HOME » NEWS » Entertainment » TROUBLE FOR SRUTHI HARIHARAN STARRER KANNADA MOVIE NATHICHARAMI NATIONAL FILM AWARDS RD

ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ; ಶ್ರುತಿ ಹರಿಹರನ್ ನಟನೆಯ ನಾತಿಚರಾಮಿಗೆ ಸಿಕ್ಕ ಪ್ರಶಸ್ತಿಗಳು ವಾಪಾಸ್?

66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇತ್ತೀಚೆಗೆ ಪ್ರಕಟವಾಗಿತ್ತು. ನಾತಿಚರಾಮಿ ಸಿನಿಮಾಗೆ 5 ಪ್ರಶಸ್ತಿಗಳು ಲಭ್ಯವಾಗಿದ್ದವು. ಈ ಬಗ್ಗೆ ಅಪಸ್ವರ ಎತ್ತಿರುವ ನಿರ್ದೇಶಕ ದಯಾಳ ಪದ್ಮನಾಭ್​ ಕೋರ್ಟ್​ ಮೆಟ್ಟಿಲೇರಿದ್ದಾರೆ.

Rajesh Duggumane | news18
Updated:August 16, 2019, 1:19 PM IST
ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ; ಶ್ರುತಿ ಹರಿಹರನ್ ನಟನೆಯ ನಾತಿಚರಾಮಿಗೆ ಸಿಕ್ಕ ಪ್ರಶಸ್ತಿಗಳು ವಾಪಾಸ್?
ಶ್ರುತಿ ಹರಿಹರನ್​
  • News18
  • Last Updated: August 16, 2019, 1:19 PM IST
  • Share this:
‘ನಾತಿಚರಾಮಿ’ ಸಿನಿಮಾ ಚಿತ್ರಮಂದಿರದಲ್ಲಿ ಅಷ್ಟಾಗಿ ಸದ್ದು ಮಾಡದಿದ್ದರೂ ಪ್ರಶಸ್ತಿ ಗಳಿಕೆ ವಿಚಾರದಲ್ಲಿ ಮೊದಲ ಸ್ಥಾನದಲ್ಲಿತ್ತು. ಈ ಚಿತ್ರಕ್ಕೆ ಬರೋಬ್ಬರಿ 5 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಲಭ್ಯವಾಗಿದ್ದವು. ಆದರೆ, ಈಗ ಪ್ರಶಸ್ತಿಗೆ ತಡೆನೀಡುವಂತೆ ಕೋರಿ ಹೈಕೋರ್ಟ್​​ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ! ಅಷ್ಟಕ್ಕೂ ಈ ಅರ್ಜಿ ಸಲ್ಲಿಸಿದವರಾರು? ಅರ್ಜಿ ಸಲ್ಲಿಕೆ ಆಗಿದ್ದೇಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

‘ನಾತಿಚರಾಮಿ’ಗೆ ಐದು ಪ್ರಶಸ್ತಿ ಲಭ್ಯವಾಗಿರುವುದಕ್ಕೆ ಅಪಸ್ವರ ಎತ್ತಿದವರು ‘ ಆ ಕರಾಳ ರಾತ್ರಿ’ ಚಿತ್ರದ ನಿರ್ದೇಶಕ ದಯಾಳ್​ ಪದ್ಮನಾಭನ್​. ಈ ಚಿತ್ರದ ಸಂಕಲನಕ್ಕೆ ಅಕ್ಕ ಕಮ್ಯೂನಿಕೇಶನ್​ ಪ್ರೈವೇಟ್​ ಲಿಮಿಟೆಡ್​ ಸಹಕಾರ ನೀಡಿತ್ತು. ಈ ಸಂಸ್ಥೆ ನಿರ್ದೇಶಕರು ಬಿಎಸ್​​ ಲಿಂಗದೇವರು. ಇವರು 2018ನೇ ರಾಷ್ಟ್ರೀಯ ಚಲನಚಿತ್ರ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.

ಲಿಂಗದೇವರು ತಮ್ಮ ಸಿನಿಮಾಕ್ಕೆ ಪ್ರಶಸ್ತಿಗಳನ್ನು ಕೊಟ್ಟುಕೊಂಡಿದ್ದಾರೆ ಎಂಬುದು ದಯಾಳ್​ ಪದ್ಮನಾಭನ್​ ಅವರ ಆರೋಪ. ಹೀಗಾಗಿ ಅವರು ಕೋರ್ಟ್​ ಮೆಟ್ಟಿಲೇರಿದ್ದು, ಪ್ರಶಸ್ತಿಗಳಿಗೆ ತಡೆ ನೀಡುವಂತೆ ಕೋರಿದ್ದಾರೆ.

ಇದನ್ನೂ ಓದಿ: 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ನಾತಿಚರಾಮಿಗೆ ಐದು, ಕೆ.ಜಿ.ಎಫ್​ಗೆ ಎರಡು ಪ್ರಶಸ್ತಿ..!

66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇತ್ತೀಚೆಗೆ ಪ್ರಕಟವಾಗಿತ್ತು. ಕನ್ನಡಕ್ಕೆ 11 ಪ್ರಶಸ್ತಿಗಳು ಲಭ್ಯವಾಗಿದ್ದವು. ಇದರಲ್ಲಿ ಕನ್ನಡದ ‘ನಾತಿಚರಾಮಿ’ಗೆ ಉತ್ತಮ ಕನ್ನಡ ಸಿನಿಮಾ, ಉತ್ತಮ ಸಾಹಿತ್ಯ, ಉತ್ತಮ ಸಂಕಲನ, ಉತ್ತಮ ಗಾಯಕಿ (ಬಿಂದು ಮಾಲಿನಿ), ಸ್ಪೆಷಲ್​ ಜ್ಯೂರಿ ಪ್ರಶಸ್ತಿ (ಶ್ರುತಿ ಹರಿಹರನ್​) ಲಭಿಸಿತ್ತು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

First published: August 16, 2019, 11:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories