ಮೊದಲೆಲ್ಲಾ ಬಾಲಿವುಡ್ ಚಿತ್ರದ (Bollywood Cinema) ಈ ಫೈಟ್ ದೃಶ್ಯ ಹಾಲಿವುಡ್ ಚಿತ್ರದಿಂದ ಕಾಪಿ ಮಾಡಿಕೊಂಡಿದ್ದಾರೆ, ಹಾಲಿವುಡ್ನ ಕಥೆಯನ್ನು ತೆಗೆದುಕೊಂಡು ಭಾರತದ ಮೂಲಕ್ಕೆ ಅಳವಡಿಸಿ ಚಿತ್ರ ಮಾಡಿದ್ದಾರೆ ಅಂತೆಲ್ಲಾ ಹೇಳುತ್ತಿದ್ದರು. ಆದರೆ ಇತ್ತೀಚೆಗೆ ಹಾಲಿವುಡ್‌ನವರು (Hollywood) ನಮ್ಮ ಭಾರತದ ಚಿತ್ರಗಳನ್ನು ತುಂಬಾನೇ ಆಸಕ್ತಿಯಿಂದ ನೋಡುವುದನ್ನು ಮತ್ತು ಅವರು ಸಹ ಹಾಗೆಯೇ ಚಿತ್ರೀಕರಣ ಮಾಡಬೇಕು ಅಂತೆಲ್ಲಾ ಯೋಚಿಸಲು ಶುರು ಮಾಡಿದ್ದಾರೆ ಎಂಬುದು ಗಮನಿಸಬೇಕಾದ ವಿಷಯವಾಗಿದೆ.
ಬುಧವಾರ ರಾತ್ರಿ ಬಿಡುಗಡೆಯಾಯ್ತು ಟಾಮ್ ಕ್ರೂಸ್ ಅವರ ಚಿತ್ರದ ಟ್ರೈಲರ್
ಈಗಾಗಲೇ ಟಾಮ್ ಕ್ರೂಸ್ ಅವರ ಮಿಷನ್ ಇಂಪಾಸಿಬಲ್ ಡೆಡ್ ರೆಕನಿಂಗ್ ಪಾರ್ಟ್ ಒನ್ ನ ಟ್ರೈಲರ್, ಫ್ರ್ಯಾಂಚೈಸ್ ನ ಏಳನೇ ಮತ್ತು ಕೊನೆಯ ಸೀರಿಸ್, ಬುಧವಾರ ರಾತ್ರಿ ಬಿಡುಗಡೆಯಾಯಿತು. ಈ ಹೈ-ಆನ್-ಆಕ್ಷನ್ ಟ್ರೈಲರ್ ಕೆಲವು ಊಹಿಸಲು ಸಾಧ್ಯವಾಗದ ಆಕ್ಷನ್ ದೃಶ್ಯಗಳನ್ನು ಒಳಗೊಂಡಿದೆ. ಟಾಮ್ ಕ್ರೂಸ್ ಅಪಾಯದಿಂದ ತಪ್ಪಿಸಿಕೊಂಡು ಆಗಾಗ ಓಡುವ ದೃಶ್ಯಗಳು ಮತ್ತು ಇನ್ನಿತರೆ ಸ್ಟಂಟ್ ಗಳನ್ನು ಈ ಚಿತ್ರ ಒಳಗೊಂಡಿದೆ.
ಆದರೆ ಅನೇಕ ಭಾರತೀಯ ಅಭಿಮಾನಿಗಳ ಗಮನವನ್ನು ಸೆಳೆದ ಒಂದು ದೃಶ್ಯವೆಂದರೆ ಟಾಮ್ ಅವರ ಪಾತ್ರವು ರೈಲು ಅಪಘಾತದಿಂದ ಹೇಗೆ ತಪ್ಪಿಸಿಕೊಳ್ಳುತ್ತದೆ ಎಂಬುದು, ಏಕೆಂದರೆ ಇದು ಶಾರುಖ್ ಅವರ ಅಭಿನಯದ ‘ಪಠಾಣ್’ ಚಿತ್ರದಲ್ಲಿಯೂ ಸಹ ಇದೇ ರೀತಿಯ ಒಂದು ಸ್ಟಂಟ್ ಇತ್ತು ಅಂತ ನೆನಪು ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಮಾವಿನ ಹಣ್ಣಿಗೆ ಶರದ್ ಪವಾರ್ ಹೆಸರಿಟ್ಟ ರೈತ! ಅಭಿಮಾನ ಅಂದ್ರೆ ಇದೇ ನೋಡಿ
ಈ ಚಿತ್ರವನ್ನ ಮಿಷನ್ ಇಂಪಾಸಿಬಲ್ 7 ಅಂತ ಸಹ ಕರೀತಾರಂತೆ
ಮಿಷನ್ ಇಂಪಾಸಿಬಲ್ 7 ಎಂದೂ ಕರೆಯಲ್ಪಡುವ ಮಿಷನ್ ಇಂಪಾಸಿಬಲ್ ಡೆಡ್ ಕೌಂಟಿಂಗ್ ಪಾರ್ಟ್ ಒನ್ ನಲ್ಲಿ, ಟಾಮ್ ಕ್ರೂಸ್ ಅವರ ಎಥಾನ್ ಹಂಟ್ ಮತ್ತು ಅವರ ಇಂಪಾಸಿಬಲ್ ಮಿಷನ್ ಫೋರ್ಸ್ ತಮ್ಮ ಮಾರಣಾಂತಿಕ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತವೆ. ಟ್ರೈಲರ್ನಲ್ಲಿನ ಒಂದು ದೃಶ್ಯದಲ್ಲಿ ಟಾಮ್ ಮತ್ತು ಚಿತ್ರದ ಖಳನಾಯಕ ಈಸಿ ಮೊರಾಲ್ಸ್ ವೇಗವಾಗಿ ಚಲಿಸುವ ರೈಲಿನ ವಿರುದ್ಧವಾಗಿ ನಿಲ್ಲುವುದನ್ನು ತೋರಿಸಲಾಗಿದೆ.
ನಂತರ ರೈಲು ಮುರಿದ ಸೇತುವೆಯಿಂದ ಹೋಗುತ್ತದೆ, ಹಂಟ್ ಬೀಳುತ್ತಿರುವ ಬೋಗಿಗಳನ್ನು ದಾಟಿ ಓಡಬೇಕು ಮತ್ತು ಸುರಕ್ಷತೆಯನ್ನು ಪಡೆಯಲು ಆ ಕಂದಕವನ್ನು ದಾಟಬೇಕು. ಕೊನೆಯ ದೃಶ್ಯ ಟಾಮ್ ಅವರ ಪಾತ್ರವು ಆ ಮುರಿದ ಸೇತುವೆಯನ್ನು ಹಿಡಿದುಕೊಂಡು ತೂಗಾಡುತ್ತಿರುವುದನ್ನು ತೋರಿಸುತ್ತದೆ.
ಪಠಾಣ್ ಚಿತ್ರದಲ್ಲಿ ಸಹ ನಟ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಚಲಿಸುವ ರೈಲಿನಲ್ಲಿ ಎದುರಾಳಿ ಪಾತ್ರದೊಂದಿಗೆ ಜಗಳವಾಡುತ್ತಾ ಮತ್ತು ನಂತರ ಸೇತುವೆಯಿಂದ ಕೆಳಕ್ಕೆ ಬೀಳುವ ರೈಲಿನಿಂದ ಇದೇ ರೀತಿಯಲ್ಲಿ ಪಾರಾಗುತ್ತಾರೆ. ಶಾರುಖ್ ಖಾನ್ ಅವರ ಅನೇಕ ಅಭಿಮಾನಿಗಳು ಹೋಲಿಕೆಗಾಗಿ ಎರಡು ದೃಶ್ಯಗಳ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. "ಈಗ ಮಿಷನ್ ಇಂಪಾಸಿಬಲ್ 7 ಮೆಗಾ ಬ್ಲಾಕ್ ಬಸ್ಟರ್ ಪಠಾಣ್ ಚಿತ್ರದ ದೃಶ್ಯಗಳನ್ನು ನಕಲು ಮಾಡಿದ್ದಾರೆ ಎಂದು ಸ್ಪಷ್ಟವಾಗಿ ಹೇಳಬಹುದು" ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.
ಈ ದೃಶ್ಯಗಳನ್ನು ನೋಡಿ ಏನಂದ್ರು ಶಾರುಖ್ ಅಭಿಮಾನಿಗಳು?
ಶಾರುಖ್ ಖಾನ್ ಜಾಗತಿಕವಾಗಿ 'ಟ್ರೆಂಡ್ ಸೆಟ್ಟರ್' ಎಂದು ಅನೇಕ ಅಭಿಮಾನಿಗಳು ಹೇಳಿದ್ದಾರೆ. "ಶಾರುಖ್ ಮತ್ತು ಸಲ್ಮಾನ್ ಮಾಡಿದ್ದನ್ನು ಇಡೀ ಜಗತ್ತು ಅನುಸರಿಸುತ್ತದೆ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. "ಹಾಲಿವುಡ್ ಚಿತ್ರ ಪಠಾಣ್ ಚಿತ್ರದ ಆಕ್ಷನ್ ದೃಶ್ಯಗಳನ್ನು ನಕಲು ಮಾಡಿದೆ" ಎಂದು ಮತ್ತೊಬ್ಬ ಅಭಿಮಾನಿ ಬರೆದಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ, ಬಹಳ ಹಿಂದೆ, ಪಠಾಣ್ ಚಿತ್ರದ ದೃಶ್ಯವನ್ನು ಎರಡು ದಶಕಗಳ ಹಿಂದೆ ಪ್ರಸಾರವಾದ ಜಾಕಿ ಚಾನ್ ಅಡ್ವೆಂಚರ್ಸ್ ಕಾರ್ಟೂನ್ ಶೋ ಜಾಕಿ ಚಾನ್ ಅಡ್ವೆಂಚರ್ಸ್ ನಿಂದ ನೇರವಾಗಿ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಶೋ ನ ಒಂದು ಸಂಚಿಕೆಯಲ್ಲಿ ಜಾಕಿಯ ಪಾತ್ರವು ಸಹ ಹೀಗೆ ಸೇತುವೆಯಿಂದ ಕೆಳಕ್ಕೆ ಬೀಳುವ ರೈಲಿನಿಂದ ಬಹುತೇಕವಾಗಿ ಇದೇ ರೀತಿಯಲ್ಲಿ ಪಾರಾಗುವುದನ್ನು ಈ ದೃಶ್ಯ ಒಳಗೊಂಡಿತ್ತು.
ಮಿಷನ್: ಇಂಪಾಸಿಬಲ್ ಡೆಡ್ ಕೌಂಟಿಂಗ್ ಪಾರ್ಟ್ ಒನ್ ಚಿತ್ರವು ಇದೇ ವರ್ಷದ ಜುಲೈ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕ್ರಿಸ್ಟೋಫರ್ ಮೆಕ್ಕ್ವೇರಿ ನಿರ್ದೇಶನದ ಈ ಚಿತ್ರದಲ್ಲಿ ಹೇಲಿ ಅಟ್ವೆಲ್, ವಿಂಗ್ ರಾಮ್ಸ್, ಸೈಮನ್ ಪೆಗ್, ರೆಬೆಕಾ ಫರ್ಗುಸನ್, ವನೆಸ್ಸಾ ಕಿರ್ಬಿ ಮತ್ತು ಹೆನ್ರಿ ಸೆರ್ನಿ ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ