HOME » NEWS » Entertainment » TOLLYWOOD FAMOUS ACTER ENTER TO THE ROCKING STARER KGF MOVIE HG

ಕೆ.ಜಿ.ಎಫ್​ ಅಡ್ಡಕ್ಕೆ ಎಂಟ್ರಿ ಕೊಟ್ಟ ಟಾಲಿವುಡ್​ ಸ್ಟಾರ್​ ನಟಿ!

KGF Chapter-2: ಸಂಜಯ್​ ದತ್​, ರವೀನಾ ಟಂಡನ್​, ರಾವ್​ ರಮೇಶ್​ ದೊಡ್ಡ ದೊಡ್ಡ ಸ್ಟಾರ್​​ ನಟ-ನಟಿಯರು ಅಭಿನಯಿಸಿದ್ದಾರೆ. ಹಾಗಾಗಿ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇಂತಹ ಸಂದರ್ಭ ಮತ್ತೊಬ್ಬ ಸ್ಟಾರ್​ ನಟಿ ಈಗ ಕೆ.ಜಿ.ಎಫ್​ ಚಿತ್ರತಂಡದೊಂಗಿದೆ ಸೇರಿಕೊಂಡಿದ್ದಾರೆ!.

news18-kannada
Updated:May 27, 2020, 11:23 PM IST
ಕೆ.ಜಿ.ಎಫ್​ ಅಡ್ಡಕ್ಕೆ ಎಂಟ್ರಿ ಕೊಟ್ಟ ಟಾಲಿವುಡ್​ ಸ್ಟಾರ್​ ನಟಿ!
ಕೆ.ಜಿ.ಎಫ್​
  • Share this:
2020ರ ಬಹುನಿರೀಕ್ಷಿತ ಸಿನಿಮಾ ಪಟ್ಟಿಯಲ್ಲಿ ರಾಕಿಂಗ್​​ ಸ್ಟಾರ್​ ಯಶ್​ ಅಭಿನಯದ ‘ಕೆ.ಜಿ.ಎಫ್​ ಚಾಪ್ಟರ್​-2‘ ಸಿನಿಮಾ ಕೂಡ ಪ್ರಮುಖವಾದದ್ದು. ದಿನೇ ದಿನೇ ಈ ಸಿನಿಮಾದ ಮೇಲೆ ಕ್ರೇಜ್​ ಜಾಸ್ತಿಯಾಗುತ್ತಿದೆ. ಕೆ.ಜಿ.ಎಫ್​ ಚಾಪ್ಟರ್​ 1 ಸಿನಿಮಾಕ್ಕಿಂತಲೂ ದೊಡ್ಡದಾಗಿ ಸೌಂಡ್​ ಮಾಡಲಿದೆ ಎಂದೇ ಹೇಳಲಾಗುತ್ತಿದೆ. ಮತ್ತೊಂದೆಡೆ ಸಂಜಯ್​ ದತ್​, ರವೀನಾ ಟಂಡನ್​, ರಾವ್​ ರಮೇಶ್​ರಂತಹ​ ದೊಡ್ಡ ದೊಡ್ಡ ಸ್ಟಾರ್​​ ನಟ-ನಟಿಯರು ಅಭಿನಯಿಸಿದ್ದಾರೆ. ಹಾಗಾಗಿ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇಂತಹ ಸಂದರ್ಭ ಮತ್ತೊಬ್ಬ ಸ್ಟಾರ್​ ನಟಿ ಈಗ ಕೆ.ಜಿ.ಎಫ್​  ಚಿತ್ರತಂಡದೊಂಗಿದೆ ಸೇರಿಕೊಂಡಿದ್ದಾರೆ!.

ಹೌದು. ರಾಕಿಂಗ್​ ಸ್ಟಾರ್​ ಯಶ್​​ ನಟನೆಯ ಕೆ.ಜಿ.ಎಫ್​ ಚಾಪ್ಟರ್​ 2 ಸಿನಿಮಾಗೆ ವರ್ಸಟೈಲ್​ ನಟಿ ಎನಿಸಿಕೊಂಡಿರುವ ಈಶ್ವರಿ ರಾವ್​ ಸೇರ್ಪಡೆಯಾಗಿದ್ದಾರೆ. ಬಲ್ಲ ಮೂಲಗಳ ಮಾಹಿತಿ ಪ್ರಕಾರ ಕೆ.ಜಿ.ಎಫ್​​ ಕಥೆಗೆ ತಿರುವು ನೀಡುವಂತಹ ಪಾತ್ರದಲ್ಲಿ ಈಶ್ವರಿ ಅವರು ನಟಿಸುತ್ತಿದ್ದಾರೆ ಎಂದು ಕೇಳಿಬಂದಿದೆ. ಈಶ್ವರಿ ಅವರು ಅದ್ಭುತವಾಗಿ ಅಭಿನಯಿಸಿದ್ದು ನ್ಯಾಷನಲ್​ ಅವಾರ್ಡ್​ ಗಿಟ್ಟಿಸೋ ಮಟ್ಟಕ್ಕೆ ಅವರ ಪಾತ್ರವಿರಲಿದೆ ಎಂಬ ಮಾತುಗಳು ಹರಿದಾಡುತ್ತಿವೆ.

ಈಶ್ವರಿ ರಾವ್​


2ನೇ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿರುವ ನಟಿ ಈಶ್ವರಿ ರಾವ್​!

ನಟಿ ಈಶ್ವರಿಅವರು  ರಜನಿಕಾಂತ್​ ನಟನೆಯ ‘ಕಾಲಾ‘ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಅವರ ಜನಪ್ರಿಯತೆಗೆ ಕಾರಣವಾಯಿತು. ಆನಂತರ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ತೆಲುಗು ಮಾತೃಭಾಷೆಯಾಗಿದ್ದರು, ಕನ್ನಡ, ಮಲಯಾಳಂ, ತಮಿಳು ಭಾಷೆಯಲ್ಲಿ ನಟಿಸಿದ್ದಾರೆ.

ಮೇಘ ಮಾಲೆ


ಕನ್ನಡ ಸಿನಿಮಾದಲ್ಲಿ ನಟಿ ಈಶ್ವರಿ ರಾವ್​ ನಟಿಸುತ್ತಿರುವುದು ಇದೇ ಮೊದಲೇನಲ್ಲ. 1995ರಲ್ಲಿ ಎಸ್​ ನಾರಾಯಣ್​ ನಿರ್ದೇಶನದ ‘ಮೇಘ ಮಾಲೆ‘ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಅಂದಿಗೆ ಸೂಪರ್​ ಹಿಟ್​ ಆಗಿತ್ತು. ಇದೀಗ 2ನೇ ಬಾರಿಗೆ ಕನ್ನಡ ಬಹುನಿರೀಕ್ಷಿತ ಕೆ.ಜಿ.ಎಫ್​ ಚಿತ್ರದಲ್ಲಿ ನಟಿಸಿದ್ದಾರೆ.Jio Fiber: ಜಿಯೋ ಫೈಬರ್​ ಬಳಕೆದಾರರಿಗೆ ಡಬಲ್​ ಡೇಟಾ ಆಫರ್​!
First published: May 27, 2020, 10:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories