• Home
  • »
  • News
  • »
  • entertainment
  • »
  • Kantara Movie: ಒಂದೇ ದಿನ 10 ಸಿನಿಮಾ ರಿಲೀಸ್! ಕಾಂತಾರಕ್ಕೆ ಟಫ್ ಫೈಟ್

Kantara Movie: ಒಂದೇ ದಿನ 10 ಸಿನಿಮಾ ರಿಲೀಸ್! ಕಾಂತಾರಕ್ಕೆ ಟಫ್ ಫೈಟ್

ಕಾಂತಾರ ಸಿನೆಮಾ

ಕಾಂತಾರ ಸಿನೆಮಾ

Kantara: ಕಾಂತಾರ ಸಿನಿಮಾಗೆ ಸ್ಪರ್ಧೆ ಕೊಡಲು ಮಲಯಾಳಂ, ತಮಿಳು, ಕನ್ನಡ ಸೇರಿ ಸ್ಟಾರ್ ನಟರ 10 ಸಿನಿಮಾಗಳು ರಿಲೀಸ್ ಆಗಿವೆ. ಕಾಂತಾರದ ಓಟಕ್ಕೆ ಬ್ರೇಕ್ ಬೀಳುತ್ತಾ?

  • News18 Kannada
  • Last Updated :
  • Bangalore, India
  • Share this:

ಕಾಂತಾರ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ (Box Office) ಟಾಪ್​ನಲ್ಲಿದೆ. ಪೀಕ್ ತಲುಪಿರುವ ಸಿನಿಮಾ (Cinema) ಎದುರು ಎಲ್ಲಾ ಸಿನಿಮಾಗಳೂ  ಧೂಳೀಪಟವಾಗಿವೆ. ಬಾಲಿವುಡ್​ನ (Bollywood) ಟಾಪ್ ಸಿನಿಮಾಗಳು ಕೂಡಾ ಮಕಾಡೆ ಮಲಗಿದ್ದು ಕಾಂತಾರ (Kantara) ಓಟಕ್ಕೆ ಬ್ರೇಕ್ ಕೊಡೋದಕ್ಕೆ ಯಾವ ಸಿನಿಮಾಗೂ ಸಾಧ್ಯವಾಗಿಲ್ಲ. ಇದೀಗ ಅಕ್ಟೋಬರ್ 21ರ ಶುಕ್ರವಾದ ಕನ್ನಡ, ಮಲಯಾಳಂ, ತಮಿಳು ಸೇರಿ ಬೇರೆ ಬೇರೆ ಭಾಷೆಗಳಲ್ಲಿ ಒಟ್ಟು 10 ಸಿನಿಮಾಗಳೂ ರಿಲೀಸ್ ಆಗುತ್ತಿವೆ. ಕನ್ನಡದಲ್ಲಿ ಡಾಲಿಯ ಹೆಡ್ ಬುಷ್ (Head Bush) ರಿಲೀಸ್ ಆಗಿದ್ದು ಕಾಂತಾರದ ಈ ವಾರದ ಓಟಕ್ಕೆ ಬ್ರೇಕ್ ಬೀಳುತ್ತಾ ಎನ್ನುತ್ತಿದ್ದಾರೆ ಸಿನಿ ಪ್ರೇಮಿಗಳು. ಟಫ್ ಕಾಂಪಿಟೇಷನ್ ಇದ್ದರೂ ಕಾಂತಾರ ಈವರೆಗೂ ಹೌಸ್ ಫುಲ್ ಪ್ರದರ್ಶನಗಳನ್ನು ಕಂಡಿದೆ. ಹೀಗಿದ್ದರೂ ಈಗ ಒಂದೇ ಸಲಕ್ಕೆ 10ನ ಸಿನಿಮಾ ರಿಲೀಸ್ ಆಗಿದ್ದು ಕಾಂತಾರ ವೇಗ ಸ್ವಲ್ಪ ಕಡಿಮೆಯಾಗಬಹುದೇ ಎನ್ನುವ ಚರ್ಚೆ ಶುರುವಾಗಿದೆ.


ಕನ್ನಡದಲ್ಲಿ ಹೆಡ್ ಬುಶ್


ಸ್ಯಾಂಡಲ್​ವುಡ್​ನಲ್ಲಿ ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಹೆಡ್ ಬುಶ್ ರಿಲೀಸ್ ಆಗಿದೆ. ಡಾನ್ ಜಯರಾಜ್ ನಿಜ ಕಥೆಯನ್ನು ಹೆಡ್ ಬುಷ್ ಚಿತ್ರದ ಮೂಲಕ ತೆರೆಮೇಲೆ ತೋರಿಸಲಾಗುತ್ತಿದೆ. ಆದರೆ ಹೆಡ್ ಬುಶ್ ಚಿತ್ರದ ಬುಕ್ಕಿಂಗ್ ನಿರೀಕ್ಷಿತ ಮಟ್ಟದಲ್ಲಿಲ್ಲ. ಕಾಂತಾರ ರಿಲೀಸ್ ಆಗಿ ಈಗಾಗಲೇ ವಾರಗಳು ಕಳೆದರೂ ಬುಕ್ಕಿಂಗ್ ಕಮ್ಮಿಯಾಗಿಲ್ಲ. ಇದಕ್ಕೆ ಹೋಲಿಸಿದರೆ ಹೆಡ್ ಬುಷ್ ಬುಕ್ಕಿಂಗ್ ತೀರಾ ಕಮ್ಮಿ ಇದೆ.
ತಮಿಳಿನಲ್ಲಿಯೂ ಸಾಲು ಸಾಲು ಸಿನಿಮಾ 


ತಮಿಳು ಹಾಗೂ ತೆಲುಗಿನಲ್ಲಿ ಕಾಂತಾರ ಭರ್ಜರಿಯಾಗಿ ರೆಸ್ಪಾನ್ಸ್ ಪಡೆಯುತ್ತಿರುವುದು ಎಲ್ಲರಿಗೂ ಗೊತ್ತಿದೆ. ಈ ಸಂದರ್ಭದಲ್ಲಿ ಕಾಲಿವುಡ್​ನಲ್ಲಿ ಕಾರ್ತಿ ಅವರ ಸರ್ದಾರ್ ಹಾಗೂ ಶಿವಕಾರ್ತಿಕೇಯನ್ ಅವರ ಪ್ರಿನ್ಸ್ ಸಿನಿಮಾ ರಿಲೀಸ್ ಆಗಿದೆ. ಎರಡೂ ಸಿನಿಮಾ ಬಗ್ಗೆ ಕ್ರೇಜ್ ಇದ್ದು ಕಾಂತಾರಕ್ಕೆ ಸ್ಪರ್ಧೆ ನೀಡಲಿವೆಯಾ ಎನ್ನುವುದನ್ನು ಕಾದು ನೋಡಬೇಕು.


ಇದನ್ನೂ ಓದಿ: Kantara-Kangana Ranaut: ಕಾಂತಾರ ನೋಡಿ ವಾವ್ ವಾವ್ ಎಂದ ಕ್ವೀನ್! ರಿಷಬ್ ಬಗ್ಗೆ ವಿಡಿಯೋ ಮಾಡಿದ ಕಂಗನಾ


ಮಲಯಾಳಂನಲ್ಲಿ ಮೋಹನ್ ಲಾಲ್ ಅಭಿನಯದ ಮಾನ್ಸ್ಟರ್ ಹಾಗೂ ನಿವಿನ್ ಪೌಲಿ ಅಭಿನಯದ ಪಡವೆಟ್ಟು ಸಿನಿಮಾ ರಿಲೀಸ್ ಆಗಿದೆ. ಮೋಹನ್ ಲಾಲ್ ಕ್ರೇಜ್ಗ ಹೆಚ್ಚಿರುವುದರಿಂದ ಇಲ್ಲಿ ಕಾಂತಾರಕ್ಕೆ ಚಿಕ್ಕ ಹೊಡೆತ ನಿರೀಕ್ಷಿಸಲಾಗಿದೆ. ಕಂಟೆಂಟ್​ಗಳ ಮೂಲಕ ಹೈಪ್ ಪಡೆಯೋ ಮಲಯಾಳ ಸಿನಿಮಾ ಅಬ್ಬರದ ಮುಂದೆ ಕಾಂತಾರ ಓಟ ಮುಂದುವರಿಯುತ್ತಾ ಎನ್ನುವುದನ್ನು ಕಾದು ನೋಡಬೇಕು.


ಅಕ್ಟೋಬರ್ 21ರ ಶುಕ್ರವಾರ ಕನ್ನಡದಲ್ಲಿ ಹೆಡ್ ಬುಷ್, ಕಥಾಲೇಖನ ಹಾಗೂ ಭೂ ನಾಟಕ ಮಂಡಳಿ ತೆಲುಗಿನಲ್ಲಿ ಜಿನ್ನಾ, ಓರಿ ದೇವುಡಾ ಮತ್ತು ಸ್ಪಾರ್ಕ್ 1.0 ತಮಿಳಿನಲ್ಲಿ ಪ್ರಿನ್ಸ್, ಸರ್ದಾರ್ ಮಲಯಾಳಂನಲ್ಲಿ ಪಡವೆಟ್ಟು ಹಾಗೂ ಮಾನ್ಸ್ಟರ್ ರಿಲೀಸ್ ಆಗಿದೆ.


ಬಾಕ್ಸ್ ಆಫೀಸ್ ಕಲೆಕ್ಷನ್


ಕಾಂತಾರ ಬಾಕ್ಸ್ ಆಫೀಸ್ ಕಲೆಕ್ಷನ್ ಚೆನ್ನಾಗಿದ್ದು ಈಗಾಗಲೇ 150 ಕೋಟಿಗೂ ಹೆಚ್ಚು ಗಳಿಸಿದೆ. 14-16 ಕೋಟಿ ಬಜೆಟ್​ನಲ್ಲಿ ರೆಡಿಯಾದ ಈ ಸಿನಿಮಾ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಕನ್ನಡದಲ್ಲಿ ಮಾತ್ರ ರಿಲೀಸ್ ಆದಗಲೂ ಸಿನಿಮಾ ಭರ್ಜರಿ ಗಳಿಕೆ ಮಾಡಿದ್ದು ಬೇರೆ ಭಾಷೆಗಳಲ್ಲಿ ಈಗ ರಿಲೀಸ್ ಆಗಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲಿಯೂ ಸಿನಿಮಾ ರಿಲೀಸ್ ಆಗಿದ್ದು ಭರ್ಜರಿ ಕಲೆಕ್ಷನ್ ಮಾಡುತ್ತಿದೆ.


ಇದನ್ನೂ ಓದಿ: Kantara-Kangana Ranaut: ಕಾಂತಾರ ನೋಡಿ ವಾವ್ ವಾವ್ ಎಂದ ಕ್ವೀನ್! ರಿಷಬ್ ಬಗ್ಗೆ ವಿಡಿಯೋ ಮಾಡಿದ ಕಂಗನಾ


ಕಾಂತಾರ ಸಿನಿಮಾದಲ್ಲಿ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಮಾನಸಿ ಸುಧೀರ್, ಕಿಶೋರ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಲ್ಲರ ಅಭಿನಯದ ಬಗ್ಗೆಯೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Published by:Divya D
First published: