• Home
  • »
  • News
  • »
  • entertainment
  • »
  • Kantara Inspired Pingara: ದೈವವನ್ನು ನಂಬಿದ ಅಷ್ಟೂ ಸಿನಿಮಾ ಹಿಟ್! ರಾಷ್ಟ್ರಪ್ರಶಸ್ತಿ ಪಡೆದ ಪಿಂಗಾರ ರಿಲೀಸ್​​ಗೆ ರೆಡಿ

Kantara Inspired Pingara: ದೈವವನ್ನು ನಂಬಿದ ಅಷ್ಟೂ ಸಿನಿಮಾ ಹಿಟ್! ರಾಷ್ಟ್ರಪ್ರಶಸ್ತಿ ಪಡೆದ ಪಿಂಗಾರ ರಿಲೀಸ್​​ಗೆ ರೆಡಿ

ದೈವವನ್ನ ನಂಬಿದ ಅಷ್ಟೂ ಸಿನಿಮಾ ಹಿಟ್

ದೈವವನ್ನ ನಂಬಿದ ಅಷ್ಟೂ ಸಿನಿಮಾ ಹಿಟ್

ಪಿಂಗಾರ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬರುತ್ತದೆ ಅಂತಲೇ ಅಂದುಕೊಂಡಿರಲಿಲ್ಲ. ಆದರೆ ದೈವದ ಕೃಪೆಯಿಂದ ಇದು ಸಾಧ್ಯವಾಗಿದೆ. ಇಂತಹ ಈ ಸಿನಿಮಾದ ಬಗ್ಗೆ ನಮಗೆ ಹಮ್ಮೆ ಇದೆ ಅಂತಲೇ ಡೈರೆಕ್ಟರ್ ಪ್ರೀತಂ ಶೆಟ್ಟಿ, ನ್ಯೂಸ್-18 ಕನ್ನಡ ಡಿಜಿಟಲ್​ಗೆ ಹೇಳಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ (Kantara) ತುಳುನಾಡಿನ ಕಲೆ-ಸಂಸ್ಕೃತಿ-ಆಚರಣೆಯನ್ನ ಇಡೀ ದೇಶಕ್ಕೆ ಪರಿಚಯಿಸಿದೆ. ಒಂದು ವೇಳೆ ಇದೇ (Commercial Cinema) ಸಿನಿಮಾ ಕಮರ್ಷಿಯಲ್ ಚೌಕಟ್ಟಿನಲ್ಲಿ ನಿರ್ಮಾಣ ಆಗದೇ ಇದ್ದಿದ್ದರೇ, ಇದು ಕೂಡ ಒಂದು ರಾಷ್ಟ್ರೀಯ ಪ್ರಶಸ್ತಿಗೆ ಮಾತ್ರ ಸೀಮಿತವಾಗುತ್ತಿತ್ತು. ಆದರೆ ನಟ-ನಿರ್ದೇಶಕ ರಿಷಬ್ (Rishab Shetty) ಶೆಟ್ಟಿ ಚಿತ್ರವನ್ನ ಎಲ್ಲರಿಗೂ ರೀಚ್ ಆಗೋ ಫಾರ್ಮೂಲಾದೊಂದಿಗೇನೆ ರೆಡಿ ಮಾಡಿದ್ದರು. ಇದರಿಂದ ಈಗ ಕಾಂತಾರ ಸಿನಿಮಾ (Super Hit Cinema) ಸೂಪರ್ ಹಿಟ್ ಆಗಿಯೇ ಎಲ್ಲೆಡೆ ರೀಚ್ ಆಗಿದೆ. ಕಾಂತಾರ ಸಿನಿಮಾದ ಈ ಒಂದು ಸಕ್ಸಸ್ ತುಳುನಾಡಿನ ಇತರ ಸಿನಿಮಾ ಮೇಕರ್​​ಗಳಿಗೂ ಸ್ಪೂರ್ತಿ ತಂದಿದೆ. ಅಲ್ಲಿಯ ಕಲೆ ಈಗ ಎಲ್ಲೆಡೆ ಚಿರಪರಿಚಿತವಾಗಿದೆ. ಅದರಂತೆ 2019 ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಪಿಂಗಾರ ಸಿನಿಮಾ ಈಗ ರಿಲೀಸ್ ಗೆ ರೆಡಿ ಆಗಿದೆ.


ಕಾಂತಾರ ಇಡೀ ತುಳುನಾಡ ಜನತೆಯ ಹೆಮ್ಮೆ ಸಿನಿಮಾ


ನಟ-ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದೆ. ಗಳಿಕೆಯಲ್ಲೂ ನಿರ್ಮಾಪಕರ ಜೇಬು ತುಂಬಿಸುತ್ತಲೇ ಇದೆ. ಕಲೆ-ಸಂಸ್ಕೃತಿ ಅಂತ ಬಂದ್ರೇ ತುಳುನಾಡಿನ ದೈವಾರಾಧನೆ ಈ ಮೂಲಕ ಎಲ್ಲರಿಗೂ ಈಗ ಪರಿಚಯ ಆಗುತ್ತಿದೆ.


ದೈವಾರಾಧನೆ ಅನ್ನೋದು ಈ ಮೊದಲು ತುಳುನಾಡಿನಲ್ಲಿ ಮಾತ್ರ ಉಳಿದಿತ್ತು. ಅಲ್ಲಿಯ ಜನರಿಗೆ ಮಾತ್ರ ಅದರ ಬಗ್ಗೆ ತಿಳಿದಿತ್ತು. ಆದರೆ ಕಾಂತಾರ ಸಿನಿಮಾ ಎಲ್ಲರಿಗೂ ಈ ವಿಷಯ ತಿಳಿಸಿದೆ. ಆ ಬಗ್ಗೆ ಒಂದು ಕುತೂಹಲ ಮತ್ತು ಸಣ್ಣದೊಂದು ನಂಬಿಕೆ ಹಾಗೂ ಭಯವನ್ನೂ ಹಟ್ಟುಹಾಕಿದೆ.


ದೈವವನ್ನ ನಂಬಿದವರಿಗೆ ಗೆಲುವು ಕಟ್ಟಿಟ್ಟ ಬುತ್ತಿ
ತುಳುನಾಡಿನ ದೈವದ ಬಗ್ಗೆ ಅಪಾರ ನಂಬಿಕೆ ಇದೆ. ಇಲ್ಲಿ ಒಂದಲ್ಲ ಎರಡಲ್ಲ ಸಾವಿರಾರು ದೈವಗಳಿಗೆ. ಶಿವನ ಗಣಗಳೇ ಈ ದೈವಗಳು ಅನ್ನೋ ಬಲವಾದ ನಂಬಿಕೆ ಕೂಡ ಇದೆ. ಆದರೆ ಇವುಗಳಲ್ಲಿ ಪ್ರಮುಖ ಅನಿಸೋ ದೈವಗಳು ಅಂದ್ರೆ, ಪಂಜುರ್ಲಿ, ಗುಳಿಗ, ಕೊರಗಜ್ಜ, ಕಲ್ಲುಟ್ಟಿ ದೈವಗಳು ಇಲ್ಲಿ ಹೆಚ್ಚು ಪ್ರಚಲಿತವಾಗಿಯೇ ಇವೆ.


ಪಿಂಗಾರ ಎಂಬ ತುಳುನಾಡಿನ ದೈವಗಳ ಸಿನಿಮಾ
ಪಿಂಗಾರ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ದೈವಗಳ ಈ ಸಿನಿಮಾ ಕಥೆ ವಿಶೇಷವಾಗಿಯೇ ಇದೆ. 1960 ರಿಂದ 2019 ರ ವರೆಗೂ ತುಳುನಾಡಿನಲ್ಲಿ ಆದ ದೈವಾರಾಧನೆಯ ಎಲ್ಲ ಬದಲಾವಣೆಗಳು ಮತ್ತು ಇತರ ವಿಚಾರ-ಆಚಾರಣೆಗಳನ್ನೆ ಪಿಂಗಾರ ಸಿನಿಮಾ ಹೊಂದಿದೆ.


Tulu-Kannada Pingara Going to Release this December
ಕಾಂತಾರ ಸ್ಪೂರ್ತಿಯಿಂದ ರಿಲೀಸ್ ಗೆ ರೆಡಿ


ತುಳುನಾಡಿನ ಪಿಂಗಾರ ದೈವದ ಚಿತ್ರವನ್ನೂ ಕಾಡಿತ್ತು ಕೋವಿಡ್
ನಿರ್ದೇಶಕ ಪ್ರೀತಂ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ದೈವದ ಕಥೆನೆ ಇದೆ. ಇಲ್ಲಿ ಯಾವುದೇ ಕಮರ್ಷಿಯಲ್ ಟಚ್ ಈ ಚಿತ್ರಕ್ಕೆ ಇಲ್ಲವೇ ಇಲ್ಲ. ಆದರೂ ಈ ಚಿತ್ರವನ್ನು ಇನ್ನೇನು ರಿಲೀಸ್ ಮಾಡಬೇಕು ಅನ್ನೋ ಹೊತ್ತಿಗೆ ಕೋವಿಡ್ ಕಾಟ ಶುರು ಆಗಿಯೇ ಬಿಡ್ತು.

ಇದನ್ನೂ ಓದಿ: Puneeth Rajkumar: ಪುನೀತ ಪರ್ವದಲ್ಲಿ ತಾರೆಯರ ಸಮಾಗಮ; ಮುಗಿಲು ಮುಟ್ಟಿದ ಅಪ್ಪು ಗುಣಗಾನ!


ಇದರಿಂದ 2019 ರಲ್ಲಿ ಅನೌನ್ಸ್ ಆಗಿದ್ದ ರಾಷ್ಟ್ರೀಯ ಪ್ರಶಸ್ತಿನೂ 2021 ರಲ್ಲಿ ಈ ಚಿತ್ರಕ್ಕೆ ಬಂದಿತ್ತು. ಈ ಒಂದು ಖುಷಿಯಲ್ಲಿಯೇ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಕೂಡ ಮಾಡಲಾಗಿತ್ತು.


ಪಿಂಗಾರ ಚಿತ್ರದ ರಿಲೀಸ್​ಗೆ ಕಾಂತಾರ ಸಿನಿಮಾ ಸ್ಪೂರ್ತಿ
ಆದರೆ ಅದು ಈಗ ಸಾಧ್ಯವೇ ಆಗಿರಲಿಲ್ಲ. ಆದರೂ ಅದೇ ಪ್ರಯತ್ನದಲ್ಲಿಯೇ ಇದ್ದ ನಿರ್ದೇಶಕ ಪ್ರೀತಂ ಶೆಟ್ಟಿ ಅವರಿಗೆ ಕಾಂತಾರ ಸಿನಿಮಾ ಹೊಸ ಸ್ಪೂರ್ತಿ ನೀಡಿದೆ. ಇದರಿಂದ ಡೈರೆಕ್ಟರ್ ಪ್ರೀತಂ ಶೆಟ್ಟಿ ತಮ್ಮ ಸಿನಿಮಾವನ್ನ ಇದೇ ವರ್ಷ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಮಾಡಲು ಮುಂದಾಗಿದ್ದಾರೆ.




ಈ ಹಿನ್ನೆಲೆಯಲ್ಲಿಯೇ ನಿರ್ದೇಶಕರು ಈಗ ಎಲ್ಲ ತಯಾರಿನೂ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಈ ಸಿನಿಮಾ ಮಾಡೋವಾಗ, ಇವರ ಚಿತ್ರಕ್ಕೂ ದೈವದ ಆಶೀರ್ವಾದ ಸಿಕ್ಕಿದೆ. ತುಂಬಾ ಹಳೆ ಕಂಬಳದ ಅವಶ್ಯಕತೆ ಇದ್ದಾಗ, ಅದೂ ಇಲ್ಲಿ ದೈವದ ಕೃಪೆಯಿಂದ ಸಾಧ್ಯವಾಗಿದೆ.


ಪಿಂಗಾರ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬರ್ತದೆ ಅನ್ನೋದೇ ಆಶ್ಚರ್ಯ
ಪಿಂಗಾರ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬರುತ್ತದೆ ಅಂತಲೇ ಅಂದುಕೊಂಡಿರಲಿಲ್ಲ. ಆದರೆ ದೈವದ ಕೃಪೆಯಿಂದ ಇದು ಸಾಧ್ಯವಾಗಿದೆ. ಇಂತಹ ಈ ಸಿನಿಮಾದ ಬಗ್ಗೆ ನಮಗೆ ಹಮ್ಮೆ ಇದೆ ಅಂತಲೇ ಡೈರೆಕ್ಟರ್ ಪ್ರೀತಂ ಶೆಟ್ಟಿ, ನ್ಯೂಸ್-18 ಕನ್ನಡ ಡಿಜಿಟಲ್​ಗೆ ಹೇಳಿದ್ದಾರೆ.


ಪಿಂಗಾರ ಚಿತ್ರಕ್ಕೂ ಮೊದಲು ದೈವಾರಾಧನೆ ಮೇಲೆ ಸಿನಿಮಾ ಬಂದಿವೆ. ತುಳುನಾಡಿನ ನಟ ಶಿವಧ್ವಜ 2017 ರಲ್ಲಿ ಗಘರ ಹೆಸರಿನ ಚಿತ್ರ ಮಾಡಿದ್ದರು. ಇದು ಕೂಡ ದೈವದ ಸಿನಿಮಾನೇ ಆಗಿತ್ತು.


ಇದನ್ನೂ ಓದಿ: Sathya: ದಿವ್ಯಾಗೆ ಬಾಲನ ವಂಚನೆ ಗೊತ್ತಾಗ್ತಿಲ್ವಾ? ಅಕ್ಕನ ಜೀವನದ ಬಗ್ಗೆ ಸತ್ಯಾಗೆ ಹೆಚ್ಚಿದ ಚಿಂತೆ!


ಇದಕ್ಕೂ ಮನ್ನಣೆ ಸಿಕ್ಕಿತ್ತು. 2015 ರಲ್ಲಿ ಮದಿಪು ಹೆಸರಿನ ಚಿತ್ರವನ್ನ ಚೇತನ್ ಮುಂಡಾಡಿ ಮಾಡಿದ್ದರು. ಈ ಚಿತ್ರಕ್ಕೂ ರಾಷ್ಟ್ರೀಯ ಮನ್ನಣೆ ಸಿಕ್ಕಿತ್ತು. ಅದೇ ರೀತಿ ಪಿಂಗಾರ ಸಿನಿಮಾ ಶೇಕಡ 60 ರಷ್ಟು ತುಳು ಭಾಷೆ ಮತ್ತು ಶೇಕಡ 40 ರಷ್ಟು ಕನ್ನಡ ಭಾಷೆ ಇದ್ದ ಸಿನಿಮಾ ಆಗಿದೆ.


ಕಾಂತಾರ ಸಿನಿಮಾ ಬಂದ್ಮೇಲೆ ಪಿಂಗಾರ ಚಿತ್ರವೂ ರಿಲೀಸ್​ಗೆ ರೆಡಿ ಆಗುತ್ತಿದೆ. ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗ್ತಿರೋ ಈ ಚಿತ್ರದ ಡೇಟ್ ಇನ್ನಷ್ಟೇ ಅನೌನ್ಸ್ ಆಗಬೇಕಿದೆ.

First published: