Ramesh Babu: ಮಹೇಶ್​ ಬಾಬು ಅಣ್ಣ ರಮೇಶ್​ ಬಾಬು ಇನ್ನಿಲ್ಲ: ಕಂಬನಿ ಮಿಡಿದ ಟಾಲಿವುಡ್​ ಚಿತ್ರರಂಗ

ಟಾಲಿವುಡ್ ನಟ ಮಹೇಶ್ ಬಾಬು (Mahesh Babu) ಅವರ ಸಹೋದರ ರಮೇಶ್ ಬಾಬು (Ramesh Babu) ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 56 ವರ್ಷ ವಯಸ್ಸಾಗಿತ್ತು.ರಮೇಶ್ ಬಾಬು ಶನಿವಾರ ಲಿವರ್ ಸಂಬಂಧಿ ಸಮಸ್ಯೆ(Liver Related Prbolem)ಯಿಂದ ಮೃತಪಟ್ಟಿದ್ದಾರೆ.

ಮಹೇಶ್​ ಬಾಬು, ರಮೇಶ್​ ಬಾಬು

ಮಹೇಶ್​ ಬಾಬು, ರಮೇಶ್​ ಬಾಬು

  • Share this:
ಟಾಲಿವುಡ್ ನಟ ಮಹೇಶ್ ಬಾಬು (Mahesh Babu) ಅವರ ಸಹೋದರ ರಮೇಶ್ ಬಾಬು (Ramesh Babu) ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 56 ವರ್ಷ ವಯಸ್ಸಾಗಿತ್ತು.ರಮೇಶ್ ಬಾಬು ಶನಿವಾರ ಲಿವರ್ ಸಂಬಂಧಿ ಸಮಸ್ಯೆ(Liver Related Prbolem)ಯಿಂದ ಮೃತಪಟ್ಟಿದ್ದಾರೆ. ರಮೇಶ್ ಅವರು ಹಿರಿಯ ತೆಲುಗು ಸೂಪರ್ ಸ್ಟಾರ್ ಕೃಷ್ಣ(Super Star Krishna) ಅವರ ಹಿರಿಯ ಮಗ ಮತ್ತು ಮಹೇಶ್ ಬಾಬು ಅವರ ಸಹೋದರ. ಶನಿವಾರ ಸಂಜೆ ರಮೇಶ್ ಅವರ ಮನೆಯಲ್ಲಿ ಅನಾರೋಗ್ಯ ಕಾಣಿಸಿಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಹೈದರಾಬಾದ್‌ನ ಎಐಜಿ(AIG) ಆಸ್ಪತ್ರೆಗೆ ದಾಖಲಿಸಲಾಗಿತ್ತು.ರಮೇಶ್ ಬಾಬು ಅವರು 12 ನೇ ವಯಸ್ಸಿನಲ್ಲಿ ಬಾಲ ಕಲಾವಿದರಾಗಿ ತಮ್ಮ ಮೊದಲ ನಟನೆಯನ್ನು ಆರಂಭಿಸಿದರು. ಸಾಮ್ರಾಟ್(Samrat) (1987) ಸೋಲೋ ಹೀರೋ ಆಗಿ ಅವರ ಮೊದಲ ಚಿತ್ರ, ಅವರು ನಟರಾಗಿ 15 ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ಬಾಬು 1997 ರಲ್ಲಿ ನಟನೆಯಿಂದ ನಿವೃತ್ತಿ ಹೊಂದಿ ನಿರ್ಮಾಪಕರಾಗಿ ಕೆಲಸ ಶುರು ಮಾಡಿದ್ದರು. ಇದೀಗ ಸೋದರನ ನಿಧನದಿಂದ ಮಹೇಶ್ ಬಾಬು, ಕುಟುಂಬವರ್ಗ ಹಾಗೂ ಅಭಿಮಾನಿಗಳು ಶೋಕದಲ್ಲಿ ಮುಳುಗಿದ್ದಾರೆ. ನಟ, ನಿರ್ಮಾಪಕ ರಮೇಶ್​ ಬಾಬು ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. 

ಲಿವರ್​ ಸಮಸ್ಯೆಯಿಂದ ಬಳಲುತ್ತಿದ್ದ ರಮೇಶ್​ ಬಾಬು

ರಮೇಶ್ ಬಾಬು ಅವರು ದೀರ್ಘಕಾಲದವರೆಗೆ ಯಕೃತ್ತಿನ ಸಂಬಂಧಿತ ಕಾಯಿಲೆಗಳನ್ನು ಎದುರಿಸುತ್ತಿದ್ದರು ಆದರೆ ಅವರ ಸಾವು ಹಠಾತ್ ಆಗಿತ್ತು. ಅವರ ಸಾವಿನ ಸುದ್ದಿಯನ್ನು ಕುಟುಂಬದ ಒಡೆತನದ ನಿರ್ಮಾಣ ಕಂಪನಿಯಾದ ಜಿಎಂಬಿ ಎಂಟರ್‌ಟೈನ್‌ಮೆಂಟ್ ಟ್ವಿಟರ್‌ನಲ್ಲಿ ಖಚಿತಪಡಿಸಿದೆ. ಶ್ರೀ ಘಟ್ಟಮನೇನಿ ರಮೇಶ್ ಬಾಬು ಅವರ ಅಕಾಲಿಕ ನಿಧನದ ಬಗ್ಗೆ ಘಟ್ಟಮನೇನಿ ಕುಟುಂಬದಿಂದ ಅಧಿಕೃತ ಪತ್ರಿಕಾ ಹೇಳಿಕೆ ಎಂದು ಟ್ವೀಟ್ ಮಾಡಲಾಗಿದೆ.ತೆಲುಗಿನ ಖ್ಯಾತ ನಟ ಕೃಷ್ಣ ಅವರ ಮಗ ರಮೇಶ್ ಬಾಬು ಬಾಲ್ಯದಿಂದಲೇ ಚಿತ್ರರಂಗದಲ್ಲಿ ಕೆಲಸ ಪ್ರಾರಂಭಿಸಿ, ಬಾಲನಟನಾಗಿ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ತೆಲುಗು ಇಂಡಸ್ಟ್ರಿಗೆ ‘ಸಾಮ್ರಾಟ್’ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದರು.

ಇದನ್ನು ಓದಿ: ಅಯ್ಯೋ ಇದೇನ್​ ಹಿಂಗಿದೆ.. ರಸ್ಮಿಕಾ ಮಾಡೋಣ ಅಂತೆ.. ಒಂದ್​ ಹೆಸ್ರು ಬರೆಯೋಕೂ ಬರಲ್ವಾ?

‘ನಮ್ಮ ಪ್ರೀತಿಯ ಘಟ್ಟಮನೇನಿ ರಮೇಶ್ ಬಾಬು ಅವರ ನಿಧನವನ್ನು ನಾವು ತೀವ್ರ ದುಃಖದಿಂದ ತಿಳಿಸುತ್ತಿದ್ದೇವೆ. ಅವರು ನಮ್ಮ ಹೃದಯದಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ.  ಕೋವಿಡ್ -19 ಪ್ರೋಟೋಕಾಲ್‌ಗಳನ್ನು ನೀಡಲಾಗಿದ್ದು, ಅಂತ್ಯಕ್ರಿಯೆ ಮತ್ತು ಅಂತಿಮ ವಿಧಿಗಳಿಗೆ ಸೇರದಂತೆ ಕುಟುಂಬವು ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಸಲಹೆ ನೀಡಿದೆ. ಪ್ರಸ್ತುತ ಸನ್ನಿವೇಶಗಳ ಬೆಳಕಿನಲ್ಲಿ, ನಮ್ಮ ಎಲ್ಲಾ ಹಿತೈಷಿಗಳು ಕೋವಿಡ್ -19 ಮಾನದಂಡಗಳಿಗೆ ಬದ್ಧವಾಗಿರಲು ಮತ್ತು ಶವಸಂಸ್ಕಾರದ ಸ್ಥಳದಲ್ಲಿ ಸೇರುವುದನ್ನು ತಪ್ಪಿಸುವಂತೆ ನಾವು ವಿನಂತಿಸುತ್ತೇವೆ’ ಎಂದುಘಟ್ಟಮನೇನಿ ಕುಟುಂಬದಿಂದ ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನು ಓದಿ: Samantha ಜೊತೆ ಡಿವೋರ್ಸ್​ ನಂತ್ರ ನಾಗಚೈತನ್ಯ ಜೊತೆ ಕಾಣಿಸಿಕೊಂಡ ಈ ಚೆಲುವೆ ಯಾರು?​ ಪ್ರೈವೇಟ್​ ಜೆಟ್​ನಲ್ಲಿ ಇಬ್ರು ಮಾಡಿದ್ದೇನು?

ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ರಮೇಶ್​ ಬಾಬು!

‘ನಾ ಇಲ್ಲೆ ನಾ ಸ್ವರ್ಗಂ’, ‘ಅಣ್ಣ ಚೆಲ್ಲುಲು’, ‘ಕಲಿಯುಗ ಕರ್ಣುಡು’, ‘ಮುಗ್ಗುರು ಕೊಡುಕುಲು’, ‘ಚಿನ್ನಿ ಕೃಷ್ಣುಡು’, ‘ಕೃಷ್ಣ ಗಾರಿ ಅಬ್ಬಾಯಿ’, ‘ಬ್ಲಾಕ್ ಟೈಗರ್’, ‘ಕಲಿಯುಗ ಅಭಿಮನ್ಯುಡು’ ಮೊದಲಾದ ಚಿತ್ರಗಳಲ್ಲಿ ರಮೇಶ್ ಬಾಬು ಗಮನಸೆಳೆದಿದ್ದರು. ಆದರೆ, ನಾಯಕನಾಗಿ ಅವರು ಗುರುತಿಸಿಕೊಂಡದ್ದಕ್ಕಿಂತ ಪೋಷಕ ನಟನಾಗಿ ಗುರುತಿಸಿಕೊಂಡಿದ್ದ ಹೆಚ್ಚು. ಮಹೇಶ್ ಬಾಬು ಹಾಗೂ ಕೃಷ್ಣ ಅವರೊಂದಿಗೆ ಹಲವು ಚಿತ್ರಗಳಲ್ಲಿ ರಮೇಶ್ ಬಾಬು ತೆರೆಹಂಚಿಕೊಂಡಿದ್ದಾರೆ. ಇದೀಗ ಅವರ ನಿಧನದಿಂದ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಪ್ರೀತಿಯ ಹಿರಿಯ ಸಹೋದರರನ್ನು ಕಳೆದುಕೊಂಡು ಮಹೇಶ್​ ಬಾಬು ಕಣ್ಣಿರಿಟ್ಟಿದ್ದಾರೆ.
Published by:Vasudeva M
First published: