Sye Raa Box office Collection: ಎರಡೇ ದಿನಗಳಲ್ಲಿ ನೂರು ಕೋಟಿ ದೋಚಿದ 'ಸೈರಾ' : ನಡೀತಿಲ್ಲ 'ವಾರ್' ಆಟ, ನಿಂತೇಬಿಡ್ತು 'ಜೋಕರ್' ಓಟ !

Sye Raa Box office Collection: 'ಸೈರಾ' ರಿಲೀಸ್ ಆದ ದಿನವೇ ಬಾಲಿವುಡ್‍ನ ಆ್ಯಕ್ಷನ್ ಸಿನಿಮಾ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟಿಸಿರುವ ವಾರ್ ಕೂಡ ತೆರೆಗೆ ಅಪ್ಪಳಿಸಿತ್ತು. ಖಡಕ್ ಆ್ಯಕ್ಷನ್ ಸೀನ್‍ಗಳಿಂದ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು 'ವಾರ್'. ಆದ್ರೆ 'ಸೈರಾ', ಬಾಕ್ಸಾಫೀಸ್‍ನಲ್ಲಿ ವಾರ್ ಮೇಲೆ ವಾರ್ ಮಾಡಿದೆ. ಉತ್ತರ ಭಾರತದಲ್ಲಿ ಹೊರತುಪಡಿಸಿದ್ರೆ, ದಕ್ಷಿಣ ಭಾರತ ಹಾಗೂ ವಿದೇಶಗಳಲ್ಲಿ 'ವಾರ್' ಓಟಕ್ಕೆ ಬ್ರೇಕ್ ಹಾಕಿದೆ ಸೈರಾ.

'ಸೈರಾ ನರಸಿಂಹ ರೆಡ್ಡಿ' ಸಿನಿಮಾದ ಪೋಸ್ಟರ್​

'ಸೈರಾ ನರಸಿಂಹ ರೆಡ್ಡಿ' ಸಿನಿಮಾದ ಪೋಸ್ಟರ್​

  • Share this:
ಮೆಗಾಸ್ಟಾರ್ ಚಿರು ನಟಿಸಿರುವ ಮೆಗಾ ಸಿನಿಮಾ 'ಸೈರಾ ನರಸಿಂಹರೆಡ್ಡಿ' ನಿರೀಕ್ಷಿಸಿದಂತೆಯೇ, ಬಾಕ್ಸಾಫಿಸ್​ನಲ್ಲೂ ಮೆಗಾ ಕಲೆಕ್ಷನ್ ಮಾಡಿಕೊಳ್ತಿದೆ. ಕೇವಲ ಎರಡೇ ದಿನಗಳಲ್ಲಿ ನೂರು ಕೋಟಿ ಕ್ಲಬ್‍ಗೆ ಎಂಟ್ರಿ ಕೊಟ್ಟಿರುವ ಸೈರಾ, ಬಾಲಿವುಡ್ ಮಾತ್ರವಲ್ಲ ಹಾಲಿವುಡ್ ಸಿನಿಮಾಗಳಿಗೂ ಜೋರಾಗಿಯೇ ಸ್ಪರ್ಧೆ ನೀಡುತ್ತಿದೆ.

'ಸೈರಾ ನರಸಿಂಹರೆಡ್ಡಿ'... ಮೆಗಾಸ್ಟಾರ್ ಚಿರಂಜೀವಿ, ಬಿಗ್‍ಬಿ ಅಮಿತಾಭ್ ಬಚ್ಚನ್, ಕನ್ನಡದ ಕಿಚ್ಚ ಸುದೀಪ್, ವಿಜಯ್ ಸೇತುಪತಿ, ತಮನ್ನಾ, ನಯನ್‍ತಾರಾ ನಟಿಸಿರುವ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ. ಬರೋಬ್ಬರಿ 270 ಕೋಟಿ ರೂಪಾಯಿ ಮೆಗಾ ಬಜೆಟ್‍ನಲ್ಲಿ ನಿರ್ಮಾಣವಾದ 'ಸೈರಾ'ಗೆ ಸುರೇಂದರ್ ರೆಡ್ಡಿ ಆ್ಯಕ್ಷನ್ ಕಟ್ ಹೇಳಿದ್ದಾರೆ. 1840ರ ದಶಕದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರಸೇನಾನಿ ಉಯ್ಯಲವಾಡ ನರಸಿಂಹರೆಡ್ಡಿ ಜೀವಾಧಾರಿತ 'ಸೈರಾ', ಇದೇ ಅಕ್ಟೋಬರ್ 2ರಂದು ತೆರೆಕಂಡಿತು.

 ಇಂತಹ 'ಸೈರಾ' ಮೊದಲ ದಿನವೇ ವಲ್ರ್ಡ್‍ವೈಡ್ ಬರೋಬ್ಬರಿ 82 ಕೋಟಿ ರೂಪಾಯಿ ಬಾಚಿದ್ಯಂತೆ. ಆಂಧ್ರ ಹಾಗೂ ತೆಲಂಗಾಣಗಳಲ್ಲಿ 53 ಕೋಟಿ ರೂಪಾಯಿ, ಕರ್ನಾಟಕದಲ್ಲಿ 11 ಕೋಟಿ, ವಿದೇಶಗಳಲ್ಲಿ 13 ಕೋಟಿ ಸೇರಿದಂತೆ ಸೈರಾ ಮೊದಲ ದಿನದ ಗಳಿಕೆ 82 ಕೋಟಿ ರೂಪಾಯಿ ಆಗಿದ್ಯಂತೆ. ಪ್ರೀಬುಕಿಂಗ್ ಹಾಗೂ ಆನ್‍ಲೈನ್ ಬುಕ್ಕಿಂಗ್‍ಗಳೂ ಇದರಲ್ಲಿ ಸೇರಿದೆ. ಎರಡನೇ ಹಾಗೂ ಮೂರನೇ ದಿನಗಳಲ್ಲಿ ತಲಾ 21 ಹಾಗೂ 18 ಕೋಟಿ ರೂಪಾಯಿ ಬಾಚಿರುವ 'ಸೈರಾ' ಆ ಮೂಲಕ ಮೂರು ದಿನಗಳಲ್ಲೇ 131 ಕೋಟಿ ರೂಪಾಯಿ ಕಲೆಕ್ಷನ್ ಮಾಡಿಕೊಂಡಿದೆ.

ಇದನ್ನೂ ಓದಿ: ವೋಗ್​ ಕವರ್​ ಪೇಜ್​ನಲ್ಲಿ ಟಾಲಿವುಡ್​ ಪ್ರಿನ್ಸ್​ ಮಹೇಶ್​ಗೆ ಜೊತೆಯಾದ ದುಲ್ಕರ್​ ಸಲ್ಮಾನ್​- ನಯನ ತಾರಾ

ಇನ್ನು 'ಸೈರಾ' ರಿಲೀಸ್ ಆದ ದಿನವೇ ಬಾಲಿವುಡ್‍ನ ಆ್ಯಕ್ಷನ್ ಸಿನಿಮಾ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟಿಸಿರುವ ವಾರ್ ಕೂಡ ತೆರೆಗೆ ಅಪ್ಪಳಿಸಿತ್ತು. ಖಡಕ್ ಆ್ಯಕ್ಷನ್ ಸೀನ್‍ಗಳಿಂದ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು 'ವಾರ್'. ಆದ್ರೆ 'ಸೈರಾ', ಬಾಕ್ಸಾಫೀಸ್‍ನಲ್ಲಿ ವಾರ್ ಮೇಲೆ ವಾರ್ ಮಾಡಿದೆ. ಉತ್ತರ ಭಾರತದಲ್ಲಿ ಹೊರತುಪಡಿಸಿದ್ರೆ, ದಕ್ಷಿಣ ಭಾರತ ಹಾಗೂ ವಿದೇಶಗಳಲ್ಲಿ 'ವಾರ್' ಓಟಕ್ಕೆ ಬ್ರೇಕ್ ಹಾಕಿದೆ 'ಸೈರಾ'.

#War#Hindi: Wed 51.60 cr, Thu 23.10 cr, Fri 21.30 cr. Total: ₹ 96 cr.#Tamil + #Telugu: Wed 1.75 cr, Thu 1.25 cr, Fri 1.15 cr. Total: ₹ 4.15 cr.ಮತ್ತೊಂದೆಡೆ ಇದೇ ಶುಕ್ರವಾರ ಹಾಲಿವುಡ್‍ನ ಬಹು ನಿರೀಕ್ಷಿತ ಚಿತ್ರ 'ಜೋಕರ್' ಕೂಡ ರಿಲೀಸ್ ಆಗಿದೆ. ಬ್ಯಾಟ್‍ಮ್ಯಾನ್ ಸರಣಿಯ 'ಜೋಕರ್' ಪಾತ್ರದ ಮೇಲೆ ಮೊದಲಿಂದಲೂ ಕುತೂಹಲವಿತ್ತು. ಆತನ ಹುಟ್ಟುಹೇಗಾಯ್ತು ? ಈ 'ಜೋಕರ್' ಹೇಗೆ ಕ್ರಿಮಿನಲ್ ಆದ ಎಂಬುದರ ಸುತ್ತ ಕತೆ ಸುತ್ತುವ ಪರಿಣಾಮ ಸಿನಿಮಾ ಬಗ್ಗೆ ಸಾಕಷ್ಟು ಹೈಪ್ ಕ್ರಿಯೇಟ್ ಆಗಿತ್ತು.

ಇದನ್ನೂ ಓದಿ: War Movie: ಬರಲಿದೆಯಂತೆ ವಾರ್​ ಸಿನಿಮಾದ ಸೀಕ್ವೆಲ್​

ಆದರೆ 'ಸೈರಾ' ಅಬ್ಬರದ ಮುಂದೆ ಭಾರತದಲ್ಲಿ 'ಜೋಕರ್' ಆಟಕ್ಕೆ ಬ್ರೇಕ್ ಬಿದ್ದಿದೆ. ಒಟ್ಟಾರೆ 'ಸೈರಾ' ನಾಗಾಲೋಟ ನೋಡ್ತಿದ್ರೆ, 'ಬಾಹುಬಲಿ'ಯಂತೆಯೇ ಹೊಸ ಹೊಸ ದಾಖಲೆಗಳು ನಿರ್ಮಾಣ ಆಗುವುದರಲ್ಲಿ ಅನುಮಾನವೇ ಇಲ್ಲ ಎನ್ನಲಾಗುತ್ತಿದೆ.

 

Kiara Advani: ಇಟಲಿಯ ಬೀಚ್​ನಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ಕಿಯಾರಾ ..!


 
First published: