Puneeth Rajkumar Funeral: ಅಂತಿಮ ನಮನ ಸಲ್ಲಿಸಿದ ಟಾಲಿವುಡ್ ಸ್ಟಾರ್​ಗಳು: ಕಣ್ಣೀರಿಟ್ಟ ನಟ ಬಾಲಕೃಷ್ಣ

ತೆಲುಗಿನ ಸ್ಟಾರ್ ನಟರಾದ ಬಾಲಕೃಷ್ಣ, ರಾಣಾ ದಗ್ಗುಬಾಟಿ, ನರೇಶ್​, ಪ್ರಭುದೇವ, ನಿರ್ದೇಶಕ ಹಾಗೂ ನಟ ಶಿವ ಬಾಲಾಜಿ ಸಹ ಬೆಂಗಳೂರಿನಗೆ ಬಂದಿದ್ದು, ಪುನೀತ್​ ರಾಜ್​ಕುಮಾರ್​ ಅವರ ಅಂತಿಮ ದರ್ಶನ ಪಡೆದಿದ್ದಾರೆ.

ತೆಲುಗಿನ ಸ್ಟಾರ್ ನಟರಾದ ಬಾಲಕೃಷ್ಣ, ರಾಣಾ ದಗ್ಗುಬಾಟಿ, ನರೇಶ್​, ಪ್ರಭುದೇವ, ನಿರ್ದೇಶಕ ಹಾಗೂ ನಟ ಶಿವ ಬಾಲಾಜಿ ಸಹ ಬೆಂಗಳೂರಿನಗೆ ಬಂದಿದ್ದು, ಪುನೀತ್​ ರಾಜ್​ಕುಮಾರ್​ ಅವರ ಅಂತಿಮ ದರ್ಶನ ಪಡೆದಿದ್ದಾರೆ.

ತೆಲುಗಿನ ಸ್ಟಾರ್ ನಟರಾದ ಬಾಲಕೃಷ್ಣ, ರಾಣಾ ದಗ್ಗುಬಾಟಿ, ನರೇಶ್​, ಪ್ರಭುದೇವ, ನಿರ್ದೇಶಕ ಹಾಗೂ ನಟ ಶಿವ ಬಾಲಾಜಿ ಸಹ ಬೆಂಗಳೂರಿನಗೆ ಬಂದಿದ್ದು, ಪುನೀತ್​ ರಾಜ್​ಕುಮಾರ್​ ಅವರ ಅಂತಿಮ ದರ್ಶನ ಪಡೆದಿದ್ದಾರೆ.

  • Share this:
ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರು ತೆಲುಗು ಸಿನಿಮಾಗಳಲ್ಲಿ ನಟಿಸದಿದ್ದರೂ ಅವರ ಚಿತ್ರಗಳು ಡಬ್​ ಆಗಿ ಟಾಲಿವುಡ್​ನಲ್ಲಿ ಪ್ರದರ್ಶನ ಕಂಡಿವೆ. ಹೀಗಾಗಿ ಅವರಿಗೆ ತೆಲುಗು ಸಿನಿರಂಗದಲ್ಲೂ (Tollywood Stars) ಅಭಿಮಾನಿಗಳಿದ್ದಾರೆ. ಇನ್ನು ಆರಂಭದ ದಿನಗಳಲ್ಲಿ ರಾಜ್​ಕುಮಾರ್​ ಅವರ ಕುಟುಂಬ ಚೆನ್ನೈನಲ್ಲಿದ್ದಾಗ ಬೇರೆ ಸಿನಿರಂಗದವ ಜೊತೆ ಅವರ ಸಂಪರ್ಕ ಹಾಗೂ ಸಂಬಂಧ ತುಂಬಾ ಚೆನ್ನಾಗಿತ್ತು. ಆಗಿನ ಸಂಬಂಧ ಈಗಲೂ ಸಹ ಮುಂದುವರೆದುಕೊಂಡು ಬಂದಿದೆ. ರಾಜಣ್ಣನ ಮಕ್ಕಳು ಇಂದಿಗೂ ಕಾಲಿವುಡ್​, ಬಾಲಿವುಡ್​ ಹಾಗೂ ಟಾಲಿವುಡ್​ ನಟರ ಜೊತೆಗೆ ಉತ್ತಮ ಹಾಗೂ ಆತ್ಮೀಯವಾದ ಸಂಬಂಧ ಹೊಂದಿದ್ದಾರೆ. ಪುನೀತ್​ ಅವರ ಅಕಾಲಿಕ ನಿಧನ ವಿಷಯ ತಿಳಿಯುತ್ತಿದ್ದಂತೆ ಬೆಂಗಳೂರಿನತ್ತ ಹೊರಟ ಟಾಲಿವುಡ್​ ಸ್ಟಾರ್​ಗಳು ಈಗ ನಟನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. 

ತೆಲುಗಿನ ಸ್ಟಾರ್ ನಟರಾದ ಬಾಲಕೃಷ್ಣ (Nandamoori BalaKrishna), ರಾಣಾ ದಗ್ಗುಬಾಟಿ (Rana Daggubati), ನರೇಶ್ (Naresh)​, ಪ್ರಭುದೇವ (Prabhudeva), ನಿರ್ದೇಶಕ ಹಾಗೂ ನಟ ಶಿವ ಬಾಲಾಜಿ (Shiva Balaji) ಸಹ ಬೆಂಗಳೂರಿನಗೆ ಬಂದಿದ್ದು, ಪುನೀತ್​ ರಾಜ್​ಕುಮಾರ್​ ಅವರ ಅಂತಿಮ ದರ್ಶನ ಪಡೆದಿದ್ದಾರೆ. ನಟ ನರೇಶ್​ ಹಾಗೂ ಶಿವಣ್ಣನ ಒಟ್ಟಿಗೆ ವ್ಯಾಸಂಗ ಮಾಡಿದ್ದವರಂತೆ. ಹೀಗಾಗಿ ಅವರಿಬ್ಬರ ಸ್ನೇಹ ಇಂದಿಗೂ ಗಟ್ಟಿಯಾಗಿದೆ. ನರೇಶ್​ ಅವರು ತಮ್ಮ ಸ್ನೇಹಿತನ ತಮ್ಮನ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ಕಂಠೀರವ ಸ್ಟೇಡಿಯಂನಲ್ಲಿ ಪುನೀತ್​ ಅವರ ಪಾರ್ಥೀವ ಶರೀರ


ತಮ್ಮನಂತಿದ್ದ ಪುನೀತ್​ನನ್ನು ಕಳೆದುಕೊಂಡಿರುವುದು ತೀವ್ರ ದುಃಖ ತಂದಿದೆ. ತನ್ನದೇ ಆದ ಪರಿಶ್ರಮದಿಂದ ಮೇಲಕ್ಕೆ ಬಂದಿದ್ದ ಪುನೀತ್. ನಮ್ಮ ತಂದೆ ಕಾಲದಿಂದಲೂ ರಾಜ್ ಕುಮಾರ್ ಕುಟುಂಬದೊಂದಿಗೆ ಉತ್ತಮ ಸಂಬಂಧವಿದೆ. ಅವರ ಸಾವಿನ ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇವರು ಇಷ್ಟು ಬೇಗ ಕರೆಯಿಸಿಕೊಂಡಿರುವುದು ನಂಬಲು ಸಾಧ್ಯವಾಗುತ್ತಿಲ್ಲ. ನೆಚ್ಚಿನ ತಮ್ಮದಂತಿದ್ದ ಪುನೀತ್ ನನ್ನು ಭೇಟಿಯಾದಾಗ ತುಂಬಾ ಚೆನ್ನಾಗಿ ಮಾತನಾಡಿಸುತ್ತಿದ್ದ. ಪುನೀತ್ ಅಗಲಿಕೆ ಭಾರತ ಚಿತ್ರರಂಗಕ್ಕೆ ಅಪಾರ ನಷ್ಟವಾಗಿದೆ. ಪ್ರತಿ ವರ್ಷ ಲೇಪಾಕ್ಷಿ ಉತ್ಸವ ನಡೆದಾಗಲೆಲ್ಲ ಅವರನ್ನು ಕರೆಯುತ್ತಿದ್ದೆ‌. ಅವರು ಸಹ ಸಂತೋಷದಿಂದ ಬರುತ್ತಿದ್ದರು. ಪುನೀತ್ ಹಠಾತ್ ಸಾವು ನಿಜಕ್ಕೂ ನಂಬಲಾಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಕಣ್ಣೀರಿಡುತ್ತಾ ಭಾವುಕರಾಗಿದ್ದಾರೆ ನಟ ನಂದಮೂರಿ ಬಾಲಕೃಷ್ಣ.



ಕಂಬನಿ ಮಿಡಿದ ನಿರ್ದೇಶಕ ಎಸ್​. ನಾರಾಯಣ್​ 

ಅಪ್ಪು ಬಗ್ಗೆ ನೆನಪಿಸಿಕೊಂಡು ದುಃಖವಾಗುತ್ತಿದೆ. ದೊಡ್ಡ ಮನೆಗೆ ನನಗೆ ಸುಮಾರು 30 ವರ್ಷಗಳ ಸಂಬಂಧ. 5 ಸಿನಿಮಾಗಳನ್ನು ಮಾಡಿದ್ದೇನೆ. 20 ವರ್ಷಗಳ ಹಿಂದೆ ಅಪ್ಪು ದಪ್ಪಗಿದ್ದೀಯ ಹೀರೋ ಆಗಲ್ಲ ಅಂತ ಯಾರೋ ಅಂದಿದ್ದರು. ಆದರೆ ಆ ಮಾತನ್ನು ಸುಳ್ಳಾಗಿಸಿ ಅಪ್ಪು ಇವತ್ತು ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಗುರುವಾರ ಅವರ ಜತೆ ಹೊಸ ಸಿನಿಮಾ ಮಾಡುವ ಬಗ್ಗೆ ಮಾತಾಡಿದ್ದೆ, ಸೋಮವಾರ ಭೇಟಿ ಆಗುವುದಾಗಿ ಹೇಳಿದ್ದರು. ಆದರೆ, ಶುಕ್ರವಾರ ಅವರಿಲ್ಲ. ಇದನ್ನ ನಂಬೋಕೇ ಆಗ್ತಿಲ್ಲ ಎಂದು ಭಾವುಕರಾಗಿದ್ದಾರೆ ನಿರ್ದೇಶಕ ಎಸ್. ನಾರಾಯಣ್.

ಇದನ್ನೂ ಓದಿ: Puneeth Rajkumar: ಅಗಲಿದ ರಾಜಕುಮಾರನಿಗೆ ಅಂತಿಮ ಚಿತ್ರ ನಮನ ಸಲ್ಲಿಸಿದ ಕಲಾವಿದ

ನ್ಯೂಯಾರ್ಕ್​ನಲ್ಲಿ ವ್ಯಾಸಂಗ ಮಾಡುತ್ತಿರುವ ಪುನೀತ್​ ರಾಜ್​ಕುಮಾರ್ ಅವರ ಮೊಲದ ಮಗಳು ಧೃತಿ ಅವರು ಈಗಾಗಲೇ ದೆಹಲಿಗೆ ಬಂದಿಳಿದಿದ್ದಾರೆ. ವಿಶೇಷ ವಿಮಾನದಲ್ಲಿ ದೆಹಲಿಯಿಂದ 1.15 ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದು, 4 ಗಂಟೆ ಸುಮಾರಿಗೆ ಇಲ್ಲಿಗೆ ಬರಲಿದ್ದಾರೆ. ಮಗಳು ಬೆಂಗಳೂರಿಗೆ ಬಂದ ಕೂಡಲೇ ಪುನೀತ್​ ರಾಜ್​ಕುಮಾರ್​ ಅವರ ಅಂತಿಮ ಸಂಸ್ಕಾರದ ವಿಧಿವಿಧಾನಗಳು ಆರಂಭವಾಗಲಿವೆ. ಮಗಳು ಅಂತಿಮ ದರ್ಶನ ಪಡೆಯುತ್ತಿದ್ದಂತೆಯೇ ಮುಂದಿನ ಕೆಲಸಗಳು ಆರಂಭವಾಗಲಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Published by:Anitha E
First published: