ಹೃದಯಾಘಾತದಿಂದ Tollywood ನಿರ್ಮಾಪಕ Mahesh Koneru ನಿಧನ

Tollywood: ಮಹೇಶನ ಸಾವಿನ ಬಗ್ಗೆ ನಂದಮೂರಿ ಕಲ್ಯಾಣ್ ರಾಮ್ ಕೂಡ ಸಂಪೂರ್ಣ  ಬೇಸರ ವ್ಯಕ್ತಪಡಿಸಿದ್ದಾರೆ, ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಸ್ನೇಹಿತ, ಕುಟುಂಬ ಮತ್ತು ಹಿತೈಷಿಯಾಗಿರುವ ವ್ಯಕ್ತಿ ಇನ್ನಿಲ್ಲ. ಮಹೇಶ್ ಕೊನೇರು ಅವರು ನಮ್ಮ ಬೆನ್ನೆಲುಬಾಗಿದ್ದರು,

ದಿವಂಗತ ಮಹೇಶ್ ಕೊನೇರು

ದಿವಂಗತ ಮಹೇಶ್ ಕೊನೇರು

  • Share this:
ಖ್ಯಾತ ನಿರ್ಮಾಪಕ(Producer) ಮತ್ತು ಟಾಲಿವುಡ್(Tollywood) ಸೂಪರ್ ಸ್ಟಾರ್ ಜೂನಿಯರ್ ಎನ್ಟಿಆರ್(Junior NTR) ಅವರ ಪಿಆರ್​ಒ(PRO) ಮಹೇಶ್ ಎಸ್ ಕೊನೇರು(Mahesh Koneru) ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ವರದಿಗಳ ಪ್ರಕಾರ, ಅವರು ತಮ್ಮ ಊರು ವೈಜಾಗ್‌ನಲ್ಲಿ ತಮ್ಮ ಕುಟುಂಬದೊಂದಿಗೆ ಇದ್ದರು ಈ ಸಮಯದಲ್ಲಿ ಹೃದಾಯಘಾತವಾಗಿದ್ದು ಕೊನೆಯುಸಿರೆಳೆದಿದ್ದಾರೆ. ಅವರು ನಂದಮೂರಿ ಕುಟುಂಬದ ಎಲ್ಲಾ ಚಲನಚಿತ್ರಗಳನ್ನು ನಿರ್ವಹಿಸುತ್ತಿದ್ದರು ಮತ್ತು ಪ್ರಚಾರ ಕಾರ್ಯದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಅಲ್ಲದೇ ಜೂನಿಯರ್ ಎನ್ಟಿಆರ್​ ಜೊತೆ ಹೆಚ್ಚು ಆಪ್ತರಾಗಿದ್ದರು, ಉದ್ಯಮದ ಅನೇಕ ಜನರು ಅವರನ್ನು ನಟನ ಆಧಾರ ಸ್ತಂಭ ಎಂದೇ ಕರೆಯುತ್ತಿದ್ದರು.  

ಈ ಆಘಾತಕಾರಿ ಸುದ್ದಿಯನ್ನು ಜೂನಿಯರ್ ಎನ್ಟಿಆರ್ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದು,ಅತ್ಯಂತ  ಭಾರದ ಹೃದಯದಿಂದ ಮತ್ತು ಸಂಪೂರ್ಣ ಅಪನಂಬಿಕೆಯಿಂದ, ನನ್ನ ಪ್ರೀತಿಯ ಸ್ನೇಹಿತ @SMKoneru ಇನ್ನಿಲ್ಲ ಎಂದು ನಾನು ನಿಮಗೆಲ್ಲರಿಗೂ ಹೇಳುತ್ತಿದ್ದೇನೆ. ಅವರ ಕುಟುಂಬಕ್ಕೆ ಮತ್ತು ಅವರ ಆತ್ಮೀಯರಿಗೆ ನನ್ನ  ಸಂತಾಪಗಳು ಎಂದು ಬರೆದುಕೊಂಡಿದ್ದಾರೆ.ಇದನ್ನೂ ಓದಿ: ಮಾ ಅಧ್ಯಕ್ಷರಾದ ಮಂಚು ವಿಷ್ಣುಗೆ ಶುಭ ಕೋರಿದ ನಟಿ ಮಾಲಾಶ್ರೀ..!

ಮಹೇಶ್ ಕೊನೇರು ಅವರು ಸಭಾಕು ನಮಸ್ಕಾರಂ, 118, ಮಿಸ್ ಇಂಡಿಯಾ ತಿಮ್ಮರುಸು ಮತ್ತು ಪೋಲಿಸ್ ವೇರಿ ಹೇರಿಕಾ ಮುಂತಾದ ಚಿತ್ರಗಳನ್ನು ನಿರ್ಮಿಸಿ ಹೆಸರುವಾಸಿಯಾಗಿದ್ದರೆ. ಮುಖ್ಯವಾಗಿ ಅವರ ಕೊನೆಯ ಪ್ರಾಜೆಕ್ಟ್ ಅಲ್ಲಾರಿ ನರೇಶ್ ಅಭಿನಯದ ಸಭಾಕು ನಮಸ್ಕಾರಮ್, ಇದು ಇನ್ನೂ ಬಿಡುಗಡೆಯಾಗಬೇಕಿದೆ. ಮಹೇಶ್ ಕೊನೇರು ಚಿತ್ರರಂಗದ ಅನೇಕರಿಗೆ ಆಪ್ತ ಸ್ನೇಹಿತರಾಗಿದ್ದರು ಮತ್ತು ಇದು ಬೆಳಿಗ್ಗೆ ಅವರ ನಿಧನದ ಸುದ್ದಿ ಅವರಿಗೆ ಆಘಾತವನ್ನುಂಟು ಮಾಡಿದೆ. ಉದ್ಯಮದ ಅನೇಕ ಗಣ್ಯರು ದಿವಂಗತ ನಿರ್ಮಾಪಕರಿಗೆ ಸಂತಾಪವನ್ನು ಸಲ್ಲಿಸುತ್ತಿದ್ದಾರೆ.

ಮಹೇಶನ ಸಾವಿನ ಬಗ್ಗೆ ನಂದಮೂರಿ ಕಲ್ಯಾಣ್ ರಾಮ್ ಕೂಡ ಸಂಪೂರ್ಣ  ಬೇಸರ ವ್ಯಕ್ತಪಡಿಸಿದ್ದಾರೆ, ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಸ್ನೇಹಿತ, ಕುಟುಂಬ ಮತ್ತು ಹಿತೈಷಿಯಾಗಿರುವ ವ್ಯಕ್ತಿ ಇನ್ನಿಲ್ಲ. ಮಹೇಶ್ ಕೊನೇರು ಅವರು ನಮ್ಮ ಬೆನ್ನೆಲುಬಾಗಿದ್ದರು, ನನಗೆ ವೈಯಕ್ತಿಕವಾಗಿ ಮತ್ತು ಇಡೀ ಉದ್ಯಮಕ್ಕೆ ಭಾರೀ ನಷ್ಟವಾಗಿದೆ. ಅವರ ಹತ್ತಿರದ ಮತ್ತು ಆತ್ಮೀಯರಿಗೆ ದೇವರ ಶಕ್ತಿ ನೀಡಲಿ ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.ಮೊದಲು ಪತ್ರಕರ್ತರಾಗಿದ್ದ ಮಹೇಶ್​ ಕೊನೆರು ಅವರು ನಂತರ ಸೆಲೆಬ್ರಿಟಿಗಳಿಗೆ ಪಿಆರ್​ಓ ಆಗಿ ಕೆಲಸ ಮಾಡಲು ಆರಂಭಿಸಿದರು.ನಂದಮೂರಿ ಕಲ್ಯಾಣ್​ರಾಮ್​ ನಟನೆಯ ‘118’ ಸಿನಿಮಾ ಮೂಲಕ  ಮಹೇಶ್​ ಕೊನೆರು ನಿರ್ಮಾಪಕರಾಗಿದ್ದರು  . ಅವರು ನಿರ್ಮಿಸಿದ್ದ ‘ತಿಮ್ಮರುಸು’ ಚಿತ್ರ ಜು.30ರಂದು ತೆರೆಕಂಡಿತ್ತು. ‘ಪೊಲೀಸ್​ ವಾರಿ ಹೆಚ್ಚರಿಕಾ’ ಮತ್ತು ‘ಸಭಕು ಸಮಸ್ಕಾರಂ’ ಚಿತ್ರಗಳು ನಿರ್ಮಾಣ ಹಂತದಲ್ಲಿ ಇರುವಾಗಲೇ ಅವರು ಕೊನೆಯುಸಿರು ಎಳೆದಿದ್ದು, ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

ಇದನ್ನೂ ಓದಿ: ತನ್ನ ಹೆಂಡತಿಯ ಸ್ಫೂರ್ತಿದಾಯಕ ಕಥೆಯನ್ನು ಹೇಗೆ ಹೇಳಿದ್ದಾರೆ ನೋಡಿ ವಿರಾಟ್ ಕೊಹ್ಲಿ..

ನಟಿ ರಾಕುಲ್ ಪ್ರೀತ್ ಸಿಂಗ್ ನಿಂದ ಹಿಡಿದು ನಿರ್ದೇಶಕ ಬಾಬಿಯವರೆಗೆ, ಅನೇಕ ಟಾಲಿವುಡ್ ಸೆಲೆಬ್ರಿಟಿಗಳು ಟ್ವಿಟ್ಟರ್ ನಲ್ಲಿ ಮಹೇಶ್ ಕೊನೇರು ಅವರಿಗೆ ಗೌರವ ಸಲ್ಲಿಸಿದ್ದಾರೆ.
Published by:Sandhya M
First published: