HOME » NEWS » Entertainment » TOLLYWOOD MEGA STAR CHIRANJEEVI SIGN IN MYTHRI MOVIE MAKERS HG

ಮೈತ್ರಿ ಮೂವಿ ಮೇಕರ್ಸ್​​ಗೆ ಮೆಗಾ ಸ್ಟಾರ್​ ಕಡೆಯಿಂದ ಬಂಪರ್ ಆಫರ್!

Megastar Chiranjeevi: ಈಗ ಕೊರಟಾಲ‌ ಶಿವ ನಿರ್ದೇಶನದಲ್ಲಿ ಆಚಾರ್ಯ ಎಂಬ ಸಿನಿಮಾ ಮಾಡುತ್ತಿದ್ದಾರೆ. ರಾಮ್ ಚರಣ್ ತೇಜಾ, ಕೊನಿಡೆಲಾ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಈ ಚಿತ್ರವನ್ನ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಹೀಗಿರುವಾಗಲೇ ಮತ್ತೊಂದು ಸಿನಿಮಾ ಮಾತುಕತೆಯ ಹಂತದಲ್ಲಿದೆ.

news18-kannada
Updated:August 9, 2020, 10:26 PM IST
ಮೈತ್ರಿ ಮೂವಿ ಮೇಕರ್ಸ್​​ಗೆ ಮೆಗಾ ಸ್ಟಾರ್​ ಕಡೆಯಿಂದ ಬಂಪರ್ ಆಫರ್!
ನಟ ಚಿರಂಜೀವಿ
  • Share this:
ನಟ ಚಿರಂಜೀವಿ ಟಾಲಿವುಡ್​​ನ‌ ಮೆಗಾ ಸ್ಟಾರ್. ಈ ವಯಸ್ಸಲ್ಲೂ ತೆಲುಗು ಚಿತ್ರರಂಗವನ್ನ ಆಳುತ್ತಿರೋ ಒನ್ ಅಂಡ್ ಓನ್ಲಿ ಸೂಪರ್ ಸ್ಟಾರ್.‌ ಇಂತಹ ಚಿರಂಜೀವಿಗಾಗಿ‌ ಒಂದು ಸಿನಿಮಾ ಮಾಡಿದ್ರೂ ಸಾಕು ಸೂಟ್ ಕೇಸ್ ಗಟ್ಟಲೆ ದುಡ್ಡು ಮಾಡಬಹುದು ಅಂತ ನಿರ್ಮಾಪಕರ ಆಸೆ. ಹೀಗಾಗಿ ಒಮ್ಮೆ ಮೆಗಾಸ್ಟಾರ್ ಕಾಲ್‌ ಶೀಟ್ ಸಿಕ್ಕರೆ ನಮ್ಮ ಅದೃಷ್ಟ ಅಂತ ಕಾಯೋರು ಸಾಕಷ್ಟು ಜನ ನಿರ್ಮಾಪಕರಿದ್ದಾರೆ.

ಆದರೆ ಸೆಕೆಂಡ್ ಇನ್ನಿಂಗ್ಸ್​​ ಆರಂಭಿಸಿದ ನಂತರ ಹೊರಗಿನ ಬ್ಯಾನರ್​​ಗೆ ಚಿತ್ರ ಮಾಡಿರಲಿಲ್ಲ ನಟ ಚಿರಂಜೀವಿ. ‘ಖೈದಿ’ ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ ಚಿರು ಪುತ್ರನಿಗೆ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಿಗೆ ಡೇಟ್ ಕೊಟ್ಟರು. ಖೈದಿ 151 ನಂತರ ಸೈರಾ ನರಸಿಂಹ ರೆಡ್ಡಿಯಾಗಿ ಅಬ್ಬರಿಸಿ ಬೊಬ್ಬಿರಿದರು. ಬಾಕ್ಸ್​​ಆಫೀಸ್ ನಲ್ಲಿ ತಮ್ಮ ಚಾರ್ಮ್ ಈಗಲೂ ಕಮ್ಮಿಯಾಗಿಲ್ಲ ಅಂತ ಪ್ರೂ ಮಾಡಿದ್ದರು.

ನಟ ಚಿರಂಜೀವಿ
ಈಗ ಕೊರಟಾಲ‌ ಶಿವ ನಿರ್ದೇಶನದಲ್ಲಿ ಆಚಾರ್ಯ ಎಂಬ ಸಿನಿಮಾ ಮಾಡುತ್ತಿದ್ದಾರೆ. ರಾಮ್ ಚರಣ್ ತೇಜಾ, ಕೊನಿಡೆಲಾ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಈ ಚಿತ್ರವನ್ನ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಹೀಗಿರುವಾಗಲೇ ಮತ್ತೊಂದು ಸಿನಿಮಾ ಮಾತುಕತೆಯ ಹಂತದಲ್ಲಿದೆ. ಈ ಬಾರಿ ಹೊರಗಿನ ಬ್ಯಾನರ್​ಗೆ  ಚಿರು ಒಪ್ಪಿಗೆ ಸೂಚಿಸಿದ್ದಾರಂತೆ.


Youtube Video

ಹೌದು. ಟಾಲಿವುಡ್ ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವಿ ಮೇಕರ್ಸ್‘ ಗೆ ಚಿರು ಕಾಲ್ ಶೀಟ್ ಸಿಕ್ಕಿದೆ. ವೆಂಕಿ ಮಾಮ ಖ್ಯಾತಿಯ ಬಾಬ್ಬಿ ಮೆಗಾಸ್ಟಾರ್ ಗಾಗಿ ಅದ್ಭುತ ಕಥೆಯೊಂದನ್ನ ರೆಡಿ ಮಾಡಿಕೊಳ್ಳುತ್ತಾ ಇದ್ದಾರಂತೆ. ಅಂದಹಾಗೆ, ‘ಮೈತ್ರಿ‌ ಮೂವಿ ಮೇಕರ್ಸ್’ ಶ್ರೀಮಂತುಡು, ರಂಗಸ್ಥಳಂ, ಜನತಾ ಗ್ಯಾರೆಜ್ ನಂತಹ ಇಂಡಸ್ಟ್ರಿ ಹಿಟ್ ಸಿನಿಮಾಗಳನ್ನ ತೆಲುಗು ಚಿತ್ರರಂಗಕ್ಕೆ ನೀಡಿದೆ. ಹೀಗಾಗಿ ಚಿರು ಕಾಂಬಿನೇಷನ್ ನಲ್ಲಿ ಬರೋ ಸಿನಿಮಾ ಮೇಲೆ ಈಗಿನಿಂದಲೇ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಕೊಂಡಿದೆ.
Published by: Harshith AS
First published: August 9, 2020, 10:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories