Prince Mahesh Babu: ಸಿನಿ ರಂಗಕ್ಕೆ ಕಾಲಿಟ್ಟ ಮಹೇಶ್ ಬಾಬುರ ಲಿಟಲ್​ ಪ್ರಿನ್ಸೆಸ್​ ಸಿತಾರಾ: ಟ್ವೀಟ್​ ಮಾಡಿದ ಪ್ರಿನ್ಸ್​..!

Prince Mahesh Babu: ಪ್ರಿನ್ಸ್​ ಮಹೇಶ್​ ಬಾಬು ಅವರ ಲಿಟಲ್​ ಪ್ರಿನ್ಸೆಸ್​ ಸಿತಾರಾ ಕೊನೆಗೂ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ವಿಷಯವನ್ನು ಖುದ್ದು ಮಹೇಶ್ ಬಾಬು ಅವರೇ ಭಾವನಾತ್ಮಕ ಟ್ವೀಟ್​ ಮೂಲಕ ಹಂಚಿಕೊಂಡಿದ್ದಾರೆ.

ಮಗಳಿ ಸಿತಾರಾ ಜೊತೆ ಮಹೇಶ್ ಬಾಬು

ಮಗಳಿ ಸಿತಾರಾ ಜೊತೆ ಮಹೇಶ್ ಬಾಬು

  • Share this:
ಮಹೇಶ್​ ಬಾಬು ಅವರು ಇತ್ತೀಚೆಗಷ್ಟೆ ಕುಟುಂಬ ಸಮೇತರಾಗಿ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದರು. ಅದಾಗಲೇ ಅವರ ಲಿಟಲ್​ ಪ್ರಿನ್ಸೆಸ್​ ಸಿನಿ ಎಂಟ್ರಿಗೆ ಅಗತ್ಯ ಸಿದ್ಧತೆಗಳು ನಡೆಯುತ್ತಿವೆ ಅನ್ನೋ ಸುದ್ದಿ ಹರಡಿತ್ತು. ಈಗ ಅದು ನಿಜವಾಗಿದೆ.

ಪ್ರಿನ್ಸ್​ ಮಹೇಶ್​ ಬಾಬು ಅವರ ಲಿಟಲ್​ ಪ್ರಿನ್ಸೆಸ್​ ಸಿತಾರಾ ಕೊನೆಗೂ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ವಿಷಯವನ್ನು ಖುದ್ದು ಮಹೇಶ್ ಬಾಬು ಅವರೇ ಭಾವನಾತ್ಮಕ ಟ್ವೀಟ್​ ಮೂಲಕ ಹಂಚಿಕೊಂಡಿದ್ದಾರೆ.ವಿಶ್ವದಾದ್ಯಂತ ನಾಳಿದ್ದು ಅಂದರೆ ನವೆಂಬರ್​ 22ರಂದು ತೆರೆ ಕಾಣಲಿರುವ 'ಫ್ರೊಜನ್​ 2' ಸಿನಿಮಾದ ಮೂಲಕ ಟಾಲಿವುಡ್​ಗೆ ಪರಿಚಿತರಾಗಲಿದ್ದಾರೆ. ಅಂದ ಹಾಗೆ ಈ ಚಿತ್ರದಲ್ಲಿ ಸಿತಾರಾ ಅಭಿನಯಿಸಿಲ್ಲ. ಬದಲಿಗೆ ಚಿತ್ರ ಎಲ್ಸಾ ಪಾತ್ರದ ಬಾಲ್ಯದ ವರ್ಷನ್​ಗೆ ತೆಲುಗಿನಲ್ಲಿ ಕಂಠದಾನ ಮಾಡಿದ್ದಾರೆ. ಇದೇ ಪಾತ್ರದ ವಯಸ್ಕ ಪಾತ್ರಕ್ಕೆ ನಟಿ ನಿತ್ಯಾ ಮೆನನ್ ವಾಯ್ಸ್​ ಡಬ್​ ಮಾಡಿದ್ದಾರೆ.ಈ ವಿಷಯಗಳ ಕುರಿತು ಟ್ವೀಟ್​ ಮಾಡಿರುವ ಮಹೇಶ್​ ಬಾಬು ಮಗಳು ಕಂಠದಾನ ಮಾಡಿರುವ ಸಿನಿಮಾ ನೋಡಲು ಕಾತರರಾಗಿದ್ದಾರೆ. 'ಸಿತಾರಾ ನಿಜಕ್ಕೂ ಕ್ವೀನ್​ ಎಲ್ಸಾಳ ಮಿನಿ ವರ್ಷನ್. ನಿನ್ನ ಬಗ್ಗೆ ಹೆಮ್ಮೆ ಇದೆ. 22ರ ವರೆಗೆ ಕಾಯಲು ಆಗುತ್ತಿಲ್ಲ​' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Super Star Krishna: ಪವನ್​ ಕಲ್ಯಾಣ್​ -ವೆಂಕಟೇಶ್​ಗೆ ಸವಾಲು ಹಾಕಿದ ಮಹೇಶ್​ ಬಾಬುರ ತಂದೆ ಸೂಪರ್ ಸ್ಟಾರ್​​ ಕೃಷ್ಣ

ಡಿಸ್ನಿ ಅವರ 'ಫ್ರೊಜನ್​ 2' ಸಿನಿಮಾವನ್ನು ಜೆನಿಫರ್​ ಲೀ ಹಾಗೂ ಕ್ರಿಸ್​ ಬಕ್​ ಅವರು ನಿರ್ದೇಶನ ಮಾಡಿದ್ದಾರೆ. ಇದು ನವೆಂಬರ್​ 22ರಂದು ಇಂಗ್ಲಿಷ್​, ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ತೆರೆ ಕಾಳಿದೆ. ಈ ಸಿನಿಮಾವನ್ನು 3ಡಿಯಲ್ಲೂ ಕಣ್ತುಂಬಿಕೊಳ್ಳುವ ಅವಕಾಶ ನಿಮ್ಮದಾಗಲಿದೆ.

ಹೇಗೆ ಬಟ್ಟೆ ತೊಡುತ್ತೀರಿ ಅನ್ನೋದು ಸೌಂದರ್ಯವನ್ನು ನಿರ್ಧರಿಸುತ್ತದೆ ಎಂದು ಬೋಲ್ಡ್​ ಫೋಟೋ ಹಂಚಿಕೊಂಡ ನಟಿ..!


  
First published: