ಟ್ವಿಟ್ಟರ್​​ನಲ್ಲಿ ಹೊಸದೊಂದು ದಾಖಲೆ ಬರೆದ ಟಾಲಿವುಡ್​ ಪ್ರಿನ್ಸ್​; ಮಹೇಶ್​​ ಬಾಬು ಫಾಲೋವರ್ಸ್​ ಸಂಖ್ಯೆ ಹೆಚ್ಚಳ

Mahesh Babu: ಟ್ವಿಟರ್​ನಲ್ಲಿ ಸದ್ಯ ಮಹೇಶ್ ಬಾಬು ಒಂದು ಕೋಟಿ ಫಾಲೋವರ್ಸ್ ಗಳನ್ನ ಸಂಪಾದಿಸಿದ್ದಾರೆ. ಈ‌ ಮೂಲಕ ಸೌತ್ ಸಿನಿರಂಗದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ದಕ್ಷಿಣ ಭಾರತೀಯ ನಟ-ನಟಿಯರಲ್ಲಿ ಒಂದು ಕೋಟಿ ಫಾಲೋವರ್ಸ್ ಪಡೆದಿರೋ ಏಕೈಕ ನಟ ಅನ್ನೋ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ.

ಮಹೇಶ್​​ ಬಾಬು

ಮಹೇಶ್​​ ಬಾಬು

  • Share this:
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುಗೆ ಕೇವಲ ತೆಲುಗು ಚಿತ್ರರಂಗದಲ್ಲಿ ಮಾತ್ರ ಅಭಿಮಾನಿಗಳಿರೋದಲ್ಲ. ಬೇರೆ ಭಾಷೆಯಲ್ಲೂ, ಅಷ್ಟೇ ಏಕೆ ವಿದೇಶದಾದ್ಯಂತ ಸಾಕಷ್ಟು ಅಭಿಮಾನಿಗಳುನ್ನು ಹೊಂದಿದ್ದಾರೆ. ತಮ್ಮದೇ ಆದ ವಿಶಿಷ್ಟ ಮ್ಯಾನರಿಸಂ ಹಾಗೂ ಸೆಟಲ್ಡ್​​ ಅಭಿನಯದಿಂದಲೇ ಲಕ್ಷಾಂತರ ಅಭಿಮಾನಿಗಳನ್ನ ಗಳಿಸಿದ್ದಾರೆ ಟಾಲಿವುಡ್​​ನ ರಾಜಕುಮಾರುಡು. ಇಂತಹ ಮಹೇಶ್ ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯರಾಗಿದ್ದು, ಟ್ವಿಟರ್ ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ನನಗ್ಯಾರಿಗೂ ಸರಿಸಾಟಿ ಇಲ್ಲ ಅಂತ ಕಾಲರ್ ಮೇಲೆತ್ತಿದ್ದಾರೆ.

ಟ್ವಿಟರ್​ನಲ್ಲಿ ಸದ್ಯ ಮಹೇಶ್ ಬಾಬು ಒಂದು ಕೋಟಿ ಫಾಲೋವರ್ಸ್ ಗಳನ್ನ ಸಂಪಾದಿಸಿದ್ದಾರೆ. ಈ‌ ಮೂಲಕ ಸೌತ್ ಸಿನಿರಂಗದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ದಕ್ಷಿಣ ಭಾರತೀಯ ನಟ-ನಟಿಯರಲ್ಲಿ ಒಂದು ಕೋಟಿ ಫಾಲೋವರ್ಸ್ ಪಡೆದಿರೋ ಏಕೈಕ ನಟ ಅನ್ನೋ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ.

ಎಲ್ಲರಿಗೂ ಗೊತ್ತೇ ಇದೆ. ಸೌತ್ ನ ಕ್ರೇಜ್ ಕಾ ಬಾಪ್ ಅಂತ ಕರೆಸಿಕೊಳ್ಳೋದು ರಜನಿಕಾಂತ್. ಅವರ ಸಿನಿಮಾಗಳಿಗೆ ದಕ್ಷಿಣ ಭಾರತದಲ್ಲಿ ದೊಡ್ಡ ಮಾರುಕಟ್ಟೆ ಇದೆ. ರಜನಿ ಸಿನಿಮಾಗಳು ತೆರೆ ಮೇಲೆ ಬಂತೆಂದರೆ ಬಾಕ್ಸಾಫೀಶ್​ನಲ್ಲಿ ಸುನಾಮಿಯೇ ಏಳುತ್ತದೆ. ಆದರೆ ಟ್ವಿಟರ್ ಫಾಲೋವರ್ಸ್ ವಿಷಯದಲ್ಲಿ ರಜನಿ, ಮಹೇಶ್ ಸನಿಯ ಕೂಡ ಸುಳಿಯಲಾಗಿಲ್ಲ.  ಅಂದಹಾಗೆ, ರಜನಿಗೆ ಟ್ವಿಟರ್ ನಲ್ಲಿರೋದು ಕೇವಲ 57 ಲಕ್ಷ ಫಾಲೋವರ್ಸ್ ಅಷ್ಟೇ.

ಮಹೇಶ್​​ ಬಾಬು- ರಾಮ್​ ಚರಣ್​-ಪವನ್​​ ಕಲ್ಯಾಣ್​​​


ಜ್ಯೂನಿಯರ್​​ ಎನ್​ಟಿಆರ್​- ಅಲ್ಲು ಅರ್ಜುನ್​​


ಹಾಗೆಯೇ ರಜನಿ ಬಿಟ್ಟರೆ ಸೌತ್ ಸಿನಿ ರಂಗದಲ್ಲಿ ಅತಿ ಹೆಚ್ಚು ಕ್ರೇಜ್ ಇರೋ ನಟ ಅಂದರೆ ಅದು ಪವನ್ ಕಲ್ಯಾಣ್‌. ಅಭಿಮಾನಿಗಳ ಪ್ರೀತಿಯ ಪವರ್ ಸ್ಟಾರ್ ಸಹ ಟ್ವಿಟರ್ ನಲ್ಲಿ ಮಹೇಶ್ ಸನಿಹ ಸುಳಿಯಲಾಗಿಲ್ಲ.‌ ಅಂದಹಾಗೆ, ಟ್ವಿಟರ್ ನಲ್ಲಿ ಪವನ್ ಕಲ್ಯಾಣ್ ಫಾಲೋವರ್ಸ್ ಸಂಖ್ಯೆ 40 ಲಕ್ಷ ಕೂಡ ರೀಚ್ ಆಗಿಲ್ಲ.

ಇನ್ನು ಈ ವರ್ಷ ಮಹೇಶ್ ನಟನೆಯ ‘ಸರಿಲೇರು ನೀಕೆವ್ವರು’ ಸಿನಿಮಾ ಜೊತೆ ‘ಅಲಾ ವೈಕುಂಠಪುರಮ್ಲೋ’ ಸಿನಿಮಾ ರಿಲೀಸ್ ಆಗಿತ್ತು. ಒಂದೇ ವಾರ ರಿಲೀಸ್ ಆದ ಈ ಸಿನಿಮಾಗಳ ನಡುವೆ ಬಾಕ್ಸಾಫೀಸ್​ನಲ್ಲಿ ಸಖತ್ ಪೈಪೋಟಿ ಇತ್ತು. ಆದರು ಫೈನಲ್ ವಿನ್ನರ್ ಆಗಿ ಅಲ್ಲು ಅರ್ಜುನ್ ಹೊರ ಹೊಮ್ಮಿದರು. ಆದರೆ ಟ್ವಿಟರ್ ಫಾಲೋವರ್ ವಿಷಯದಲ್ಲಿ ಮಾತ್ರ ಮಹೇಶ್ ಮುಂದೆ ತೀರ ಡಲ್ಲು. ಸೌತ್ ನ ಸ್ಟೈಲಿಶ್ ಸ್ಟಾರ್ ಗೆ ಟ್ವಿಟರ್ ನಲ್ಲಿ 48 ಲಕ್ಷ ಫಾಲೋವರ್ಸ್ ಅಷ್ಟೇ ಇರೋದು.

ನಿವಿನ್​ ಪೌಲಿ- ದುಲ್ಕರ್​ಸಲ್ಮಾನ್​-ಮೋಹನ್​ ಲಾಲ್​


ಧನುಶ್​-ವಿಜಯ್​


ಇನ್ನು ಮಹೇಶ್ ಬಾಬುಗೆ ನಿಜವಾಗಿಯೂ ಸನಿಹ ಇರೋದು ಅಂದರೆ? ಅದು ತಮಿಳಿನ ಧನುಷ್ ಮಾತ್ರ. ಅಸುರನ್ ಖ್ಯಾತಿಯ ಧನುಷ್ ಟ್ವಿಟರ್ ನಲ್ಲಿ 9 ಮಿಲಿಯನ್​ಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಮಹೇಶ್ ಬಾಬು ಬಿಟ್ಟರೆ ಅತಿಹೆಚ್ಚು ಫಾಲೋವರ್ಸ್ ಹೊಂದಿರೋ ಎರಡನೇ ಸೌತ್ ನಟ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ನಟ ಧನುಷ್​​​.

ಕಿಚ್ಚ ಸುದೀಪ್


ಕನ್ನಡ ನಟ ಬಗ್ಗೆ ಹೇಳಬೇಕೆಂದರೆ ಕಿಚ್ಚ ಸುದೀಪ್ ಟ್ವಿಟರ್ ನಲ್ಲಿ ಅತಿಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.  ಸಾಮಾಜಿಕ ತಾಣಗಳಲ್ಲಿ ಸಖತ್ ಸಕ್ರಿಯರಾಗಿರುವ  ಸುದೀಪ್ 23 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.
ಒಟ್ಟಾರೆ ಡ್ಯಾನ್ಸು, ಫೈಟು, ಖಡಕ್ ಡೈಲಾಗ್​​, ಅದ್ಭುತ ಪರ್ಫಾಮೆನ್ಸ್ ಹೀಗೆ ಪವರ್ ಫುಲ್ ಪ್ಯಾಕೆಜ್ ನಂತಿರೋ ಮಹೇಶ್ ಬಾಬು ದಿನೇ ದಿನೆ ತಮ್ಮ ಜನಪ್ರಿಯತೆಯನ್ನ ಹೆಚ್ಚಿಸಿಕೊಳ್ಳುತ್ತಿದ್ದಾರೆ ಅಂದರೆ ತಪ್ಪಾಗದು.

ಫೇಸ್​ಬುಕ್​ ಪಾಸ್​ವರ್ಡ್​ ಹ್ಯಾಕ್​; ಪ್ಲೇ ಸ್ಟೋರ್​ನಿಂದ 25 ಆ್ಯಪ್​ಗಳನ್ನು ಕಿತ್ತೆಸೆದ ಗೂಗಲ್!

Ajay Devgan: ಸಿನಿಮಾ ಆಗಲಿದೆ ಗಾಲ್ವಾನ್ ಸಿಂಹಗಳ ಕಥೆ! ಚೀನಾ ಹುಟ್ಟಡಗಿಸಿದ ಭಾರತೀಯ ಸೈನಿಕರ ವೀರಗಾಥೆ!
Published by:Harshith AS
First published: