Tsunami Kitty: ಪ್ರತಿಷ್ಠಿತ ಪಬ್​ನಲ್ಲಿ ನಟ ಸುನಾಮಿ ಕಿಟ್ಟಿ ಹೊಡೆದಾಟ!

ಸುನಾಮಿ ಕಿಟ್ಟಿ ಹಾಗೂ ಸ್ನೇಹಿತರು ಬೆಂಗಳೂರಿನ ಪ್ರತಿಷ್ಠಿತ ಪಬ್​ನಲ್ಲಿ ಹೊಡೆದಾಟ ನಡೆಸಿದ್ದು ಘಟನೆ ಈಗ ಬೆಳಕಿಗೆ ಬಂದಿದೆ.

ಸುನಾಮಿ ಕಿಟ್ಟಿ

ಸುನಾಮಿ ಕಿಟ್ಟಿ

  • Share this:
ಬೆಂಗಳೂರು(ಆ.08): ಬೆಂಗಳೂರಿನ ಪ್ರತಿಷ್ಠಿತ ಪಬ್ ನಲ್ಲಿ (Pub)  ಹೊಡೆದಾಟ ನಡೆದಿದ್ದುಕಿರುತೆರೆ ನಟ ಸುನಾಮಿ ಕಿಟ್ಟಿ (Tsunami Kitty) ಮತ್ತು ಆತನ ಗೆಳೆಯ ಚೇತನ್ ಗೌಡ ರಿಂದ ಹಲ್ಲೆ ನಡೆದಿರುವ ಆರೋಪ ಕೇಳಿ ಬಂದಿದೆ. ಮಿರಾಜ್ ಪಬ್ ಗೆ ಹೋಗಿದ್ದ ಸುನಾಮಿ ಕಿಟ್ಟಿ ಅಂಡ್ ಟೀಮ್ ಗಲಾಟೆ ಮಾಡಿದ್ದು ಜುಲೈ 24 ರಂದು ಘಟನೆ ನಡೆದಿದೆ. ಆದರೆ ಘಟನೆ ಮಾತ್ರ ತಡವಾಗಿ ಬೆಳಕಿಗೆ ಬಂದಿದೆ. ಕಂಠ ಪೂರ್ತಿ  (Drunk) ಕುಡಿದ ಅಮಲಿನಲ್ಲಿ ಗಲಾಟೆ ಮಾಡಿದ್ದಾಗಿ ಆರೋಪಿಸಿ ದೂರು ನಟನ ವಿರುದ್ಧ ದೂರು ದಾಖಲಾಗಿತ್ತು. ಪ್ರಶಾಂತ್ ಎಂಬಾತನಿಂದ ಕಬ್ಬನ್ ಪಾರ್ಕ್  (Cubbon Park) ಠಾಣೆಯಲ್ಲಿ ದೂರು ದಾಖಲಾಗಿದ್ದು ಈ ಘಟನೆ ಈಗ ಎಲ್ಲೆಡೆ ಸುದ್ದಿಯಾಗಿದೆ.

ಮಿರಾಜ್ ಪಬ್ ಗೆ ಹೋಗಿದ್ದಾಗ ಶ್ಯಾಂಪೇನ್ ಬಾಟೆಲ್ ಓಪನ್‌ ಮಾಡಿರೋ ಕಿಟ್ಟಿ ಅಂಡ್ ಟೀಂ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಶಂಪೇನ್ ಒಪನ್ ಮಾಡಿದ್ದಾಗ ಪಕ್ಕದಲ್ಲಿ ಇದ್ದವರ ಮೇಲೆ ಶಾಂಪೇನ್ ಚಲ್ಲಿತ್ತು.

ಕೃಷ್ಣ ಮತ್ತು ಪ್ರಶಾಂತ್ ಎಂಬುವವರ ಮೇಲೆ ಚಲ್ಲಿದ್ದ ಶಾಂಪೇನ್

ಶಾಂಪೇನ್ ಚಲ್ಲಿದ್ದನ್ನು ಕೇಳಲು ಹೋದಾಗ ಗಲಾಟೆ ಆಗಿರೋದಾಗಿ ದೂರು ನೀಡಿದ್ದಾರೆ. ತಮ್ಮ ಮೇಲೆ ಶ್ಯಾಂಪೇನ್ ಚೆಲ್ಲಿದ್ದನ್ನು ಕೇಳಲು ಹೋದ ಪ್ರಶಾಂತ ಹಾಗೂ ಕೃಷ್ಣ ಎಂಬುವವರನ್ನ ಅವಾಚ್ಯವಾಗಿ ಬೈದು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಕಬ್ಬನ್ ಪಾರ್ಕ್ ಠಾಣೆ ಯಲ್ಲಿ ಕೇಸ್

ಪ್ರಶಾಂತ್ ದೂರಿನ ಅನ್ವಯ ಕಬ್ಬನ್ ಪಾರ್ಕ್ ಠಾಣೆ ಯಲ್ಲಿ ಕೇಸ್ ದಾಖಲಾಗಿದೆ. ಸುನಾಮಿ ಕಿಟ್ಟಿ ಸ್ನೇಹೊತ ಚೇತನ್ ನಿಂದ ಸಹ ಠಾಣೆ ಗೆ ದೂರು ನೀಡಲಾಗಿದೆ. ಅಪರಿಚಿತ ವ್ಯಕ್ತಿಗಳು ನಮ್ಮ ಜೊತೆಗೆ ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ ಅಂತ ಆರೋಪಿಸಿ ದೂರು ನೀಡಿದ್ದಾರೆ.

ಇದನ್ನೂ ಓದಿ: Fahad Fasil Birthday: ಖ್ಯಾತ ನಿರ್ದೇಶಕನ ಮಗನಾದ್ರೂ ಫಹಾದ್ ಸಾಲು ಸಾಲು ಸಿನಿಮಾ ಫ್ಲಾಪ್ ಆಗಿತ್ತುಮದ್ಯ ಚೆಲ್ಲಿದ್ದ ಕಾರಣಕ್ಕೆ ಗಲಾಟೆ ಮಾಡಿ ಹಲ್ಲೆ ಎಂದು ದೂರಿನಲ್ಲಿ ಹೇಳಲಾಗಿದೆ. ಸದ್ಯ ಎರಡು ಕೇಸ್ ದಾಖಲು ಮಾಡಿಕೊಂಡಿರುವ ಕಬ್ಬನ್ ಪಾರ್ಕ್ ಪೊಲೀಸರು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Published by:Divya D
First published: