HOME » NEWS » Entertainment » TOMORROW RISHAB SHETTY IS RELEASING BELLBOTTOM 2 MOVIE NEW TITLE AE

BellBottom 2: ಡಿಟೆಕ್ಟಿವ್​ ದಿವಾಕರನ ಹೊಸ ಸಾಹಸ: ನಾಳೆ ರಿಲೀಸ್​ ಆಗಲಿದೆ ಸಿನಿಮಾದ ಟೈಟಲ್​..!

ಬೆಲ್​ ಬಾಟಂ ಸಿನಿಮಾವನ್ನು ನಿರ್ದೇಶಿಸಿರುವ ಜಯತೀರ್ಥ ಅವರೇ ಬೆಲ್​ ಬಾಟಂ 2 ಚಿತ್ರಕ್ಕೂ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ನಾಳೆ ಅಂದರೆ ಜ.27ರಂದು ಬೆಲ್​ ಬಾಟಂ ಸಿನಿಮಾದ ಸೀಕ್ವೆಲ್​ನ ಹೊಸ ಟೈಟಲ್​ ರಿಲೀಸ್​ ಆಗಲಿದೆ.

Anitha E | news18-kannada
Updated:January 26, 2021, 9:30 AM IST
BellBottom 2: ಡಿಟೆಕ್ಟಿವ್​ ದಿವಾಕರನ ಹೊಸ ಸಾಹಸ: ನಾಳೆ ರಿಲೀಸ್​ ಆಗಲಿದೆ ಸಿನಿಮಾದ ಟೈಟಲ್​..!
ಬೆಲ್​ಬಾಟಮ್​ 2 ಸಿನಿಮಾ ಬಗ್ಗೆ ಅಪ್ಡೇಟ್​ ಕೊಟ್ಟ ರಿಷಭ್​ ಶೆಟ್ಟಿ
  • Share this:
80ರ ದಶಕದಲ್ಲಿ ನಡೆದ ನೈಜ ಘಟನೆ ಆಧರಿಸಿ ಮೂಡಿ ಬಂದಿದ್ದ ‘ಬೆಲ್​ ಬಾಟಂ’ ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆಯ ಸುರಿ ಮಳೆಯಾಗಿತ್ತು. ಚಿತ್ರದ ರೆಟ್ರೋ ರಂಗು, ಅದಕ್ಕೆ ತಕ್ಕನಾದ ಧಿರಿಸು, ಹಿನ್ನೆಲೆ ಸಂಗೀತ, ಸಿನಿಮಾದಲ್ಲಿದ್ದ ರಸಭರಿತ ಹಾಸ್ಯ, ರಿಷಬ್​ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಸಿನಿಮಾ ಗೆಲುವು ನಿರ್ಮಾಪಕ ಸಂತೋಷ್​ ಕುಮಾರ್​ ಅವರಿಗೆ ಹೊಸ ಹುರುಪು ನೀಡಿತ್ತು. ಹೀಗಾಗಿಯೇ ‘ಬೆಲ್​ ಬಾಟಂ 2’ ಚಿತ್ರಕ್ಕೆ  ಸಿದ್ಧತೆ ಆರಂಭಗೊಂಡಿತ್ತು. ಈ ಹಿಂದೆಯೇ ಬೆಲ್​ ಬಾಟಂ 2 ಸಿನಿಮಾದ ಬಗ್ಗೆ ರಿಷಭ್​ ಶೆಟ್ಟಿ ಸಹ ಪ್ರಕಟಿಸಿದ್ದರು, ಆದರೆ ಯಾವ ಮಾಹಿತಿಯನ್ನೂ ಹಂಚಿಕೊಂಡಿರಲಿಲ್ಲ. ಈಗಷ್ಟೆ ತಮ್ಮ ಹೀರೋ ಸಿನಿಮಾದ ಕೆಲಸಗಳನ್ನು ಮುಗಿಸಿ, ಹರಿಕಥೆಯಲ್ಲ ಗಿರಿಕಥೆ ಚಿತ್ರದ ಚಿತ್ರೀಕರಣ ಮುಗಿಸಿರುವ ರಿಷಭ್​ ಶೆಟ್ಟಿ ಈಗ ಬೆಲ್​ ಬಾಟಂ 2 ಚಿತ್ರದತ್ತ ಗಮನ ಹರಿಸಿದ್ದಾರೆ. 2019ರಲ್ಲಿ ತೆರೆಕಂಡಿದ್ದ ಬೆಲ್​ ಬಾಟಂ ಸಿನಿಮಾದ ಮುಂದುವರೆದ ಭಾಗವೇ ಈ ಬೆಲ್​ ಬಾಟಂ 2 ಸಿನಿಮಾ. ಈಗಷ್ಟೆ ಈ ಚಿತ್ರದ ಬಗ್ಗೆ ನಟ ಹಾಗೂ ನಿರ್ದೇಶಕ ರಿಷಭ್​ ಶೆಟ್ಟಿ ಅಪ್ಡೇಟ್​ ಕೊಟ್ಟಿದ್ದಾರೆ. 

ಬೆಲ್​ ಬಾಟಂ ಸಿನಿಮಾವನ್ನು ನಿರ್ದೇಶಿಸಿರುವ ಜಯತೀರ್ಥ ಅವರೇ ಬೆಲ್​ ಬಾಟಂ 2 ಚಿತ್ರಕ್ಕೂ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ನಾಳೆ ಅಂದರೆ ಜ.27ರಂದು ಬೆಲ್​ ಬಾಟಂ ಸಿನಿಮಾದ ಸೀಕ್ವೆಲ್​ನ ಹೊಸ ಟೈಟಲ್​ ರಿಲೀಸ್​ ಆಗಲಿದೆ.

Bell Bottom 2, Bell Bottom 2 new Title, Sequel of Bell Bottom, Rishab Shetty's Bell Bottom, ಬೆಲ್ ಬಾಟಂ 2, ಬೆಲ್ ಬಾಟಂ ಸೀಕ್ವೆಲ್, hripriya, Tanya Hope, ರಿಷಭ್ ಶೆಟ್ಟಿ ಸಿನಿಮಾ, ಬೆಲ್ ಬಾಟಂ ಹೊಸ ಶೀರ್ಷಿಕೆ, rishab shetty, Rachana Inder, thapaswini poonacha, Harikathe alla Girikathe Movie, Sri Krishna Janmashtami, Sandalwood, Ranvit Shetty, Cute photos Of Ranvit Shetty, ರಿಷಭ್​ ಶೆಟ್ಟಿ, ಸ್ಯಾಂಡಲ್​ವುಡ್​, ರಣ್​ವಿತ್ ಶೆಟ್ಟಿ, ಶ್ರೀಕೃಷ್ಣ ಜನ್ಮಾಷ್ಠಮಿ, ರಣ್​ವಿತ್ ಶೆಟ್ಟಿಯ ಕ್ಯೂಟ್​ ಫೋಟೋಗಳು, ಹರಿಕಥೆ ಅಲ್ಲ ಗಿರಿಕಥೆ, ತಪಸ್ವಿನಿ ಪೂಣಚ್ಚ, ರಚನಾ ಇಂದರ್​
ಬೆಲ್​ಬಾಟಮ್​ 2 ಸಿನಿಮಾ ಬಗ್ಗೆ ಅಪ್ಡೇಟ್​ ಕೊಟ್ಟ ರಿಷಭ್​ ಶೆಟ್ಟಿ


ಈ ಸಿನಿಮಾವನ್ನು ಪ್ರಕಟಿಸಿದಾಗ ಚಿತ್ರಕ್ಕೆ ಬೆಲ್​ ಬಾಟಂ 2 ಎಂದು ಕರೆಯಲಾಗುತ್ತಿತ್ತು. ಆದರೆ, ಈಗ ಚಿತ್ರತಂಡ ಸಿನಿಮಾಗೆ ಹೊಸ ಶೀರ್ಷಿಕೆ ನೀಡುವ ನಿರ್ಧಾರ ಮಾಡಿದ್ದಾರೆ. ಡಿಕ್ಟೆಟಿವ್​ ದಿವಾಕರನ ಹೊಸ ಸಾಹಸದ ಕಥೆ ಏನೆಂದು ಊಹಿಸಿ ಕಮೆಂಟ್​ ಮಾಡಿ ಎಂದು ರಿಷಭ್​ ತಮ್ಮ ಅಭಿಮಾನಿಗಳಿಗೆ ಹೊಸ ಕೆಲಸ ಹಚ್ಚಿದ್ದಾರೆ.





ಬೆಲ್​ ಬಾಟಂ ಸಿನಿಮಾದಲ್ಲಿ ದಿವಾಕರನಿಗೆ ನಾಯಕಿಯಾಗಿ ರೆಟ್ರೋ ಲುಕ್​ನಲ್ಲಿ  ಹರಿಪ್ರಿಯಾ ಕಾಣಿಸಿಕೊಂಡಿದ್ದರು. ಈ ಸಲವೂ ಅವರೇ ನಾಯಕಿಯಾಗಿ ಮುಂದುವರೆಯುತ್ತಾರಾ ಅನ್ನೋ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ಆದರೆ ರಿಷಭ್​ ಶೆಟ್ಟಿ ಹರಿಪ್ರಿಯಾ ಅವರ ಜೊತೆ ತಾನ್ಯಾ ಹೋಪ್ ಅವರನ್ನು ತಾವು ಮಾಡಿರುವ ಪೋಸ್ಟ್​ನಲ್ಲಿ ಟ್ಯಾಗ್​ ಮಾಡಿದ್ದಾರೆ. ಇದರಿಂದಾಗಿ ಈ ಇಬ್ಬರೂ ನಟಿಯರು ಬೆಲ್​ ಬಾಟಂ 2ನಲ್ಲಿ ಇರಲಿದ್ದಾರೆ ಅನ್ನೋದು ಮಾತ್ರ ಖಚಿತವಾಗಿದೆ.










View this post on Instagram






A post shared by Hariprriya (@iamhariprriya)






ಟಿಕೆ ದಯಾನಂದ್​ ‘ಬೆಲ್​ ಬಾಟಂ’ ಚಿತ್ರಕ್ಕೆ ಕಥೆ ಬರೆದಿದ್ದರು. ‘ಬೆಲ್​ ಬಾಟಂ 2’ಗೂ ಅವರೇ ಕಥೆ ಸಿದ್ಧಪಡಿಸಿಕೊಂಡಿದ್ದಾರೆ. ಈ ಚಿತ್ರದ ಕಥೆಯೂ 80ರ ದಶಕದಲ್ಲೇ ಸಾಗಲಿದೆ ಎನ್ನುವುದು ವಿಶೇಷ. ಹಾಗಾಗಿ, ಮತ್ತೆ ಪ್ರೇಕ್ಷಕನಿಗೆ ರೆಟ್ರೋ ರಂಗಿನ ಸವಿಯನ್ನು ‘ಬೆಲ್​ ಬಾಟಂ 2’ ಉಣಬಡಿಸಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಚಿತ್ರದ ಕಥೆ ಹೇಗಿರಲಿದೆ? ಈ ಪ್ರಶ್ನೆಗೂ ಉತ್ತರವಿದೆ. ಮೊದಲ ಚಿತ್ರ ಸಂಪೂರ್ಣವಾಗಿ ಪತ್ತೆದಾರಿ ರೀತಿಯಲ್ಲಿ ಮೂಡಿ ಬಂದಿತ್ತು. ಈ ಚಿತ್ರವೂ ಅದೇ ಮಾದರಿಯಲ್ಲಿ ಇರಲಿದೆ ಎಂದು ನಿರ್ಮಾಪಕರ ಈ ಹಿಂದೆ ಹೇಳಿಕೊಂಡಿದ್ದರು.
Published by: Anitha E
First published: January 26, 2021, 9:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories