ಬಾಲಿವುಡ್‌ನಲ್ಲಿ ನವಾಜುದ್ದೀನ್ ಸಿದ್ದಿಕಿ (Nawazuddin First Look Release) ತಮ್ಮದೇ ಒಂದು ವಿಶೇಷ ಛಾಪು ಮೂಡಿಸಿದ್ದಾರೆ. ಸೂಪರ್ ಸ್ಟಾರ್ ಗಳ ಜೊತೆಗೆ ಅಭಿಯಿಸಿದ್ದರೂ ನವಾಜುದ್ದೀನ್ ತಮ್ಮದೇ ಶೈಲಿಯಲ್ಲಿ ಮಿಂಚುತ್ತಲೇ (Venkatesh Movie Saindhav) ಇದ್ದಾರೆ. ಉತ್ತರ ಭಾರತದಲ್ಲಿ ಹೊಸ ಅಲೆಯನ್ನ ಎಬ್ಬಿಸಿದ್ದ ನವಾಜುದ್ದೀನ್ ಸಿದ್ದಿಕಿ, ದಕ್ಷಿಣದತ್ತ ಕೂಡ ಬಂದಿದ್ದಾರೆ. ಟಾಲಿವುಡ್‌ನ ಪ್ಯಾನ್ ಇಂಡಿಯಾ ಸಿನಿಮಾ (Nawazuddin Siddiqui) ಮೂಲಕವೇ ನವಾಜುದ್ದೀನ್ ಹೊಸ ಕಿಕ್ ಕೊಡಲು ಬರುತ್ತಿದ್ದಾರೆ. ಹಾಗೆ ಬರ್ತಿರೋ ಆ ಚಿತ್ರದ ಫಸ್ಟ್ ಲುಕ್ ಇದೀಗ ಹೊರ ಬಿದ್ದಿದೆ. ಇದರಲ್ಲಿ ನವಾಜುದ್ದೀನ್ ಜಬರ್‌ದಸ್ತ್ ಆಗಿಯೇ (Saindhav Movie Updates) ಕಾಣಿಸುತ್ತಿದ್ದಾರೆ. ಇದರ ಸುತ್ತ ಒಂದು ಸ್ಟೋರಿ ಇಲ್ಲಿದೆ ಓದಿ.
ನವಾಜುದ್ದೀನ್ ಸಿದ್ದಿಕಿ ಟಾಲಿವುಡ್ ಸಿನಿಮಾ ಅಪ್‌ಡೇಟ್ಸ್
ನವಾಜುದ್ದೀನ್ ಸಿದ್ದಿಕಿ ಅಭಿನಯದ ಸಿನಿಮಾದ ಮೊದಲ ದಕ್ಷಿಣದ ಸಿನಿಮಾ ಶೀರ್ಷಿಕೆ ವಿಶೇಷವಾಗಿಯೇ ಇದೆ. ಈ ಚಿತ್ರದಲ್ಲಿ ವಿಕ್ಟರ್ ವೆಂಕಟೇಶ್ ಹೀರೋ ಅನ್ನೋದು ಈಗಾಗಲೇ ತಿಳಿದಿದೆ. ನವಾಜುದ್ದೀನ್ ಸಿದ್ದಿಕಿ ಟಾಲಿವುಡ್‌ಗೆ ಬರ್ತಿದ್ದಾರೆ ಅನ್ನೋ ಸುದ್ದಿ ಎಲ್ಲಿಗೂ ಗೊತ್ತೇ ಇದೆ.
ಸೈಂಧವ್ ಸಿನಿಮಾದಲ್ಲಿ ನವಾಜುದ್ದೀನ್ ಲುಕ್ ಹೇಗಿದೆ ?
ಆದರೆ ಈ ಒಂದು ಸಿನಿಮಾದಲ್ಲಿ ನವಾಜುದ್ದೀನ್ ಪಾತ್ರ ಹೇಗಿರುತ್ತದೆ ಅನ್ನುವ ಕುತೂಹಲ ಇತ್ತು. ಅದರ ಬೆನ್ನಲ್ಲಿಯೇ ನವಾಜುದ್ದೀನ್ ಸಿದ್ದಿಕಿ ಪಾತ್ರದ ಒಂದಷ್ಟು ವಿಶೇಷ ಮಾಹಿತಿ ರಿವೀಲ್ ಆಗಿದೆ. ಸಿನಿಮಾ ತಂಡವೇ ಇದನ್ನ ಅಧಿಕೃತವಾಗಿ ಇದನ್ನ ಹೇಳಿಕೊಂಡಿದೆ.
ನವಾಜುದ್ದೀನ್ ಅಧಿಕೃತ ಲುಕ್ ಪೋಸ್ಟರ್ ರಿಲೀಸ್
ಇದರ ಜೊತೆಗೆ ನವಾಜುದ್ದೀನ್ ಲುಕ್ ಇರೋ ಪೋಸ್ಟರ್ ಅನ್ನ ಕೂಡ ಸಿನಿಮಾ ತಂಡ ರಿಲೀಸ್ ಮಾಡಿದೆ. ಈ ಒಂದು ಪೋಸ್ಟರ್‌ನಲ್ಲಿ ನವಾಜುದ್ದೀನ್ ಸೂಪರ್ ಆಗಿಯೇ ಕಾಣಿಸುತ್ತಿದ್ದಾರೆ.
ಕಾರ್ ಬಾನೆಟ್ ಮೇಲೆ ಕುಳಿತು ಲುಕ್ ಕೊಟ್ಟ ನವಾಜುದ್ದೀನ್
ದುಬಾರಿ ಕಾರ್ ಬಾನೆಟ್ ಮೇಲೆ ಕುಳಿತಿರೋ ನವಾಜುದ್ದೀನ್ ಸಿದ್ದಿಕಿ, ರಂಗೀನ್ ಶರ್ಟ್ ತೊಟ್ಟು, ಬೀಡಿ ಸೇದುತ್ತಲೇ ಮಸ್ತ್ ಲುಕ್ ಕೊಟ್ಟಿದ್ದಾರೆ. ಅಲ್ಲಿಗೆ ಇದು ಸೈಂಧವ್ ಸಿನಿಮಾದ ನವಾಜುದ್ದೀನ್ ಲುಕ್ ಅನ್ನೋದು ಸ್ಪಷ್ಟವಾಗಿದೆ.
ಸೈಂಧವ್ ಸಿನಿಮಾದಲ್ಲಿ ನವಾಜುದ್ದೀನ್ ಪಾತ್ರದ ಹೆಸರೇನು ?
ಇನ್ನು ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಪಾತ್ರದ ಹೆಸರೇನು ಅನ್ನೋದು ಈಗ ರಿವೀಲ್ ಆಗಿದೆ. ವಿಕಾಸ್ ಮಲಿಕ್ ಅನ್ನುವ ಪಾತ್ರದಲ್ಲಿ ನವಾಜುದ್ದೀನ್ ಇಲ್ಲಿ ಅಭಿನಯಿಸಿದ್ದಾರೆ.
ನವಾಜುದ್ದೀನ್ ನಟನೆ ಟಾಲಿವುಡ್ ಪ್ಯಾನ್ ಇಂಡಿಯಾ ಸಿನಿಮಾ
ಸಿನಿಮಾದಲ್ಲಿ ವಿಕ್ಟರಿ ವೆಂಕಟೇಶ್ ಎದುರು ಟಕ್ಕರ್ ಕೊಡಲಿರೋ ವಿಕಾಸ್ ಮಲಿಕ್, ಬೇರೆ ಗತ್ತಿನಲ್ಲಿ ಇಲ್ಲಿ ಕಾಣಿಸುತ್ತಿದ್ದಾರೆ. ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿರೋ ಈ ಚಿತ್ರವನ್ನ ಶೈಲೇಶ್ ಕೋಲನು ನಿರ್ದೇಶನ ಮಾಡಿದ್ದಾರೆ.
ಸೈಂಧವ್ ಸಿನಿಮಾ ರಿಲೀಸ್ ಆಗೋದು ಯಾವಾಗ ?
ಇದೇ ವರ್ಷ ಡಿಸೆಂಬರ್-22 ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ತಂಡ ಈಗಾಗಲೇ ಎಲ್ಲ ತಯಾರಿ ನಡೆಸಿದೆ. ಪ್ರಚಾರದ ಕೆಲಸವನ್ನ ಕೂಡ ಆರಂಭಿಸಲಾಗಿದೆ. ಕನ್ನಡದ ನಟಿ ಶ್ರದ್ದಾ ಶ್ರೀನಾಥ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಸೈಂಧವ್ ಚಿತ್ರದಲ್ಲಿ ಯಾರೆಲ್ಲ ಇದ್ದಾರೆ ಗೊತ್ತೇ ?
ಶ್ರದ್ದಾ ಶ್ರೀನಾಥ್ ಅಲ್ಲದೇ ಈ ಚಿತ್ರದಲ್ಲಿ ರುಹಾನಿ ಶರ್ಮಾ ಅಭಿನಯಿಸಿದ್ದಾರೆ. ಡಾಕ್ಟರ್ ರೇಣು ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಆ್ಯಂಡ್ರಿಯಾ ಜೆರೆಮಿಯಾ ಕೂಡ ನಟಿಸಿದ್ದು ಜಾಸ್ಮಿನ್ ಹೆಸರಿನ ಪಾತ್ರವನ್ನ ನಿರ್ವಹಿಸಿದ್ದಾರೆ.
ಇದನ್ನೂ ಓದಿ: Rishab Shetty: ಫ್ಯಾಮಿಲಿ ಸಮೇತ ಧರ್ಮಸ್ಥಳಕ್ಕೆ ರಿಷಬ್ ಶೆಟ್ಟಿ ಭೇಟಿ, ಧರ್ಮಾಧಿಕಾರಿಗಳ ಆಶೀರ್ವಾದ ಪಡೆದ ದಂಪತಿ
ಇನ್ನುಳಿದಂತೆ ಸೈಂಧವ್ ಸಿನಿಮಾಕ್ಕೆ ಸಂತೋಷ್ ನಾರಾಯಣ್ ಸಂಗೀತ ಕೊಟ್ಟಿದ್ದಾರೆ. ಎಸ್.ಮಣಿಕಂದನ್ ಛಾಯಾಗ್ರಹಣ ಮಾಡಿದ್ದಾರೆ. ಗ್ಯಾರಿ ಬಿ.ಎಚ್. ಸಂಕಲನ ಮಾಡುತ್ತಿದ್ದಾರೆ. ಉಳಿದಂತೆ ಚಿತ್ರದ ಬಗ್ಗೆ ಒಂದು ಕುತೂಹಲ ಇದ್ದೇ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ