news18-kannada Updated:October 4, 2020, 2:34 PM IST
ಸಾಂದರ್ಭಿಕ ಚಿತ್ರ
ಕೊರೋನಾ ವೈರಸ್ ಸಿನಿಮಾ ರಂಗಕ್ಕೆ ದೊಡ್ಡ ಹೊಡೆತವನ್ನೇ ನೀಡಿದೆ. ಈ ಸೋಂಕಿನಿಂದಾಗಿ ಕಳೆದ ಏಳು ತಿಂಗಳಿಂದ ಚಿತ್ರಮಂದಿರ ತೆಗೆದಿಲ್ಲ. ಈ ವೈರಸ್ ಅಬ್ಬರಕ್ಕೆ ಕನ್ನಡ ಮಾತ್ರವಲ್ಲ ತೆಲುಗು, ತಮಿಳು, ಹಿಂದಿ, ಇಂಗ್ಲಿಷ್ ಸೇರಿ ಎಲ್ಲಾ ಸಿನಿಮಾ ರಂಗವೂ ತತ್ತರಿಸಿದೆ. ಕಳೆದ ಏಳು ತಿಂಗಳಿನಿಂದ ಥಿಯೇಟರ್ ಗಳು ಬಂದ್ ಆಗಿದ್ದವು. ಹೀಗಾಗಿ ಹೊಸ ಸಿನಿಮಾಗಳ ರಿಲೀಸ್ ಆಗಿರಲಿಲ್ಲ. ಬಾಕ್ಸ್ಆಫೀಸ್ ವ್ಯವಹಾರ ಕೂಡ ನಿಂತು ಹೋಗಿತ್ತು. ಈಗ ಅಕ್ಟೊಬರ್ 15 ರಿಂದ ಸಿನಿಮಾ ಮಂದಿರ ಸಿನಿ ಪ್ರಿಯರ ಪ್ರವೇಶಕ್ಕೆ ಸ್ವಾಗತ ಕೋರಲು ಸಜ್ಜಾಗಿವೆ. ಹೀಗಾಗಿ ಸಿನಿಮಾ ಮಂದಿಯಲ್ಲೂ ಸಹ ಒಂದಷ್ಟು ಉತ್ಸಾಹ, ಹುರುಪು ಮೂಡಿದೆ.
ಕಳೆದ ಏಳು ತಿಂಗಳಿನಿಂದ ಚಿತ್ರರಂಗ ಸ್ಥಬ್ದವಾಗಿದ್ದರಿಂದ ಇಂಡಸ್ಟ್ರಿಯಲ್ಲಿ ಹಣ ಓಡಾಡುತ್ತಿಲ್ಲ. ಹೊಸದಾಗಿ ಹೂಡಿಕೆದಾರರು ಸಹ ಸಿನಿಮಾರಂಗದತ್ತ ಬರಲು ಹಿಂಜರಿತಿದ್ದಾರೆ. ಇದರಿಂದ ಚಿತ್ರರಂಗವನ್ನೇ ಅವಲಂಬಿಸಿರೋ ಕಲಾವಿದರು ತಂತ್ರಜ್ಞರು ಆತಂಕದಲ್ಲಿದ್ದಾರೆ.
ಈ ಎಲ್ಲಾ ಕಾರಣಗಳಿಂದ ತೆಲುಗು ನಿರ್ಮಾಪಕರು ಒಂದು ನಿರ್ಣಯಕ್ಕೆ ಬಂದಿದ್ದು, ಕಲಾವಿದರು ಹಾಗೂ ತಂತ್ರಜ್ಞರು ತಾವು ತೆಗೆದುಕೊಳ್ಳೋ ಸಂಭಾವನೆಯಲ್ಲಿ ಶೇಕಡ 20 ರಷ್ಟು ಕಡಿಮೆ ಮಾಡಿಕೊಳ್ಳಬೇಕು ಅಂತ ನಿಯಮ ರೂಪಿಸಿದೆ.
ಟಾಲಿವುಡ್ನಲ್ಲಿ ಈ ಬೆಳವಣಿಗೆ ನಡೆದ ಬೆನ್ನಲ್ಲೇ ಕನ್ನಡದಲ್ಲೂ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕನ್ನಡ ಚಿತ್ರರಂಗದಲ್ಲೂ ಇದೇ ರೀತಿ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ, ಹೀಗಾಗಿ ಕಲಾವಿದರು ಹಾಗೂ ತಂತ್ರಜ್ಞರ ಸಂಭಾವನೆ ಕಡಿಮೆ ಮಾಡಿಕೊಳ್ಳೋ ಬಗ್ಗೆ ನಿರ್ಮಾಪಕರ ಸಂಘ ಮನವಿ ಮಾಡಿಕೊಳ್ಳೋ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಮೂಲಕ ನಿರ್ಮಾಪಕರಿಗೆ ಆಗುತ್ತಿರುವ ಹೊರೆಯನ್ನು ತಪ್ಪಿಸಲು ಯೋಜನೆ ರೂಪಿಸಲಾಗಿದೆ.
Published by:
Rajesh Duggumane
First published:
October 4, 2020, 2:34 PM IST