Kolar: ದೆಹಲಿ, ನಾಗಾಲ್ಯಾಂಡ್​ನಿಂದಲೂ KGF 2 ಶೂಟಿಂಗ್ ಸ್ಥಳ ನೋಡಲು ಕೋಲಾರಕ್ಕೆ ಬರ್ತಿದ್ದಾರೆ ಫ್ಯಾನ್ಸ್, ಟೂರಿಸ್ಟ್ ಪ್ಲೇಸ್ ಮಾಡುವಂತೆ ಮನವಿ

ಪ್ರತಿನಿತ್ಯ ಬೆಂಗಳೂರು, ಚನ್ನೈ. ಮುಂಬೈ ಹಾಗು ದೆಹಲಿಯಿಂದಲೂ ಪ್ರವಾಸಿಗರು ಕೆಜಿಎಫ್ 2 ಶೂಟಿಂಗ್ ಸ್ಪಾಟ್‍ಗೆ ಭೇಟಿ ನೀಡಿ ಪೋಟೊಗಳನ್ನ ತೆಗೆದುಕೊಳ್ತಿದ್ದಾರೆ,

ಕೋಲಾರ ಕೆಜಿಎಫ್ ಶೂಟಿಂಗ್ ನಡೆದ ಸ್ಥಳ

ಕೋಲಾರ ಕೆಜಿಎಫ್ ಶೂಟಿಂಗ್ ನಡೆದ ಸ್ಥಳ

  • Share this:
ಕನ್ನಡದ ಸಿನಿಮಾ‌ ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ  ಕೆಜಿಎಪ್ ಚಾಪ್ಟರ್ 2 (KGF Chapter 2) ಸಿನಿಮಾ, ದೇಶ ಹಾಗು ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಹಿನ್ನಲೆ, ಸಿನಿಮಾದ ಚಿತ್ರೀಕರಣ ನಡೆದಿರುವ ಕೋಲಾರದ (Kolar)ಚಿನ್ನದ ಗಣಿ, ಕೆಜಿಎಪ್ ನಗರದತ್ತ ಪ್ರವಾಸಿಗರು (Tourists) ಮುಖಮಾಡಿದ್ದಾರೆ, ಕೆಜಿಎಪ್ ನಗರದ ಸೈನೆಡ್ ಗುಡ್ಡಗಳಲ್ಲಿ ಚಿತ್ರೀಕರಣ (Shooting) ನಡೆದಿರುವ ಸ್ತಳಕ್ಕೆ ತೆರಳಿ, ಪೋಟೊ ತೆಗೆದುಕೊಳ್ಳಲು ದೇಶದ ಮೂಲೆ ಮೂಲೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದು, ಪ್ರತಿನಿತ್ಯ ಬೆಂಗಳೂರು, ಚನ್ನೈ. ಮುಂಬೈ ಹಾಗು ದೆಹಲಿಯಿಂದಲೂ ಪ್ರವಾಸಿಗರು ಶೂಟಿಂಗ್ ಸ್ಪಾಟ್‍ಗೆ ಭೇಟಿ ನೀಡಿ ಪೋಟೊಗಳನ್ನ ತೆಗೆದುಕೊಳ್ತಿದ್ದಾರೆ. ಇನ್ನು ಚಿನ್ನದಗಣಿಯ ಸೈನೆಡ್ ಗುಡ್ಡಗಳಲ್ಲಿ ಓಡಾಡಲು ಪ್ರವೇಶ ನಿಷೇಧ ಹಿನ್ನಲೆ, ಚಿತ್ರೀಕರಣ ನಡೆದ ಸ್ತಳಕ್ಕೆ ಹೋಗದಂತೆ, ಬಿ,ಜಿ,ಎಮ್,ಎಲ್ ಸಂಸ್ತೆಯ ಸೆಕ್ಯೂರಿಟಿ ಸಿಬ್ಬಂದಿ ಮುಳ್ಳು ಬೇಲಿ ಹಾಕಿ ನಿರ್ಬಂಧಿಸಿದ್ದಾರೆ.

ಆದರೂ ಬೇರೆ ಮಾರ್ಗಗಳಿಂದ ಸೈನೆಡ್ ಗುಡ್ಡ ಪ್ರವೇಶ ಮಾಡುತ್ತಿರುವ ಪ್ರವಾಸಿಗರು, ಕೆಜಿಎಪ್ ಸಿನಿಮಾ ಚಿತ್ರೀಕರಣ ನಡೆದ, ಸ್ತಳಕ್ಕೆ ತೆರಳಿ ಪೋಟೋಗಳನ್ನ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ.

ಸೈನೆಡ್ ಗುಡ್ಡಗಳಿಗೆ ಬರೋ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಳ

ಕೆಜಿಎಪ್ ಚಾಪ್ಟರ್ 2 ಸಿನಿಮಾ ತೆರೆಕಂಡ ನಂತರ, ಕೆಜಿಎಪ್ ನ ಸೈನೆಡ್ ಗುಡ್ಡಗಳಿಗೆ ಬರೋ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಇಲ್ಲಿನ ಗುಡ್ಡ ಇರುವ ನೂರಾರು ಎಕರೆ ಸ್ತಳವನ್ನ,  ಪ್ರವಾಸಿ ತಾಣವಾಗಿಸಿ ಎಂಬ ಕೂಗು ಕೇಳಿ ಬರುತ್ತಿದೆ, ಆದರೆ ಬಿ,ಜಿ,ಎಮ್,ಎಲ್ ಸಂಸ್ತೆ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.

ದೆಹಲಿ, ಹಾಗು ನಾಗಾಲ್ಯಾಂಡ್ ಪ್ರವಾಸಿಗರು

ಈ ಬಗ್ಗೆ ಮಾತನಾಡಿದ ಬೆಂಗಳೂರು, ದೆಹಲಿ, ಹಾಗು ನಾಗಾಲ್ಯಾಂಡ್ ಪ್ರವಾಸಿಗರು, ಕನ್ನಡ ಚಿತ್ರ ವಿಶ್ವದಾದ್ಯಂತ ಯಶಸ್ಸು ಗಳಿಸಿದ್ದು, ನಮ್ಮ ದೇಶಕ್ಕೆ ಒಳ್ಳೆಯ ಹೆಸರು ತಂದುಕೊಟ್ಟಿದೆ ಇದಕ್ಕೆ ಕಾರಣವಾದ ಶೂಟಿಂಗ್ ಸ್ತಳವನ್ನ ಪ್ರವಾಸಿ ತಾಣವನ್ನಾಗಿ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಜನಜಾಗೃತಿ ಮೂಡಿಸುತ್ತಿದೆ KGF 2 ಡೈಲಾಗ್, ಎಲ್ಲೆಲ್ಲೂ ರಾಕಿಬಾಯ್ ವೈಲೆನ್ಸ್ ಡೈಲಾಗ್​ದೆ ಹವಾ...!

ಕೆಜಿಎಫ್ ಸೈನೆಡ್ ಗುಡ್ಡವನ್ನ ಪ್ರವಾಸಿ ತಾಣ ಮಾಡುವುದು ಸಾಧ್ಯವೇ ?

ಕೆಜಿಎಪ್ ನಗರದಲ್ಲಿನ 12.500 ಎಕರೆ ಪ್ರದೇಶವನ್ನ ಈಗಾಗಲೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಬಿಟ್ಟುಕೊಟ್ಟಿದೆ, ಭಾರತ್ ಗೋಲ್ಡ್ ಮೈನ್ಸ್ ಸಂಸ್ತೆ ಸುಮಾರು 40 ರಷ್ಟು ಸ್ತಳದಲ್ಲಿ ಈಗಾಗಲೇ ಮೈನಿಂಗ್ ನಡೆಸಿ, ನೂರಾರು ಟನ್ ಚಿನ್ನ ತೆಗೆದಿದ್ದು, ಭೂಮಿಯ ಒಡಲಿಂದ ಚಿನ್ನ ತೆಗೆಯಲು ಹೊರತೆಗೆದ ನಿರುಪಯುಕ್ತ ಮಣ್ಣನ್ನ ಸಾವಿರಾರು ಎಕರೆ ಪ್ರದೇಶದಲ್ಲಿ ಹಾಕಲಾಗಿದೆ, ಇದೀಗ ಇದೇ ಸೈನೆಡ್ ಗುಡ್ಡದಲ್ಲಿ ಚಿನ್ನವಿದೆ ಎಂಬ ಮಾಹಿತಿಯು ತಜ್ಞರು ನೀಡಿದ್ದು, ಈ ಮಣ್ಣನ್ನ ಬಿ.ಜಿ.ಎಮ್.ಎಲ್ ಸಂಸ್ತೆ ಮುಂದೆ ಚಿನ್ನ ಹೊರತೆಗೆಯಲು ಬಳಸುವ ಸಾಧ್ಯತೆಯಿದೆ.

ಇದನ್ನೂ ಓದಿ: Srinidhi Shetty: ಪ್ರಶಾಂತ್​ ನೀಲ್​ ಕಣ್ಣಿಗೆ ಬಿಳೋ ಮುನ್ನ ಶ್ರೀನಿಧಿ ಏನ್​ ಮಾಡ್ತಿದ್ರು? ಕೆಜಿಎಫ್​ ಸಿಕ್ಕಿದ್ದು ಹೇಗೆ ಅಂತ ಇಲ್ಲಿದೆ ನೋಡಿ

ಹೀಗಾಗಿ ಸೈನೆಡ್ ಗುಡ್ಡವನ್ನ ಪ್ರವಾಸಿ ತಾಣವನ್ನಾಗಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ‌ ನಿರಾಕರಿಸುವ ಸಾಧ್ಯತೆಯಿದೆ. 2001 ರಲ್ಲಿ ಚಿನ್ನದಗಣಿಯನ್ನ ಮುಚ್ಚಿದ ನಂತರ ಸಾವಿರಾರು ಕಾರ್ಮಿಕರು ಬೀದಿಗೆ ಬಿದ್ದಿದ್ದು, ಇಂದಿಗೂ ಕಾರ್ಮಿಕರು ಹಾಗು ಕುಟುಂಬಸ್ತರು ಬೆಂಗಳೂರಿಗೆ ತೆರಳಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ, ಇಂದಿಗೂ ಚಿನ್ನದಗಣಿ ನಡೆಯುವಾಗ ಕಾರ್ಮಿಕರಿಗೆ ನೀಡಿದ ಶೀಟಿನ ಮನೆಗಳಲ್ಲೆ ಕಾರ್ಮಿಕರು ಹಾಗು ಅವರ ಕುಟುಂಬಸ್ತರು ಜೀವನ ನಡೆಸುತ್ತಿದ್ದಾರೆ.
Published by:Divya D
First published: