ಕೊರೊನಾ(Corona) ಮಹಾಮಾರಿ ಇಂದ 2021 ಭಾರತೀಯ ಚಿತ್ರರಂಗದ(Indian Cinema) ಪಾಲಿಗೆ ಅಷ್ಟೇನು ಹೇಳಿಕೊಳ್ಳುವಂತಹ ಅದೃಷ್ಟ(Luck) ತರಲಿಲ್ಲ.. ವರ್ಷದ ಕೊನೆಯ ಕೆಲವು ತಿಂಗಳುಗಳಲ್ಲಿ(Months) ಬಿಡುಗಡೆಯಾದ ಹಲವು ಸಿನಿಮಾಗಳು(Cinema) ಸಿನಿಪ್ರಿಯರ ಮನಗೆದ್ದರು ಇನ್ನು ಕೆಲವು ಸಿನಿಮಾಗಳು ಅಭಿಮಾನಿಗಳ(Fans) ಗಮನಸೆಳೆಯುವಲ್ಲಿ ವಿಫಲವಾದವು.. ಅಲ್ಲದೇ 2021ರಲ್ಲಿ ಬಿಡುಗಡೆಯಾಗಬೇಕಿದ್ದ ಅದೆಷ್ಟೋ ಸಿನಿಮಾಗಳು 2022ಕ್ಕೆ ಬಿಡುಗಡೆಯ ದಿನಾಂಕ ಘೋಷಿಸಿಕೊಂಡಿವೆ. ಈ ವರ್ಷ ಕನ್ನಡ ತೆಲುಗು ತಮಿಳು ಹಿಂದಿ ಸೇರಿ ಹಲವು ಭಾಷೆಗಳಲ್ಲಿ ಬಿಡುಗಡೆಯಾದ ಕೆಲವೊಂದಷ್ಟು ಚಿತ್ರಗಳು ಅಭಿಮಾನಿಗಳ ಮನಸ್ಸಲ್ಲಿ ಸಾಕಷ್ಟು ಸ್ಥಾನ ಪಡೆದುಕೊಂಡಿದೆ.
ಅದ್ರಲ್ಲೂ ಮದಗಜ ,ಅಖಂಡ, ಕೋಟಿಗೊಬ್ಬ 3 , ಸಲಗ, ಹಿಂದಿಯ ಸೂರ್ಯವಂಶಿ ಅಣ್ಣಾತೆ, ಭಜರಂಗಿ -2, ಪುಷ್ಪ ಸಿನಿಮಾಗಳು 2021 ರಲ್ಲಿ ಬಿಡುಗಡೆಯಾದ ಸ್ಟಾರ್ ನಟರ ಸಿನಿಮಾಗಳಾಗಿವೆ.. ಸಿನಿಮಾಗಳು ಸಾಕಷ್ಟು ಸದ್ದು ಮಾಡಿದ್ರು, 2022 ರಲ್ಲಿ ಬಿಡುಗಡೆಯಾಗುವ ಸಿನಿಮಾಗಳ ಮೇಲೆ ಇರುವ ನಿರೀಕ್ಷೆ ಸಿನಿಮಾಗಳ ಮೇಲೆ ಅಷ್ಟಾಗಿ ಇರಲಿಲ್ಲ.. 2022 ರಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸಿನಿಮಾಗಳು Imdb ಪ್ರಕಾರ ಯಾವುದು ಎನ್ನುವುದರ ಮಾಹಿತಿ ಇಲ್ಲಿದೆ.
1)KGF-2: Imdb ಪ್ರಕಾರ 2022 ರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳ ಪೈಕಿ ಅಗ್ರಸ್ಥಾನದಲ್ಲಿ ಇರುವುದು ನಟ ಯಶ್ ನಟನೆಯ, KGF-2. 2018 ರಲ್ಲಿ ಬಿಡುಗಡೆಯಾದ ಮೊದಲ ಭಾಗದ ನಂತರ, ಇದು ರಾಷ್ಟ್ರೀಯ ಮಟ್ಟದಲ್ಲಿ ಅಷ್ಟೇ ಅಲ್ಲದೇ ಅಂತರಾಷ್ಟ್ರಿಯ ಮಟ್ಟದಲ್ಲಿ ಜೋರಾಗಿಯೇ ಸೌಂಡ್ ಮಾಡಿತು ಹೀಗಾಗಿ ಅಭಿಮಾನಿಗಳು ಕೆಜಿಎಫ್ ಭಾಗ-2 ಯಾವಾಗ ಬರುತ್ತದೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. ಅದರಂತೆ ಸಿನಿಮಾ 2022 ಏಪ್ರಿಲ್ 14 ಕ್ಕೆ ರಿಲೀಸ್ ಆಗಲಿದ್ದು, ಕೆಜಿಎಫ್ ನಂತೆ ಸಾಕಷ್ಟು ಸದ್ದು ಮಾಡಲಿದ್ಯಾ ಎಂದು ನೋಡಬೇಕಿದೆ.ಇನ್ನು
ಪ್ರಶಾಂತ್ ನೀಲ್ ನಿರ್ದೇಶನ , ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ KGF ಚಾಪ್ಟರ್ 2 ಸಿನಿಮಾವನ್ನ ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ.
2)RRR: ಬಾಹುಬಲಿ ನಿರ್ದೇಶಕ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ RRR 2022 ರಲ್ಲಿ ಬಿಡುಗಡೆಯಾಗುವ ಬಹುನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದೆ. ಬಿಗ್ ಬಜೆಟ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ RRR ನಲ್ಲಿ ರಾಮ್ ಚರಣ್ ತೇಜ, ಜೂನಿಯರ್ ಎನ್ಟಿಆರ್, ಅಲಿಯ ಭಟ್, ಅಜಯ್ ದೇವ್ಗನ್ ಸೇರಿದಂತೆ ಬಹುತೇಕ ಸ್ಟಾರ್ ನಟರ ದಂಡೇ ಇದೆ.ಈ ಸಿನಿಮಾ ಜನವರಿ 7 ಕ್ಕೆ ಸಿನಿಮಾ ಭಾರತದಲ್ಲಿ ಗ್ರ್ಯಾಂಡ್ ಓಪನಿಂಗ್ ಪಡೆಯಲಿದೆ..
ಇದನ್ನೂ ಓದಿ: ಒಂದೇ ದಿನ ಬಡವ ರಾಸ್ಕಲ್, ರೈಡರ್ ರಿಲೀಸ್: ಡಾಲಿಗೆ ಕರೆ ಮಾಡಿ ವಿಶ್ ಮಾಡಿದ ನಿಖಿಲ್ ಕುಮಾರಸ್ವಾಮಿ!
3)ಲಾಲ್ ಸಿಂಗ್ ಚಡ್ಡಾ: ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಹಾಗೂ ಕರೀನಾ ಕಪೂರ್ ನಟನೆಯ ಲಾಲಸಿಂಗ್ ಚಡ್ಡಾ ಸಿನಿಮಾ 2022 ರಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಮೂರನೇ ಸ್ಥಾನದಲ್ಲಿದೆ.ಸಿನಿಮಾದಲ್ಲಿ ಅಮೀರ್ ಖಾನ್ ಜೊತೆಗೆ ಟಾಲಿವುಡ್ ನಟ ನಾಗಚೈತನ್ಯ ಕೂಡ ತೆರೆ ಹಂಚಿಕೊಂಡಿದ್ದಾರೆ.
4))ಗಂಗೂಭಾಯಿ ಕಾಥೇಯವಾಡಿ: 4ನೇ ಸ್ತಾನದಲ್ಲಿ ಮತ್ತೊಬ್ಬ ಸ್ಟಾರ್ ನಿರ್ದೇಶಕರಾದ ಸಂಜಯ್ ಲೀಲಾ ಬನ್ಸಾಲಿಯವರ ಗಂಗೂಬಾಯಿ ಕಥಿಯಾವಾಡಿ ಸಿನಿಮಾವಿದೆ.. ಈ ಸಿನಿಮಾದಲ್ಲಿ ಆಲಿಯಾ ಭಟ್ ನಟಿಸಿದ್ದು ಮುಂದಿನ ವರ್ಷವೇ ರಿಲೀಸ್ ಆಗಲಿದೆ.. ಆಲಿಯಾ ಭಟ್ ಈ ಸಿನಿಮಾದಲ್ಲಿ ಹಿಂದೆಂದೂ ಕಾಣಿಸಿಕೊಳ್ಳದ ರೀತಿಯ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
5)ಬೀಸ್ಟ್: ನೆಲ್ಸನ್ ದಿಲೀಪ್‌ಕುಮಾರ್ ಆಕ್ಷನ್ ಕಟ್ ಹೇಳಿರುವ ಬೀಸ್ಟ್ ಸಿನಿಮಾದಲ್ಲಿ ತಮಿಳು ಇಳೆಯ ದಳಪತಿ ವಿಜಯ್ ಕಾಣಿಸಿಕೊಳ್ಳುತ್ತಿದ್ದು 2022 ರಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರಗಳ ಪೈಕಿ ಈ ಸಿನಿಮಾ ಐದನೇ ಸ್ಥಾನದಲ್ಲಿದೆ.
6) ವಿಕ್ರಾಂತ ರೋಣ:ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಭಾರತೀಯ ಸಿನಿಮಾರಂಗ ಕಾತರದಿಂದ ಕಾಯುತ್ತಿರುವ ಸಿನಿಮಾಗಳಲ್ಲಿ ಒಂದಾಗಿದೆ.. ಹಿಂದೆ ಫ್ಯಾಂಟಮ್ ಎಂದು ಇದ್ದ ಸಿನಿಮಾದ ಹೆಸರನ್ನು ವಿಕ್ರಾಂತ್ ರೋಣ ಎಂದು ಬದಲಾವಣೆ ಮಾಡಲಾಗಿತ್ತು.. ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆಗೆ ನಿರುಪ್ ಭಂಡಾರಿ ಕೂಡಾ ಕಾಣಿಸಿಕೊಂಡಿದ್ದು, ಅನುಪ್ ಬಂಡಾರಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.
7) ರಾಧೇಶ್ಯಾಮ: ಡಾರ್ಲಿಂಗ್ ಪ್ರಭಾಸ್, ಬಾಹುಬಲಿ ಸಿನಿಮಾ ಆದ ಬಳಿಕ ಪಕ್ಕ ರೋಮ್ಯಾಂಟಿಕ್ ಬಾಯ್ ಆಗಿ ರಾಧೆ ಶ್ಯಾಮ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಪೂಜಾ ಹೆಗಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ 2022 ರಲ್ಲಿ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳ ಪೈಕಿ 7ನೇ ಸ್ಥಾನದಲ್ಲಿದೆ.
8)ಬ್ರಹ್ಮಾಸ್ತ್ರ: ಇನ್ನೂ 8ನೇ ಸ್ಥಾನದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾವಿದೆ..ಅಯನ್ ಮುಖರ್ಜಿ ನಿರ್ದೇಶಿಸಿರುವ ಬ್ರಹ್ಮಾಸ್ತ್ರ ಸಿನಿಮಾ ಹಿಂದಿ , ಕನ್ನಡ , ತಮಿಳು , ತೆಲುಗು , ಮಲಯಾಳಂನಲ್ಲಿ ಬರಲಿದೆ..
ಚಿತ್ರದಲ್ಲಿ ನಾಗಾರ್ಜುನ್ ಅಕ್ಕಿನೇನಿ , ಅಮಿತಾಬ್ ಬಚ್ಚನ್ ಮೌನಿ ರಾಯ್ ಸೇರಿದಂತೆ ಇನ್ನೂ ದೊಡ್ಡ ದೊಡ್ಡ ನಟರು ಬಣ್ಣ ಹಚ್ಚಿದ್ದಾರೆ..
9. ಧಾಕಡ್ : ಬಾಲಿವುಡ್ ನಲ್ಲಿ ಮಹಿಳಾ ಪ್ರಧಾನ ಸಿನಿಮಾಗಳ ಮೂಲಕವೇ ಸಾಕಷ್ಟು ಸುದ್ದಿ ಮಾಡಿರುವ ಕಂಗನಾ ರಾಣವತ್ ಇದೇ ಮೊದಲ ಬಾರಿಗೆ ಆಕ್ಷನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.. ಈ ಸಿನಿಮಾಗೆ ರಜನೀಶ್ ರಾಜಿ ಘಾಯ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು ಅರ್ಜುನ್ ರಾಂಪಾಲ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಅಭಿಮಾನಿಗಾಗಿ ಸಖತ್ ಗಿಫ್ಟ್ ಕಳಿಸಿದ ಸೂಪರ್ಸ್ಟಾರ್ ರಜನಿಕಾಂತ್, ವಿಡಿಯೋ ನೋಡಿ
10)ಆದಿಪುರುಷ್ : Imdb ಪ್ರಕಾರ 2022 ರಲ್ಲಿ ಹತ್ತಿ ಹೆಚ್ಚು ಕುತೂಹಲ ಮೂಡಿಸಿರುವ ಸಿನಿಮಾಗಳ ಪೈಕಿ ಕೊನೆಯ ಹಾಗೂ 10ನೇ ಸ್ಥಾನದಲ್ಲಿರುವುದು ಬಾಹುಬಲಿ ಖ್ಯಾತಿಯ ಪ್ರಭಾಸ್ ನಟನೆಯ ಆದಿಪುರುಷ ಸಿನಿಮಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ