಿನಯಿಸುವ ಕಲಾವಿದೆ ಪ್ರಜ್ಞಾ ಆತ್ಮಹತ್ಯೆ ಮಾಡಿಕೊಂಡ ನಟಿ ಎನ್ನಲಾಗುತ್ತಿದೆ. ಈ ಹೃದಯ ವಿದ್ರಾವಕ ಘಟನೆ ನಡೆದಿರುವುದು ಮುಂಬೈನ ಕಲ್ವಾದಲ್ಲಿ. ಕಲ್ವಾದಲ್ಲಿರುವ ಸುಮನ್​ ಸೊಸೈಟಿಯಲ್ಲಿ ಗಂಡ ಹಾಗೂ ಮಗಳೊಂದಿಗೆ ವಾಸವಿದ್ದ ನಟಿ, ಗಂಡ ಮನೆಯಿಂದ ಹೊರಗಡೆ ಹೋಗಿದ್ದಾಗ ಈ ಕೃತ್ಯವೆಸಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Mardaani 2: ಮತ್ತೆ ಪೊಲೀಸ್​ ಅಧಿಕಾರಿಯಾಗಿ ರಾಣಿ ಮುಖರ್ಜಿ: ಮರ್ದಾನಿ 2 ರಿಲೀಸ್​ ಡೇಟ್​ ಫಿಕ್ಸ್​..!

ಈಕೆಯ ಪತಿ ಉದ್ಯಮಿಯಾಗಿದ್ದು, ವ್ಯವಹಾರದಲ್ಲಿ ಕೊಂಚ ನಷ್ಟವಾಗಿದ್ದು, ಇತ್ತೀಚೆಗೆ ಕೊಂಚ ಸಂಕಷ್ಟದಲ್ಲಿದ್ದರಂತೆ. ಇದರಿಂದಾಗಿ ಪ್ರಜ್ಞಾ ಧಾರಾವಾಹಿಗಳಲ್ಲಿ ಅಭಿನಯಿಸೋಕೆ ಆರಂಭಿಸಿದ್ದರಂತೆ. ಆದರೆ ಆರ್ಥಿಕ ಸಮಸ್ಯೆಯಿಂದ ಬೇಸತ್ತು ಅವರು ಮಗಳನ್ನು ಕೊಂದು, ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಘಟನಾ ಸ್ಥಳದಿಂದ ಪತ್ರವೊಂದು ಸಿಕ್ಕಿದ್ದು, ಅದರಲ್ಲಿ ಪ್ರಜ್ಞಾ ಖಿನ್ನತೆಗೊಳಗಾಗಿದ್ದು, ಅದರಿಂದಾಗಿ ಮಗಳನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾರಂತೆ. ಇತ್ತೀಚೆಗೆ ಪ್ರಜ್ಞಾ ಅವರಿಗೆ ಅಭಿನಯದ ಅವಕಾಶಗಳೂ ಸರಿಯಾಗಿ ಸಿಗುತ್ತಿರಲಿಲ್ಲ. ಅದರಿಂದ ಕೊಂಚ ಆರ್ಥಿಕ ಸಂಕಷ್ಟದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನೂ ಓದಿ: Rakhi Sawanth: ರಾಖಿ ಸಾವಂತ್​ರ ಗಂಡ ಮಾಧ್ಯಮಗಳ ಮುಂದೆ ಬರದೇ ಇರುವುದಕ್ಕೆ ಕಾರಣ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರಾ..!

ಶುಕ್ರವಾರ ಬೆಳಿಗ್ಗೆ 8-9 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದ್ದು, ಈ ವೇಳೆ ಮೃತಳ ಗಂಡ ಜಿಮ್​ಗೆ ಹೋಗಿದ್ದರು ಎನ್ನಲಾಗುತ್ತಿದೆ. ಮನೆಯಲ್ಲಿ ಪ್ರಜ್ಞಾ ದೇಹ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಹಾಗೂ ಮಗಳು ಶ್ರುತಿ ದೇಹ ಮಂಚದ ಮೇಲೆ ಸಿಕ್ಕಿದೆಯಂತೆ.

Shah Rukh Khan: ಕಿಂಗ್​ ಖಾನ್​ ಶಾರುಕ್​ಗೆ ಡಾಕ್ಟರೇಟ್​ ನೀಡಿ ಗೌರವಿಸಿದ ಮೆಲ್ಬೋರ್ನ್​ನ ವಿಶ್ವವಿದ್ಯಾಲಯ..!
First published: August 10, 2019, 5:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading