Pawan Kalyan: ಉಸ್ತಾದ್ ಭಗತ್ ಸಿಂಗ್ ಅಬ್ಬರ, ಪವನ್ ಕಲ್ಯಾಣ್ ಖಡಕ್ ಡೈಲಾಗ್!

ಚಹಾ ಪ್ರಿಯ ಉಸ್ತಾದ್ ಭಗತ್ ಸಿಂಗ್ ಸೂಪರ್ ಲುಕ್

ಚಹಾ ಪ್ರಿಯ ಉಸ್ತಾದ್ ಭಗತ್ ಸಿಂಗ್ ಸೂಪರ್ ಲುಕ್

ಟಾಲಿವುಡ್‌ನ ರಾಕ್ ಸ್ಟಾರ್ ದೇವಿ ಶ್ರೀ ಪ್ರಸಾದ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ರಾಮ್ ಲಕ್ಷ್ಮಣ ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. ಸದ್ಯಕ್ಕೆ ಸಿನಿಮಾದ ಗ್ಲಿಮ್ಸ್ ಸಾಕಷ್ಟು ಸದ್ದು ಮಾಡುತ್ತಿವೆ. ಸಿನಿಮಾ ಕುರಿತು ಒಂದು ನಿರೀಕ್ಷೆನೂ ಈಗ ಹೆಚ್ಚಾಗುತ್ತಿದೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಟಾಲಿವುಡ್‌ನ ಪವರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan Movie Updates) ಅಭಿನಯದ ಉಸ್ತಾದ್ ಭಗತ್ ಸಿಂಗ್ ಸಿನಿಮಾದ ಗಿಮ್ಸ್‌ ರಿಲೀಸ್ ಆಗಿದೆ. ಪವನ್ ಕಲ್ಯಾಣ್ ಇಲ್ಲೂ ಜಬರ್‌ದಸ್ತ್ ಡೈಲಾಗ್ ಹೊಡೆದಿದ್ದಾರೆ. ಭಯಂಕರ (Tollywood New Updates) ಸಿಟ್ಟಿರೋ ಉಸ್ತಾದ್ ಭಗತ್ ಸಿಂಗ್ ಪಾತ್ರದಲ್ಲಿ (Power Star Pawan Kalyan) ಪವನ್ ಕಲ್ಯಾಣ್ ಅಭಿನಯಿಸಿದ್ದಾರೆ. ಈ ಪಾತ್ರದಲ್ಲೂ ಪವನ್ ಕಲ್ಯಾಣ್ ಪೊಲೀಸ್ ಆಫೀಸರ್ ಆಗಿಯೇ ನಟಿಸಿದ್ದಾರೆ. ಕನ್ನಡದ (Ustaad Bhagat Singh First Glimps) ಭರಾಟೆ ಬೆಡಗಿ ನಟಿ ಶ್ರೀಲೀಲಾ ಈ ಚಿತ್ರದಲ್ಲಿ ಪವನ್ ಕಲ್ಯಾಣ್‌ಗೆ ಸಾಥ್ ಕೊಟ್ಟಿದ್ದಾರೆ. ಉಸ್ತಾದ್ ಭಗತ್ ಸಿಂಗ್ ಮೂಲಕ ಪವನ್ ಕಲ್ಯಾಣ್ ಹೊಸ ರಂಗು ಚೆಲ್ಲುವ ಹಾಗೆ ಕಾಣಿಸುತ್ತಿದೆ.


ಉಸ್ತಾದ್ ಭಗತ್ ಸಿಂಗ್ ಸ್ವತಂತ್ರ ಹೋರಾಟದ ಚಿತ್ರ ಅಲ್ವೇ?


ಪವನ್ ಕಲ್ಯಾಣ್ ಅಭಿನಯದ ಉಸ್ತಾದ್ ಭಗತ್ ಸಿಂಗ್ ಸಿನಿಮಾದಲ್ಲಿ ಏನಿದೆ? ಇದೊಂದು ದೇಶ ಭಕ್ತಿಯ ಸಿನಿಮಾನಾ ಅನ್ನುವ ಪ್ರಶ್ನೆ ಇತ್ತು. ಭಗತ್ ಸಿಂಗ್ ಮೇಲೆ ಅನೇಕ ಸಿನಿಮಾಗಳು ಬಂದಿವೆ. ಅದೇ ರೀತಿ ಈ ಚಿತ್ರವೂ ಇರುತ್ತದೆ ಅನ್ನುವ ಅಂದಾಜಿತ್ತು.


Tollywood Power Star Pawan Kalyan Movie Ustaad Bhagat Singh First Glimpse Release
ಖಡಕ್ ಪೊಲೀಸ್ ಆಫೀಸರ್ ಉಸ್ತಾದ್ ಭಗತ್ ಸಿಂಗ್


ಉಸ್ತಾದ್ ಭಗತ್ ಸಿಂಗ್‌ಗೆ ಇಲ್ಲಿ ಬೇಜಾನ್ ಸಿಟ್ಟು ನೋಡ್ರಿ


ಆದರೆ ಉಸ್ತಾದ್ ಭಗತ್ ಸಿಂಗ್ ಸಿನಿಮಾ ಬೇರೆ ರೀತಿನೇ ಇದೆ. ಭಗತ್ ಸಿಂಗ್ ಅನ್ನೋದು ಪಾತ್ರದ ಮೂಲಕ ಕಾಣಿಸುತ್ತಿಲ್ಲ. ಬದಲಾಗಿ ಪವನ್ ಪೊಲೀಸ್ ಪಾತ್ರದ ಸಿಟ್ಟಿನ ಮೂಲಕವೇ ಅದು ಹೊರ ಬಂದಂತೆ ಕಾಣುತ್ತದೆ.
ಖಡಕ್ ಪೊಲೀಸ್ ಆಫೀಸರ್ ಉಸ್ತಾದ್ ಭಗತ್ ಸಿಂಗ್


ಉಸ್ತಾದ್ ಭಗತ್ ಸಿಂಗ್ ಸಿನಿಮಾದಲ್ಲಿ ಪವನ್ ಪೊಲೀಸ್ ಆಗಿಯೇ ಅಭಿನಯಿಸಿದ್ದಾರೆ. ಆದರೆ ಲುಂಗಿ ಉಟ್ಟುಕೊಂಡೇ ಭಗತ್ ಸಿಂಗ್ ಇಲ್ಲಿ ಓಡಾಡ್ತಾನೆ. ಸ್ಟೇಷನ್‌ನಲ್ಲಿರೋವಾಗ ಮಾತ್ರ ಪೊಲೀಸ್ ಡ್ರೆಸ್ ಹಾಕೋ ರೀತಿಯಲ್ಲಿ ಈ ಉಸ್ತಾದ್ ಭಗತ್ ಸಿಂಗ್ ಕಾಣಿಸುತ್ತಾರೆ.
ಚಹಾ ಪ್ರಿಯ ಉಸ್ತಾದ್ ಭಗತ್ ಸಿಂಗ್ ಸೂಪರ್ ಲುಕ್


ಉಸ್ತಾದ್ ಭಗತ್ ಸಿಂಗ್ ಚಹಾ ಪ್ರೇಮಿ ಅಂತಲೂ ಹೇಳಬಹುದೇನೋ, ಚಹಾ ಕುಡಿತಾನೇ ಮಸ್ತ್ ಡೈಲಾಗ್ ಹೊಡೆಯೋ ಪವನ್ ಕಲ್ಯಾಣ್, ಸ್ವಾಗ್ ಇಲ್ಲಿ ಬೇರೆನೇ ಇದೆ. ಆದರೂ ಈ ಸಿನಿಮಾದ ಗ್ಲಿಮ್ಸ್ ವಿಡಿಯೋದ ಕೊನೆಯಲ್ಲಿ ಪವನ್ ಕಲ್ಯಾಣ್ ಒಂದು ಡೈಲಾಗ್ ಹೊಡೆಯುತ್ತಾರೆ.


Tollywood Power Star Pawan Kalyan Movie Ustaad Bhagat Singh First Glimpse Release
ಪವನ್ ಕಲ್ಯಾಣ್ ಭಗತ್ ಸಿಂಗ್ ಡೈರೆಕ್ಟರ್ ಯಾರು?


ಅತಿ ಹೆಚ್ಚು ಗಮನ ಸೆಳೆದ ಪವನ್ ಕಲ್ಯಾಣ್ ಭಗತ್ ಸಿಂಗ್ ಡೈಲಾಗ್


ಹೌದು, ಈ ಸಲ ಸಖತ್ ಆಗಿಯೇ ಪರ್ಫಾರ್ಮೆನ್ಸ್ ಇರುತ್ತದೆ ಅನ್ನೊದೇ ಆ ಡೈಲಾಗ್‌ನ ಒಟ್ಟು ಅರ್ಥ ಆಗಿದೆ. ಆದರೆ ಇದನ್ನ ನೋಡೋ ಜನರಿಗೆ ಹೇಳಿದ್ರೋ, ಚಿತ್ರದಲ್ಲಿ ಬರುವ ಪಾತ್ರಕ್ಕೆ ಹೇಳಿದ್ರೋ ಗೊತ್ತಾಗೋದಿಲ್ಲ. ಆದರೆ ಹೊಡೆದ ಡೈಲಾಗ್ ಸಖತ್ ಸ್ಟೈಲಿಶ್ ಆಗಿಯೇ ಇದೆ.


ಪವನ್ ಕಲ್ಯಾಣ್ ಭಗತ್ ಸಿಂಗ್ ಡೈರೆಕ್ಟರ್ ಯಾರು?


ಚಿತ್ರದ ಇನ್ನಷ್ಟು ಮಾಹಿತಿ ಕೊಡೊದಾದ್ರೆ, ಈ ಚಿತ್ರವನ್ನ ಹರೀಶ್ ಶಂಕರ್ ಡೈರೆಕ್ಟ್ ಮಾಡಿದ್ದಾರೆ. ಈ ಮೂಲಕ ಕನ್ನಡದ ನಟಿ ಶ್ರೀಲೀಲಾ, ಪವನ್ ಕಲ್ಯಾಣ್‌ಗೆ ಜೋಡಿ ಆಗಿದ್ದಾರೆ. ಬೇರೆ ಬೇರೆ ಪಾತ್ರಗಳು ಈ ಚಿತ್ರದಲ್ಲಿವೆ. ಆದರೆ ಯಾವುದು ಇನ್ನೂ ರಿವೀಲ್ ಆಗಿಲ್ಲ.


ಇದನ್ನೂ ಓದಿ: Ravi Varma: ಮುಧೋಳ್ ಶೂಟಿಂಗ್ ವೇಳೆ ಸಾಹಸ ನಿರ್ದೇಶಕ ರವಿವರ್ಮಾಗೆ ಪೆಟ್ಟು!


ಭಗತ್ ಸಿಂಗ್ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ


ಟಾಲಿವುಡ್‌ನ ರಾಕ್ ಸ್ಟಾರ್ ದೇವಿ ಶ್ರೀ ಪ್ರಸಾದ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ರಾಮ್ ಲಕ್ಷ್ಮಣ ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. ಸದ್ಯಕ್ಕೆ ಸಿನಿಮಾದ ಗ್ಲಿಮ್ಸ್ ಸಾಕಷ್ಟು ಸದ್ದು ಮಾಡುತ್ತಿವೆ. ಸಿನಿಮಾ ಕುರಿತು ಒಂದು ನಿರೀಕ್ಷೆನೂ ಈಗ ಹೆಚ್ಚಾಗುತ್ತಿದೆ.

First published: