Tom Cruise: ಲಾಕ್​ಡೌನ್ ಮಧ್ಯೆ ಚಿತ್ರೀಕರಣಕ್ಕೆ ಹೊಸ ಜಾಗ; ಬಾಹ್ಯಾಕಾಶದಲ್ಲೇ ಶೂಟ್ ಆಗಲಿದೆ ಈ ಬಿಗ್ ಬಜೆಟ್ ಸಿನಿಮಾ!

Tom Cruise Movies: ಹಾಲಿವುಡ್​ನಲ್ಲಿ ಬಾಹ್ಯಾಕಾಶ ಕುರಿತ ಸಿನಿಮಾ ಒಂದು ಸಿದ್ಧಗೊಳ್ಳುತ್ತಿದೆ. ಈ ಸಿನಿಮಾ ರಿಯಾಲಿಟಿಗೆ ಹತ್ತಿರವಾಗರಲಿ ಎನ್ನುವ ಕಾರಣಕ್ಕೆ ಅಂತರಿಕ್ಷದಲ್ಲೇ ಶೂಟ್ ಮಾಡಲು ನಿರ್ಧರಿಸಲಾಗಿದೆ.

ಬಾಹ್ಯಾಕಾಶ ನೌಕೆಯ ಚಿತ್ರ

ಬಾಹ್ಯಾಕಾಶ ನೌಕೆಯ ಚಿತ್ರ

  • Share this:
    ಸಿನಿಮಾಗಳನ್ನು ರಿಯಾಲಿಟಿಗೆ ಹತ್ತಿರವಾಗುವಂತೆ ನಿರ್ಮಾಣ ಮಾಡಬೇಕು ಎನ್ನುವ ಕಾರಣಕ್ಕೆ ಕೆಲವರು ಸೆಟ್​ ಹಾಕದೆ ಆಯಾ ಜಾಗಕ್ಕೆ ತೆರಳಿ ಶೂಟ್​ ಮಾಡುತ್ತಾರೆ. ಸ್ಟಂಟ್​ಗಳನ್ನು ಕೂಡ ಡೂಪ್​ ಬಳಸದೆ ಹೀರೋನಿಂದಲೇ ಮಾಡಿಸುತ್ತಾರೆ. ಈಗ ಬಿಗ್​ ಬಜೆಟ್​ನ ಸಿನಿಮಾ ಒಂದು ಸಿದ್ಧಗೊಳ್ಳುತ್ತಿದ್ದು, ಬಾಹ್ಯಾಕಾಶದಲ್ಲಿ ಶೂಟಿಂಗ್ ನಡೆಯಲಿದೆ.

    ಹೌದು, ಹಾಲಿವುಡ್​ನಲ್ಲಿ ಬಾಹ್ಯಾಕಾಶ ಕುರಿತ ಸಿನಿಮಾ ಒಂದು ಸಿದ್ಧಗೊಳ್ಳುತ್ತಿದೆ. ಈ ಸಿನಿಮಾ ರಿಯಾಲಿಟಿಗೆ ಹತ್ತಿರವಾಗರಲಿ ಎನ್ನುವ ಕಾರಣಕ್ಕೆ ಅಂತರಿಕ್ಷದಲ್ಲೇ ಶೂಟ್ ಮಾಡಲು ನಿರ್ಧರಿಸಲಾಗಿದೆ. ಈ ಯೋಜನೆಗೆ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ ಅನುಮತಿ ಕೂಡ ನೀಡಿದೆ.

    ಹಾಲಿವುಡ್​ನ ಖ್ಯಾತ ನಾಯಕ ಟಾಮ್​ ಕ್ರೂಸ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಮೊದಲು ಸಾಕಷ್ಟು ಸ್ಟಂಟ್​ಗಳ ಮೂಲಕ ಗಮನ ಸೆಳೆದಿದ್ದ ಅವರು ಈಗ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.

    ಟೈಟಾನಿಕ್​ ಸಿನಿಮಾ ನಿರ್ದೇಶಕ ಜೇಂಸ್​ ಕ್ಯಾಮರೂನ್​ 20 ವರ್ಷಗಳ ಹಿಂದೆ ಈ ಬಗ್ಗೆ ಹೇಳಿಕೆ ನೀಡಿದ್ದರು. ನಾನು ಹಾಗೂ ಟಾಮ್​ ಬಾಹ್ಯಾಕಾಶದಲ್ಲಿ ಶೂಟ್​ ಮಾಡಲು ಉತ್ಸುಕರಾಗಿದ್ದೇವೆ ಎಂದು ಹೇಳಿದ್ದರು.ಈಗ ಇಬ್ಬರೂ ಸಿರಿ ಸಿನಿಮಾ ಮಾಡಲಿದ್ದಾರೆಯೇ ಎನ್ನುವ ಪ್ರಶ್ನೆ ಕೂಡ ಕಾಡಿದೆ.

    ಇದನ್ನೂ ಓದಿ: ಕೆಜಿಎಫ್ 2 ಕೊಂಡುಕೊಳ್ಳಲು ಬರೋಬ್ಬರಿ 55 ಕೋಟಿ ರೂ. ನೀಡಲು ಮುಂದಾದ ಅಮೆಜಾನ್?

    ಸದ್ಯಮ ಟಾಮ್​ ಮಿಷನ್​ ಇಂಪಾಸಿಬಲ್​ 7 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬಿಡುಗಡೆ ದಿನಾಂಕ 2021ಕ್ಕೆ ಮುಂದೂಡಲ್ಪಟ್ಟಿದೆ. ಮೂಲಗಳ ಪ್ರಕಾರ ಈ ಸಿನಿಮಾ ತೆರೆಕಂಡ ನಂತರ ಟಾಮ್​ ಈ ಸಿನಿಮಾ ಕೆಲಸಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
    First published: