777 Charlie Torture Song: ರಕ್ಷಿತ್​ ಶೆಟ್ಟಿಗೆ ಟಾರ್ಚರ್ ಕೊಟ್ಟ ಈ ಚಾರ್ಲಿ: ಇದುವೆ ಬೌ ಬೌ ಡ್ರಾಮ..!

ನೊಬಿನ್ ಪೌಲ್​ ಸಂಗೀತ ನೀಡಿರುವ ಈ ಸಿನಿಮಾದ ಟಾರ್ಚರ್ ಕನ್ನಡ ಹಾಡಿಗೆ ವಿಜಯ್​ ಪ್ರಕಾಶ್​ ಅವರು ದನಿಯಾಗಿದ್ದಾರೆ. 6 ನಿಮಿಷ 45 ಸೆಕೆಂಡ್​ ಇರುವ ಈ ಹಾಡು ವೀಕ್ಷಕರ ಮನರಂಜಿಸುತ್ತಿದೆ.

ರಿಲೀಸ್ ಆಯ್ತು ಟಾರ್ಚರ್ ಸಾಂಗ್​

ರಿಲೀಸ್ ಆಯ್ತು ಟಾರ್ಚರ್ ಸಾಂಗ್​

  • Share this:
ಅವನೇ ಶ್ರೀಮನ್ನಾರಾಯಣ ಸಿನಿಮಾದ ನಂತರ ರಕ್ಷಿತ್​ ಶೆಟ್ಟಿ (Rakshit Shetty) ಅಭಿನಯಿಸುತ್ತಿರುವ ಸಿನಿಮಾ 777 ಚಾರ್ಲಿ (777 Charlie). ಇತ್ತೀಚೆಗಷ್ಟೆ ಸಿನಿಮಾದ ರಿಲೀಸ್ ದಿನಾಂಕ ಪ್ರಕಟಿಸಿದ ಚಿತ್ರತಂಡ ಸಿನಿಮಾ ಪ್ರಚಾರ ಕೆಲಸದಲ್ಲಿ ನಿರತವಾಗಿದೆ.ವಜೊತೆಗೆ ಆಗಾಗ ಚಿತ್ರತಂಡ ಹೊಸ ಅಪ್ಡೇಟ್ ಸಹ ಕೊಡುತ್ತಿದೆ. ಈ ಸಿನಿಮಾದ ಚಿತ್ರೀಕರಣ ಆರಂಭವಾಗಿ ಎಲ್ಲವೂ ಅಂದು ಕೊಂಡಂತೆ ನಡೆಯುತ್ತಿತ್ತು. ಆದರೆ ಕೊರೋನಾ ಮೊದಲ ಅಲೆ ಆರಂಭವಾದಾಗ ರಾಜ್ಯದಲ್ಲಿ ಲಾಕ್​ಡೌನ್​ ಜಾರಿಗೆ ತರಲಾಯಿತು ಆಗಿನಿಂದ ಇಲ್ಲಿಯವರೆಗೆ ಚಿತ್ರತಂದ ಶೂಟಿಂಗ್​ ಮಾಡಲು ಸಾಕಷ್ಟು ಕಷ್ಟ ಪಟ್ಟಿದೆ. ಕಳೆದ ವರ್ಷ ಲಾಕ್​ಡೌನ್​ ಆರಂಭವಾದಾಗ ಬೆಂಗಳೂರಿಗೆ ಹಿಂತಿರುಗಿದ್ದ ಚಿತ್ರತಂಡ ಮತ್ತೆ ಡಿಸೆಂಬರ್​ನಲ್ಲಿ ಕೊಡೈಕೆನಾಲ್​ನಲ್ಲಿ ಶೂಟಿಂಗ್​ ಮುಗಿಸಿ, ನಂತರ ಹಿಮಾಚಲ ಪ್ರದೇಶ ಹಾಗೂ ಕಾಶ್ಮೀರದಲ್ಲಿ ಬೀಡು ಬಿಟ್ಟಿತ್ತು ಚಾರ್ಲಿ ಚಿತ್ರತಂಡ. ವರ್ಷದ ಆರಂಭದಲ್ಲಿ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಮುಗಿಸಿದ್ದ ಚಿತ್ರತಂಡ ಪೋಸ್ಟ್​ ಪ್ರೊಡಕ್ಷನ್​ ಕೆಲಸದಲ್ಲಿ ನಿರತವಾಗಿತ್ತು.

ಕೆ ಕಿರಣ್ ರಾಜ್​ ನಿರ್ದೇಶನದ 777 ಚಾರ್ಲಿ ಸಿನಿಮಾದ ಹಾಡು ರಿಲೀಸ್​ ಆಗಿದೆ. ಹೇಳಿದಂತೆಯೇ ಚಿತ್ರದ ಇಂದು ಟಾರ್ಚರ್ ಹಾಡನ್ನು ರಿಲೀಸ್ ಮಾಡಿದೆ. ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂನಲ್ಲಿ ಹಾಡು ಬಿಡುಗಡೆಯಾಗಿದೆ.ನೊಬಿನ್ ಪೌಲ್​ ಸಂಗೀತ ನೀಡಿರುವ ಈ ಸಿನಿಮಾದ ಟಾರ್ಚರ್ ಕನ್ನಡ ಹಾಡನ್ನು ವಿಜಯ್​ ಪ್ರಕಾಶ್​ ಅವರು ಹಾಡಿದ್ದಾರೆ. 6 ನಿಮಿಷ 45 ಸೆಕೆಂಡ್​ ಇರುವ ಈ ಹಾಡು ವೀಕ್ಷಕರ ಮನರಂಜಿಸುತ್ತಿದೆ. ರಾಜ್​ ಬಿ. ಶೆಟ್ಟಿ ಸಿನಿಮಾದಲ್ಲಿ ಪಶು ವೈದ್ಯರಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ರಮೇಶ್ ಅರವಿಂದ್ ಹುಟ್ಟುಹಬ್ಬದಂದು​ Shivaji Surathkal ಸೀಕ್ವೆಲ್​​ ಮುಹೂರ್ತ

ಈ ಹಿಂದೆ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಅದರಲ್ಲಿ ತೋರಿಸಿರುವಂಯೆ ಚಾರ್ಲಿ ತಪ್ಪಿಸಿಕೊಂಡು ಬಂದು ಧರ್ಮನ ಕೈಗೆ ಸಿಗುತ್ತಾನೆ. ನಾಯಿಗಳನ್ನು ಸಾಕಲು ಅನುಮತಿ ಇಲ್ಲದ ಮನೆಯಲ್ಲಿ ವಾಸವಿರುವ ಧರ್ಮನಿಗೆ ಈ ಚಾರ್ಲಿ ಸಿಕ್ಕಾಪಟ್ಟೆ ಕಾಟ ಕೊಡುತ್ತಾನೆ. ಚಾರ್ಲಿ ಯಾವೆಲ್ಲ ರೀತಿ ಕಾಟ ಕೊಡುತ್ತಾನೆ ಎಂದು ಈ ಹಾಡಿನಲ್ಲಿ ತೋರಿಸಲಾಗಿದೆ. ಹಾಡಿನ ಪೋಸ್ಟರ್​ನಲ್ಲಿ ತೋರಿಸಿರುವಂತೆ ಚಾರ್ಲಿ, ಧರ್ಮನನ್ನು ನೆಮ್ಮದಿಯಾಗಿ ಶೌಚಕ್ಕೂ ಹೋಗಲು ಬಿಡುವುದಿಲ್ಲ. ಇದೇ ಕಾರಣಕ್ಕೆ ಈ ಹಾಡಿಗೆ ಟಾರ್ಚರ್ ಹಾಡು ಎಂದೇ ಹೆಸರಿಡಲಾಗಿದೆ.

ನಗಿಸೋದು ತುಂಬಾ ಕಷ್ಟದ ಕೆಲಸ ಅಂತ ಗೊತ್ತಿತ್ತು. ಆದರೆ ಅದಕ್ಕಿಂತ ಚಾಲೆಂಜಿಂಗ್ ಅನಿಸಿದ್ದು ಈ ಸಾಂಗ್​ಗೆ ಕೊರಿಯೋಗ್ರಾಫಿ ಮಾಡೋದಾಗಿತ್ತು. ಎಷ್ಟೇ ಕಷ್ಟ ಆದರೂ ಚಾರ್ಲಿಯ ಟಾರ್ಚರನ್ನು ಸೆರೆ ಹಿಡಿಯುವಲ್ಲಿ ನಮ್ಮ ಇಡೀ ತಂಡದ ಪ್ರಯತ್ನ ಯಶಸ್ವಿಯಾಗಿದೆ ಅನ್ನೋ ನಂಬಿಕೆ ಇದೆ. ನಿಮಗೆ ಇಷ್ಟ ಆದರೆ ದಯವಿಟ್ಟು ತಿಳಿಸಿ. ನಿಮ್ಮ ಮುಖದಲ್ಲಿ ಮೂಡಿದ ನಗುವನ್ನು ಇತರರೊಂದಿಗೂ ಹಂಚಿಕೊಳ್ಳಿ ಎಂದು ಸಿನಿಮಾದ ನಿರ್ದೇಶಕ ಕಿರಣ್​ ರಾಜ್​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ರಕ್ಷಿತ್​ ಶೆಟ್ಟಿ ಅವರಿಗೆ ನಾಯಕಿಯಾಗಿ ಸಂಗೀತಾ ಶೃಂಗೇರಿ ನಟಿಸಿದ್ದಾರೆ. ಜೊತೆಗೆ ಒಂದು ಮೊಟ್ಟೆ ಸಿನಿಮಾ ಖ್ಯಾತಿಯ ರಾಜ್ ಬಿ ಶೆಟ್ಟಿ, ಫ್ರೆಂಚ್​ ಬಿರಿಯಾನಿ ಸಿನಿಮಾ ನಾಯಕ ಡ್ಯಾನಿಶ್ ಸೇಟ್, ಬಾಬಿ ಸಿಂಹ ಮುಂತಾದ ತಾರಗಣ ಈ ಸಿನಿಮಾದಲ್ಲಿ ಕಾಣಬಹುದಾಗಿದೆ. ಅರವಿಂದ್​ ಕಶ್ಯಪ್​ ಸಿನಿಮಾಟೋಗ್ರಫಿಯಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ರಕ್ಷಿತ್​ ಶೆಟ್ಟಿ ಮತ್ತು ಜಿಎಸ್​ ಗುಪ್ತಾ ಬಂಡವಾಳ ಹಾಕಿದ್ದಾರೆ.

ಇದನ್ನೂ ಓದಿ: Thalavii in OTT: ಒಂದೇ ದಿನ ಒಟಿಟಿ ಜತೆಗೆ ಚಿತ್ರಮಂದಿರಗಳಲ್ಲೂ ರಿಲೀಸ್​ ಆಗಲಿದೆ ತಲೈವಿ ಸಿನಿಮಾ

ಇದೇ ವರ್ಷ ಡಿಸೆಂಬರ್​ 21ರಂದು ರಿಲೀಸ್ ಆಗಲಿರುವ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರ ಪಾತ್ರದಷ್ಟೆ ಮಹತ್ವ ನಾಯಿ ಚಾರ್ಲಿಯ ಪಾತ್ರಕ್ಕೂ ಇದೆ. ಪ್ಯಾನ್​ ಇಂಡಿಯಾ ಸಿನಿಮಾ ಆಗಿರುವ 777 ಚಾರ್ಲಿ ಚಿತ್ರದ ಐದು ಭಾಷೆಗಳಲ್ಲಿ ತೆರೆ ಕಾಣಲಿದೆ. ವಿಭಿನ್ನ ಸಿನಿಮಾಗಳನ್ನು ಮಾಡುವ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಈ ಸಿನಿಮಾಗಾಗಿ ಕಾಯುತ್ತಿದ್ದಾರೆ.
Published by:Anitha E
First published: