ಬಹುನಿರೀಕ್ಷಿತ ‘ಪುಷ್ಪ’ (Pushpa) ಸಿನಿಮಾ ವಿಶ್ವದಾದ್ಯಂತ ಡಿಸೆಂಬರ್17ರಂದು ಬಿಡುಗಡೆಯಾಗಿದೆ. ಅಲ್ಲು ಅರ್ಜುನ್ (Allu Arjun) ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವುದರಿಂದ ಈ ಸಿನಿಮಾ ಮೇಲಿರುವ ನಿರೀಕ್ಷೆ ದುಪ್ಪಟ್ಟಾಗಿತ್ತು. ಆದರೆ, ಈ ಸಿನಿಮಾ ಫಸ್ಟ್ ಶೋ (First Show) ಮುಗಿಯುತ್ತಿದ್ದಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲು ಅರ್ಜು ಫ್ಯಾನ್ಸ್ ಮಾತ್ರ ಸೂಪರ್ ಡೂಪರ್ ಹಿಟ್ ಅಂದರು. ಉಳಿದವರು ಈ ಸಿನಿಮಾ ಅಷ್ಟೇನು ಇಲ್ಲ. ಹೇಳಿಕೊಳ್ಳುವಷ್ಟು ಇಲ್ಲ.,ಒಂದು ಬಾರಿ ಕಷ್ಟ ಪಟ್ಟು ನೋಡಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಎಲ್ಲ ಚಿತ್ರಮಂದಿರಗಳಲ್ಲು ಹೌಸ್ಫುಲ್ (Housfull) ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಬಿಡುಗಡೆಗೆ ಮುನ್ನ 10 ಪುಷ್ಪ ಸಿನಿಮಾ ಸೇರಿಸಿದರೆ ಒಂದು ಕೆಜಿಎಫ್ (KGF) ಎಂದು ಅಭಿಮಾನಿಗಳು ಪೋಸ್ ಕೊಡುತ್ತಿದ್ದರು. ಆದರೆ, ಸಿನಿಮಾ ಹೇಳಿಕೊಳ್ಳುವಂತ ಪ್ರತಿಕ್ರಿಯೆ ಸಿಗದಿದ್ದಾಗ ಎಲ್ಲರೂ ಸೈಲೆಂಟ್ ಆಗಿದ್ದಾರೆ. ಪುಷ್ಪ ಸಿನಿಮಾ ಇದೀಗ ಟ್ರೋಲಿಗರಿಗೆ ಆಹಾರವಾಗಿದೆ. ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡುವ ಮುನ್ನ ಸಾವಿರ ಸಲ ಯೋಚಿಸಿ ಮಾತನಾಡಿ ಎಂದು ಟ್ರೋಲಿಗರು (Trollers) ಆಕ್ರೋಶ ಹೊರಹಾಕಿದ್ದಾರೆ. ನಿಮ್ಮ ಪುಷ್ಪದಂತೆ ಸಾವಿರ ಸಿನಿಮಾ ಬಂದರೂ ನಮ್ಮ ಕೆಜಿಎಫ್ ಸಿನಿಮಾ ಮುಂದೆ ಶೂನ್ಯ ಎಂದು ಟ್ರೋಲ್ (Troll) ಮಾಡುತ್ತಿದ್ದಾರೆ. ಕನ್ನಡದವರು ಇರಲಿ, ಅವರ ರಾಜ್ಯದ ಅಭಿಮಾನಿಗಳೇ ಪುಷ್ಪ ಸಿನಿಮಾವನ್ನು ಟ್ರೋಲ್ ಮಾಡುತ್ತಿದ್ದಾರೆ.
‘ಪುಷ್ಪ.. ಫೈರ್ ಅಲ್ಲ.. ಟಾರ್ಚರ್.. ಅಂತಿದ್ದಾರೆ ಟ್ರೋಲಿಗರು’
ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಸಿನಿಮಾ ಉತ್ತಮವಾಗಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಮಧ್ಯೆ ‘ಕೆಜಿಎಫ್’ ಬಗ್ಗೆ ಹಗುರವಾಗಿ ಮಾತನಾಡಿದ್ದ ಆಂಧ್ರದ ನಿರ್ದೇಶಕರಿಗೆ ಈಗ ಕನ್ನಡಿಗರು ಪ್ರಶ್ನೆ ಮಾಡುತ್ತಿದ್ದಾರೆ. ಪುಷ್ಪ 10 ಸಿನಿಮಾ ಸೇರಿದರೆ ಒಂದು ಕೆಜಿಎಫ್ ಎಂದು ಪಕ್ಕದ ರಾಜ್ಯದವರು ಕಿಂಡಲ್ ಮಾಡಿದ್ದರು. ಆದರೆ ಈಗ ಏನು ಮಾತನಾಡದೇ ಫುಲ್ ಸೈಲೆಂಟ್ ಆಗಿದ್ದಾರೆ. ಚಿತ್ರದಲ್ಲಿ ಪುಷ್ಪ ಹೂ ಅಲ್ಲ ಫೈರ್ ಎಂಬ ಡೈಲಾಗ್ ಅನ್ನು ಅಲ್ಲು ಅರ್ಜುನ್ ಹೇಳಿದ್ದರು. ಆದರೆ, ಅವರ ಫ್ಯಾನ್ಸ್ಗಳೇ ಪುಷ್ಪ ಫೈರ್ ಅಲ್ಲ ಟಾರ್ಚರ್ ಅಂತ ಟ್ವೀಟ್ ಮಾಡುತ್ತಿದ್ದಾರೆ.
ಇದನ್ನು ಓದಿ :ರೀ.. ಏನ್ರಿ ನಿಮ್ ಅವತಾರ: ನೋಡ್ಬಾರ್ದನ್ನ ನೋಡ್ಬಿಟ್ವಿ ಅಂತಿದ್ದಾರೆ ನೆಟ್ಟಿಗರು!
ಕೆಜಿಎಫ್ಗೆ ಹೋಲಿಸಿ ತಪ್ಪು ಮಾಡಿಬಿಟ್ರು..!
ಈ ಮೊದಲು ‘ಪುಷ್ಪ’ ಬಗ್ಗೆ ಮಾತನಾಡಿದ್ದ ‘ಉಪ್ಪೇನಾ’ ನಿರ್ದೇಶಕ ಬುಚಿ ಬಾಬು, ‘ನಾನು ಸಿನಿಮಾದ ಮೊದಲ ಭಾಗವನ್ನು ವೀಕ್ಷಣೆ ಮಾಡಿದ್ದೇನೆ. ಈ ಚಿತ್ರ 10 ಕೆಜಿಎಫ್ಗೆ ಸಮ. ಸಿನಿಮಾದಲ್ಲಿ ಬರುವ ಪಾತ್ರಗಳು ತುಂಬಾನೇ ಅದ್ಭುತವಾಗಿ ಮೂಡಿ ಬಂದಿವೆ. ನಾನು ಇದನ್ನು ಅತಿಶಯೋಕ್ತಿಯಾಗಿ ಹೇಳುತ್ತಿಲ್ಲ. ಸಿನಿಮಾ ನೋಡಿದ ಮೇಲೆ ನಿಮಗೇ ತಿಳಿಯಲಿದೆ’ ಎಂದಿದ್ದರು. ಈಗ ಚಿತ್ರ ರಿಲೀಸ್ ಆಗಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಕನ್ನಡಿಗರು ಹೇಳುತ್ತಿದ್ದಾರೆ. ಅದಕ್ಕೆ ಹೇಳುವುದು ಮೊದಲೇ ನಿರ್ಧಾರ ಮಾಡಿಕೊಳ್ಳಬೇಡಿ. ನಮ್ಮ ರಾಕಿಭಾಯ್ ಅವರ ಕೆಜಿಎಫ್ ಸಿನಿಮಾ ತರ ಯಾವ ಸಿನಿಮಾನೂ ಬರಲ್ಲ ಎಂದು ಹೇಳುತ್ತಿದ್ದಾರೆ.
#pushpa #Puspha #kgf #KGF2 #PushpaTheRule #PushpaReleaseDAY pic.twitter.com/U9xZGNJI0M
— G!R! (@GirishGowda_B) December 17, 2021
Heyy tollywood....
It's 1 #KGF =10 #Puspha pic.twitter.com/Pl41KkuBpz
— Akashವಾಣಿ (@AkashHolla) December 17, 2021
ಟ್ರೋಲಿಗರಿಗೆ ಆಹಾರವಾದ ಪುಷ್ಪ ಸಿನಿಮಾ!
ಟ್ರೋಲಿಗರ ಬಗ್ಗೆ ಹೇಳಬೇಕೆ ಸ್ವಲ ಕಂಟೆಂಟ್ ಸಿಕ್ಕರೂ ಜನರನ್ನೂ ಸಾವಿರ ರೀತಿಯಲ್ಲಿ ರಂಜಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಅವರ ಕೈಗೆ ಪುಷ್ಪ ಸಿನಿಮಾ ಸಿಕ್ಕರೆ ಏನಾಗಬೇಡಿ ಊಹೆ ಮಾಡಿಕೊಳ್ಳಿ. ಯಶ್ (Yash) ಅವರ ಡೈಲಾಗ್ಗಳ ವಿಡಿಯೋಗಳನ್ನು ಇಟ್ಟುಕೊಂಡು ಎಡಿಟ್ ಮಾಡಿ ಸಖತ್ ಟ್ರೋಲ್ ಮಾಡುತ್ತಿದ್ದಾರೆ.
Yevarra babu e vfx tho 10 #kgf lu annaadu🥴🥴#Puspha pic.twitter.com/Xmgr74BoI2
— Mani (@N_ew_world) December 17, 2021
ಇನ್ನೂ ವಿಲನ್ ಪಾತ್ರಕ್ಕೆ ಫಹಾದ್ ಫಾಜಿಲ್ (Fahad fazil) ಅವರನ್ನು ಕರೆಸಿರುವುದು ಊಟ ಆದಮೇಲೆ ಉಪ್ಪು ಬಡಿಸಿದಂತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಅಂತಹ ಅದ್ಭುತ ನಟನನ್ನು ಕರೆಸಿ , ಕೇವಲ 5 ನಿಮಿಷಕ್ಕೆ ಪಾತ್ರ ಮಾಡಿಸಿದರೆ ಇನ್ನೇನು ಆಗುತ್ತೆ ಅಂತ ಕಾಲೆಳೆಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ