ಖ್ಯಾತ ನಿರ್ದೇಶಕ ಸ್ಕ್ರಿಪ್ಟ್​ ಹೇಳಲೆಂದು ವಿಸ್ಕಿ ಬಾಟಲಿ ಹಿಡಿದುಕೊಂಡು ಮನೆಗೆ ಬಂದಿದ್ದರು!

Anu Agarwal: ನಟಿ ಅನು ಅಗರ್ವಾಲ್​​​​ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಚೊಚ್ಚಲ ಆಶಿಕಿ ಸಿನಿಮಾ ಮೂಲಕ ಅನು ಅಗರ್ವಾಲ್​​​​ ರಾತ್ರೋ ರಾತ್ರಿ ಸ್ಟಾರ್​ ನಟಿಯಾಗಿ ಗುರುತಿಸಿಕೊಂಡರು. ಆದಾದ ಬಳಿಕ ಅನೇಕ ಸಿನಿಮಾ ಆಫರ್​ಗಳು ಇವರನ್ನು ಹುಡುಕಿಕೊಂಡು ಬಂತು.

news18-kannada
Updated:July 8, 2020, 7:04 PM IST
ಖ್ಯಾತ ನಿರ್ದೇಶಕ ಸ್ಕ್ರಿಪ್ಟ್​ ಹೇಳಲೆಂದು ವಿಸ್ಕಿ ಬಾಟಲಿ ಹಿಡಿದುಕೊಂಡು ಮನೆಗೆ ಬಂದಿದ್ದರು!
ಅನು ಅಗರ್ವಾಲ್
  • Share this:
ಚಿತ್ರರಂಗದಲ್ಲಿನ ಕಾಸ್ಟಿಂಗ್​ ಕೌಚ್ ಎಂಬ ಪಿಡುಗನ್ನು​ ಅನೇಕರು ನಟಿಯರು ಬಯಲಿಗೆಳೆದಿದ್ದಾರೆ. ತಮಗಾದ ಕಹಿ ಅನುಭವವನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. ತೆರೆ ಮೇಲೆ ನಟಿಸುವ ಮುನ್ನ ತೆರೆ ಹಿಂದೆ ನಡೆದ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವ ಮೂಲಕ ಕೆಲವು ನಟ, ನಿರ್ದೇಶಕರ ನಿಜಗುಣ ಬಿಚ್ಚಿಟ್ಟಿದ್ದಾರೆ. ಇದೀಗ ಬಾಲಿವುಡ್​ ನಟಿಯೊಬ್ಬರು ಕಾಸ್ಟಿಗ್​ ಕೌಚ್​ ಬಗ್ಗೆ ಮಾತನಾಡಿದ್ದಾರೆ. 

ನಟಿ ಅನು ಅಗರ್ವಾಲ್​​​​ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಚೊಚ್ಚಲ ಆಶಿಕಿ ಸಿನಿಮಾ ಮೂಲಕ ಅನು ಅಗರ್ವಾಲ್​​​​ ರಾತ್ರೋ ರಾತ್ರಿ ಸ್ಟಾರ್​ ನಟಿಯಾಗಿ ಗುರುತಿಸಿಕೊಂಡರು. ಆದಾದ ಬಳಿಕ ಅನೇಕ ಸಿನಿಮಾ ಆಫರ್​ಗಳು ಇವರನ್ನು ಹುಡುಕಿಕೊಂಡು ಬಂತು. ಕಿಂಗ್​ ಅಂಕಲ್​, ದಿ ಕ್ಲೌಡ್​ ಡೋರ್​ ಹೀಗೆ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ.  ಆದರೀಗ ಸಿನಿಮಾಗಳಿಂತ ಹೆಚ್ಚಾಗಿ ವೆಬ್​ ಸೀರೀಸ್​ಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಅನು ಅಗರ್ವಾಲ್​​​


ಇತ್ತೀಚೆಗೆ ಮಾಧ್ಯಮದವರು ನಟಿ ಅನು ಅಗರ್ವಾಲ್​​​​ಗೆ ಚಿತ್ರರಂಗ ಕಾಸ್ಟಿಂಗ್​ ಕೌಚ್​ ಅನ್ನು ಎದುರಿಸಿಬೇಕಾಗಿದೆಯೇ? ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ನಟಿ ‘ನಿಜವಾಗಿಯೂ ಇಲ್ಲ, ಆದರೆ ಖ್ಯಾತ ನಿರ್ದೆಶಕರೊಬ್ಬರು ನನ್ನ ಮನೆಗೆ ಬಂದಿದ್ದರು. ಅವರು ನಿಮಗೊಂದು ಸಿನಿಮಾದಲ್ಲಿ ನಟಿಸಲು ಪಾತ್ರವಿದೆ ಎಂದು ಬಂದಿದ್ದರು. ಬರುವ ವೇಳೆಗೆ ವಿಸ್ಕಿ ಬಾಟಲಿಯೊಂದನ್ನು ಹಿಡಿದುಕೊಂಡು ಬಂದಿದ್ದರು. ಸ್ಕ್ರೀಪ್ಟ್​ ಹೇಳುವ ನೆಪದಲ್ಲಿ ಅದನ್ನು ಕುಡಿಯಲು ಪ್ರಾರಂಭಿಸಿದರು.  ನಾನು ಅವರ ಮಾತನ್ನು ಗಮನಿಸಿ ನಯವಾಗಿ ಮನೆಯಿಂದ ಹೊರ ಹೋಗಲು ಹೇಳಿದೆ. ಈಗಲೂ ನಾನು ಹೇಳುವುದು ಅದನ್ನೇ ಮಹಿಳೆಯರಿಗೆ ಒಳ್ಳೆದು ಮತ್ತು ಕೆಟ್ಟದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ’ ಎಂದು ಹೇಳಿದ್ದಾರೆ.

ಕೆಜಿಎಫ್ 2 ಟ್ರೇಲರ್ ಲಾಂಚ್!; ಅಭಿಮಾನಿಗಳು ಸಿದ್ಧಪಡಿಸಿ ಬಿಡುಗಡೆ ಮಾಡಿದ ಟ್ರೇಲರ್ ಲಕ್ಷ ವೀಕ್ಷಣೆ

Virat Kohli: ನೀರುದೋಸೆ ಸವಿದ ವಿರಾಟ್ ಕೊಹ್ಲಿ: ಇದರ ಹಿಂದಿದೆ ಕುಡ್ಲದ ನಂಟು
Published by: Harshith AS
First published: July 8, 2020, 7:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading