• Home
  • »
  • News
  • »
  • entertainment
  • »
  • Sree Vishnu: ತೆಲುಗು ಯುವ ನಟನ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

Sree Vishnu: ತೆಲುಗು ಯುವ ನಟನ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ನಟ ಶ್ರೀವಿಷ್ಣು

ನಟ ಶ್ರೀವಿಷ್ಣು

ತೆಲುಗು ನಟ ಶ್ರೀವಿಷ್ಣುಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರಗೆ ದಾಖಲಾಗಿದೆ. ಅಲ್ಲದೇ ಅವರಿಗೆ ಡೆಂಗ್ಯೂ ಜ್ವರಕ್ಕೆ ತುತ್ತಾಗಿರುವುದಾಗಿ ತಿಳಿದುಬಂದಿದ್ದು, ಅವರ ಆರೋಗ್ಯದಲ್ಲಿ ಸುಧಾರಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ. 

  • Share this:

ಟಾಲಿವುಡ್​ (Tollywood) ಯುವ ನಟ ಶ್ರೀವಿಷ್ಣು (Sree Vishnu) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಿದ್ದಾಗಿ ತಿಳಿದುಬಂದಿದೆ. ಅವರು ಕೆಲ ದಿನಗಳಿಂದ ತೀವ್ರ ಜ್ವರದಿಂದ (Fever) ಬಳಲುತ್ತಿದ್ದರು ಎಂದು ತಿಳಿದುಬಂದಿದ್ದು, ಈ ಹಿನ್ನಲೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪರೀಕ್ಷೆ ಮಾಡಿದಾಗ ಅವರಿಗೆ ಡೆಂಗ್ಯೂ ಜ್ವರ (Dengue Fever) ಎಂದು ವೈದ್ಯರು ಹೇಳಿದ್ದಾರೆ. ಅಲ್ಲದೇ ಸದ್ಯ ಅವರ ಚೇತರಿಕೆ ಕಾಣುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಹೇಳಲಾಗಿದೆ. ಅವರಿಗೆ ಪ್ಲೇಟ್ ಲೇಟ್ಸ್ ಸಂಖ್ಯೆ ತುಂಬಾ ಕಡಿಮೆ ಆಗಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. 


ಡೆಂಗ್ಯೂ ಜ್ವರಕ್ಕೆ ತುತ್ತಾದ ಶ್ರೀವಿಷ್ಣು:


ತೆಲುಗು ನಟ ಶ್ರೀವಿಷ್ಣುಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೇ ಅವರು ಡೆಂಗ್ಯೂ ಜ್ವರಕ್ಕೆ ತುತ್ತಾಗಿರುವುದಾಗಿ ತಿಳಿದುಬಂದಿದ್ದು, ಅವರ ಆರೋಗ್ಯದಲ್ಲಿ ಸುಧಾರಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ. ಬಿಳಿ ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಕಾಣಿಸಿಕೊಳ್ಳುತ್ತದೆ. ಶೂಟಿಂಗ್ ತೆರಳಿದ್ದ ವೇಳೆ ಶ್ರೀವಿಷ್ಣು ಅವರಿಗೆ ಸೊಳ್ಳೆ ಕಚ್ಚಿದೆ ಎನ್ನಲಾಗಿದೆ. ಅವರ ರಕ್ತದ ಪ್ಲೇಟ್​ಲೆಟ್​ಗಳು ತೀವ್ರ ಗತಿಯಲ್ಲಿ ಕುಸಿದಿತ್ತು ಎಂದು ವೈದ್ಯರು ತಿಳಸಿದ್ದಾರೆ. ಇನ್ನು ಸದ್ಯ ನಟ ಶ್ರೀವಿಷ್ಣು ಅವರು ಕೆಲ ಸಿನಿಮಾಗಳ ಶೂಟಿಂಗ್​ ನಲ್ಲಿ ಬ್ಯುಸಿಯಾಗಿದ್ದಾರೆ.


‘ಬಾನಮ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ:


ಇನ್ನು, ನಟ ಶ್ರೀವಿಷ್ಣು ಅವರು  ‘ಬಾನಮ್’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಈ ಸಿನಿಮಾ 2009ರಲ್ಲಿ ತೆರೆಕಂಡಿತ್ತು. ಇದಾದ ಬಳಿಕ ಅವರು ಹೆಚ್ಚು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಬಂದರು. ಇದಾದ ಬಳಿಕ ಅವರು ‘ಅಪ್ಪಟ್ಲೋ ಒಕಡುಂಡೇವಾಡು’ ಸಿನಿಮಾದ ಮೂಲಕ ಪೂರ್ಣ ಪ್ರಮಾಣ ನಟನಾಗಿ ಕಾಣಿಸಿಕೊಂಡರು. ತೆಲುಗು ಚಿತ್ರರಂಗದಲ್ಲಿ ವಿಶೇಷ ಹೆಸರು ಮಾಡಿರುವ ನಾಯಕ ಶ್ರೀ ವಿಷ್ಣು. ಹಲವು ನಾಯಕರ ಜೊತೆಯೂ ಕೆಲಸ ಮಾಡಿದ್ದಾರೆ.


ಇದನ್ನೂ ಓದಿ: ವಿನೂತನ ಪ್ರಯತ್ನಕ್ಕೆ ಕೈ ಹಾಕಿದ Pushpa 2, ಈ ಬಾರಿ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್


ಶ್ರೀ ವಿಷ್ಣು ಅಭಿನಯದ ಇತ್ತೀಚಿನ ಚಿತ್ರ ಅಲ್ಲೂರಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲಕ್ಕಿ ಮೀಡಿಯಾ ಬ್ಯಾನರ್ ಅಡಿಯಲ್ಲಿ ಬೆಕ್ಕಂ ವೇಣುಗೋಪಾಲ್ ನಿರ್ಮಾಣದ ಈ ಚಿತ್ರವನ್ನು ಪ್ರದೀಪ್ ವರ್ಮಾ ನಿರ್ದೇಶಿಸಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್​ ಬಿಡುಗಡೆ ಆಗಿದ್ದು, ಪೋಸ್ಟರ್​ ನಲ್ಲಿ ಶ್ರೀವಿಷ್ಣು ಖಡಕ್ ಪೊಲೀಸ್ ಆಗಿ ಕಾನಿಸಿಕೊಂಡಿದ್ದಾರೆ. . ಡಾರ್ಕ್ ಶೇಡ್‌ನೊಂದಿಗೆ ಖಾಕಿ ಸಮವಸ್ತ್ರದಲ್ಲಿರುವ ಶ್ರೀವಿಷ್ಣುವಿನ ಪೋಸ್ಟರ್ ನಲ್ಲಿ ಮಿಂಚಿದ್ದಾರೆ.


ವಿಭಿನ್ನ ಸಿನಿಮಾಗಳ ಆಯ್ಕೆ ಮಾಡಿಕೊಳ್ಳುವ ಯುವ ನಟ:


ಯಂಗ್ ಹೀರೋ ಶ್ರೀವಿಷ್ಣು ವಿಶಿಷ್ಟ ಪಾತ್ರಗಳು, ವೈವಿಧ್ಯಮಯ ಕಥಾಹಂದರ, ನಟನೆಗೆ ಅವಕಾಶವಿರುವ ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಹಿಂದಿನ ಚಿತ್ರ ‘ಅರ್ಜುನ ಫಲ್ಗುಣ’ ಅಷ್ಟೊಂದು ಯಶಸ್ಸು ಕಂಡಿರಲಿಲ್ಲ. ಸದ್ಯ ‘ಭಾಲತಂಡನ’ ಎಂಬ ಆ್ಯಕ್ಷನ್ ಸಿನಿಮಾದಲ್ಲಿ ನಟಿಸುತ್ತಿರುವ ಶ್ರೀವಿಷ್ಣು ಇತ್ತೀಚೆಗಷ್ಟೇ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


ಇದನ್ನೂ ಓದಿ: Samantha: ಮತ್ತೆ ಒಂದಾಗುತ್ತಾರಾ ಸಮಂತಾ-ನಾಗ ಚೈತನ್ಯಾ? ಹೊರಬಿತ್ತು ಬಿಗ್​ ಅಪ್​ಡೇಟ್​


ಶ್ರೀವಿಷ್ಣುವಿನಿಂದ ಸಿನಿಮಾ ಬಂದರೆ ಅದೇನೋ ಹೊಸತು ಎಂಬ ನಂಬಿಕೆ ಪ್ರೇಕ್ಷಕರಲ್ಲಿ ಮೂಡಿದೆ. ಕಳೆದ ವರ್ಷ 'ಗಾಲಿ ಸಂಪತ್' ಮತ್ತು 'ರಾಜ ರಾಜ ಚೋರ' ನಂತರ ಕಳೆದ ವರ್ಷ 'ಅರ್ಜುನ ಫಲ್ಗುಣ' ಪ್ರೇಕ್ಷಕರ ಮುಂದೆ ಬಂದಿತ್ತು. ಇತ್ತೀಚೆಗಷ್ಟೇ ‘ಭಾಲ ತಂದನಾನ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.

Published by:shrikrishna bhat
First published: