ಚಿತ್ರರಂಗದ ಇತಿಹಾಸದಲ್ಲೇ ಚೊಚ್ಚಲ ಪ್ರಯತ್ನ: ಮೂರು ಭಾಷೆ, ಮೂರು ವಿಭಿನ್ನ ಕಥೆ, ಒಂದು ಸಿನಿಮಾ

ಕನ್ನಡ, ತೆಲುಗು, ತಮಿಳು ಮೂರು ಭಾಷೆಗಳಲ್ಲಿ ವಿಭಿನ್ನ ಚಿತ್ರಕಥೆಯೊಂದಿಗೆ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಮೊದಲು ಕನ್ನಡದಲ್ಲಿ ಸೆನ್ಸಾರ್ ಆಗಿದೆ.

news18-kannada
Updated:June 15, 2020, 10:19 AM IST
ಚಿತ್ರರಂಗದ ಇತಿಹಾಸದಲ್ಲೇ ಚೊಚ್ಚಲ ಪ್ರಯತ್ನ: ಮೂರು ಭಾಷೆ, ಮೂರು ವಿಭಿನ್ನ ಕಥೆ, ಒಂದು ಸಿನಿಮಾ
ತ್ರಿಕೋನ
  • Share this:
ಕೊರೊನಾ ಎಫೆಕ್ಟ್​​ನಿಂದ ಥಿಯೇಟರ್​ಗಳು ಬಾಗಿಲು ಮುಚ್ಚಿವೆ. ಯಾವುದೇ ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಇದರ ನಡುವೆ ಬಿಡುಗಡೆಗೆ ಸಜ್ಜಾಗುತ್ತಿರುವ ಚಿತ್ರಗಳೇನು ಕಮ್ಮಿಯಿಲ್ಲ. ಅದರಂತೆ ತ್ರಿಕೋನ ಎಂಬ ಚಿತ್ರ ಸೆನ್ಸಾರ್ ಮುಗಿಸಿ ರಿಲೀಸ್​ಗೆ ತಯಾರಾಗುತ್ತದೆ.

ಪೊಲೀಸ್ ಪ್ರಕ್ಕಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಾಜಶೇಖರ್ ಅವರು ನಿರ್ಮಿಸಿರುವ 'ತ್ರಿಕೋನ` ಚಿತ್ರ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರ ನೀಡಿದೆ. ಯಾವುದೇ ಕಟ್ ನೀಡದೆ, ಸೌಂಡ್ ಮ್ಯೂಟ್ ಸಹ ನೀಡದೆ ಸೆನ್ಸಾರ್ ಮಂಡಳಿ ಯು/ಎ  ಅರ್ಹತಾಪತ್ರ ನೀಡಿದೆ.

ಸುಶಾಂತ್ ಕಷ್ಟದ ದಿನಗಳಲ್ಲಿ ಬಾಲಿವುಡ್ ಮಂದಿ ಕ್ಯಾರೇ ಅಂದಿರಲಿಲ್ಲ; ವೈರಲ್​ ಆಯ್ತು ಕೇಶ ವಿನ್ಯಾಸಕಿಯ ಟ್ವೀಟ್

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ಮಾಪಕ ರಾಜಶೇಖರ್ ಅವರೇ ಕಥೆ ಬರೆದದ್ದು, 143 ಚಿತ್ರದ ಖ್ಯಾತಿಯ ಚಂದ್ರಕಾಂತ್ ನಿರ್ದೇಶನ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು ಮೂರು ಭಾಷೆಗಳಲ್ಲಿ ವಿಭಿನ್ನ ಚಿತ್ರಕಥೆಯೊಂದಿಗೆ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಮೊದಲು ಕನ್ನಡದಲ್ಲಿ ಸೆನ್ಸಾರ್ ಆಗಿದೆ. ತೆಲುಗು, ತಮಿಳಿನಲ್ಲೂ ಸದ್ಯದಲ್ಲೇ ಸೆನ್ಸಾರ್ ಆಗಲಿದೆ. ಮೂರು ಭಾಷೆಗಳಲ್ಲಿ ಮೂರು ಬೇರೆ ಚಿತ್ರಕಥೆಯೊಂದಿಗೆ ನಿರ್ಮಾಣವಾಗಿರುವುದು ಚಿತ್ರರಂಗದ ಇತಿಹಾಸದಲ್ಲೇ ಪ್ರಥಮ ಎಂಬ ಹೆಗ್ಗಳಿಕೆ ಈ ಸಿನಿಮಾದ್ದಂತೆ.

ನಿರ್ದೇಶಕರ ಹೊರತುಪಡಿಸಿ ಆಯಾ ಭಾಷೆಗಳಲ್ಲಿ ಅಲ್ಲಿನ ನುರಿತ ತಂತ್ರಜ್ಞರು‌ ಕಾರ್ಯ ನಿರ್ವಹಿಸಿದ್ದಾರೆ. ಸರ್ಕಾರದಿಂದ ಚಿತ್ರ ಬಿಡುಗಡೆಗೆ ಅನುಮತಿ ಸಿಕ್ಕ ಕೂಡಲೆ, 'ತ್ರಿಕೋನ' ವನ್ನು ತೆರೆಗೆ ತರುವುದಾಗಿ ತಿಳಿಸಿರುವ ನಿರ್ಮಾಪಕ ರಾಜಶೇಖರ್‌ ಅವರು, 'ಕೆಲವರು ಚಿತ್ರ ಬಿಡುಗಡೆಗೆ ಅನುಮತಿ ದೊರೆತರು ಜನ‌ ಬರುತ್ತಾರೊ, ಇಲ್ಲವೊ? ಎಂಬ ಭಾವನೆಯಿಂದ ಚಿತ್ರ ಬಿಡುಗಡೆಗೆ ಮುಂದೆ ಬಾರದೆ ಇರಬಹುದು. ಆದರೆ ನಮ್ಮ ಚಿತ್ರ ಉತ್ತಮವಾಗಿ ಮೂಡಿಬಂದಿದ್ದು, ಜನ‌ ನಮ್ಮ ಚಿತ್ರವನ್ನು ಮೆಚ್ಚಿ ಯಶಸ್ವಿಗೊಳಿಸುವ ನಂಬಿಕೆ ಇದೆ ಎಂಬ ವಿಶ್ವಾಸ ಹೊಂದಿದ್ದಾರೆ.

ಕಣ್ಣೀರು ತರಿಸುತ್ತೆ ಆತ್ಮಹತ್ಯೆಗೂ ಕೆಲ ದಿನಗಳ ಮುನ್ನ ಸುಶಾಂತ್​ ಬರೆದಿದ್ದ ನೋಟ್..!ಸುರೇಂದ್ರನಾಥ್ ಸಂಗೀತ ನಿರ್ದೇಶನ, ಶ್ರೀನಿವಾಸ್ ವೆನಕೋಟ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ, ಹೈಟ್ ಮಂಜು ನೃತ್ಯ ನಿರ್ದೇಶನ ಹಾಗೂ ಜಾನಿ, ಚೇತನ್ ಡಿಸೋಜ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸುರೇಶ್ ಹೆಬ್ಳೀಕರ್, ಲಕ್ಷ್ಮೀ, ಅಚ್ಯುತ ಕುಮಾರ್, ಸುಧಾರಾಣಿ, ಸಾಧುಕೋಕಿಲ, ಭಜರಂಗಿ ಮಾರುತೇಶ್, ರಾಜವೀರ್, ಅದಿತಿ ರಾಜ್, ಹಾಸಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
First published: June 15, 2020, 10:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading