• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • RRR ಸಿನಿಮಾ ಗೆದ್ದಿದ್ದಕ್ಕೆ ಏನ್​ ಮಾಡಿದ್ದಾರೆ ನೋಡಿ Ram Charan​.. ನಿಜಕ್ಕೂ ನೀವು `ಗೋಲ್ಡನ್​ ಮ್ಯಾನ್​’!

RRR ಸಿನಿಮಾ ಗೆದ್ದಿದ್ದಕ್ಕೆ ಏನ್​ ಮಾಡಿದ್ದಾರೆ ನೋಡಿ Ram Charan​.. ನಿಜಕ್ಕೂ ನೀವು `ಗೋಲ್ಡನ್​ ಮ್ಯಾನ್​’!

ಚಿನ್ನದ ನಾಣ್ಯ ಕೊಟ್ಟ ರಾಮ್​ಚರಣ್​

ಚಿನ್ನದ ನಾಣ್ಯ ಕೊಟ್ಟ ರಾಮ್​ಚರಣ್​

ಈ ರೀತಿಯ ಬಿಗ್​ ಬಜೆಟ್ ಸಿನಿಮಾಗಳು ಗೆದ್ದರೆ,  ಒಂದು ಕಾರ್ಯಕ್ರಮ ಮಾಡಿ ಸಿನಿಮಾಗಾಗಿ ದುಡಿದವರಿಗೆ ಸನ್ಮಾನ ಮಾಡುವುದು ಕಾಮನ್​. ಅದು ಆ ಸಿನಿಮಾದ ನಿರ್ಮಾಪಕರಿಗೆ ಬಿಟ್ಟಿದ್ದು. ಆದರೆ, ಇಲ್ಲಿ ಆರ್​ಆರ್​ಆರ್​ ಸಿನಿಮಾ ಸೂಪರ್​ ಹಿಟ್​ ಆಗಿದ್ದಕ್ಕೆ ರಾಮ್​ ಚರಣ್​ ಏನ್​ ಮಾಡಿದ್ದಾರೆ ಅಂತ ಮುಂದೆ ನೋಡಿ

ಮುಂದೆ ಓದಿ ...
  • Share this:

‘ಆರ್​ಆರ್​ಆರ್​’(RRR) ಭಾರತೀಯ ಸಿನಿಮಾ ಇಡೀ ವಿಶ್ವದಲ್ಲೇ ಅಬ್ಬರಿಸುತ್ತಿದೆ. ಈ ಹಿಂದೆ ಭಾರತೀಯ ಸಿನಿಮಾಗಳು ಮಾಡಿದ್ದ ದಾಖಲೆ(Record)ಯನ್ನು ಪುಡಿ ಪುಡಿ ಮಾಡಿ, ಮತ್ತೊಂದು ಹೊಸ ದಾಖಲೆ ಮಾಡುವಲ್ಲಿ ಮುನ್ನುಗ್ಗುತ್ತಿದೆ. ಆರ್​ಆರ್​ಆರ್​ ಮೋಡಿಗೆ ಫ್ಯಾನ್ಸ್(Fans)​ ಫಿದಾ ಆಗಿದ್ದಾರೆ. ಮತ್ತೆ ಮತ್ತೆ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ನೋಡುತ್ತಿದ್ದಾರೆ. ಸಿನಿಮಾ ಮಾಂತ್ರಿಕ ರಾಜಮೌಳಿ(Rajamouli) ಮ್ಯಾಜಿಕ್(​Magic)ಗೆ ಎಲ್ಲರೂ ಮರುಳಾಗಿದ್ದಾರೆ. ಕೇವಲ ಭಾರತದಲ್ಲಷ್ಟೇ ಅಲ್ಲದೇ ಇಡೀ ವಿಶ್ವದಲ್ಲೇ ಆರ್​ಆರ್​ಆರ್​ ಬಾಕ್ಸ್ ಆಫೀಸ್​ ಲೂಟಿ ಮಾಡುತ್ತಿದೆ. ರಾಮ್​ಚರಣ್​(Ramcharan) ಹಾಗೂ ಜೂನಿಯರ್​ ಎನ್​ಟಿಆರ್​(Junior NTR) ದೋಸ್ತಿಗೆ ಅಭಿಮಾನಿಗಳು ದಂಗಾಗಿ ಹೋಗಿದ್ದಾರೆ.  ಬಾಕ್ಸ್ ಆಫೀಸ್(Box Office) ನಲ್ಲೂ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. ಈಗಾಗಲೇ ರಾಜಮೌಳಿ ಸಿನಿಮಾ 850 ಕೋಟಿ ರೂಪಾಯಿ ಕಲೆಕ್ಷನ್ ದಾಟಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ.  ಒಂದು ಸಾವಿರ ಕೋಟಿ ಕಲೆಕ್ಷನ್​ನತ್ತ ಜಕ್ಕಣ್ಣನ ಸಿನಿಮಾ ಮುನ್ನುಗುತ್ತಿದೆ. 


ಸಿನಿಮಾ ಗೆದ್ದಿದ್ದಕ್ಕೆ ರಾಮ್​ಚರಣ್​ ಮಾಡಿದ್ದೇನು ಗೊತ್ತಾ?


ಈ ರೀತಿಯ ಬಿಗ್​ ಬಜೆಟ್ ಸಿನಿಮಾಗಳು ಗೆದ್ದರೆ,  ಒಂದು ಕಾರ್ಯಕ್ರಮ ಮಾಡಿ ಸಿನಿಮಾಗಾಗಿ ದುಡಿದವರಿಗೆ ಸನ್ಮಾನ ಮಾಡುವುದು ಕಾಮನ್​. ಅದು ಆ ಸಿನಿಮಾದ ನಿರ್ಮಾಪಕರಿಗೆ ಬಿಟ್ಟಿದ್ದು. ಆದರೆ, ಇಲ್ಲಿ ಆರ್​ಆರ್​ಆರ್​ ಸಿನಿಮಾ ಸೂಪರ್​ ಹಿಟ್​ ಆಗಿದ್ದಕ್ಕೆ ರಾಮ್​ ಚರಣ್​ ಏನ್​ ಮಾಡಿದ್ದಾರೆ ನೋಡಿ? ನಿಮಗೆ ಈ ವಿಚಾರ ಗೊತ್ತಾದರೆ ನೀವು ಸಂತಸ ಪಡುತ್ತೀರಿ. ಈ ಕೆಲಸ ಮಾಡಿ ಕೇವಲ ತೆರೆ ಹಿಂದೆ ಹೀರೋ ಆದರೆ ಸಾಲು, ತೆರೆ ಹಿಂದೆಯೂ ಹೇಗೆ ಇರಬೇಕು ಎಂಬುದನ್ನು ರಾಮ್​ ಚರಣ್​ ತೋರಿಸಿಕೊಟ್ಟಿದ್ದಾರೆ. ಅಷ್ಟಕ್ಕೂ ರಾಮ್​ಚರಣ ್​ ಮಾಡಿದ್ದೇನು ಗೊತ್ತಾ? ಮುಂದೆ ನೋಡಿ


ಚಿತ್ರಕ್ಕಾಗಿ ದುಡಿದವರಿಗೆ ಗೋಲ್ಡ್​ ಕಾಯಿನ್​ ಕೊಟ್ಟ ರಾಮ್​!


ಹೌದು, ಇದು ನಿಜ. ಆರ್​ಆರ್​ಆರ್ ಸಿನಿಮಾ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಾಗಿ ಹಣ ಸಂಪಾದಿಸಿದೆ ಎಂದು ಸಿನಿಪಂಡಿತರು ಹೇಳುತ್ತಿದ್ದಾರೆ. ಕೇವಕ ನಿರ್ಮಾಪಕರ ಜೇಬು ತುಂಬಿದರೆ ಸಾಲದು. ಈ ಸಿನಿಮಾಗಾಗಿ ಹಗಲಿರುಳು ದುಡಿದ ಪ್ರತಿಯೊಬ್ಬರಿಗೂ ಈ ಗೆಲುವು ಸಲ್ಲಬೇಕು. ಹೀಗಾಗಿ ರಾಮ್​ಚರಣ್​ ಚಿತ್ರತಂಡದ ಪ್ರತಿಯೊಬ್ಬರಿಗೂ ಅಂದಾಜು 9 ರಿಂದ 10 ಗ್ರಾಂ ಚಿನ್ನದ ಕಾಯಿನ್​ ಕೊಟ್ಟಿದ್ದಾರೆ. ಈ  ವಿಚಾರ ತಿಳಿದು ರಾಮ್​ಚರಣ್​ ಅಭಿಮಾನಿಗಳು ಫುಲ್ ದಿಲ್​ ಖುಷ್​ ಆಗಿದ್ದಾರೆ.



ಇದನ್ನೂ ಓದಿ: ಯುಕೆಯಲ್ಲಿ ಕೆಜಿಎಫ್​ 2 ಟಿಕೆಟ್ ಸೋಲ್ಡ್​ಔಟ್​​, ಇದು ಕೇವಲ ಆರಂಭ.. ಪಿಕ್ಚರ್ ಅಭಿ ಬಾಕಿ ಹೈ!


ರಾಮ್​ಚರಣ್​ ‘ಗೋಲ್ಡನ್​ ಮ್ಯಾನ್​’ ಎಂದ ಫ್ಯಾನ್ಸ್​


ಹೌದು, ಆರ್​ಆರ್​ಆರ್​ ಚಿತ್ರದ ಪ್ರತಿಯೊಬ್ಬ ಸದ್ಯಸರಿಗೂ ರಾಮ್​ಚರಣ್​ ಗೋಲ್ಡ್​ ಕಾಯಿನ್​ ನೀಡಿದ್ದಾರೆ. ಒಬ್ಬ ನಟ ತೆರೆ ಮೇಲೆ ನಾಯಕನಾದರೆ ಸಾಲದು, ನಿಜ ಜೀವನದಲ್ಲೂ ಹೇಗಿರಬೇಕು ಎಂದು ತೋರಿಸಿಕೊಟ್ಟಿದ್ದಾರೆ. ಇನ್ನೂ ರಾಮ್​ಚರಣ್​ರ ಈ ಕಾರ್ಯ ಕಂಡು ಅಭಿಮಾನಿಗಳು ಅವರನ್ನು ಕೊಂಡಾಡಿದ್ದಾರೆ. ಅಪ್ಪನ ಹಾಗೇ ಮಕ್ಕಳು ಎಂದು ಕಮೆಂಟ್ ಮಾಡುತ್ತಿದ್ದಾರೆ.


ಇದನ್ನೂ ಓದಿ:ಬಾಕ್ಸ್​ ಆಫೀಸ್​ ಲೂಟಿ ಮಾಡಿದ `ಆರ್​ಆರ್​ಆರ್​’.. ಸಾವಿರ ಕೋಟಿ ಕಲೆಕ್ಷನ್​​ಗೆ ಇನ್ನೆಷ್ಟು ಬಾಕಿ?


ಮೂರನೇ ವಾರದಲ್ಲಿ 1000 ಕೋಟಿ ಕ್ಲಬ್​!


ಮೂರನೇ ವಾರದ ಪ್ರಾರಂಭದಲ್ಲಿ ‘ಆರ್​ಆರ್​ಆರ್​’ 1000 ಕೋಟಿ ಕ್ಲಬ್ ಸೇರಬಹುದು ಎನ್ನುವುದು ಸಿನಿ ಪಂಡಿತರ ಅಂದಾಜು. ಎರಡನೇ ವಾರದಲ್ಲಿ ಶುಕ್ರವಾರ ಸುಮಾರು ₹ 41 ಕೋಟಿ ಹಾಗೂ ಶನಿವಾರ ₹ 68.18 ಕೋಟಿಯನ್ನು ಚಿತ್ರ ಗಳಿಸಿದೆ. ಪ್ರಸ್ತುತ 800 ಕೋಟಿ ಕ್ಲಬ್ ಸೇರಿರುವ ‘ಆರ್​ಆರ್​ಆರ್’ ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಗಳಿಸಿದ ಸಾರ್ವಕಾಲಿಕ ಚಿತ್ರಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

Published by:ವಾಸುದೇವ್ ಎಂ
First published: