ನಾಳೆ ವಿಶಾಲ್ ‘ಚಕ್ರ‘ ಸಿನಿಮಾದ ಟ್ರೇಲರ್ ಲಾಂಚ್; ಕನ್ನಡದಲ್ಲಿ ಯಾರು ಬಿಡುಗಡೆ ಮಾಡಲಿದ್ದಾರೆ ಗೊತ್ತಾ?
Chakra: ನಾಳೆ ಸಂಜೆ 5 ಗಂಟೆಗೆ ‘ಚಕ್ರ’ ಚಿತ್ರತಂಡ ಟ್ರೇಲರ್ ಬಿಡುಗಡೆ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದಾರೆ. ರಾಕಿ ಭಾಯ್ ಮೂಲಕ ‘ಚಕ್ರ’ ಸಿನಿಮಾದ ಕನ್ನಡ ಟ್ರೇಲರ್ ಬಿಡುಗಡೆಯಾಗಲಿದೆ.
ತಮಿಳು ನಟ ವಿಶಾಲ್ ‘ಚಕ್ರ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಪೋಸ್ಟರ್ ಭಾರೀ ಹವಾ ಕ್ರಿಯೇಟ್ ಮಾಡಿದೆ. ಮತ್ತೊಂದೆಡೆ ‘ಚಕ್ರ’ ಸಿನಿಮಾ ತಮಿಳು ಸೇರಿದಂತೆ ತೆಲುಗು, ಮಲಯಾಳಂ, ಕನ್ನಡ ಡಬ್ ಮಾಡುವ ಮೂಲಕ 3 ಭಾಷೆಯಲ್ಲೂ ತೆರೆಗೆ ಬರಲಿದೆ. ನಾಳೆ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗುತ್ತಿದ್ದು, ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಲಿದ್ದಾರೆ.
ನಾಳೆ ಸಂಜೆ 5 ಗಂಟೆಗೆ ‘ಚಕ್ರ’ ಚಿತ್ರತಂಡ ಟ್ರೇಲರ್ ಬಿಡುಗಡೆ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದಾರೆ. ರಾಕಿ ಭಾಯ್ ‘ಚಕ್ರ’ ಸಿನಿಮಾದ ಕನ್ನಡ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ. ತಮಿಳಿನಲ್ಲಿ ನಟ ಆರ್ಯ, ತೆಲುಗಿನಲ್ಲಿ ರಾಣಾ ದಗ್ಗುಬಾಟಿ, ಮಲಯಾಳಂನಲ್ಲಿ ಮೊಹನ್ಲಾಲ್ ಬಿಡುಗಡೆ ಮಾಡಲಿದ್ದಾರೆ.
‘ಚಕ್ರ’ ಸಿನಿಮಾದಲ್ಲಿ ನಟ ವಿಶಾಲ್ ಆರ್ಮಿ ಆಫೀಸರ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಇದೊಂದು ಪಕ್ಕಾ ಆಕ್ಷನ್ ಫಿಲಂ ಎನ್ನಲಾಗುತ್ತಿದೆ. ನವ ನಿರ್ದೇಶಕ ಆನಂದನ್ ಆಕ್ಷನ್ ಕಟ್ ನಲ್ಲಿ ಚಕ್ರ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ವಿಶಾಲ್ ಗೆ ನಾಯಕಿಯರಾಗಿ ರೆಜಿನಾ ಕಸ್ಸಂದ್ರ ಹಾಗೂ ಶ್ರದ್ದಾ ಶ್ರೀನಾಥ್ ಅಭಿನಯಿಸುತ್ತಿದ್ದಾರೆ. ವಿಶಾಲ್ ಫಿಲಂ ಫ್ಯಾಕ್ಟರಿ ಮೂಲಕ ಸ್ವತಃ ವಿಶಾಲ್ ಚಕ್ರ ಸಿನಿಮಾಗೆ ಹಣ ಹೂಡಿದ್ದಾರೆ.
ಕನ್ನಡಕ್ಕೆ ಈಗಾಗಲೇ ಆನೇಕ ಸಿನಿಮಾಗಳು ಡಬ್ ಆಗಿವೆ. ಸೈರಾ, ದಬಾಂಗ್-3, ಡಿಯರ್ ಕಾಮ್ರೆಡ್, ವರ್ಲ್ಡ್ ಫೇಮಸ್ ಲವರ್ ಹೀಗೆ ಸಾಕಷ್ಟು ಸಿನಿಮಾಗಳು ತೆರೆಕಂಡಿವೆ. ಇದೀಗ ವಿಶಾಲ್ ನಟನೆಯ ಚಕ್ರ ಸಿನಿಮಾ ತಮಿಳು ಸೇರಿಂದಂತೆ ಮೂರು ಭಾಷೆಯಲ್ಲಿ ತೆರೆಗೆ ಬರಲತ್ತಿದೆ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ