ಇಂಡಿಯನ್​ ಬಾಕ್ಸಾಫಿಸ್​ಗೆ ಭರ್ಜರಿ ಎಂಟ್ರಿ ಕೊಟ್ಟಿದೆ ಮಿಷನ್​ ಇಂಪಾಸಿಬಲ್​​-ಫಾಲ್​ಔಟ್​

news18
Updated:July 27, 2018, 1:35 PM IST
ಇಂಡಿಯನ್​ ಬಾಕ್ಸಾಫಿಸ್​ಗೆ ಭರ್ಜರಿ ಎಂಟ್ರಿ ಕೊಟ್ಟಿದೆ ಮಿಷನ್​ ಇಂಪಾಸಿಬಲ್​​-ಫಾಲ್​ಔಟ್​
news18
Updated: July 27, 2018, 1:35 PM IST
ನ್ಯೂಸ್​ 18 ಕನ್ನಡ 

ಹಾಲಿವುಡ್‍ನ ಆ್ಯಕ್ಷನ್ ಸಿನಿಮಾ ಪ್ರೇಮಿಗಳಿಗೆ `ಮಿಷನ್ ಇಂಪಾಸಿಬಲ್' ಅನ್ನೋ ಸಿನಿಮಾ ಸೀರೀಸ್​ ಹೊಸದೇನಲ್ಲ. ಈಗಾಗಲೇ ಐದು ಬಾರಿ `ಮಿಷನ್ ಇಂಪಾಸಿಬಲ್'ನ ಬೇರೆ ಬೇರೆ ಆವೃತ್ತಿ ನೋಡಿ ನೀವೆಲ್ಲರೂ ಥ್ರಿಲ್ಲಾಗಿರುತ್ತೀರಿ. ಈಗ ಇದೇ ಸಿನಿಮಾ 'ಫಾಲ್​ಔಟ್​' ಎಂಬ ಮತ್ತೊಂದು ಸಿನಿಮಾ ಬಂದಿದೆ. ಹಾಗಾದರೆ ಬನ್ನಿ ಈ ಚಿತ್ರದ ವಿಶೇಷತೆ ಏನು ಅಂತ ತಿಳಿಯೋಣ.

ಹಾಲಿವುಡ್​ನ `ಮಿಷನ್ ಇಂಪಾಸಿಬಲ್' ಸೀರಿಸ್​ನ ಆರನೇ ಸರಣಿ ಚಿತ್ರ ಬಂದಿದೆ. 'ಮಿಷನ್ ಇಂಪಾಸಿಬಲ್ ಫಾಲ್​ಔಟ್' ಎಂಬ ಹೆಸರಿನಲ್ಲಿ ಬಂದಿರೋ ಈ ಚಿತ್ರದಲ್ಲೂ ಇಂಪಾಸಿಬಲ್ ಮಿಷನ್ ಫೋರ್ಸ್‍ನ ಏಜಂಟ್ ಇತಾನ್ ಹಂಟ್ ಆಗಿ ಎಂದಿನಂತೆ ಟಾಮ್ ಕ್ರೂಸ್ ಕಾಣಿಸಿಕೊಂಡಿದ್ದಾರೆ.

ಟಾಮ್ ಕ್ರೂಸ್ ಪ್ರೊಡಕ್ಷನ್ ಹೌಸ್‍ನಲ್ಲಿ ನಿರ್ಮಾಣವಾಗಿರೋ ಈ ಚಿತ್ರವನ್ನು ಕ್ರಿಸ್ಟೋಫರ್ ಎಂಕ್ಯೂರಿ ನಿರ್ದೇಶನ ಮಾಡಿದ್ದಾರೆ. ಮಿಷನ್ ಇಂಪಾಸಿಬಲ್ ಸೀರಿಸ್‍ನ `ರೋಗ್ ನೇಷನ್' ಸಿನಿಮಾವನ್ನು ಸಹ ಇವರೇ ನಿರ್ದೆಶನ ಮಾಡಿದ್ದರು.

ಪ್ರತಿ ಬಾರಿ ತೆರೆ ಕಂಡಾಗಲೂ ಬಾಕ್ಸಾಫಿಸ್‍ನಲ್ಲಿ ಬಿರುಗಾಳಿ ಎಬ್ಬಿಸೋ `ಮಿಷನ್ ಇಂಪಾಸಿಬಲ್' ಸರನಿ ಮತ್ತದೇ ನೀರೀಕ್ಷೆ ಹುಟ್ಟಿಸುತ್ತದೆ. ಬಿಡುಗಡೆಯಾಗಿರುವ 'ಫಾಲೌಟ್' ಸರಣಿ ಸಹ  ವಿಮರ್ಶಕರಿಂದ ಐದಕ್ಕೆ ಐದು ರೇಟಿಂಗ್ ಪಡೆದು ಮತ್ತೊಂದು ಇತಿಹಾಸ ಸೃಷ್ಟಿಸುವತ್ತ ಹೆಜ್ಜೆ ಇಟ್ಟಿದೆ.

ಈಗಾಗಲೇ ವಿಶ್ವದಾದ್ಯಂತ ಬಿಡುಗಡೆಯಾಗಿ ಭಾರೀ ಸದ್ದು ಮಾಡಿರೋ ಈ ಚಿತ್ರ ಇಂದು (ಜುಲೈ 27) ಭಾರತೀಯ ಬಾಕ್ಸಾಫಿಸ್‍ಗೆ ಅದ್ದೂರಿ ಎಂಟ್ರಿ ಕೊಟ್ಟಿದೆ. ಇನ್ನೂ ಈ ಸಿನಿಮಾ ಆ್ಯಕ್ಷನ್​ ಸಿನಿ ಪ್ರೇಮಿಗಳನ್ನು ಯಾವ ಮಟ್ಟಕ್ಕೆ ಆಕರ್ಷಸಿಲಿದೆ ಹಾಗೂ ಯಾವ ದಾಖಲೆಗಳನ್ನು ಮುರಿಯಲಿದೆ ಅನ್ನೋದು ನೋಡಬೇಕಿದೆ.
First published:July 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...