GreyHound Trailer: ಬಿಡುಗಡೆಯಾಯ್ತು ಟಾಮ್​ ಹ್ಯಾಂಕ್ಸ್​ ನಟನೆಯ 'ಗ್ರೇಹೌಂಡ್​​' ಚಿತ್ರದ ಟ್ರೇಲರ್​..!

GreyHound Trailer: ಟಾಮ್​ ಹ್ಯಾಂಕ್ಸ್​ ಹಾಗೂ ರೀಟಾ ಅವರು ಇದೇ ತಿಂಗಳ 15ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಗೆ ಹೋಗಿದ್ದಾರೆ. ಈಗ ಅವರ ಅಭಿನಯದ ಹೊಸ ಸಿನಿಮಾ 'ಗ್ರೇಹೌಂಡ್​' ಟ್ರೇಲರ್ ಬಿಡುಗಡೆಯಾಗಿದೆ. 

'ಗ್ರೇಗೌಂಡ್'​ ಸಿನಿಮಾದಲ್ಲಿ ಟಾಮ್ ​ಹ್ಯಾಂಕ್ಸ್​

'ಗ್ರೇಗೌಂಡ್'​ ಸಿನಿಮಾದಲ್ಲಿ ಟಾಮ್ ​ಹ್ಯಾಂಕ್ಸ್​

  • Share this:
ಟಾಮ್​ಹ್ಯಾಂಕ್ಸ್​ ಹಾಗೂ ಅವರ ಪತ್ನಿ ರೀಟಾ ವಿಲ್ಸನ್​ ನಿನ್ನೆಯಷ್ಟೆ ಕೊರೋನಾ ಸೋಂಕು ಮುಕ್ತರಾಗಿ ಮನೆ ಸೇರಿದ್ದಾರೆ. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹ್ಯಾಂಕ್ಸ್​ ದಂಪತಿ ಗುಣಮುಖರಾಗಿ ಮನೆ ಸೇರಿದ್ದಾರೆ.

ಟಾಮ್​ ಹ್ಯಾಂಕ್ಸ್​ ಹಾಗೂ ರೀಟಾ ಅವರು ಇದೇ ತಿಂಗಳ 15ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಗೆ ಹೋಗಿದ್ದಾರೆ. ಈಗ ಅವರ ಅಭಿನಯದ ಹೊಸ ಸಿನಿಮಾ 'ಗ್ರೇಹೌಂಡ್​' ಟ್ರೇಲರ್ ಬಿಡುಗಡೆಯಾಗಿದೆ. ಇದೊಂದು ನೈಜ್ಯ ಘಟನೆಯಾಧಾರಿತ ಚಿತ್ರವಾಗಿದೆ.ಟಾಮ್​ ಹ್ಯಾಂಕ್ಸ್​ ಮತ್ತೊಮ್ಮೆ ಸೈನ್ಯಾಧಿಕಾರಿಯಾಗಿ ಮಿಂಚಲಿದ್ದಾರೆ. ಈ ಹಿಂದೆ ಅವರು 'ಕ್ಯಾಪ್ಟನ್​ ಫಿಲಿಫ್​' ಸಿನಿಮಾದಲ್ಲಿ ಹಡಗಿನ ಕಮಾಂಡರ್​ ಆಗಿ ಕಾಣಿಸಿಕೊಂಡಿದ್ದರು. ಅದು ಸೂಪರ್​ ಹಿಟ್​ ಆಗಿತ್ತು.

ಇದನ್ನೂ ಓದಿ: ಪಾರ್ನ್​ ವಿಡಿಯೋ ಲೀಕ್​ ಮಾಡುವುದಾಗಿ ಬೆದರಿಕೆ ಹಾಕಿದವರ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ ನಟಿ

ಈಗ ನೌಕಾಧಿಕಾರಿಯಾಗಿ  1942ರ ಕತೆ ಹೇಳೋಕೆ ಹೊರಟಿದ್ದಾರೆ. 2:30 ಸೆಕೆಂಡ್​ ಇರುವ ಟ್ರೇಲರ್​ ನೋಡಿಯೇ ಹೇಳಬಹುದು ಇದೊಂದು ವಾರ್ ಮೂವಿ ಅಂತ. ಅರೋನ್​ ಶ್ನೈಡರ್ ನಿರ್ದೇಶನದ ಈ ಚಿತ್ರಕ್ಕೆ ಟಾಮ್​  ಹ್ಯಾಂಕ್ಸ್​ ಚಿತ್ರಕತೆ ಬರೆದಿದ್ದಾರೆ.  ಈ ಸಿನಿಮಾ ಇದೇ ವರ್ಷ ಜೂನ್​ನಲ್ಲಿ ತೆರೆ ಕಾಣಲಿದೆ.

ಅಭಿಮಾನಿಗಳ ಮನವಿ ಗೌರವಿಸಿ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾದ ರಶ್ಮಿಕಾ ಮಂದಣ್ಣ !

First published: