Trisha Krishnan: ಚಿತ್ರೀಕರಣದ ವೇಳೆ ಎಡವಟ್ಟು! ಬಂಧನದ ಭೀತಿ ಎದುರಿಸುತ್ತಿರುವ ನಟಿ ತ್ರಿಶಾ ಕೃಷ್ಣನ್​!

‘ಪೊನ್ನಿಯಾನ್​ ಸೆಲ್ವನ್’ ಸಿನಿಮಾ ಕಾದಂಬರಿ ಆಧರಿತವಾಗಿದ್ದು, ತಮಿಳುನಾಡಿನ ಐತಿಹಾಸಿಕ ದೇವಸ್ಥಾನವೊಂದರ ಒಳಗಡೆ ಶೂಟಿಂಗ್​ ಮಾಡಲಾಗುತ್ತಿದೆ. ಹಾಗಾಗಿ ನಟಿ ತ್ರಿಶಾ ಕೃಷ್ಣನ್​ ಮತ್ತು ಐಶ್ವರ್ಯ ರೈ ಬಚ್ಚನ್​​ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆ.

ತ್ರಿಶಾ ಕೃಷ್ಣನ್

ತ್ರಿಶಾ ಕೃಷ್ಣನ್

 • Share this:
  ನಟಿ ತ್ರಿಶಾ ಕೃಷ್ಣನ್ (Trisha Krishnan)​  ‘ಪೊನ್ನಿಯಾನ್​ ಸೆಲ್ವನ್‘ ಸಿನಿಮಾದಲ್ಲಿ ನಟಿಸುತ್ತಿದ್ದು, ಸದ್ಯ ಶೂಟಿಂಗ್​ನಲ್ಲಿ ತೊಡಗಿದ್ದಾರೆ. ಈ ಸಿನಿಮಾವನ್ನು ನಿರ್ದೇಶಕ ಮಣಿರತ್ನಂ (Mani Ratnam) ಅವರು ನಿರ್ದೇಶಿಸುತ್ತಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೀಗ ಚಿತ್ರೀಕರಣದ ಸಮಯದಲ್ಲಿ ತ್ರಿಶಾ ಕೃಷ್ಣನ್​ ಎಡವಟ್ಟೊಂದನ್ನು ಮಾಡಿಕೊಂಡಿದ್ದು, ಬಂಧನದ ಭೀತಿ ಎದುರಾಗಿದೆ.

  ‘ಪೊನ್ನಿಯಾನ್​ ಸೆಲ್ವನ್’ (Ponniyan Selvan)  ಸಿನಿಮಾ ಕಾದಂಬರಿ ಆಧರಿತವಾಗಿದ್ದು, ತಮಿಳುನಾಡಿನ ಐತಿಹಾಸಿಕ ದೇವಸ್ಥಾನವೊಂದರ ಒಳಗಡೆ ಶೂಟಿಂಗ್​ ಮಾಡಲಾಗುತ್ತಿದೆ. ಹಾಗಾಗಿ ನಟಿ ತ್ರಿಶಾ ಕೃಷ್ಣನ್​ ಮತ್ತು ಐಶ್ವರ್ಯ ರೈ ಬಚ್ಚನ್ (Aishwarya Rai Bacchan)​​ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆ.

  ಆದರೆ ಶೂಟಿಂಗ್​ ನಡುವೆ ತ್ರಿಶಾ ಕೃಷ್ಣನ್​ ದಾರ್ಮಿಕ ಸ್ಥಳದಲ್ಲಿ ಎಡವಟ್ಟೊಂದನ್ನು ಮಾಡಿದ್ದಾರೆ. ಚಿತ್ರೀಕರಣ ವೇಳೆ ಚಪ್ಪಳಿ ಹಾಕಿಕೊಂಡು ತ್ರಿಶಾ ದೇವಸ್ಥಾನದ ಒಳಗೆ ಓಡಾಡಿದ್ದಾರೆ. ಅಷ್ಟು ಮಾತ್ರವಲ್ಲದೆ ಶಿವಲಿಂಗ ಮತ್ತು ನಂದಿ ದೇವರಿರುವ ಈ ಧಾರ್ಮಿಕ  ಸ್ಥಳದಲ್ಲಿ ತ್ರಿಶಾ ಚಪ್ಪಳಿ (Slipper) ಹಾಕಿರುವ ದೃಶ್ಯ ವೈರಲ್​ ಆಗಿದೆ. ಅನೇಕರು ಇದನ್ನು ಕಂಡು ಕೆಂಡಾಮಂಡಲರಾಗಿದ್ದಾರೆ. ಅದರಲ್ಲೂ ತಮಿಳುನಾಡಿನ ಹಿಂದೂ ಸಂಘಟನೆಗಳು ತ್ರಿಶಾ ಮತ್ತು ಮಣಿರತ್ನಂ ಅವರನ್ನು ಬಂಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ.

  ಇದನ್ನು ಓದಿ- ಮಾರ್ವೆಲ್​ನ Shang Chi ಸಿನಿಮಾ ಭಾರತದಲ್ಲಿ ಎರಡು ದಿನಕ್ಕೆ ಗಳಿಸಿದ್ದು ಎಷ್ಟು ಗೊತ್ತೇ..?

  ದೇವಸ್ಥಾನದಲ್ಲಿ ಚಪ್ಪಳಿ ಹಾಕಿಕೊಂಡಿರುವ ದೃಶ್ಯಗಳನ್ನು ಕಂಡ ಅನೇಕರು ಸಾಮಾಜಿಕ ಜಾಲರಾಣದಲ್ಲಿ ತ್ರಿಶಾ ಬಂಧನವಾಗಬೇಕು ಎಂಬ ಒತ್ತಾಯ  ಮಾಡುತ್ತಿದ್ದಾರೆ. ಹಾಗಾಗಿ ನಟಿಗೆ ಬಂಧನದ ಭೀತಿ ಕಾಡುತ್ತಿದೆ.

  ಇದನ್ನು ಓದಿ-Leena Maria Paul | 200 ಕೋಟಿ ಸುಲಿಗೆ ಪ್ರಕರಣ; ಮದ್ರಾಸ್​ ಕೆಫೆ ನಟಿಯನ್ನು ಬಂಧಿಸಿದ ಪೊಲೀಸರು!

  ತ್ರಿಶಾ ಕೃಷ್ಣನ್​


  ಮಣಿರತ್ನಂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪೊನ್ನಿನ್​ ಸೆಲ್ವಾನ್​ ಸಿನಿಮಾದ ಮೇಲೆ ಬಹುನಿರೀಕ್ಷೆಯಿದೆ.  ಈ ಸಿನಿಮಾದಲ್ಲಿ ಚಿಯಾನ್​ ವಿಕ್ರಂ, ಜಯಂ ರವಿ, ಕಾರ್ತಿ, ಪ್ರಕಾಶ್​ ರಾಜ್​, ಜಯರಾಮ್​ , ಪ್ರಭು, ಐಶ್ವರ್ಯ ಲ್ಷ್ಮೀ, ಶೋಬಿತಾ ಧುಲಿಪಲ, ಲಾಲ್​ ಸೆರಿದಂತೆ ಬಹುತಾರಾಗಣವನ್ನು ಹೊಂದಿದೆ. ಮಾಹಿತಿಗಳು ಪ್ರಕಾರ 2022ರಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.
  Published by:Harshith AS
  First published: