Trisha-Chiranjeevi: ಭಿನ್ನಾಭಿಪ್ರಾಯದಿಂದ ಮೆಗಾಸ್ಟಾರ್​ ಚಿರಂಜೀವಿ ಸಿನಿಮಾದಿಂದ ಹೊರ ಬಂದ ನಟಿ ತ್ರಿಶಾ..!

Trisha-Chiranjeevi: ತ್ರಿಶಾ ಹಾಗೂ ಚಿರು ಅಭಿಮಾನಿಗಳಿಗೆ ಕಹಿ ಸುದ್ದಿಯೊಂದು ಸಿಕ್ಕಿದೆ. ಚಿರಂಜೀವಿ ಅವರ 'ಆಚಾರ್ಯ' ಚಿತ್ರದಲ್ಲಿ ತ್ರಿಶಾ ನಟಿಸುತ್ತಿಲ್ಲವಂತೆ. ಈ ಸಿನಿಮಾದಿಂದ ತ್ರಿಶಾ ಹೊರ ಬಂದಿದ್ದಾರಂತೆ.

ತ್ರಿಶಾ ಹಾಗೂ ಚಿರಂಜೀವಿ

ತ್ರಿಶಾ ಹಾಗೂ ಚಿರಂಜೀವಿ

  • Share this:
ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ 152ನೇ ಸಿನಿಮಾ ಬಗ್ಗೆ ಗೊತ್ತೇ ಇದೆ. ಈ ಚಿತ್ರದಲ್ಲಿ ತ್ರಿಶಾ ಚಿರುಗೆ ಜೋಡಿಯಾಗಿ ನಟಿಸುತ್ತಿದ್ದರು. ಈ ವಿಷಯ ಕೇಳಿಯೇ ಅಭಿಮಾನಿಗಳು ಥ್ರಿಲ್​ ಆಗಿದ್ದರು.

ಆದರೆ ಈಗ ತ್ರಿಶಾ ಹಾಗೂ ಚಿರು ಅಭಿಮಾನಿಗಳಿಗೆ ಕಹಿ ಸುದ್ದಿಯೊಂದು ಸಿಕ್ಕಿದೆ. ಚಿರಂಜೀವಿ ಅವರ 'ಆಚಾರ್ಯ' ಚಿತ್ರದಲ್ಲಿ ತ್ರಿಶಾ ನಟಿಸುತ್ತಿಲ್ಲವಂತೆ. ಈ ಸಿನಿಮಾದಿಂದ ತ್ರಿಶಾ ಹೊರ ಬಂದಿದ್ದಾರಂತೆ.

Trisha Walks Out of Chiranjeevis Telugu Film Over Creative Differences
ನಟಿ ತ್ರಿಶಾ


ಹೌದು, ತ್ರಿಶಾ ಹಾಗೂ ಚಿರು ಈ ಹಿಂದೆ 2006ರಲ್ಲಿ ತೆರೆಕಂಡಿದ್ದ ಸ್ಟ್ಯಾಲಿನ್​ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು. ಈ ಹಿಟ್​ ಜೋಡಿ ಮತ್ತೆ ತೆರೆ ಮೇಲೆ ಮೋಡಿ ಮಾಡಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಅವರಿಗೆಲ್ಲ ಈಗ ನಿರಾಶೆಯಾಗಿದೆ.

ಈ ಹಿಂದೆ ಚಿರು ಹಾಗೂ ತ್ರಿಶಾ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಕೇಳಿದಾಗಿನಿಂದ ಫ್ಯಾನ್ಸ್​ ಸಖತ್​ ಖುಷಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದರು.

Expecting #Chiranjeevi and #Trisha pair in #Chiru152 after #Stalin @KonidelaPro @sivakoratala #Ramcharan pic.twitter.com/aswtFHSaS7

ನಿರ್ದೇಶಕ ಕೊರಟಾಲ ಶಿವ ಅವರ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಚಿತ್ರವೇ 'ಆಚಾರ್ಯ'. 140 ಕೋಟಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

Sometimes things turn out to be different from what was initially said and discussed.Due to creative differences,I have chosen not to be part of Chiranjeevi sirs film.Wishing the team https://t.co/sfaMfRrWmT my lovely Telugu audiences-hope to see you soon in an exciting project.'ಕೆಲವೊಂದು ವಿಷಯಗಳು ಮೊದಲೇ ಚರ್ಚಿಸಿದಂತೆ ಆಗುವುದಿಲ್ಲ. ಕೆಲವು ಭಿನ್ನಾಭಿಪ್ರಾಯಗಳಿಂದಾಗಿ ಚಿರಂಜೀವಿ ಅವರ ಸಿನಿಮಾದ ಭಾಗವಾಗದಿರಲು ನಿರ್ಧರಿಸಿದ್ದೇನೆ. ಆದಷ್ಟು ಬೇಗ ಹೊಸ ಪ್ರಾಜೆಕ್ಟ್​ ಜೊತೆ ನಿಮ್ಮ ಮುಂದೆ ಬರುತ್ತೇನೆ' ಎಂದು ಟ್ವೀಟ್​ ಮಾಡಿದ್ದಾರೆ ತ್ರಿಶಾ.

Tamannaah Bhatia: ತೂಕ ಇಳಿಸಿಕೊಂಡ ಟಾಲಿವುಡ್​ನಲ್ಲಿ ಮಿಲ್ಕಿ ಬ್ಯೂಟಿ ತಮನ್ನಾಗೆ ಹೆಚ್ಚಿದೆ ಬೇಡಿಕೆ​..!
First published: