Birthday: ಟಾಲಿವುಡ್ ಪ್ರಿನ್ಸ್​ಗೆ 46ರ ಸಂಭ್ರಮ, ಹೇಗಿದೆ ಗೊತ್ತಾ ಆಚರಣೆ?

ಮಹೇಶ್ ಬಾಬು

ಮಹೇಶ್ ಬಾಬು

Happy Birthday Prince Mahesh Babu: ಇನ್ನು ಈ ಬಾರಿ ಮಹೇಶ್ ಬಾಬು ಕೂಡ ತನ್ನ ಹುಟ್ಟುಹಬ್ಬವನ್ನು ಸರಳವಾಗಿ ಮತ್ತು ತುಂಬಾ ವಿಶೇಷವಾಗಿ ಆಚರಣೆ ಮಾಡಿಕೊಳ್ಳಲು ನಿರ್ಧರಿಸಿದ್ದು ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

  • Share this:

Prince Mahesh Babu: ತೆಲುಗು ಸೂಪರ್ ಸ್ಟಾರ್  ಪ್ರಿನ್ಸ್ ಮಹೇಶ್ ಬಾಬು ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು ಶುಭಾಶಯದ ಮಹಾಪೂರವನ್ನೇ ಹರಿಸಿದ್ದಾರೆ.  ಸಾಮಾಜಿಕ ಜಾಲತಾಣದ ಮೂಲಕ ಸಂಭ್ರಮವನ್ನು ಆಚರಣೆ ಮಾಡುತ್ತಿದ್ದಾರೆ. ಮಹೇಶ್ ಬಾಬು ಅವರ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್  ಮಾಡುವ ಮೂಲಕ ವಿಶ್ ಮಾಡುತ್ತಿದ್ದಾರೆ. ಇನ್ನು  ಸ್ಟಾರ್ ನಟನ ಜನ್ಮ ದಿನ ಎಂದ ಮೇಲೆ ಅಭಿಮಾನಿಗಳು ಅವರ ಮನೆ ಬಳಿ ಹೋಗುವುದು ಮತ್ತು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡುವುದು ಸಹಜ. ಆದರೆ ಕೊರೊನಾ ಕಾರಣದಿಂದ ಕಳೆದ ವರ್ಷ ಆಚರಣೆ ಮಾಡಲು ಸಾಧ್ಯವಿರಲಿಲ್ಲ.  ಈ ವರ್ಷ ಸಹ ಅದೇ ಕಾರಣದಿಂದ ನೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ. ಹಾಗಾಗಿ ಈ ಬಾರಿ ಕೂಡ ಅಭಿಮಾನಿಗಳು ತಮ್ಮ ಹೀರೋಗೆ ದೂರದಿಂದಲೇ ವಿಶ್ ಮಾಡುತ್ತಿದ್ದಾರೆ.


ಸ್ಟಾರ್ ನಟ ಎಂದ ಮೇಲೆ ವಿಶೇಷವಾಗಿ ಆಚರಣೆ ಮಾಡುವುದು ಸಾಮಾನ್ಯ. ಆದರೆ ಈ ಬಾರಿ ಕೊರೊನಾ ಕಾರಣದಿಂದ ಹಲವಾರು ನಟರು ಅಭಿಮಾನಿಗಳನ್ನು ಮನೆಯ ಬಳಿ ಬರದಂತೆ ಮನವಿ ಮಾಡಿದ್ದರು. ಅಲ್ಲದೇ ಕನ್ನಡದಲ್ಲಿ ಸಹ ನಟ ದರ್ಶನ್, ಪುನೀತ್ ಸೇರಿದಂತೆ ಯಶ್ ಸಹ ಹಲವಾರು ಜನರು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು.


ಇನ್ನು ಈ ಬಾರಿ ಮಹೇಶ್ ಬಾಬು ಕೂಡ ತನ್ನ ಹುಟ್ಟುಹಬ್ಬವನ್ನು ಸರಳವಾಗಿ ಮತ್ತು ತುಂಬಾ ವಿಶೇಷವಾಗಿ ಆಚರಣೆ ಮಾಡಿಕೊಳ್ಳಲು ನಿರ್ಧರಿಸಿದ್ದು ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ: ಬಿಗ್ ಬಾಸ್​ ಕನ್ನಡ ಸೀಸನ್​ 8ರ ವಿನ್ನರ್ ಮಂಜು ಪಾವಗಡ: ರನ್ನರ್​ ಅಪ್​ ಆದ ಅರವಿಂದ್ ಕೆ ಪಿ


ಈ ಬಾರಿ  ಕೂಡ ಹುಟ್ಟುಹಬ್ಬವನ್ನು ಗೋ ಗ್ರೀನ್  ಎಂಬ ವಿಚಾರದ ಅಡಿಯಲ್ಲಿ ಆಚರಣೆ ಮಾಡಲು ನಿರ್ಧರಿಸಿದ್ದು, ಪ್ರಿನ್ಸ್ ಮಹೇಶ್ ಬಾಬು ತನ್ನ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಗ್ರೀನ್ ಇಂಡಿಯಾ ಚಾಲೆಂಜ್ ಹಾಕಿದ್ದಾರೆ.  ತಮ್ಮ ಜನ್ಮ ದಿನದಂದು ಪ್ರತಿಯೊಬ್ಬರು ತಲಾ 3 ಸಸಿಗಳನ್ನು ನೆಡುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.  ಅಲ್ಲದೇ ಸಸಿಗಳನ್ನು ನೆಟ್ಟು  ಆ ಫೋಟೋವನ್ನು ತಮಗೆ ಟ್ಯಾಗ್ ಮಾಡಿ ಎಂದಿದ್ದಾರೆ. ಈ ಬಾರಿ ಸಹ ತಾವು ಸಸಿ ನೆಡುತ್ತಿರುವ ಫೋಟೋ ಶೇರ್ ಮಾಡಿರುವ ಅವರು , ನಿಮ್ಮ ಅಭಿಮಾನಕ್ಕೆ ನಾನು ಚಿರರುಣಿ. ನನ್ನ ಜನುಮ ದಿನವನ್ನು ಆಚರಿಸುವ ಬದಲು ಗಿಡ ನೆಡುವ ಮೂಲಕ ಬೆಂಬಲ ನೀಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಇನ್ನು  ಕಳೆದ ವರ್ಷ ಸಹ ಮಹೇಶ್ ಬಾಬು ಅವರ ಗ್ರೀನ್ ಇಂಡಿಯಾ ಚಾಲೆಂಜ್ ವೈರಲ್ ಆಗಿತ್ತು.


ಇನ್ನು ಮಹೇಶ್ ಬಾಬು ಹುಟ್ಟುಹಬ್ಬದ ದಿನ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಟ್ವಿಟ್ಟರ್ ಸ್ಪೇಸ್ ಹಮ್ಮಿಕೊಂಡಿದ್ದಾರೆ. ಇದರಲ್ಲಿ 100 ಜನ ಭಾಗವಹಿಸಬಹುದು. ಇದು ಸದ್ಯ ಹೆಚ್ಚು ಬಳಕೆಯಲ್ಲಿರುವ  ಕ್ಲಬ್ ಹೌಸ್ ನಂತಯೇ  ಕೆಲಸ ಮಾಡುತ್ತದೆ. ಇಲ್ಲಿ ಸಹ ಆಡಿಯೋ ಸೆಶನ್ ಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಜೊತೆಗೆ ಇಲ್ಲಿ ಬೇರೆಯವರು ಮಾತನಾಡಬೇಕು ಎಂದು ಬಯಸಿದರೆ ಅದಕ್ಕೆ ಸಹ ಅವಕಾಶ ನೀಡಲಾಗಿದೆ.  ಸಂಜೆ 7 ಗಂಟೆಗೆ ಅಭಿಮಾನಿಗಳು ಹಮ್ಮಿಕೊಂಡಿರುವ ಈ ಟ್ವಿಟ್ಟರ್ ಸ್ಪೇಸ್ ಸೆಷನ್ ನಲ್ಲಿ ಸುಮಾರು 20 ಸೆಲೆಬ್ರಿಟಿಗಳು ಭಾಗಿಯಾಗುತ್ತಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಇದು ಇದು ಭಾರತದ ಅತಿ ದೊಡ್ಡ ಸೆಲೆಬ್ರಿಟಿ ಟ್ವಿಟ್ಟರ್ ಸ್ಪೇಸ್ ಆಗಲಿದೆ ಎನ್ನಲಾಗುತ್ತಿದೆ.


ಮಹೇಶ್ ಬಾಬು,  ಟಾಲಿವುಡ್ ಸೂಪರ್ ಸ್ಟಾರ್ ಕೃಷ್ಣ ಅವರ  ಪುತ್ರ. ನಾಯಕನಾಗಿ ಮಾತ್ರವಲ್ಲದೇ, ನಿರ್ಮಾಪಕರಾಗಿ ಕೂಡ ಮಹೇಶ್ ಬಾಬು ಪ್ರಸಿದ್ಧರಾಗಿದ್ದಾರೆ. ಮುರಾರಿ, ಪೋಕರಿ, ದೂಕುಡು, ಶ್ರೀಮಂತುಡು, ಭರತ ಅನೇ ನೇನು, ಮಹರ್ಷಿ ಸೇರಿದಂತೆ ಹಲವು  ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಮಹೇಶ್ ಬಾಬು ಸದ್ಯ ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಸಿನಿಮಾ ಕೆಲಸವನ್ನು ಮುಗಿಸಿರುವ ಚಿತ್ರ ತಂಡ ಬಿಡುಗಡೆ ದಿನಾಂಕವನ್ನು ಸಹ  ಘೋಷಣೆ ಮಾಡಿದೆ.ಇನ್ನು ಈ ಚಿತ್ರದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ.

Published by:Sandhya M
First published: