ದರ್ಶನ್​ ಮನೆ ಮುಂದೆ ಮರ ಬಿದ್ದು ಮೂರು ದಿನಗಳಾದರೂ ಆರಂಭವಾಗದ ತೆರವು ಕಾರ್ಯ..!

ಸ್ಯಾಂಡಲ್​ವುಡ್​ನ ಡಿಬಾಸ್ ದರ್ಶನ್​ ವರ ಮನೆ ಮುಂದೆ ಮಳೆಯಿಂದಾಗಿ ಮರ ಬಿದ್ದು ಮೂರು ದಿನಗಳೇ ಕಳೆದಿವೆ. ಆದರೆ ತೆರವು ಕಾರ್ಯ ಮಾತ್ರ ಇನ್ನೂ ಆರಂಭವಾಗಿಲ್ಲ.

Anitha E | news18
Updated:June 8, 2019, 5:11 PM IST
ದರ್ಶನ್​ ಮನೆ ಮುಂದೆ ಮರ ಬಿದ್ದು ಮೂರು ದಿನಗಳಾದರೂ ಆರಂಭವಾಗದ ತೆರವು ಕಾರ್ಯ..!
ನಟ ದರ್ಶನ್​ ಮನೆ ಮುಂದೆ ಬಿದ್ದಿರುವ ಮರ
  • News18
  • Last Updated: June 8, 2019, 5:11 PM IST
  • Share this:
ಬೆಂಗಳೂರಿನಲ್ಲಿ ಮಳೆ ಬಂದು ಮರಗಳು ಧರೆಗುರುಳುತ್ತಿರುವುದು ಗೊತ್ತೇ ಇದೆ. ನಗರದ ಹಲವೆಡೆಗಳಲ್ಲಿ ಮರಗಳು ಬಿದ್ದರೆ, ಮತ್ತೆ ಕೆಲವೆಡೆ ಕೊಂಬೆಗಳು ಮುರಿದು ಬಿದ್ದಿವೆ. ಇದರಿಂದಾಗಿ ಸಾಕಷ್ಟು ಕಡೆ ಸಂಚಾರದಲ್ಲಿ ವ್ಯತ್ಯವಾಗುತ್ತಿದೆ. ಆದರೆ ಬಿಬಿಎಂಪಿ ಎಲ್ಲೆಲ್ಲಿ ಇಂತಹ ಘಟನೆಗಳು ಸಂಭವಿಸಿವೆಯೋ ಅಲ್ಲೆಲ್ಲ ಆದಷ್ಟು ಬೇಗ ತೆರವು ಕಾರ್ಯ ಕೈಗೊಂಡಿದೆ.

ಆದರೆ ನಟ ದರ್ಶನ್​ ಅವರು ವಾಸವಿರುವ ಮನೆ ಅಂದರೆ, ರಾಜರಾಜೇಶ್ವರಿ ನಗರದಲ್ಲಿ ಮರ ಬಿದ್ದು ಮೂರು ದಿನ ಕಳೆದಿದೆ. ಆದರೆ ಬಿಬಿಎಂಪಿ ಇತ್ತ ಗಮನೆಏ ಹರಿಸಿಲ್ಲ. ಬಿದ್ದ ಮರವನ್ನು ತೆರವುಗೊಳಿಸಲು ಮೂರು ದಿನಗಳು ಸಾಲದೇ ಎಂಬ ಪ್ರಶ್ನೆ ಈಗ ಎದ್ದಿದೆ.

Darshan
ರಾಜರಾಏಶ್ವರಿ ನಗರದಲ್ಲಿ ದರ್ಶನ್​ ಮನೆ ಮುಂದೆ ಬಿದ್ದಿರುವ ಮರ


ಮರ ಬಿದ್ದಿರುವುದು ದರ್ಶನ್​ ಅವರ ಮನೆ ಮುಂದೆ. ಅದರ ಕೊಂಚ ಅವರ ಮನೆಯ ಕಾಂಪೌಂಡಿಗೆ ತಾಗಿದಂತೆ ಆಗಿದೆ. ಇದರಿಂದಾಗಿ ಅವರ ಮನೆಗೆ ಯಾವುದೇ ಹಾನಿಯಾಗಿಲ್ಲ. ಆದರೆ ಮರ ಮನೆಯ ಮುಂದಿರುವ ರಸ್ತೆಯ ಮೇಲೆ ಬಿದ್ದಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆಯಂತೆ.

ಇದನ್ನೂ ಓದಿ: Yajamana 100 Days: ಶತದಿನೋತ್ಸವ ಪೂರೈಸಿದ 'ಯಜಮಾನ'

ಎಲ್ಲ ರೀತಿಯಲ್ಲೂ ಸಬಲರಾಗಿರುವ ಸ್ಯಾಂಡಲ್​ವುಡ್​ ನಟನಿಗೆ ಈ ಗತಿಯಾದರೆ, ಇನ್ನೂ ಸಾಮಾನ್ಯರ ಗತಿಯೇನು ಎಂದು ದರ್ಶನ್​ ಅಭಿಮಾನಿಗಳು ಕೇಳುತ್ತಿದ್ದಾರೆ. ಅದರಲ್ಲೂ ಈ ಕೆಲಸಕ್ಕೆ ಮೂರು ದಿನಗಳಾದರೂ ಯಾರೊಬ್ಬರೂ ತೆರವು ಕಾರ್ಯ ನಡೆಸದಿರಲು ರಾಜಕೀಯ ಕಾರಣಗಳು ಇರಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.

Mouni Roy Photos: ಹೇಗಿದ್ದವರು ಹೇಗಾಗಿದ್ದಾರೆ ಗೊತ್ತಾ 'ಕೆ.ಜಿ.ಎಫ್'​. ಚೆಲುವೆ ಮೌನಿ ರಾಯ್​..!
First published:June 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ