Tom Cruise: ಏನ್​ ಗುರೂ... 59ನೇ ವಯಸ್ಸಿನಲ್ಲೂ ಟಾಮ್​ ಕ್ರೂಸ್​ ರಿಯಲ್​ ಸ್ಟಂಟ್​ ನೋಡೋಕೆ ಥ್ರಿಲ್ಲಿಂಗ್​..!

Mission Impossible 8: ಕ್ರೂಸ್ 1941ರ ಬೋಯಿಂಗ್ ಬಿ75ಎನ್1 (B75N1) ಸ್ಟಿಯರ್ ಮನ್ ಬೈಪ್ಲೇನ್ ಅನ್ನು ಕಾಕ್‌ಪಿಟ್‌ನಿಂದ ಹತ್ತಿ 2,000 ಅಡಿ ಎತ್ತರದಲ್ಲಿ ಹಾರಾಡುವಾಗ ವಿಮಾನದ ರೆಕ್ಕೆಯ ಮೇಲೆ ಕುಳಿತು ಸವಾರಿ ಮಾಡಿದ್ದಾರೆ. ನಂತರ ತಾನು ಕುಳಿತ ವಿಮಾನದ ರೆಕ್ಕೆಯಿಂದ ತಲೆಕೆಳಗೆ ಮಾಡಿ ಹಾಗೆಯೇ ಜೋತಾಡಿದ್ದಾರೆ.

ಮಿಷನ್​ ಇಂಪಾಸಿಬಲ್ 8 ಸಿನಿಮಾದ ಚಿತ್ರೀಕರಣದ ಚಿತ್ರ

ಮಿಷನ್​ ಇಂಪಾಸಿಬಲ್ 8 ಸಿನಿಮಾದ ಚಿತ್ರೀಕರಣದ ಚಿತ್ರ

  • Share this:

ಅನೇಕ ದೇಶದ ಚಿತ್ರೋದ್ಯಮಗಳಲ್ಲಿ ನಾಯಕ ನಟರು(Hero) ತಮ್ಮ ಚಿತ್ರದಲ್ಲಿ ಯಾವುದೇ ಡ್ಯೂಪ್ ಬಳಸದೆ ಸ್ವತಃ ಸ್ಟಂಟ್(Real Stunt) ಮಾಡುವುದನ್ನು ನಾವು ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ. ಈ ಮೈ ಜುಮ್ ಎನಿಸುವಂತಹ ದೃಶ್ಯಗಳನ್ನು ತಾವೇ ಸ್ವತಃ ಮಾಡುತ್ತಿರುವುದು ಚಿತ್ರಕ್ಕೆ ಬೇರೆಯದ್ದೇ ಆದಂತಹ ಒಂದು ಮೆರಗನ್ನು ತಂದು ಕೊಡುತ್ತದೆ. ಹಾಲಿವುಡ್‌(Hollywood)ನಲ್ಲಿ ಅನೇಕ ವರ್ಷಗಳಿಂದ ಕೆಲವು ನಾಯಕ ನಟರು ತಮ್ಮ ಚಿತ್ರದಲ್ಲಿ ತಾವೇ ಖುದ್ದಾಗಿ ಸ್ಟಂಟ್‌ಗಳನ್ನು ಮಾಡುತ್ತಿದ್ದು, ಅವರ ಸಾಲಿನಲ್ಲಿ ಸೂಪರ್ ಸ್ಟಾರ್ ಟಾಮ್ ಕ್ರೂಸ್(Super Star Tom Cruise ) ಸಹ ಇದ್ದಾರೆ ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ ಇವರು ಅನೇಕ ಚಿತ್ರಗಳಲ್ಲಿ ಸಾಹಸಮಯ ದೃಶ್ಯಗಳನ್ನು ತಾವೇ ಖುದ್ದಾಗಿ ಮಾಡಿದ್ದಾರೆ.


2000 ಅಡಿ ಎತ್ತರದಲ್ಲಿ ವಿಮಾನದ ರೆಕ್ಕೆ ಮೇಲೆ ಕುಳಿತ ನಟ!

ಇತ್ತೀಚೆಗೆ 'ಮಿಷನ್ ಇಂಪಾಸಿಬಲ್ 8' ಚಿತ್ರದ ಚಿತ್ರೀಕರಣದ ಸಮಯದಲ್ಲಿ ತಮ್ಮದೇ ಆದ ಉಗುರು ಕಚ್ಚಿಕೊಳ್ಳುವಂತಹ ಸ್ಟಂಟ್ ಪ್ರದರ್ಶಿಸುತ್ತಿರುವ ಛಾಯಾಚಿತ್ರ ತೆಗೆಯಲಾಗಿದೆ. ಸುದ್ದಿ ಮಾಧ್ಯಮದ ಪ್ರಕಾರ, ಕ್ರೂಸ್ 1941ರ ಬೋಯಿಂಗ್ ಬಿ75ಎನ್1 (B75N1) ಸ್ಟಿಯರ್ ಮನ್ ಬೈಪ್ಲೇನ್ ಅನ್ನು ಕಾಕ್‌ಪಿಟ್‌ನಿಂದ ಹತ್ತಿ 2,000 ಅಡಿ ಎತ್ತರದಲ್ಲಿ ಹಾರಾಡುವಾಗ ವಿಮಾನದ ರೆಕ್ಕೆಯ ಮೇಲೆ ಕುಳಿತು ಸವಾರಿ ಮಾಡಿದ್ದಾರೆ. ನಂತರ ತಾನು ಕುಳಿತ ವಿಮಾನದ ರೆಕ್ಕೆಯಿಂದ ತಲೆಕೆಳಗೆ ಮಾಡಿ ಹಾಗೆಯೇ ಜೋತಾಡಿದ್ದಾರೆ.ಕ್ರೂಸ್ ತಲೆಕೆಳಗಾಗಿ ನೇತಾಡುತ್ತಿದ್ದಂತೆ, ವಿಮಾನವು ತಲೆಕೆಳಗಾಗಿ ತಿರುಗಿತು, ಇದರಿಂದ ನಟ ವಿಮಾನದ ರೆಕ್ಕೆಯ ಮೇಲೆ ನೇರವಾಗಿ ಕುಳಿತಿದ್ದರು. ಸ್ಟಂಟ್ ಸಮಯದಲ್ಲಿ ಅವರಿಗೆ ಏನು ತೊಂದರೆ ಆಗದಂತೆ ಬೆಲ್ಟ್‌ಗಳಿಂದ ಅವರನ್ನು ವಿಮಾನಕ್ಕೆ ಜೋಡಿಸಲಾಗಿತ್ತು.ಒಂದು ಸೀನ್​ಗಾಗಿ ನೂರಾರು ಬಾರಿ ತರಬೇತಿ!

ಕ್ರೂಸ್ ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಈ ಒಂದು ಸ್ಟಂಟ್ ದೃಶ್ಯಕ್ಕೆ ಸಿದ್ಧರಾಗಲು ಅನೇಕ ಬಾರಿ ವಿಮಾನ ಹಾರಾಟದ ತರಬೇತಿ ತೆಗೆದು ಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. 'ಮಿಷನ್ ಇಂಪಾಸಿಬಲ್ 7' ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ ತಕ್ಷಣ ಕ್ರೂಸ್ 'ಮಿಷನ್ ಇಂಪಾಸಿಬಲ್ 8' ಚಿತ್ರದ ಚಿತ್ರೀಕರಣ ಪ್ರಾರಂಭಿಸಿದರು. ಎರಡೂ ಚಲನಚಿತ್ರಗಳನ್ನು ಒಂದೇ ಸಮಯದಲ್ಲಿ ಘೋಷಿಸಲಾಯಿತು, ಒಂದನ್ನು 2022ರಲ್ಲಿ ಮತ್ತು ಇನ್ನೊಂದನ್ನು 2023ರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವರದಿಗಳು ತಿಳಿಸಿವೆ. ಕೋವಿಡ್-19 ಸಾಂಕ್ರಾಮಿಕದಿಂದಾಗಿ 'ಮಿಷನ್: ಇಂಪಾಸಿಬಲ್ 7' ಚಿತ್ರದ ಚಿತ್ರೀಕರಣ ಸ್ಥಗಿತಗೊಳಿಸಲಾಗಿತ್ತು. ಇದು 'ಮಿಷನ್: ಇಂಪಾಸಿಬಲ್ 8' ನ ನಿರೀಕ್ಷಿತ ಬಿಡುಗಡೆ ದಿನಾಂಕವನ್ನು ಜುಲೈ 2023ಕ್ಕೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : ಭಾವಿ ಮಾವ ಸುನೀಲ್​ ಶೆಟ್ಟಿ ಜೊತೆ ಕಾಣಿಸಿಕೊಂಡ ಕೆ.ಎಲ್​.ರಾಹುಲ್​: ಶೀಘ್ರ ಮೇವ ಕಲ್ಯಾಣ ಪ್ರಾಪ್ತಿರಸ್ತು!

ಬುರ್ಜ್ ಖಲೀಫಾ ಏರಿದ್ದ ಟಾಮ್​ ಕ್ರೂಸ್​!

ಕ್ರೂಸ್ ವಿಶ್ವದ ಅತಿ ಎತ್ತರದ ಕಟ್ಟಡ ಎಂದು ಕರೆಯಲ್ಪಡುವ ಬುರ್ಜ್ ಖಲೀಫಾವನ್ನು ಏರಿದ ಸಾಹಸವು ಸೇರಿದಂತೆ ಅನೇಕ ಸಾಹಸಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಇತ್ತೀಚೆಗೆ ತಮ್ಮ ವೃತ್ತಿಜೀವನ ಮತ್ತು ತಮ್ಮ ಆ್ಯಕ್ಷನ್ ಚಲನಚಿತ್ರಗಳಲ್ಲಿ ತಮ್ಮದೇ ಆದ ಸಾಹಸಗಳನ್ನು ಸ್ವತಃ ಪ್ರದರ್ಶಿಸುವ ನಿರ್ಧಾರದ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ.


ಇದನ್ನು ಓದಿ : ‘83' Movie Trailer- ಮೈನವಿರೇಳಿಸುವ '83' ಟ್ರೇಲರ್, ಕಪಿಲ್ ದೇವ್ ಪಾತ್ರದಲ್ಲಿ ರಣವೀರ್; ಕನ್ನಡದಲ್ಲಿ ಕಿಚ್ಚನ ವಾಯ್ಸ್

'ದಿ ಗ್ರಹಾಂ ನಾರ್ಟನ್ ಶೋ'ನಲ್ಲಿ ಕಾಣಿಸಿಕೊಂಡಾಗ ಕ್ರೂಸ್ "ನಾನು ತುಂಬಾ ದೈಹಿಕವಾಗಿ ಫಿಟ್ ಆಗಿರುವ ನಟ ಮತ್ತು ನಾನು ಸ್ಟಂಟ್‌ಗಳನ್ನು ಮಾಡಲು ಇಷ್ಟಪಡುತ್ತೇನೆ. ನಾನು ಅದರ ಬಗ್ಗೆ ಸಾಕಷ್ಟು ಅಧ್ಯಯನ ಮಾಡುತ್ತೇನೆ. ಈ ಸಾಹಸಗಳಲ್ಲಿ ನಾನು ಬಹಳಷ್ಟು ಮೂಳೆಗಳನ್ನು ಮುರಿದುಕೊಂಡಿದ್ದೇನೆ" ಎಂದು ಹೇಳಿದರು. ಈಗಾಗಲೇ ಬಂದಿರುವ ಮಿಷನ್​ ಇಂಪಾಸಿಬಲ್​ ಹಲವು ಪಾರ್ಟ್​ಗಳಲ್ಲಿ ಟಾಮ್​ ಕ್ರೂಸ್​ ರಿಯಲ್​ ಸ್ಟಂಟ್​ ಮಾಡಿದ್ದಾರೆ. ರಿಯಲ್​ ಸ್ಟಂಟ್ ಮಾಡುವ ಮೂಲಕ ಸಿನಿರಸಿಕರನ್ನ ಟಾಮ್ ಕ್ರೂಸ್​ ಸೆಳೆಯುತ್ತಾರೆ. ಇದೀಗ ಈ ಸಿನಿಮಾ ಯಾವಾಗ ತೆರೆಕಾಣುತ್ತೆ ಇಡೀ ವಿಶ್ವವೇ ಕಾದು ಕುಳಿತಿದೆ.


First published: