ಟಾಲಿವುಡ್ ನಲ್ಲಿ ಗಾಯಕಿಯಾಗಿ (Tollywood Singer Mangli) ಹೆಸರು ಮಾಡಿರೋ ಮಂಗ್ಲಿ ಕನ್ನಡಕ್ಕೆ ಬಂದಿದ್ದಾರೆ. ಈ ಸಲ ಇವರ ಆಗಮನ ಗಾಯಕಿ ಆಗಿ ಅಲ್ವೇ ಅಲ್ಲ. ನಾಯಕಿಯಾಗಿ (Singer Mangli Heroin) ಬರ್ತಿರೋದು ವಿಶೇಷ. ಗಾಯಕಿ ಮಂಗ್ಲಿ ನಿರೂಪಕಿ ಆಗಿಯೂ ಹೆಸರು ಗಳಿಸಿದ್ದಾರೆ. ಆದರೆ ಕನ್ನಡದ ಪಾದರಾಯ (Singer Mangli Selected as Heroin) ಚಿತ್ರದ ಮೂಲಕ ನಾಯಕಿ ಆಗಿದ್ದಾರೆ. ನಾಯಕಿ ಆಗಿ ಬರ್ತಿರೋ ಈ ಗಾಯಕಿಯ ಹೊಸ ಜರ್ನಿ ಇನ್ನೇನು ಆರಂಭವಾಗಲಿದೆ. ಚಿತ್ರದ (Paadaray Film Hero) ನಾಯಕ ನಟ ನಾಗಶೇಖರ್ ಈ ಚಿತ್ರಕ್ಕಾಗಿಯೇ 42 ದಿನ ವಿಶೇಷ ವ್ರತವನ್ನೂ ಮಾಡುತ್ತಿದ್ದಾರೆ. ಚಿತ್ರದ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ರಿಂದಲೇ ನಾಗಶೇಖರ್ ಹನು ಮಾಲೆ ಧರಿಸಿದ್ದಾರೆ. ಇದರ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ.
ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿ ಫೈನಲ್
ಕನ್ನಡದ ಪಾದರಾಯ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗುತ್ತದೆ. ಅದೇ ಹಿನ್ನೆಲೆಯಲ್ಲಿಯೇ ಈಗ ಎಲ್ಲ ತಯಾರಿನೂ ನಡೆದಿದೆ. ಹನುಮ ಜಯಂತಿ ದಿನ ಚಿತ್ರದ ಟೈಟಲ್ ಕೂಡ ರಿಲೀಸ್ ಆಗಿತ್ತು.
ಇದಾದ್ಮೇಲೆ ಏನೂ ಅಪ್ಡೇಟ್ಸ್ ಹೊರ ಬಂದಿರಲಿಲ್ಲ. ಆದರೆ, ಈಗ ಚಿತ್ರದ ನಾಯಕಿಯ ಆಯ್ಕೆ ಆಗಿದೆ. ಅಧಿಕೃತ ಮಾಹಿತಿಯನ್ನ ಚಿತ್ರ ತಂಡವೇ ಹಂಚಿಕೊಂಡಿದೆ.
ಗಾಯಕಿಯೇ ಈಗ ನಾಯಕಿ!
ಟಾಲಿವುಡ್ ನಲ್ಲಿ ಕಣ್ಣೇ ಅದಿರಿಂದಿ ಮತ್ತು ಕನ್ನಡದಲ್ಲಿ ಗಿಲ್ಲಕ್ಕೋ ಶಿವ ಹಾಡಿನ ಮೂಲಕ ಹೆಸರಾದ ಗಾಯಕಿನೇ ಈ ಚಿತ್ರ ನಾಯಕಿ ಆಗಿದ್ದಾರೆ. ಕನ್ನಡದಲ್ಲಿ ಗಾಯಕಿ ಆಗಿಯೆ ಗುರುತಿಸಿಕೊಂಡ ಗಾಯಕಿ ಮಂಗ್ಲಿನೇ ಈ ಚಿತ್ರದ ನಾಯಕಿ ಆಗಿದ್ದಾರೆ.
ಮಂಗ್ಲಿ ಗಾಯಕಿ ಆಗಿಯೇ ಗುರುತಿಸಿಕೊಂಡಿದ್ದಾರೆ. ನಿರೂಪಕಿ ಆಗಿಯೂ ಹೆಸರು ಮಾಡಿರೋದು ಇದೆ. ನಟಿಯಾಗಿಯೂ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ನಾಯಕಿ ಆಗಿಯೇ ಮಂಗ್ಲಿ ಬರ್ತಿದ್ದಾರೆ.
ನಾಯಕ ನಾಗಶೇಖರ್ ವ್ರತ!
ಪಾದರಾಯ ಚಿತ್ರಕ್ಕೆ ನಾಯಕರಾಗಿಯೇ ಡೈರೆಕ್ಟರ್ ನಾಗಶೇಖರ್ ಆಯ್ಕೆ ಆಗಿದ್ದಾರೆ. ಇವರ ಜೋಡಿಯಾಗಿಯೇ ಮಂಗ್ಲಿ ಅಭಿನಯಿಸಲಿದ್ದಾರೆ. ಇನ್ನು ಈ ಚಿತ್ರಕ್ಕಾಗಿಯೇ ನಾಯಕ ನಟ ನಾಗಶೇಖರ್ ಒಂದು ವ್ರತ ಮಾಡುತ್ತಿದ್ದಾರೆ.
ಅಂಜನಾದ್ರಿ ಬೆಟ್ಟದಲ್ಲಿಯೇ 42 ದಿನಗಳ ವ್ರತ ಮಾಡುತ್ತಿದ್ದಾರೆ. ಈ ಒಂದು ವೃತಕ್ಕಾಗಿಯೇ ನಾಯಕ ನಟ ನಾಗಶೇಖರ್, ಚಿತ್ರದ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ರಿಂದ ಹನುಮಾನ್ ಮಾಲೆಯನ್ನೂ ಧರಿಸಿದ್ದಾರೆ.
ನೈಜ ಘಟನೆ ಆಧರಿಸಿದ ಕನ್ನಡದ ಸಿನಿಮಾ
ಪಾದರಾಯ ಚಿತ್ರಕ್ಕೆ ನೈಜ ಘಟನೆಯನ್ನೆ ಆಧರಿಸಿದೆ. 2013-2014 ರಲ್ಲಿ ನಡೆದ ಘಟನೆ ಈ ಚಿತ್ರಕ್ಕೆ ಆಧಾರವಾಗಿದೆ. ಅದನ್ನೆ ಇಟ್ಟುಕೊಂಡು ಡೈರೆಕ್ಟರ್ ಚಕ್ರವರ್ತಿ ಚಂದ್ರಚೂಡ್ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಮಾಡಿಕೊಂಡಿದ್ದಾರೆ. ಡೈರೆಕ್ಷನ್ ಸಹ ಇವರೇ ಮಾಡುತ್ತಿದ್ದಾರೆ.
ಪಾದರಾಯ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ
ಪಾದರಾಯ ಚಿತ್ರದ ಕಥೆ 6 ರಾಜ್ಯಕ್ಕೆ ಸಂಬಂಧಿಸಿದ ವಿಷಯವನ್ನೆ ಹೊಂದಿದೆ. ಈ ಹಿನ್ನೆಲೆಯಲ್ಲಿಯೇ ಈ ಚಿತ್ರವನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ತಯಾರಿಸೋ ಪ್ಲಾನ್ ಆಗಿದೆ. ಈ ಕಾರಣಕ್ಕೇನೆ ಸಿನಿಮಾವನ್ನ ಪ್ಯಾನ್ ಇಂಡಿಯಾ ಸಿನಿಮಾ ಅಂತಲೂ ಚಿತ್ರ ತಂಡ ಹೇಳಿಕೊಂಡಿದೆ. ಕನ್ನಡದ ಪಾದರಾಯ ಸಿನಿಮಾ ಪ್ರಿ ಪ್ರೋಡಕ್ಷನ್ ಹಂತದಲ್ಲಿಯೇ ಇದೆ. ಇದು ಭರದಿಂದಲೂ ಸಾಗಿದೆ.
ಇದನ್ನೂ ಓದಿ: Kantara-Oscar: ಆಸ್ಕರ್ಗೆ ಕ್ವಾಲಿಫೈ ಆಗೋದು ಅಂದ್ರೇನು? ಈ ಪ್ರಕ್ರಿಯೆ ನಡೆಯೋದು ಹೇಗೆ?
ಸತ್ಯ ಹೆಗಡೆ ಚಿತ್ರಕ್ಕೆ ಕ್ಯಾಮರಾ ಹೊಣೆ ಹೊತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಮಾಡುತ್ತಿದ್ದಾರೆ. ಕಾಲಿವುಡ್ನ ಹೆಸರಾಂತ ಸಂಕಲನಕಾರ ಆಂಟೋನಿ ಚಿತ್ರಕ್ಕೆ ಸಂಕಲನ ಮಾಡಲಿದ್ದಾರೆ. ಇನ್ನುಳಿದಂತೆ ಸದ್ಯಕ್ಕೆ ಇಷ್ಟೆ ಮಾಹಿತಿ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ