ಹೊಸ ದಾಖಲೆಗಳಿಗೆ ಮುನ್ನುಡಿ ಬರೆದ `ಅಖಂಡ’: ಬಾಲಯ್ಯನ ಆರ್ಭಟಕ್ಕೆ ರೆಕಾರ್ಡ್​ಗಳೇ ಚಿಂದಿ ಚಿಂದಿ!

ಬೋಯಪಟಿ ಶ್ರೀನು ನಿರ್ದೇಶನದ ‘ಅಖಂಡ’ ಡಿಸೆಂಬರ್​​ನಲ್ಲಿ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ದಾಖಲೆ ಬರೆದಿದೆ. ಆಂಧ್ರಪ್ರದೇಶದಲ್ಲಿ ‘ಅಖಂಡ’ ಸಿನಿಮಾ ಗಳಿಕೆ ₹ 60 ಕೋಟಿ ದಾಟಿದ್ದರೆ, ಜಗತ್ತಿನ ಒಟ್ಟಾರೆ ಗಳಿಕೆ ₹ 100 ಕೋಟಿ ದಾಟಿದೆ ಎನ್ನುತ್ತಿದ್ದಾರೆ ಬಾಕ್ಸಾಫೀಸ್ ಪಂಡಿತರು.

ಅಖಂಡ ಚಿತ್ರದ ಪೋಸ್ಟರ್​​

ಅಖಂಡ ಚಿತ್ರದ ಪೋಸ್ಟರ್​​

  • Share this:
ನಂದಮೂರಿ ಬಾಲಕೃಷ್ಣ (Nandamuri Balakrishna) ಅಭಿನಯದ 'ಅಖಂಡ' (Akhanda) ಚಿತ್ರ ದಿನೇ ದಿನೇ ಬಾಕ್ಸಾಫೀಸಿ (Box Office)ನಲ್ಲಿ ಹೊಸ ಇತಿಹಾಸವನ್ನು ಬರೆಯುತ್ತಿದೆ. ಜನ ಮುಗಿದು ಬಿದ್ದು ಅಖಂಡ ನನ್ನ ನೋಡುತ್ತಿದ್ದಾರೆ. 'ಅಘೋರ'ನ ಪಾತ್ರದಲ್ಲಿ ನಂದಮೂರಿ ಬಾಲಕೃಷ್ಣ ಅವರ ಅಭಿನಯಕ್ಕೆ ವಿಮರ್ಶಕರು ಮತ್ತು ಜನಸಾಮಾನ್ಯರಿಂದ ವ್ಯಾಪಕವಾದ ಪ್ರಶಂಸೆ ಕೂಡ ಸಿಗುತ್ತಿದೆ. ಚಿತ್ರದ ಬಗ್ಗೆ ಮೌತ್ ಪಬ್ಲಿಸಿಟಿ ತುಂಬಾನೇ ವ್ಯಾಪಿಸುತ್ತಿದೆ. ಇಷ್ಟು ವರ್ಷ ಚಿತ್ರಮಂದಿರ (Theater)ಗಳ ಕಡೆ ಮುಖ ಮಾಡದವರು ಕೂಡ ಥಿಯೇಟರ್​ಗೆ ಬಂದು ‘ಅಖಂಡ’ ಸಿನಿಮಾ ನೋಡಿ ಜೈ ಬಾಲಯ್ಯ (Jai Balayya) ಅಂತಿದ್ದಾರೆ. ವಿದೇಶಗಳಲ್ಲೂ ಅಖಂಡನ ಹವಾ ಜೋರಾಗಿದೆ. ಟಾಲಿವುಡ್​ ಬಾಕ್ಸಾಫೀಸ್​ ಉಡೀಸ್ ಆಗಿದೆ. ಹಿಂದೆಂದೂ ಕಾಣಿಸಿರದ ಪಾತ್ರದಲ್ಲಿ ಬಾಲಯ್ಯ ಕಾಣಿಸಿಕೊಂಡಿದ್ದು, ಇವರನ್ನು ನೋಡಿ ಅಭಿಮಾನಿಗಳು ಸಖತ್​ ಥ್ರಿಲ್ (Thrill)​ ಆಗಿದ್ದಾರೆ. ವಿದೇಶಗಳಲ್ಲೂ ಕೂಡ ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿದೆ. ಇದಲ್ಲದೇ ಚಿತ್ರವು 5 ವರ್ಷ ಹಳೆಯ ದಾಖಲೆಯೊಂದನ್ನು ಮುರಿದು, ಅಪರೂಪದ ಸಾಧನೆ ಮಾಡಿದೆ. ಈ ಸಾಧನೆ ಕಂಡು ಫ್ಯಾನ್ಸ್​ ಥ್ರಿಲ್​ ಆಗಿದ್ದಾರೆ. ಯಾರೂ ಊಹಿಸದಂತ ದಾಖಲೆಗಳನ್ನು ನಂದಮೂರಿ ಬಾಲಕೃಷ್ಣ ಅಭಿನಯದ ಅಖಂಡ ಸಿನಿಮಾ ಮಾಡುತ್ತಿದೆ. ಪ್ರತಿದಿನ ಹೊಸ ರೆಕಾರ್ಡ್​ಗಳನ್ನು ಸೃಷ್ಟಿಸುತ್ತಿದೆ. 

ಡಿಸೆಂಬರ್​ನಲ್ಲಿ ಅತ್ಯಂತ ಹೆಚ್ಚು ಕಲೆಕ್ಷನ್​ ಮಾಡಿದ ಚಿತ್ರ

ಬೋಯಪಟಿ ಶ್ರೀನು (Boyapati srinu) ನಿರ್ದೇಶನದ ‘ಅಖಂಡ’ ಡಿಸೆಂಬರ್​​ನಲ್ಲಿ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ದಾಖಲೆ ಬರೆದಿದೆ. ಈ ಹಿಂದೆ 2016ರಲ್ಲಿ ತೆರೆಕಂಡಿದ್ದ ರಾಮ್​ ಚರಣ್ (Ram Charan) ನಟನೆಯ ‘ಧ್ರುವ’ (Dhruva) ಬಾಕ್ಸಾಫೀಸ್​ನಲ್ಲಿ ₹ 58 ಕೋಟಿ ಬಾಚಿಕೊಂಡಿತ್ತು. ಅಲ್ಲದೇ ಡಿಸೆಂಬರ್​ನಲ್ಲಿ ಅತ್ಯಂತ ಹೆಚ್ಚು ಗಳಿಸಿದ ಚಿತ್ರ ಎಂದು ದಾಖಲೆ ಬರೆದಿತ್ತು. ಆದರೆ ಇದೀಗ ಬಾಲಕೃಷ್ಣ ನಟನೆಯ ಚಿತ್ರ ಆ ದಾಖಲೆಯನ್ನು ಮುರಿದಿದ್ದು, ನಂಬರ್ 1 ಪಟ್ಟಕ್ಕೇರಿದೆ. ‘ಅಖಂಡ’ ಚಿತ್ರ ಇದುವರೆಗೆ ಬರೋಬ್ಬರಿ ₹ 60 ಕೋಟಿ ಗಳಿಕೆ ಮಾಡಿದೆ. ಅಚ್ಚರಿಯ ವಿಚಾರವೆಂದರೆ ಹೆಚ್ಚುವರಿ ಪ್ರದರ್ಶನ ಅಥವಾ ವಿಶೇಷ ಪ್ರದರ್ಶನಗಳಿಲ್ಲದೇ ಕೇವಲ ಮಾಮೂಲಿ ಪ್ರದರ್ಶನಗಳಲ್ಲಿಯೇ ಈ ಚಿತ್ರ ಇಷ್ಟು ಗಳಿಕೆ ಮಾಡಿದೆ.

ಇದನ್ನು ಓದಿ : ಮತ್ತೆ ಎಡವಟ್​ ಮಾಡಿಕೊಂಡ ಪಾಯಲ್​ ರಜಪೂತ್​: ರೀಲ್ಸ್​ ಮಾಡೋ ವೇಳೆ ಎಕ್ಸ್​ಪೋಸ್​!

ಅಘೋರಿಯಾಗಿ ಅಬ್ಬರಿಸಿರುವ ಬಾಲಯ್ಯ!

‘ಅಖಂಡ’ದಲ್ಲಿ ಬಾಲಕೃಷ್ಣ ಅಘೋರನಾಗಿ ಕಾಣಿಸಿಕೊಂಡಿದ್ದಾರೆ. ವಿಮರ್ಶಕರೂ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದು, ಬಾಲಕೃಷ್ಣ ಅಭಿನಯವನ್ನು ಹೊಗಳಿದ್ದಾರೆ. ಅವರಲ್ಲದೇ ಬೇರೆ ಯಾವ ನಟನೂ ಆ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವೇ ಇಲ್ಲ ಎನ್ನುವುದು ಅಭಿಮಾನಿಗಳ ಮಾತು. ಬಾಲಕೃಷ್ಣ ಅವರ 'ಅಖಂಡ' ಸಿನಿಮಾ ಮತ್ತೊಂದು ದಾಖಲೆ ಬರೆದಿದೆ. 2022 ರಲ್ಲಿ ವಿದೇಶದಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಸಿನಿಮಾ ಎನಿಸಿಕೊಂಡಿದೆ. ಬೋಯಪಾಟಿ ನಿರ್ದೇಶನದಲ್ಲಿ ಬಾಲಕೃಷ್ಣ ನಾಯಕನಾಗಿ ನಟಿಸಿರುವ ‘ಅಖಂಡ’ ಹಳ್ಳಿಯ ಮಾಸ್ ಸಿನಿಮಾ ತೆಲುಗು ರಾಜ್ಯಗಳು ಹಾಗೂ ಯುಎಸ್ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ.

ಇದನ್ನು ಓದಿ : ಕತ್ರಿನಾ ಮತ್ತು ವಿಕ್ಕಿ ಪ್ರಿ-ವೆಡ್ಡಿಂಗ್ ಫೋಟೋ ಶೂಟ್‌ನಲ್ಲಿ ಏನೇನಿದೆ ಗೊತ್ತೇ?

100 ಕೋಟಿ ಕ್ಲಬ್​ ಸೇರಿದ ‘ಅಖಂಡ’!

ಆಂಧ್ರಪ್ರದೇಶದಲ್ಲಿ ‘ಅಖಂಡ’ ಸಿನಿಮಾ ಗಳಿಕೆ ₹ 60 ಕೋಟಿ ದಾಟಿದ್ದರೆ, ಜಗತ್ತಿನ ಒಟ್ಟಾರೆ ಗಳಿಕೆ ₹ 100 ಕೋಟಿ ದಾಟಿದೆ ಎನ್ನುತ್ತಿದ್ದಾರೆ ಬಾಕ್ಸಾಫೀಸ್ ಪಂಡಿತರು. ‘ಅಖಂಡ’ ವಿದೇಶದಲ್ಲೂ ಸೇರಿದಂತೆ ₹ 100 ಕೋಟಿ ಕ್ಲಬ್​ಗೆ ಸೇರಿರುವುದು ಬಾಲಕೃಷ್ಣ ನಟನೆಯ ಮೊದಲ ಚಿತ್ರವಾಗಿದೆ. ಅಲ್ಲದೇ ಕೊರೊನಾ ಎರಡನೇ ಅಲೆಯ ನಂತರ ತೆರೆಕಂಡ ತೆಲುಗು ಚಿತ್ರಗಳಲ್ಲಿ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ದಾಖಲೆಯೂ ‘ಅಖಂಡ’ ಪಾಲಾಗಿದೆ. ಇನ್ನೂ  ಮತ್ತೊಂದು ತೆಲುಗು ಸಿನಿಮಾ ಹೊಸ ದಾಖಲೆ ನಿರ್ಮಿಸಲು ಡಿಸೆಂಬರ್ 17 ರಂದು ಬಿಡುಗಡೆಯಾಗುತ್ತಿದೆ. ಅಲ್ಲು ಅರ್ಜುನ್​ ನಟಿಸಿರುವ ‘ಪುಷ್ಪ’ ಸಿನಿಮಾ ಎಲ್ಲ ದಾಖಲೆಗಳನ್ನು ಉಡೀಸ್​ ಮಾಡುವುದರಲ್ಲಿ ಅನುಮಾನ ಇಲ್ಲ ಅಂತಿದ್ದಾರೆ ಫ್ಯಾನ್ಸ್​.

Published by:Vasudeva M
First published: