ಈ ತಿಂಗಳು ಓಟಿಟಿ ವೇದಿಕೆಯಲ್ಲಿ (OTT Platform) ಏನನ್ನೇಲ್ಲಾ ವೀಕ್ಷಿಸಬಹುದು ಎಂಬ ಕುತೂಹಲ ಇದೆಯೇ? ಹಾಗಾದರೆ, ನಾವು ಇಲ್ಲಿ ಓಟಿಟಿ ವೇದಿಕೆಗಳಾದ, ನೆಟ್ಫ್ಲಿಕ್ಸ್ (Netflix), ಡಿಸ್ನಿ ಪ್ಲಸ್ ಹಾಟ್ಸ್ಟಾರ್ (Disney Plus Hotstar), ಅಮೆಜಾನ್ ಪ್ರೈಂ (Amazon Prime) ವಿಡಿಯೋ ಮತ್ತು ಜೀ5 (Zee 5) ನಲ್ಲಿ ಈ ತಿಂಗಳು ಲಭ್ಯವಾಗಲಿರುವ ಸಿನಿಮಾಗಳು ಮತ್ತು ವೆಬ್ಸರಣಿಗಳ ಮಾಹಿತಿಯನ್ನು ಹೊತ್ತು ತಂದಿದ್ದೇವೆ. ಅನಿಲ್ ಕಪೂರ್ ಮತ್ತು ಹರ್ಷವರ್ಧನ್ ಕಪೂರ್ ನಟನೆಯ ಥಾರ್ ನಿಂದ ಹಿಡಿದು, ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗಲಿರುವ ಬಹು ನಿರೀಕ್ಷಿತ ಥ್ರಿಲ್ಲರ್, ಸ್ಟ್ರೇಂಜರ್ ಥಿಂಗ್ಸ್ ವರೆಗೆ, ಎಲ್ಲಾ ಮಾಹಿತಿಗಳು ಇಲ್ಲಿವೆ.
1. ಸ್ಟ್ರೇಂಜರ್ ಥಿಂಗ್ಸ್
ಸ್ಟ್ರೇಂಜರ್ ಥಿಂಗ್ಸ್ ಸಿನಿಮಾ ಮೇ 27 ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಲಿದೆ. ಇದೊಂದು ಬಹು ನಿರೀಕ್ಷಿತ, ವೈಜ್ಞಾನಿಕ ಹಾರರ್ ಸರಣಿಯಾಗಿದ್ದು, ಹೊಚ್ಚ ಹೊಸ ಸೀಸನ್ನೊಂದಿಗೆ ಮರಳಿದೆ. ನಾಲ್ಕನೇ ಸೀಸನ್, ಎರಡು ಭಾಗಗಳಲ್ಲಿ ಪ್ರಕಟಗೊಳ್ಳಿಲಿದ್ದು, ಮೊದಲನೇ ಭಾಗ ಈ ತಿಂಗಳಲ್ಲಿ ಮತ್ತು ಎರಡನೇ ಭಾಗ 5 ವಾರಗಳ ನಂತರ ಬಿಡುಗಡೆ ಆಗಲಿದೆ. ವಿನೋನಾ ರೈಡರ್, ಡೇವಿಡ್ ಹಾರ್ಬರ್, ಫಿನ್ ವೂಲ್ಫ್ಹಾರ್ಡ್ , ಮಿಲಿ ಬಾಬ್ಬಿ ಬ್ರೌನ್, ಗ್ಯಾಟೆನ್ ಮಟರಾಝ್ಝೊ, ಸೆಲೆಬ್ ಮ್ಯಾಕ್ಲಾಫ್ಲಿನ್, ನೋಹಾ ಸ್ನಾಪ್, ಸ್ಯಾಡಿ ಸಿಂಕ್, ನಟಾಲಿಯಾ ಡೈಯರ್, ಚಾರ್ಲಿ ಹೀಟನ್, ಜೋ ಕೀರಿ, ಮಾಯ ಹಾಕ್, ಪ್ರಿಯಾಹ್ ಫರ್ಗುಸನ್, ಕಾರಾ ಬೌನೋ ಮತ್ತು ಬ್ರೆಟ್ ಜೆಲ್ಮೆನ್ ಈ ಸರಣಿಯ ಪ್ರಾಥಮಿಕ ಪಾತ್ರವರ್ಗದಲ್ಲಿ ಮುಂದುವರೆಯಲಿದ್ದಾರೆ.
2. ದ ಕಶ್ಮೀರ್ ಫೈಲ್ಸ್
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದ ಕಶ್ಮೀರ್ ಫೈಲ್ಸ್ ಸಿನಿಮಾ', ಕಾಶ್ಮೀರಿ ಪಂಡಿತರ ನಿಜ ಜೀವನದಲ್ಲಿ ನಡೆದ ಅತ್ಯಂತ ದಾರುಣ ಘಟನೆಗಳನ್ನು ಆಧರಿಸಿದ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ, ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ ಮತ್ತು ದರ್ಶನ್ ಕುಮಾರ್ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾ ಮೇ 13 ರಂದು, ಜೀ5 ಡಿಜಿಟಲ್ ವೇದಿಕೆಯಲ್ಲಿ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
3. ಪಂಚಾಯತ್ 2
ಪಂಚಾಯತ್, ದೀಪಕ್ ಕುಮಾರ್ ಮಿಶ್ರಾ ನಿರ್ದೇಶನದ ವೆಬ್ ಸರಣಿ ಇದಾಗಿದ್ದು, ಇದೀಗ ಅದರ ಎರಡನೇ ಸೀಸನ್ ಬಿಡುಗಡೆ ಆಗುತ್ತಿದೆ. ಮೇ 20 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪಂಚಾಯತ್ 2 ಬಿಡುಗಡೆ ಆಗಲಿದ್ದು, ಜಿತೇಂದ್ರ ಕುಮಾರ್, ನೀನಾ ಗುಪ್ತ ಮತ್ತು ರಘುಬೀರ್ ಯಾದವ್ ಇದರಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: Kareena Kapoor ಥರ ತೆಳ್ಳಗೆ ಕಾಣ್ಬೇಕು ಅನ್ನೋ ಆಸೆನಾ? ಹಾಗಿದ್ರೆ ಅವ್ರು ಮಾಡೋ ಯೋಗ ನೀವೂ ಪ್ರಾಕ್ಟೀಸ್ ಮಾಡಿ
4. ಹೋಮ್ ಶಾಂತಿ
ಸುಪ್ರಿಯಾ ಪಾಠಕ್ ಮತ್ತು ಮನೋಜ್ ಪಾಹ್ವಾ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿರುವ ಡ್ರಾಮ ಸರಣಿಯಿದು. ಚಕೋರಿ ದ್ವಿವೇದಿ ಮತ್ತು ಪೂಜನ್ ಚಾಬ್ರಾ, ಅವರಿಬ್ಬರ ಮಕ್ಕಳ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಡೆಹರಾಡೂನ್ ಮೂಲದ ಮಧ್ಯಮ ವರ್ಗದ ಕುಟುಂಬವೊಂದರ ಕಥೆಯನ್ನು ಹೊಂದಿರುವ ಹೋಮ್ ಶಾಂತಿ ಸರಣಿಯನ್ನು ಆಕಾಂಕ್ಷ ದುವಾ ನಿರ್ದೇಶಿಸಿದ್ದಾರೆ. ಮೇ 6 ರಂದು ಇದು ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ: Vinaya Prasad: ಅರಸನ ಕೋಟೆ ಅಖಿಲಾಂಡೇಶ್ವರಿಯ ರಿಯಲ್ ಲೈಫ್ ಸ್ಟೋರಿ ಇದು
5. ದ ಮ್ಯಾಟ್ರಿಕ್ಸ್ ರೀಸರೆಕ್ಷನ್
ದ ಮ್ಯಾಟ್ರಿಕ್ಸ್ ರೀಸರೆಕ್ಷನ್, ಮ್ಯಾಟ್ರಿಕ್ಸ್ ಸಿನಿಮಾ ಸರಣಿಯ ನಾಲ್ಕನೇ ಕಂತಾಗಿದ್ದು, ಯಾಹ್ಯ ಅಬ್ದುಲ್ ಮಟೀನ್ 2 , ಜೆಸ್ಸಿಕಾ ಹೆನ್ವಿಕ್, ಕ್ರಿಸ್ಟೀನಾ ರಿಕ್ಕಿ, ನೀಲ್ ಪ್ಯಾಟ್ರಿಕ್ ಹ್ಯಾರಿಸ್, ಜೋನಾಥನ್ ಗ್ರೋಫ್, ಪ್ರಿಯಾಂಕ ಚೋಪ್ರಾ, ಜಾಡಾ ಪಿಂಕೆಟ್ ಸ್ಮಿತ್ ನಟಿಸುತ್ತಿದ್ದಾರೆ. ಈ ಸಿನಿಮಾ ಮೇ 6 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.
6. ಜುಂಡ್
ನಾಗರಾಜ್ ಮಂಜುಳೆ ಅವರು ನಿರ್ದೇಶಿಸಿರುವ ಈ ಸ್ಪೋರ್ಟ್ಸ್ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮುಖ್ಯ ಪಾತ್ರದಲ್ಲಿದ್ದಾರೆ. ಇದು ಮೇ 6 ರಂದು ಜೀ5 ನಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ: Samantha: ಬಾಕ್ಸ್ ಆಫೀಸ್ನಲ್ಲಿ ಮಾಜಿ ಪತ್ನಿ-ಪತಿ ಮುಖಾಮುಖಿ! ನಾಗಚೈತನ್ಯಗೆ ಸವಾಲೆಸೆದ ಸಮಂತಾ
7. ಥಾರ್
ಅನಿಲ್ ಕಪೂರ್ ಮತ್ತು ಹರ್ಷವರ್ಧನ್ ಕಪೂರ್ ಅಭಿನಯದ ಈ ಬಹು ನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ಮೇ 6 ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಲಿದೆ. ಫಾತೀಮ ಸಮಾ ಶೇಖ್ ಮತ್ತು ಸತೀಶ್ ಕೌಶಿಕ್ ಅವರು ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ