ಬಾಹುಬಲಿ ಡೈರೆಕ್ಟರ್ ರಾಜಮೌಳಿ (Magadheera Re-Release) ಅನೇಕ ನಟರನ್ನ ರಾತ್ರೋ ರಾತ್ರಿ ಸ್ಟಾರ್ ಮಾಡಿದ್ದಾರೆ. ಜೂನಿಯರ್ ಎನ್ಟಿಆರ್, ರಾಮ್ ಚರಣ್ ತೇಜಾ, ಪ್ರಭಾಸ್ ಹೀಗೆ ಸಾಲು ಸಾಲು ನಟರು ಈಗ ಸೂಪರ್ ಸ್ಟಾರ್ ಆಗಿ (Ram Charan Teja Birthday) ಮೆರೆಯುತ್ತಿದ್ದಾರೆ. ಬಾಹುಬಲಿ (Baahubali) ಚಿತ್ರದ ಹವಾ ಇನ್ನೂ ಇದೆ. ಜೂನಿಯರ್ ಎನ್ಟಿಆರ್ ಅಭಿನಯದ ಸ್ಟುಡೆಂಟ್ ನಂಬರ್ ಒನ್ ಚಿತ್ರವೇನು ಕಮ್ಮಿ ಇತ್ತೆ? ಹೀಗೆ ಪ್ರತಿಭಾವಂತ ನಟರನ್ನ ತಮ್ಮ ಕಲ್ಪನೆಯಲ್ಲಿ ಬೇರೆ ಲೆವಲ್ಗೆ ತೆಗೆದುಕೊಂಡು ಹೋದ (S. S. Rajamouli) ಡೈರೆಕ್ಟರ್ ರಾಜಮೌಳಿ ಅವರ ಮಗಧೀರ ಸಿನಿಮಾ ಸೂಪರ್ ಡೂಪರ್ ಸಿನಿಮಾನೇ ಆಗಿದೆ. ಈ ಚಿತ್ರದ ಮೂಲಕ ಚಿರು ಪುತ್ರ ರಾಮ್ ಚರಣ್ ತೇಜಾ ಎಲ್ಲರ ಹೃದಯದಲ್ಲಿ ಇನ್ನೂ ಇದ್ದಾರೆ.
ಚಿರು ಪುತ್ರನ ಬದುಕು ಬದಲಿಸಿದ ಮಗಧೀರ ಸಿನಿಮಾ
ರಾಮ್ ಚರಣ್ ತೇಜಾ ಅಭಿನಯದ ಮೊದಲ ಸಿನಿಮಾ ಯಾವುದು? ಈ ಪ್ರಶ್ನೆಗೆ ಉತ್ತರ ಚಿರುತಾ (Chirutha) ಅಂತಲೇ ಹೇಳಬೇಕಾಗುತ್ತದೆ. ಪೂರಿ ಜಗನ್ನಾಥ್ ನಿರ್ದೇಶನದ ಮೂಲಕ ರಾಮ್ ಚರಣ್ ತೇಜಾ ಇಂಡಸ್ಟ್ರೀಗೆ ಕಾಲಿಟ್ಟರು.
ಇದಾದ್ಮೇಲೆ ಇದೇ ರಾಮ್ ಚರಣ್ ತೇಜಾ ಲಕ್ ದೊಡ್ಡಮಟ್ಟದಲ್ಲಿ ಮಿಂಚಲು ಒಂದು ಸಿನಿಮಾ ಬಂತು. ಆ ಚಿತ್ರದ ಹೆಸರು ಮಗಧೀರ, ಹಾಗೆ ದೊಡ್ಡಮಟ್ಟದಲ್ಲಿಯೇ ಬಂದ ಈ ಚಿತ್ರವನ್ನ ಬಾಹುಬಲಿ ಡೈರೆಕ್ಟರ್ ಎಸ್.ಎಸ್. ರಾಜಮೌಳಿ ನಿರ್ದೇಶನ ಮಾಡಿದ್ದರು.
ರಾಜಮೌಳಿ ಕಲ್ಪನೆಯ ಸಿನಿಮಾ ಈ ಮಗಧೀರ
ಈ ಚಿತ್ರದ ಪ್ರತಿ ದೃಶ್ಯವೂ ಜನರ ಮನಸನ್ನ ಕದ್ದವು. ರಾಜಮೌಳಿ ಅವರ ಕಲ್ಪನೆಯ ಮಗಧೀರ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಿತು. ಎಂ. ಎಂ. ಕೀರವಾಣಿ ಅವರ ಸಂಗೀತ ಇನ್ನೂ ಜನರ ಮನದಲ್ಲಿ ಉಳಿದುಕೊಂಡಿವೆ.
ಮಗಧೀರ ಚಿತ್ರದ ಪುನರ್ ಜನ್ಮದ ದೃಶ್ಯವಂತು ಸಿಕ್ಕಾಪಟ್ಟೆ ಪಾಪೂಲರ್ ಆಗಿತ್ತು. ಹಾಸ್ಯ ಸ್ಕಿಟ್ಗಳಲ್ಲಿ ಈ ದೃಶ್ಯ ಬೇರೆ ರೂಪದಲ್ಲಿಯೇ ಇರುತ್ತಿತ್ತು. ಅಷ್ಟು ಪ್ರಭಾವ ಭೀರಿದ ಟಾಲಿವುಡ್ನ ಮಗಧೀರ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು.
ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಟಾಲಿವುಡ್ ಮಗಧೀರ
44 ಕೋಟಿ ಬಜೆಟ್ನ ಈ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ 150 ಕೋಟಿ ಆಗಿತ್ತು. ಹಾಗಂತ ವೀಕಿಪಿಡಿಯಾದಲ್ಲಿ ನಿಮಗೆ ಮಾಹಿತಿ ಕೂಡ ಸಿಗುತ್ತದೆ. ಇದರ ಹೊರತಾಗಿ ಸಿನಿಮಾದಲ್ಲಿ ಸಾಕಷ್ಟು ಥ್ರಿಲ್ಲಿಂಗ್ ಎಲಿಮೆಂಟ್ಸ್ ಕೂಡ ಇದೆ.
ಚಿತ್ರದ ನಾಯಕ ನಟ ರಾಮ್ ಚರಣ್ ತೇಜಾ ಇಲ್ಲಿ ಡಬಲ್ ರೋಲ್ ಮಾಡಿದ್ದರು. ಪುನರ್ ಜನ್ಮದ ಕಥೆ ಆಗಿರೋದ್ರಿಂದಲೇ ಕಾಲಭೈರವ ಮತ್ತು ಹರ್ಷ ಅನ್ನುವ ಎರಡು ಪಾತ್ರವನ್ನ ನಿರ್ವಹಿಸಿ ಎಲ್ಲರ ಹೃದಯ ಗೆದ್ದು ಬಿಟ್ಟರು.
ಪುನರ್ ಜನ್ಮದ ಕಥೆಯಲ್ಲಿ ಡಬಲ್ ರೋಲ್
ನಾಯಕಿ ಕಾಜಲ್ ಅಗರವಾಲ್ ಕೂಡ ಎರಡು ರೋಲ್ ಮಾಡಿದ್ದರು. ಪ್ರೆಸೆಂಟ್ ಕಥೆಯಲ್ಲಿ ಇಂದಿರಾ ರೋಲ್ ಮಾಡಿದರೆ, ಪುನರ್ ಜನ್ಮದ ಕಥೆಯಲ್ಲಿ ರಾಣಿ ಮಿತ್ರವಿಂದ ದೇವಿ ರೋಲ್ ಮಾಡಿದ್ದರು.
ಇಂತಹ ಸೂಪರ್ ಹಿಟ್ ಸಿನಿಮಾ ಬಂದು ಈಗ 14 ವರ್ಷಗಳೇ ಕಳೆದಿವೆ. ಆದರೆ ಇದೇ ಚಿತ್ರವನ್ನ ಮತ್ತೆ ರಿಲೀಸ್ ಮಾಡುವ ಪ್ಲಾನ್ ಆರಂಭವಾಗಿದೆ. ಮಗಧೀರದಂತಹ ಚಿತ್ರವನ್ನ ಬೆಳ್ಳಿ ಪರದೆ ಮೇಲೆ ಮತ್ತೆ ನೋಡುವ ಚಾನ್ಸ್ ಇದೆ.
ರಾಮ್ ಚರಣ್ ತೇಜಾ ಜನ್ಮ ದಿನಕ್ಕೆ ಮಗಧೀರ ರೀ-ರಿಲೀಸ್
ಇದಕ್ಕೂ ಹೆಚ್ಚಾಗಿ ಈ ಚಿತ್ರವನ್ನ ಮತ್ತೆ ರಿಲೀಸ್ ಮಾಡೋಕೆ ಒಂದು ಬಲವಾದ ಕಾರಣವೂ ಇದೆ. ಆ ಕಾರಣ ಬೇರೆ ಏನೋ ಅಲ್ಲ, ಮಗಧೀರ ರಾಮ್ ಚರಣ್ ತೇಜಾ ಅವರ ಜನ್ಮ ದಿನ ಇದೆ. ಈ ಹಿನ್ನೆಲೆಯಲ್ಲಿ ರಾಮ್ ಚರಣ್ಗೆ ಸ್ಪೆಷಲ್ ಗಿಫ್ಟ್ ಕೊಡಲು ಈ ಚಿತ್ರವನ್ನ ರೀ-ರಿಲೀಸ್ ಮಾಡಲಾಗುತ್ತಿದೆ.
ಮಗಧೀರ ಚಿತ್ರವನ್ನ ನಿರ್ಮಿಸಿರೋ ಗೀತಾ ಆರ್ಟ್ಸ್ ಕಂಪನಿನೇ ತನ್ನ ಟ್ವಿಟರ್ ಅಕೌಂಟ್ನಲ್ಲಿ ಈ ಒಂದು ವಿಷಯವನ್ನ ಅಧಿಕೃತವಾಗಿ ಹೇಳಿಕೊಂಡಿದೆ. ಆದರೆ ಅದು ಈಗಲೇ ಅಲ್ಲವೇ ಅಲ್ಲ. ಅದಕ್ಕೆ ಇನ್ನೂ ಸಾಕಷ್ಟು ಟೈಮ್ ಇದೆ.
ಇದನ್ನೂ ಓದಿ: Puttakkana Makkalu: ಪುಟ್ಟಕ್ಕನ ಕೊನೆ ಮಗಳು ಸುಮಾ ಸಖತ್ ಕ್ಯೂಟ್, ಶಿಲ್ಪಾ ರಿಯಲ್ ಸ್ಟೋರಿ ಇದು!
ಮಾರ್ಚ್-27 ರಂದು ಮಗಧೀರ ಸಿನಿಮಾ ರೀ-ರಿಲೀಸ್
ಆ ಲೆಕ್ಕದಂತೆ ಮಾರ್ಚ್-27 ರಂದು ರಾಮ್ ಚರಣ್ ತೇಜಾ ಜನ್ಮ ದಿನ ಇದೆ. ಈ ದಿನವೇ ಮಗಧೀರ ಚಿತ್ರವನ್ನ ರೀ-ರಿಲೀಸ್ ಮಾಡೋಕೆ ಪ್ಲಾನ್ ಮಾಡಲಾಗಿದೆ.
ಆದರೆ ಎಷ್ಟು ಥಿಯೇಟರ್ ಚಿತ್ರ ರಿಲೀಸ್ ಆಗುತ್ತದೆ. 14 ವರ್ಷದ ಹಿಂದೆ ಬಂದಿದ್ದ ಈ ಚಿತ್ರಕ್ಕೆ ಹೊಸ ಸ್ಪರ್ಶ ಏನಾದರೂ ಇರುತ್ತದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಎಲ್ಲೂ ಇಲ್ಲ ಬಿಡಿ. ಆದರೆ ಮತ್ತೆ ರಿಲೀಸ್ ಆಗೋ ವಿಷಯ ಮಾತ್ರ ಅಧಿಕೃತವಾಗಿ ಹೊರ ಬಿದ್ದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ