ನಟ ಶಾರುಖ್ ಖಾನ್ (Shah Rukh Khan) ಕೇವಲ ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಜನಪ್ರಿಯತೆ ಹೊಂದಿದ್ದಾರೆ. ಇಡೀ ವಿಶ್ವದಲ್ಲಿ ಅವರ ಫ್ಯಾನ್ ಫಾಲೋವರ್ಸ್ (Fan Followers) ಇದ್ದಾರೆ. ಈ ಮಧ್ಯೆ ಶಾರುಖ್ ಖಾನ್ ವಿಶ್ವದ ಅಗ್ರ ಶ್ರೀಮಂತ ನಟರಲ್ಲಿ 4 ನೇ ಸ್ಥಾನ ಪಡೆದಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಅವರು ಯಾವುದೇ ಚಿತ್ರದಲ್ಲಿ ಅಭಿನಯಿಸಿಲ್ಲವಾದರೂ ಎಸ್ಆರ್ಕೆ ವಿಶ್ವದ ಅತ್ಯಂತ ಶ್ರೀಮಂತ ನಟರಲ್ಲಿ (Actor) ಒಬ್ಬರೆನಿಸಿದ್ದಾರೆ.
ಅಮೆರಿಕನ್ ಕಾಮಿಡಿಯನ್ ಜೆರ್ರಿ ಸೀನ್ಫೆಲ್ಡ್, ಟೈಲರ್ ಪೆರ್ರಿ ಮತ್ತು ದಿ ರಾಕ್ ಡ್ವೇನ್ ಜಾನ್ಸನ್ ಬಳಿಕ ಶಾರುಖ್ ಖಾನ್ ವಿಶ್ವದ ನಾಲ್ಕನೇ ಶ್ರೀಮಂತ ನಟರಾಗಿದ್ದಾರೆ.
6,306 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಶಾರುಖ್ ಖಾನ್
ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ 'ವಿಶ್ವದ ಶ್ರೀಮಂತ ನಟರ' ಪಟ್ಟಿಯನ್ನು ಟ್ವಿಟರ್ನಲ್ಲಿ ಬಿಡುಗಡೆ ಮಾಡಿದೆ. ಅದರ ಪ್ರಕಾರ, ಎಸ್ಆರ್ಕೆ $770 ಮಿಲಿಯನ್ ಅಥವಾ 6,306 ಕೋಟಿ ರೂ.ಗಳ ನಿವ್ವಳ ಆಸ್ತಿ ಮೌಲ್ಯ ಹೊಂದಿದ್ದಾರೆ.
ಇದರೊಂದಿಗೆ ಶ್ರೀಮಂತ ನಟರ ಪಟ್ಟಿಯಲ್ಲಿನ ಏಕೈಕ ಭಾರತೀಯ ನಟ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿರುವ ಅಮೆರಿಕದ ಹಾಸ್ಯನಟ ಜೆರ್ರಿ ಸೀನ್ಫೆಲ್ಡ್ ಅವರು $1 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ವಿಶ್ವದ ಶ್ರೀಮಂತ ನಟರಿವರು
1- ಜೆರ್ರಿ ಸೀನ್ಫೆಲ್ಡ್: $1 ಬಿಲಿಯನ್
2- ಟೈಲರ್ ಪೆರ್ರಿ: $1 ಬಿಲಿಯನ್
3- ಡ್ವೇನ್ ಜಾನ್ಸನ್: $800 ಮಿಲಿಯನ್
4- ಶಾರುಖ್ ಖಾನ್: $770 ಮಿಲಿಯನ್
5- ಟಾಮ್ ಕ್ರೂಸ್: $620 ಮಿಲಿಯನ್
6- ಜಾಕಿ ಚಾನ್: $520 ಮಿಲಿಯನ್
7- ಜಾರ್ಜ್ ಕ್ಲೂನಿ: $500 ಮಿಲಿಯನ್
8- ರಾಬರ್ಟ್ ಡಿ ನಿರೋ: $500 ಮಿಲಿಯನ್
ಶಾರುಖ್ ವಾರ್ಷಿಕ ಆದಾಯ ಸುಮಾರು 313 ಕೋಟಿ
ಎಸ್ಆರ್ಕೆ ಸರಾಸರಿ ವಾರ್ಷಿಕ ಆದಾಯ $38 ಮಿಲಿಯನ್ ಅಥವಾ ಸರಿಸುಮಾರು 313 ಕೋಟಿ ರೂ. ಎನ್ನುತ್ತದೆ ಫೋರ್ಬ್ಸ್ ಡೇಟಾ. 124.38 ಕೋಟಿ ವಾರ್ಷಿಕ ಗಳಿಕೆಯೊಂದಿಗೆ 2019 ರ ಫೋರ್ಬ್ಸ್ ಇಂಡಿಯಾದ ಸೆಲೆಬ್ರಿಟಿ 100 ಪಟ್ಟಿಯಲ್ಲಿ ಆಸ್ಆರ್ಕೆ 6ನೇ ಸ್ಥಾನದಲ್ಲಿದ್ದರು. 2019 ಕ್ಕೂ ಹಿಂದೆ ಅವರು 13 ನೇ ಸ್ಥಾನದಲ್ಲಿದ್ದರು.
ನಟನೆಯ ಹೊರತಾಗಿಯೂ ಬೇರೆ ಬೇರೆ ಮೂಲಗಳಿಂದ ಗಳಿಕೆ
ಇನ್ನು, 57 ವರ್ಷ ವಯಸ್ಸಿನ ನಟ ಕಿಂಗ್ ಖಾನ್ ಡಜನ್ ಗಟ್ಟಲೆ ಬ್ರ್ಯಾಂಡ್ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಈ ಮೂಲಕ ಕೋಟಿ ಕೋಟಿಗಟ್ಟಲೆ ಆದಾಯ ಗಳಿಸುತ್ತಾರೆ.
ಐಸಿಐಸಿಐ, ಬೈಜೂಸ್, ಬಿಗ್ಬಾಸ್ಕೆಟ್, ಲಕ್ಸ್, ಹ್ಯುಂಡೈ ಸೇರಿದಂತೆ ಸುಮಾರು 14 ಬ್ರಾಂಡ್ಗಳಿಗೆ ಅವರು ರಾಯಭಾರಿಯಾಗಿದ್ದಾರೆ. ಇದರ ಹೊರತಾಗಿ, ಅವರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್, ಬದ್ಲಾ ಮತ್ತು ನೆಟ್ಫ್ಲಿಕ್ಸ್ ಒರಿಜಿನಲ್, ಬಾರ್ಡ್ ಆಫ್ ಬ್ಲಡ್ನಂತಹ ಮೂಲಗಳಿಂದ ಹೆಚ್ಚಿನ ಗಳಿಕೆ ಮಾಡುತ್ತಿದ್ದಾರೆ.
ಇನ್ನು ಅವರ ಆದಾಯದ ಮೂಲಗಳಲ್ಲಿ ಅವರು ಹೊಂದಿರುವ ಇಂಡಿಯನ್ ಪ್ರೀಮಿಯರ್ ಲೀಗ್ ತಂಡವೂ ಸೇರಿದೆ. SRK ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ವೆಸ್ಟ್ ಇಂಡಿಯನ್ ದೇಶೀಯ T20 ಲೀಗ್ ತಂಡ T&T ನೈಟ್ ರೈಡರ್ಸ್ ಅನ್ನು ಅವರು ಹೊಂದಿದ್ದಾರೆ. ಅಂದಹಾಗೆ ಕಿಂಗ್ ಖಾನ್ ಅವರು ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸುವ ಪಾತ್ರಗಳಿಗಾಗಿ ಬಹುದೊಡ್ಡ ಮೊತ್ತದ ಸಂಭಾವನೆ ಪಡೆದುಕೊಳ್ಳುತ್ತಾರೆ.
ಕಳೆದ ನಾಲ್ಕು ವರ್ಷಗಳ ನಂತರ ಬಿಡುಗಡೆಯಾಗುತ್ತಿರುವ ಅವರ ಬಹುನಿರೀಕ್ಷಿತ ಚಿತ್ರ 'ಪಠಾಣ್'ಗಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಸಿದ್ಧಾರ್ಥ್ ಆನಂದ ನಿರ್ದೇಶಿಸಿರುವ ಈ ಚಿತ್ರ ಇದೇ ತಿಂಗಳು 25 ರಂದು ಬಿಡುಗಡೆಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ