ಇತ್ತೀಚಿಗೆ Sandalwood ನಲ್ಲಿ ಸಾಕಷ್ಟು ಮಂದಿ ಐಷಾರಾಮಿ ಕಾರುಗಳನ್ನು ಖರೀದಿಸಿ ಸುದ್ದಿಯಾಗುತ್ತಿದ್ದಾರೆ, ಸ್ಯಾಂಡಲ್ ವುಡ್ ಮಾತ್ರವಲ್ಲದೇ ಕಿರುತೆರೆ ನಟ ನಟಿಯರು ಕೂಡ ದುಬಾರಿ ಕಾರುಗಳನ್ನು ಖರೀದಿ ಮಾಡುತ್ತಿದ್ದಾರೆ. ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 7ರ ವಿನ್ನರ್, ಕಿರುತೆರೆ ನಟ ಮತ್ತು ನಿರೂಪಕ ಶೈನ್ ಶೆಟ್ಟಿ ಈಗ ದುಬಾರಿ ಕಾರಿನ್ನು ಖರೀದಿಸಿದ್ದು, ಇದೀಗ ಆ ಸಾಲಿಗೆ ಶೈನ್ ಶೆಟ್ಟಿ ಕೂಡ ಸೇರಿದ್ದಾರೆ.
ಇನ್ನು ಶೈನ್ ನೀಲಿ ಬಣ್ಣದ ಬಿಎಂಡಬ್ಲ್ಯೂ.ಕಾರನ್ನು ಖರೀದಿ ಮಾಡುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಕಾರಿನ ಜೊತೆ ಶೈನ್ ಶೆಟ್ಟಿ ಹಾಗೂ ಅವರ ತಾಯಿ ಕ್ಕಿಕ್ಕಿಸಿರುವ ಫೋಟೋ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಕಳೆದ ವಾರವಷ್ಟೇ ನಟ ರಕ್ಷಿತ್ ಶೆಟ್ಟಿ ಹೊಸ ಕಾರನ್ನು ಖರೀದಿ ಮಾಡಿ ಸುದ್ದಿಯಾಗಿದ್ದರು. ಕಾರಿಗೆ ಪೂಜೆ ಮಾಡಿಸಿ ಹೊಸ ಕಾರಿನ ಜೊತೆಯ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಅಲ್ಲದೇ ಜೊತೆ ಜೊತೆಯಲಿ ಸಿರೀಯಲ್ ಖ್ಯಾತಿಯ ಕಿರುತೆರೆ ನಟಿ ಮೇಘ ಶೆಟ್ಟಿ ಕೂಡ ಒಟ್ಟಿಗೆ ಎರಡು ದುಬಾರಿ ಕಾರ್ಗಳನ್ನು ಖರೀದಿ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಒಂದೇ ದಿನ ಬಿಎಂಬ್ಲ್ಯೂ ಮತ್ತು ಎಂಜಿ ಹೆಕ್ಟರ್ ಎರಡು ಕಾರನ್ನು ಖರೀದಿ ಮಾಡಿದ್ದ ಮೇಘ ಕಾರಿನ ಜೊತೆ ನಮ್ಮ ಫೋಟೋವನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ರಕ್ಷಿತ್ ಶೆಟ್ಟಿ ನಿರ್ಮಾಣದ ಹೊಸಬರ ಚಿತ್ರದಲ್ಲಿ ಅನಂತ್ ನಾಗ್ ನಟನೆ
ಇನ್ನು ಶೈನ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಅದ್ಭುತವಾಗಿ ಆಟವಾಡುವ ಮೂಲಕ ಪ್ರೇಕ್ಷಕರ ಮನಗೆದ್ದು, 'ಬಿಗ್ ಬಾಸ್-7' ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದರು. ಬಿಗ್ ಸ್ಪರ್ಧೆಯ 50 ಲಕ್ಷ ಹಣದ ಜೊತೆ ಕಾರನ್ನು ಸಹ ಗಿಫ್ಟ್ ಆಗಿ ಪಡೆದಿದ್ದರು, ಕೇವಲ ಕಾರು ಮಾತ್ರವಲ್ಲದೇ ಹೆಚ್ಚಿನ ಹಣವನ್ನು ಸಹ ಗಳಿಸಿದ್ದರು. ಅಲ್ಲದೇ ಬಿಗ್ ಬಾಸ್ ನಂತರ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಇನ್ನು ಅವರ ಸಿನೆಮಾಗಳ ವಿಚಾರಕ್ಕೆ ಬಂದರೆ, ಸದ್ಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾದಲ್ಲಿ ಶೈನ್ ಅಭಿನಯಿಸುತ್ತಿದ್ದಾರೆ. ಕೇವಲ ಸ್ಯಾಂಡಲ್ ವುಡ್ನಲ್ಲಿ ಮಾತ್ರವಲ್ಲದೇ ಬಾಲಿವುಡ್ನಲ್ಲಿ ಕೂಡ ತಮ್ಮ ಛಾಪು ಮೂಡಿಸುತ್ತಿದ್ದು, ಹಿಂದಿ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಗ್ ಬಾಸ್ ನಂತರ ಶೈನ್ ಹೆಚ್ಚು ಬ್ಯೂಸಿಯಾಗಿದ್ದು ನಮ್ಮ ಗಲ್ಲಿ ಕಿಚನ್ ಉದ್ಯಮದ ಜೊತೆಗೆ ಬಾಲಿವುಡ್ , ಸ್ಯಾಂ.ಡಲ್ ವುಡ್ ಹಾಗೂ ಕಿರುತೆರೆಯಲ್ಲಿ ಕೂಡ ಒಂದೆಲ್ಲ ಒಂದು ಕಾರ್ಯಕ್ರಮದ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ನಿರೂಪಕರಾಗಿ ಹೆಚ್ಚು ಪ್ರಸಿದ್ದರಾಗಿರುವ ಶೈನ್ ಖಾಸಗಿ ವಾಹಿಯೊಂದರ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ಮತ್ತೆ ನಿರೂಪಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ