ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಸದ್ಯ ಭೋಲಾ ಶಂಕರ್ (Chiranjeevi New Video) ಸಿನಿಮಾದ ಶೂಟಿಂಗ್ ಅಲ್ಲಿ ಬ್ಯುಸಿ ಇದ್ದಾರೆ. ಈ ಶೂಟಿಂಗ್ ವೇಳೆಯ ತಮ್ಮ ಒಂದು ಸ್ಪೆಷಲ್ ವಿಡಿಯೋವನ್ನ ಇದೀಗ ಸ್ವತಃ ಚಿರಂಜೀವಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಒಂದು (New Video got Viral) ವಿಡಿಯೋ ನೋಡಿದ್ರೆ ಸಾಕು, ಚಿರಂಜೀವಿ ಆಫ್ ದಿ ರೆಕಾರ್ಡ್ ಮಸ್ತಿ ಏನು ಅನ್ನೋದು ತಿಳಿಯುತ್ತದೆ. ಚೀರ್‌ಫುಲ್ ಚಿರು ಎಲ್ಲಿ ಇರ್ತಾರೋ ಅಲ್ಲಿ ಹ್ಯಾಪಿನೆಸ್ ಗ್ಯಾರಂಟಿ ಅನ್ನೋದು ತಿಳಿಯುತ್ತಿದೆ. ಆ (Mega Star Chiranjeevi Updates) ವಿಡಿಯೋವನ್ನ ಈಗ ಎಲ್ಲರೂ ನೋಡುತ್ತಿದ್ದಾರೆ. ತಮ್ಮದೇ ರೀತಿಯಲ್ಲಿ ರಿಯಾಕ್ಟ್ ಮಾಡಿದ್ದಾರೆ. ಇದರ ಸುತ್ತ ಒಂದು ಸುದ್ದಿ (Chiranjeevi New Updates) ಇಲ್ಲಿದೆ ನೋಡಿ.
ಚೀರ್‌ಫುಲ್ ಚಿರು ಎಲ್ಲಿರ್ತಾರೋ ಅಲ್ಲಿ ಫುಲ್ ಹಂಗಾಮ
ಮೆಗಾ ಸ್ಟಾರ್ ಚಿರಂಜೀವಿ ಸದಾ ಆ್ಯಕ್ಟೀವ್ ಆಗಿರುತ್ತಾರೆ. ಎಲ್ಲೆ ಹೋದ್ರೂ ಸರಿಯೇ, ಒಂದು ಅದ್ಭುತ ಸ್ಮೈಲ್ ಕೊಡ್ತಾರೆ. ಚಿರು ಇದ್ದದ್ದೇ ಹಾಗೆ. ಆದರೆ ಚಿರಂಜೀವಿ ಅವರ ಆಫ್ ದಿ ಕ್ಯಾಮೆರಾ ವಿಡಿಯೋ ಸಿಗೋದು ಕಡಿಮೇನೆ ಅಂತಲೇ ಹೇಳಬಹುದು. ತುಂಬಾನೇ ಜೋಶ್ ಫುಲ್ ಆಗಿರೋ ನಟ ಚಿರಂಜೀವಿ ಎಲ್ಲೇ ಹೋದ್ರು ಸರಿಯೇ, ಅಲ್ಲಿ ಹ್ಯಾಪಿನೆಸ್ ಕ್ರಿಯೇಟ್ ಆಗಿ ಬಿಡುತ್ತದೆ ನೋಡಿ.
ಭೋಲಾ ಶಂಕರ್ ಚಿರಂಜೀವಿ ಸ್ಪೆಷಲ್ ವಿಡಿಯೋ ವೈರಲ್
ಮೆಗಾ ಸ್ಟಾರ್ ಸದ್ಯ ಭೋಲಾ ಶಂಕರ್ ಸಿನಿಮಾದ ಶೂಟಿಂಗ್ ಅಲ್ಲಿದ್ದಾರೆ. ಹೊಸಬರು ಹಳಬರು ಸೇರಿರೋ ಈ ಚಿತ್ರದಲ್ಲಿ ಕೀರ್ತಿ ಸುರೇಶ್, ತಮನ್ನಾ ಭಾಟಿಯಾ ಸೇರಿದಂತೆ ಇನ್ನೂ ಅನೇಕ ಕಲಾವಿದರು ಇದ್ದಾರೆ. ಇವರ ಜೊತೆಗೆ ಚಿತ್ರೀಕರಣದ ಸಮಯದ ಒಂದು ವಿಡಿಯೋ ಇದೀಗ ಭಾರೀ ಗಮನ ಸೆಳೆಯುತ್ತಿದೆ.
ಚಿರಂಜೀವಿ ಅವರ ಉತ್ಸಾಹದ ಪರಿ ಈ ಒಂದು ವಿಡಿಯೋದಲ್ಲಿ ಕಂಡು ಬರುತ್ತದೆ. ವಯಸ್ಸು 68 ಆಗಿದೆ. ಆದರೆ ಚಿರಂಜೀವಿ ಅವರ ದೇಹ ಗಟ್ಟಿಮುಟ್ಟಾಗಿದೆ. ಮಾತು-ಹರಟೆ -ಹಾಸ್ಯ ಚಟಾಕಿಗಳು ಇವೆಲ್ಲವೂ ಹಾಗೆ ಇವೆ. ಇದನ್ನ ಕೇಳಿ ಖುಷಿಪಟ್ಟ ನವ ನಟ-ನಟಿಯರು ಫುಲ್ ಖುಷ್ ಆಗಿದ್ದಾರೆ.
ಮೆಗಾ ಸ್ಟಾರ್ ಚಿರಂಜೀವಿ ಜೋಶ್ ನೋಡಿ ಫ್ಯಾನ್ಸ್ ಫಿದಾ
ಈ ಒಂದು ಅದ್ಭುತ ಕ್ಷಣದ ವಿಡಿಯೋ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ನಿಮ್ಮ ಈ ನಗು ಮತ್ತು ಜೋಶ್ ಹೀಗೆ ಇರಲಿ ಅಂತಲೂ ಹಾರೈಸಿದ್ದಾರೆ.
View this post on Instagram
ಭೋಲಾ ಶಂಕರ್ ಸೆಟ್‌ನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಮಸ್ತಿ
ಮೆಗಾ ಸ್ಟಾರ್ ಚಿರಂಜೀವಿ ಅವರ ಚಿತ್ರ ಜೀವನದಲ್ಲಿ ಭೋಲಾ ಶಂಕರ್ ಸಿನಿಮಾ ಸ್ಪೆಷಲ್ ಆಗಿದೆ. ಮೆಹರ್ ರಮೇಶ್ ಈ ಚಿತ್ರವನ್ನ ಡೈರೆಕ್ಟರ್ ಮಾಡುತ್ತಿದ್ದಾರೆ.
ಆಗಸ್ಟ್-11 ರಂದು ಭೋಲಾ ಶಂಕರ್ ರಿಲೀಸ್
ಆದರೆ ಇದು ತಮಿಳಿನಲ್ಲಿ 2015 ರಲ್ಲಿ ಬಂದ ವೇದಾಲಂ ಸಿನಿಮಾದ ಆಫೀಸಿಯಲ್ ರಿಮೇಕ್ ಸಿನಿಮಾ ಆಗಿದೆ.
ಇದನ್ನೂ ಓದಿ: Shivarajkumar Movie: ಶಿವಣ್ಣನ ಪ್ಯಾನ್ ಇಂಡಿಯಾ ಸಿನಿಮಾ ಶೂಟಿಂಗ್ ಕಂಪ್ಲೀಟ್
ಸದ್ಯ ಶೂಟಿಂಗ್‌ನಲ್ಲಿ ಇರೋ ಸಿನಿಮಾ ತಂಡ, ತಮ್ಮ ಈ ಚಿತ್ರವನ್ನ ಇದೇ ವರ್ಷ ಆಗಸ್ಟ್-11 ರಂದು ರಿಲೀಸ್ ಮಾಡೋಕೆ ಪ್ಲಾನ್ ಮಾಡಿದೆ. ಈಗಾಗಲೇ ಡೇಟ್ ಕೂಡ ಅನೌನ್ಸ್ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ