• Home
  • »
  • News
  • »
  • entertainment
  • »
  • Actress Marriage: ಉದ್ಯಮಿಗಳನ್ನು ಮದುವೆಯಾದ ಫೇಮಸ್ ನಟಿಯರಿವರು!

Actress Marriage: ಉದ್ಯಮಿಗಳನ್ನು ಮದುವೆಯಾದ ಫೇಮಸ್ ನಟಿಯರಿವರು!

ಶಿಲ್ಪಾ ಶೆಟ್ಟಿ ದಂಪತಿ

ಶಿಲ್ಪಾ ಶೆಟ್ಟಿ ದಂಪತಿ

ಯಾವ್ಯಾವ ಟಾಪ್‌ ನಟಿಯರು ಹೀಗೆ ಬೇರೆ ಉದ್ಯಮದವರನ್ನು ಮದುವೆಯಾಗಿದ್ದಾರೆ ಅನ್ನೋದನ್ನು ನೋಡೋಣ.

  • News18 Kannada
  • Last Updated :
  • Karnataka, India
  • Share this:

ಸಾಮಾನ್ಯವಾಗಿ ಬಣ್ಣದ ಲೋಕದ ಕಲಾವಿದರು ಅದೇ ಉದ್ಯಮದಲ್ಲಿರೋರನ್ನೇ ಮದುವೆಯಾಗ್ತಾರೆ. ಅದರಲ್ಲೂ ನಟಿಯರು (Actress Marriage) ಹೆಚ್ಚಾಗಿ ನಟರನ್ನೋ ಅಥವಾ ನಿರ್ಮಾಪಕ, ನಿರ್ದೇಶಕರನ್ನೇ ಆಯ್ಕೆ ಮಾಡಿಕೊಳ್ಳೋದು ಕಾಮನ್.‌ ಆದ್ರೆ ಅಪರೂಪದಲ್ಲಿ ಚಿತ್ರರಂಗದ ಕೆಲವರು ನಟಿಯರು ತಮ್ಮ ಕಾಲದ ಟಾಪ್‌ ನಟಿಯರಾಗಿದ್ದರೂ ಸಹ ಬೇರೆ ಉದ್ಯಮದವರನ್ನು ಮದುವೆಯಾಗಿ ಸುಖವಾಗಿದ್ದಾರೆ. ಹಾಗಿದ್ರೆ ಯಾವ್ಯಾವ ಟಾಪ್‌ ನಟಿಯರು (Top Actress) ಹೀಗೆ ಬೇರೆ ಉದ್ಯಮದವರನ್ನು (Businessman)  ಮದುವೆಯಾಗಿದ್ದಾರೆ ಅನ್ನೋದನ್ನು ನೋಡೋಣ.


ಸೋನಂ ಕಪೂರ್
ಬಾಲಿವುಡ್‌ ನಟ ಅನಿಲ್‌ ಕಪೂರ್‌ ಮಗಳು ನಟಿ ಸೋನಂ ಕಪೂರ್‌ ಬ್ಯುಸಿನೆಸ್‌ ಮ್ಯಾನ್‌ ಆನಂದ ಅಹುಜಾ ಅವರನ್ನು ಮದುವೆಯಾಗಿದ್ದಾರೆ. ಆನಂದ್‌ ಅಹುಜಾ ಹಾಗೂ ಸೋನಂ ಇತ್ತೀಚಿಗೆ ಮುದ್ದಾದ ಮಗುವನ್ನು ಬರಮಾಡಿಕೊಂಡಿದ್ದಾರೆ. 2007 ರಲ್ಲಿ ಬಾಲಿವುಡ್‌ ನಲ್ಲಿ ಸಾವರಿಯಾ ಚಿತ್ರದ ಮೂಲಕ ಬಾಲಿವುಡ್‌ ಗೆ ಎಂಟ್ರಿ ಕೊಟ್ಟಿರೋ ನಟಿ ಸೋನಂ ಕಪೂರ್‌ ನೀರ್ಜಾ, ಭಾಗ್‌ ಮಿಲ್ಕಾ ಭಾಗ್‌, ಪ್ರೇಂ ರತನ್‌ ಧನ್‌ ಪಾಯೋ, ಪ್ಯಾಡ್‌ ಮ್ಯಾನ್‌ ಮುಂತಾದ ಹಿಟ್‌ ಚಿತ್ರಗಳನ್ನು ನೀಡಿದ್ದಾರೆ.


ಶಿಲ್ಪಾ ಶೆಟ್ಟಿ
ಆ ಕಾಲದಲ್ಲಿ ಟಾಪ್‌ ಹಿರೋಯಿನ್‌ ಗಳಲ್ಲಿ ಒಬ್ಬರಾದ ಮಂಗಳೂರಿನ ನಟಿ ಶಿಲ್ಪಾ ಶೆಟ್ಟಿ ಬ್ಯುಸಿನೆಸ್‌ ಮ್ಯಾನ್‌ ರಾಜ್‌ ಕುಂದ್ರಾರನ್ನು ಮದುವೆಯಾಗಿದ್ದಾರೆ. ದಶಕದ ಹಿಂದೆ ಸಪ್ತಪದಿ ತುಳಿದ ಈ ದಂಪತಿಗೆ ವಿಯಾನ್‌ ಹಾಗೂ ಸಮಿಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಬಾಜೀಗರ್​ನಿಂದ ಚಿತ್ರರಂಗ ಪ್ರವೇಶಿಸಿದ ಶಿಲ್ಪಾ ಶೆಟ್ಟಿ ಕಳೆದ ವರ್ಷ ಹಂಗಾಮಾ 2 ದಲ್ಲಿ ನಟಿಸಿದ್ದರು.


ಕಾಜಲ್‌ ಅಗರ್ವಾಲ್:
ತೆಲುಗು, ತಮಿಳು, ಹಿಂದಿಯ ಹಲವು ಚಿತ್ರಗಳಲ್ಲಿ ನಟಿಸಿರುವ ಬಟ್ಟಲು ಕಣ್ಣಿನ ಬೆಡಗಿ ಕಾಜಲ್‌ ಅಗರ್ವಾಲ್‌ ಕೂಡ ಉದ್ಯಮಿಯೊಬ್ಬರನ್ನು ವರಿಸಿದ್ದಾರೆ. 2020 ರಲ್ಲಿ ಉದ್ಯಮಿ ಗೌತಮ್‌ ಕಿಚ್ಲು ಎಂಬುವವರನ್ನು ಮದುವೆಯಾಗಿದ್ದಾರೆ. ಇತ್ತೀಚಿಗಷ್ಟೇ ಕಾಜಲ್‌ ಗಂಡುಮಗುವಿಗೆ ಜನ್ಮ ನೀಡಿದ್ದಾರೆ.


ಆಸಿನ್:
ಘಜ್ನಿ ಹೀರೋಯಿನ್‌ ಆಸಿನ್‌ ತಿಟ್ಟುಮ್ಕಲ್‌ 2016ರಲ್ಲಿ ಉದ್ಯಮಿಯನ್ನು ಮದುವೆಯಾಗಿದ್ದಾರೆ. ಇವರು ಮೈಕ್ರಿಮ್ಯಾಕ್ಸ್‌ ಸಿಇಒ ರಾಹುಲ್‌ ಶರ್ಮಾ ಅವರನ್ನು ವರಿಸಿದ್ದಾರೆ. ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಸಾಕಷ್ಟು ಹಿಟ್‌ ಚಿತ್ರಗಳನ್ನು ನೀಡಿರುವ ಆಸಿನ್‌ ಮದುವೆಯಾದ ಬಳಿಕ ಚಿತ್ರರಂಗದಿಂದ ದೂರವೇ ಇರುವುದು ವಿಶೇಷ.


ಇಶಾ ಕೊಪ್ಪಿಕರ್
ಡಾನ್‌ ನಟಿ ಇಶಾಕೊಪ್ಪಿಕರ್‌ ಕೂಡ ಇಷ್ಟ ಪಟ್ಟು ಮದುವೆಯಾಗಿದ್ದು ಉದ್ಯಮಿಯನ್ನೇ. ಇವರು 2009ರಲ್ಲಿ ಹೋಟೆಲ್‌ ಉದ್ಯಮಿ ಟಿಮ್ಮಿ ನಾರಂಗ್‌ ಎಂಬುವವರನ್ನು ಮದುವೆಯಾಗಿದ್ದಾರೆ. ಕನ್ನಡದ ಸೂಪರ್‌ ಹಿಟ್‌ ಚಿತ್ರ ಯಜಮಾನ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ಇಶಾ ಡಾನ್‌ ಸೇರಿದಂತೆ ಹಿಂದಿಯಲ್ಲೂ ಸಾಕಷ್ಟು ಚಿತ್ರದಲ್ಲಿ ಅಭಿನಯಿಸಿದ್ದಾರೆ.


ಇದನ್ನೂ ಓದಿ: Anti Rape Footwear: ಅತ್ಯಾಚಾರ ತಡೆಯುತ್ತೆ ಈ ಚಪ್ಪಲಿ! ಕಲಬುರಗಿ ವಿದ್ಯಾರ್ಥಿನಿಯಿಂದ ಸಂಶೋಧನೆ


ಇಶಾ ಡಿಯೋಲ್
ನಟಿ ಹೇಮಾಮಾಲಿನಿ ಹಾಗೂ ನಟ ಧರ್ಮೇಂದ್ರ ಅವರ ಪುತ್ರಿ ಇಶಾ ಡಿಯೋಲ್‌ ಮದುವೆಯಾಗಿದ್ದು ಬ್ಯುಸಿನೆಸ್ ಮ್ಯಾನ್‌ ಭರತ್‌ ತಕ್ತಾನಿ ಅವರನ್ನು. 2012 ರಲ್ಲಿ ಮದುವೆಯಾದ ಈ ದಂಪತಿಗೆ ರಾಧ್ಯಾ ಹಾಗೂ ಮಿರಾಯಾ ಎಂಬ ಇಬ್ಬರು ಮಕ್ಕಳಿದ್ದಾರೆ. ಚಿತ್ರರಂಗದಿಂದ ದೂರವೇ ಉಳಿದಿರುವ ಇಶಾ ಅವರು ಗಂಡ, ಮಕ್ಕಳು, ಕುಟುಂಬದ ಜೊತೆಯೇ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ.


ಇದನ್ನೂ ಓದಿ: Good News: ಪ್ರಯಾಣಿಕರೇ ಗಮನಿಸಿ, ಕಲಬುರಗಿಯಿಂದ ದಾದರ್​ಗೆ ವಿಶೇಷ ರೈಲು


ಆಯೇಶಾ ಟಾಕಿಯಾ
ನಟಿ ಆಯೇಶಾ ಟಾಕಿಯಾ 2009ರಲ್ಲಿ ಉದ್ಯಮಿ ಫರ್ಹಾನ್‌ ಅಜ್ಮಿ ಎಂಬುವವರನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ ಮಿಕೈಲ್‌ ಅಜ್ಮಿ ಎಂಬ ಮಗುವಿದೆ. 2004ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಆಯೇಶಾ ದಿಲ್‌ ಮಾಂಗೇ ಮೋರ್‌, ಕಾಶ್‌, ಸಲಾಮ್‌ ಎ ಇಶ್ಕ್‌, ವಾಂಟೆಡ್ ಸೇರಿದಂತೆ ಹಲವಾರು ಹಿಟ್‌ ಚಿತ್ರಗಳನ್ನು ನೀಡಿದ್ದಾರೆ. ಆದ್ರೆ ಟಾಪ್‌ ನಟಿಯಾಗಿದ್ದಾಗಲೇ ಮದುವೆಯಾದ ಆಯೇಶಾ ನಂತರ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು