Viral Video: ಮೋಡಿ ಮಾಡಿದೆ ವರುಣ್ ಧವನ್-ರಶ್ಮಿಕಾ ಡ್ಯಾನ್ಸ್ ಸ್ಟೆಪ್ಸ್!

ರಶ್ಮಿಕಾ-ವರುಣ್ ಧವನ್ ಡ್ಯಾನ್ಸ್

ರಶ್ಮಿಕಾ-ವರುಣ್ ಧವನ್ ಡ್ಯಾನ್ಸ್

  • Share this:
ಸಾಮಾನ್ಯವಾಗಿ ಈ ನಟ ಮತ್ತು ನಟಿಯರು ಸುಮ್ಮನೆ ಒಂದೆರಡು ಸ್ಟೆಪ್ಸ್ ಹಾಕಿದರೆ ಸಾಕು, ಅವರ ಆ ವೀಡಿಯೋಗೆ ಲಕ್ಷಾಂತರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ. ಅದರಲ್ಲೂ ತೆಲುಗಿನ ನಟ ಅಲ್ಲು ಅರ್ಜುನ್ ಜೊತೆ ಪುಷ್ಪಾ  (Pushpa) ಚಿತ್ರದಲ್ಲಿ ನಟಿಸಿ ತನ್ನ ಡ್ಯಾನ್ಸ್ ಸ್ಟೆಪ್ಸ್ ಗೆ ತುಂಬಾನೇ ಪ್ರಖ್ಯಾತಿ ಪಡೆದ ರಶ್ಮಿಕಾ ಮಂದಣ್ಣ ಒಂದೆರಡು ಹೆಜ್ಜೆ ಹಾಕಿದರೆ ಅಭಿಮಾನಿಗಳು ಫುಲ್ ಫಿದಾ ಆಗುತ್ತಿದ್ದಾರೆ. ಅಂತಹದರಲ್ಲಿ ಈಗ ಮತ್ತೊಮ್ಮೆ ರಶ್ಮಿಕಾ (Rashmika Mandanna) ಯಾವ ಬಾಲಿವುಡ್ (Bollywood) ನಟನ ಜೊತೆಗೆ ಸೇರಿಕೊಂಡು ಯಾವ ಹಾಡಿಗೆ ಡ್ಯಾನ್ಸ್ ಮಾಡಿ ಅಭಿಮಾನಿಗಳಿಂದ ಮೆಚ್ಚುಗೆ ಪಡೆದು ಕೊಂಡಿದ್ದಾರೆ ನೀವೇ ನೋಡಿ.

ಬಾಲಿವುಡ್ ನಟ ವರುಣ್ ಧವನ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರು ವೈರಲ್ 'ಅರೇಬಿಕ್ ಕುತು ಚಾಲೆಂಜ್' ಸವಾಲನ್ನು ತೆಗೆದುಕೊಂಡು ಅದರ ಭಾಗವಾಗಿ, ತಾರೆಯರಾದ ದಳಪತಿ ವಿಜಯ್ ಮತ್ತು ನಟಿ ಪೂಜಾ ಹೆಗ್ಡೆ ಅವರ ಬೀಸ್ಟ್ ನ ‘ಹಲಾಮಿತಿ ಹಬೀಬೊ’ ಎಂಬ ವೈರಲ್ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ವೀಡಿಯೋಗಳನ್ನು ಹಂಚಿ ಕೊಂಡಿದ್ದಾರೆ. ತಾರೆಯರು ಜನಪ್ರಿಯ ಸವಾಲಿನ ತಮ್ಮ ನಿರೂಪಣೆಯನ್ನು ಹಂಚಿಕೊಂಡಿದ್ದು, ಇದರಲ್ಲಿ ಇವರಿಬ್ಬರು ಸಮುದ್ರದ ಹತ್ತಿರ ಮರಳಿನ ಮೇಲೆ ಡ್ಯಾನ್ಸ್ ಸ್ಟೆಪ್ಸ್ ಹಾಕುತ್ತಿರುವುದನ್ನು ನಾವು ನೋಡಬಹುದು.

ಸಿಕ್ಕಾಪಟ್ಟೆ ವೈರಲ್ ಆಗಿದೆ

ನಟ ವರುಣ್ ಧವನ್ ಪೋಸ್ಟ್ ಗೆ "ಯೋ ಹಬೀಬೊ, ಮರಳಿನ ಮೇಲೆ ನೃತ್ಯ ಮಾಡುವ ಬಗೆ" ಎಂದು ಶೀರ್ಷಿಕೆಯನ್ನು ಸಹ ಬರೆದು ಕೊಂಡಿದ್ದಾರೆ. ಈ ವೀಡಿಯೋವನ್ನು ಈಗಾಗಲೇ 32 ಲಕ್ಷಕ್ಕಿಂತಲೂ ಹೆಚ್ಚು ಜನರು ಇಷ್ಟ ಪಟ್ಟಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ ಮತ್ತು ಈ ಇಬ್ಬರು ಸ್ಟಾರ್ ನಟರು ಅವರ ಅಭಿಮಾನಿಗಳಿಂದ ತುಂಬಾನೇ ಪ್ರೀತಿಯನ್ನು ಮತ್ತು ಮೆಚ್ಚುಗೆಯನ್ನು ಪಡೆದಿದ್ದಾರೆ.

ಮೊದಲ ಸಿನಿಮಾ ಯಶಸ್ವಿ

ನಟಿ ರಶ್ಮಿಕಾ ಮಂದಣ್ಣ ಅವರು ಒಂದು ಜಾಹೀರಾತಿಗೆ ರೂಪದರ್ಶಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಅಲ್ಲಿಂದ ಕನ್ನಡ ಚಲನಚಿತ್ರ ಕಿರಿಕ್ ಪಾರ್ಟಿಯಲ್ಲಿ ನಟ ರಕ್ಷಿತ್ ಶೆಟ್ಟಿ ಅವರೊಡನೆ ನಟಿಸುವುದರ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಇವರ ಈ ಚೊಚ್ಚಲ ಚಿತ್ರದ ಯಶಸ್ಸಿನ ನಂತರ, ರಶ್ಮಿಕಾ, ಹರ್ಷ ಅವರ ‘ಅಂಜನಿ ಪುತ್ರ’ ಚಿತ್ರದಲ್ಲಿ ನಟ ಪುನೀತ್ ರಾಜ್ ಕುಮಾರ್ ಜೊತೆಗೆ ಮತ್ತು ‘ಚಮಕ್’ ಚಿತ್ರದಲ್ಲಿ ನಟ ಗಣೇಶ್ ಅವರೊಡನೆ ನಟಿಸಿ ಸೈ ಎನಿಸಿಕೊಂಡರು.

ಇದನ್ನೂ ಓದಿ: New Fish: ಗಾಢ ಪಿಂಕ್ ಬಣ್ಣದ ಮೀನು ಮಾಲ್ಡೀವ್ಸ್​ನಲ್ಲಿ ಪತ್ತೆ..! ಅಬ್ಬಾ ಇದರ ಸೌಂದರ್ಯವೇ

ಸಾಲು ಸಾಲು ಹಿಟ್ ಚಿತ್ರ

ನಂತರ ಅವರು ತೆಲುಗಿನ ನಟ ಮಹೇಶ್ ಬಾಬು ಅವರೊಂದಿಗೆ ‘ಸರಿಲೇರು ನೀಕೆವ್ವರು’ ಚಿತ್ರದಲ್ಲಿ ನಟಿಸಿದರು. ಹೀಗೆ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಾ ಪುಷ್ಪಾ ಎಂಬ ದೊಡ್ಡ ಹಿಟ್ ಚಿತ್ರವನ್ನು ಇತ್ತೀಚೆಗೆ ನೀಡಿದರು.


View this post on Instagram


A post shared by VarunDhawan (@varundvn)


ಬಾಲಿವುಡ್ ಗೆ ಪಾದಾರ್ಪಣೆ

ನಟಿ ಶೀಘ್ರದಲ್ಲಿಯೇ ಬಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ, ಅವರು ಬಿಗ್ ಬಿ ಅಮಿತಾಭ್ ಬಚ್ಚನ್ ಅವರೊಂದಿಗೆ ‘ಗುಡ್ ಬೈ’ ಚಿತ್ರದಲ್ಲಿ ನಟಿಸಲಿದ್ದಾರೆ ಮತ್ತು ಇದನ್ನು ವಿಕಾಸ್ ಬಹ್ಲ್ ಅವರು ನಿರ್ದೇಶಿಸಲಿದ್ದಾರೆ. ಇಷ್ಟೇ ಅಲ್ಲದೆ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ‘ಮಿಷನ್ ಮಜ್ನು’ ಚಿತ್ರದ ನಂತರ ರಶ್ಮಿಕಾ ಅವರ ಎರಡನೇ ಬಾಲಿವುಡ್ ಚಿತ್ರ ‘ಗುಡ್ ಬೈ’ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Longest Car: ಜಗತ್ತಿನ ಅತೀ ಉದ್ದದ ಕಾರಿನಲ್ಲಿದೆ ಸ್ವಿಮ್ಮಿಂಗ್ ಪೂಲ್, ಹೆಲಿಪ್ಯಾಡ್

ಬಾಲಿವುಡ್ ನ ಹೆಸರಾಂತ ನಿರ್ಮಾಪಕ ಡೇವಿಡ್ ಧವನ್ ಅವರ ಮಗ ವರುಣ್ ಧವನ್ ಅವರು ಅಕ್ಟೋಬರ್, ಹಂಪ್ಟಿ ಶರ್ಮಾ ಕಿ ದುಲ್ಹನಿಯಾ, ಎಬಿಸಿಡಿ 2, ಬದ್ಲಾಪುರ್ ಮತ್ತು ದಿಲ್ವಾಲೆ ಚಿತ್ರಗಳಲ್ಲಿ ನಟಿಸಿದ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. 2012 ರಲ್ಲಿ ಬಿಡುಗಡೆಯಾದ ‘ಸ್ಟೂಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ಅವರು ಕೊನೆಯದಾಗಿ ನಟಿ ಸಾರಾ ಅಲಿ ಖಾನ್ ಅವರೊಂದಿಗೆ ಕೂಲಿ ನಂ 1 ರಿಮೇಕ್ ನಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರವು 2020 ರಲ್ಲಿ ಬಿಡುಗಡೆಯಾಯಿತು.
Published by:Divya D
First published: