ಬೆಂಗಳೂರು (Bengaluru) ಮಹಾನಗರ. ಬ್ಯುಸಿನೆಸ್, ಶೂಟಿಂಗ್, ಮೀಟಿಂಗ್ ಹೀಗೆ ಹಲವು ಕಾರಣಗಳಿಗೆ ಸೆಲೆಬ್ರಿಟಿಗಳು (Celebrity) ಕರ್ನಾಟಕಕ್ಕೆ (Karnataka) ಭೇಟಿ ಕೊಡುತ್ತಾರೆ. ಹಲವಾರು ಪ್ರಸಿದ್ಧ ಪ್ರವಾಸಿ ತಾಣಗಳಿರುವ (Tourist Places) ಕರ್ನಾಟಕ್ಕೆ ದೇಶಾದ್ಯಂತ ಹಲವು ಭಾಗಗಳಿಂದ ಜನರು ಬರುತ್ತಲೇ ಇರುತ್ತಾರೆ. ಇದಕ್ಕೆ ಸೆಲೆಬ್ರಿಟಿಗಳೂ ಹೊರತಲ್ಲ. ಆದರೆ ಈ ವಾರ ಕರ್ನಾಟಕದ ಹಲವು ಭಾಗಗಳಿಗೆ ಹಲವಾರು ಸೆಲೆಬ್ರಿಟಿಗಳು ಭೇಟಿಕೊಟ್ಟಿದ್ದಾರೆ. ಅವರು ಯಾರ್ಯಾರು? ಯಾಕಾಗಿ ಬಂದ್ರು ಈ ಎಲ್ಲ ಮಾಹಿತಿ ಇಲ್ಲಿದೆ.
ಶಿಲ್ಪಾ ಶೆಟ್ಟಿ
ಬಾಲಿವುಡ್ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಇತ್ತೀಚೆಗೆ ಮಂಗಳೂರಿಗೆ ಭೇಟಿ ಕೊಟ್ಟಿದ್ದಾರೆ. ಮಂಗಳೂರಿನ ಅತ್ಯಂತ ಪ್ರಸಿದ್ಧ ದೇವಾಲಯ ಕಟೀಲಿಗೆ ಭೇಟಿ ಕೊಟ್ಟು ದೇವಿಯ ಆಶೀರ್ವಾದವನ್ನು ಪಡೆದಿದ್ದಾರೆ. ಇದರ ವಿಡಿಯೋವನ್ನು ಕೂಡಾ ನಟಿ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕಟೀಲಿನಲ್ಲಿ ದೇವರ ದರ್ಶನ, ಪೂಜೆ, ಯಕ್ಷಗಾನ ಎಲ್ಲವನ್ನೂ ನೋಡಿದ್ದಾರೆ ನಟಿ. ಇದಕ್ಕೆ ಕ್ಯಾಪ್ಶನ್ ಕೊಟ್ಟು ಮಂಗಳೂರಿನ ನನ್ನ ನೇಟಿವ್ ರೂಟ್ಸ್ ಕಡೆಗೆ.. ಕುಲದೇವಿಯ ದರ್ಶನ. ನನ್ನ ಮಂಗಳೂರಿನ ಅತ್ಯಂತ ಶ್ರೀಮಂತ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸುತ್ತಿದ್ದೇನೆ ಎಂದು ಬರೆದಿದ್ದಾರೆ.
View this post on Instagram
ಬಾಲಿವುಡ್ ನಟಿ ಶಮಿತಾ ಶೆಟ್ಟಿ ಕೂಡಾ ಮಂಗಳೂರಿನ ಕಟೀಲಿಗೆ ಭೇಟಿ ಕೊಟ್ಟಿದ್ದಾರೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಸಹೋದರಿಯಾಗಿರುವ ಶಮಿತಾ ಶೆಟ್ಟಿ ಬಿಗ್ಬಾಸ್ಗೆ ಎಂಟ್ರಿ ಕೊಟ್ಟು ಸುದ್ದಿಯಾಗಿದ್ದರು. ಅವರು ಕೂಡಾ ಅಕ್ಕ ಹಾಗೂ ಅಕ್ಕನ ಮಕ್ಕಳೊಂದಿಗೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ದೇವಿಯ ಆಶೀರ್ವಾದ ಪಡೆದಿದ್ದಾರೆ.
ವಿರಾಟ್ ಕೊಹ್ಲಿ
ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ಬೆಂಗಳೂರಿಗೆ ಭೇಟಿ ಕೊಟ್ಟಿದ್ದಾರೆ. ಈ ಸಂದರ್ಭ ಸಿಲಿಕಾನ್ ಸಿಟಿಯ ಫೇಮಸ್ ಸಿಟಿಆರ್ನಲ್ಲಿ ಮಸಾಲೆ ದೋಸೆ, ಕೇಸರಿ ಬಾತ್, ಮಂಗಳೂರು ಬಜ್ಜಿ ಸವಿದಿದ್ದಾರೆ.
ಅನುಷ್ಕಾ ಶರ್ಮಾ
ಬಾಲಿವುಡ್ನ ಬ್ಯೂಟಿಫುಲ್ ನಟಿ ಅನುಷ್ಕಾ ಶರ್ಮಾ ಅವರು ಬೆಂಗಳೂರಿಗೆ ಭೇಟಿ ಕೊಟ್ಟಿದ್ದಾರೆ. ಪತಿ ವಿರಾಟ್ ಕೊಹ್ಲಿ ಜೊತೆ ಬೆಂಗಳೂರಿಗೆ ಬಂದ ಚೆಲುವೆ ಇಲ್ಲಿ ಫೇಮಸ್ ಸಿಟಿಆರ್ಗೆ ಭೇಟಿ ಕೊಟ್ಟು ರುಚಿ ರುಚಿಯಾದ ಮಸಾಲೆ ದೋಸೆಯನ್ನು ಸವಿದಿದ್ದಾರೆ.
ಅದರೊಂದಿಗೆ ಕೇಸರಿಬಾತ್, ಮಂಗಳೂರು ಬಜ್ಜಿಯ ರುಚಿ ನೋಡಿದ್ದಾರೆ. ಇವೆಲ್ಲದರ ಫೋಟೋಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಕರ್ನಾಟಕಕ್ಕೆ ಭೇಟಿ ಕೊಡುತ್ತಿರುವುದು ಹೆಚ್ಚಾಗಿದೆ.
ಸೆಲೆಬ್ರಿಟಿಗಳಿಗೆ ಬೆಂಗಳೂರು ಫೇವರಿಟ್
ಬೆಂಗಳೂರು ಸದ್ಯ ಸೆಲೆಬ್ರಿಟಿಗಳಿಗೆ ಫೇವರಿಟ್ ಸ್ಥಳ. ಇನ್ನು ಬಾಲಿವುಡ್, ಟಾಲಿವುಡ್ನಲ್ಲಿರುವಂತಹ ಬಹುತೇಕ ಟಾಪ್ ನಟಿಯರೂ ಕೂಡಾ ಕರ್ನಾಟಕದವರೇ ಆಗಿರುವುದರಿಂದ ಆಗಾಗ ಭೇಟಿ ಕೊಡುತ್ತಲೇ ಇರುತ್ತಾರೆ. ಇನ್ನು ಶಿಲ್ಪಾ ಶೆಟ್ಟಿ, ಐಶ್ವರ್ಯಾ ರೈ, ಪೂಜಾ ಹೆಗ್ಡೆಯಂತಹ ನಟಿಯರು ಮಂಗಳೂರಿನ ಕೆಲವು ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ಕೊಡುತ್ತಲೇ ಇರುತ್ತಾರೆ.
ಹಾಗೆಯೇ ಅವರ ಸಂಬಂಧಿಕ ಮದುವೆ, ಕುಟುಂಬದ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಕ್ಕೂ ಬರುತ್ತಾರೆ. ಇದಕ್ಕೆ ನಟಿ ಅನುಷ್ಕಾ ಶೆಟ್ಟಿ ಕೂಡಾ ಹೊರತಲ್ಲ. ನಟಿ ಅನುಷ್ಕಾ ಶೆಟ್ಟಿ ಕೂಡಾ ತಮ್ಮ ಕುಟುಂಬದಲ್ಲಿ ನಡೆಯುವ ಭೂತಕೋಲ, ದೈವಾರಾಧನೆಯಂತಹ ಕಾರ್ಯಕ್ರಮಗಳಲ್ಲಿ ತಪ್ಪದೆ ಭಾಗಿಯಾಗುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ