ಟಾಲಿವುಡ್‌ನ ಹೆಸರಾಂತ ನಿರ್ದೇಶಕ ರಾಮ್‌ಗೋಪಾಲ್ (Ram Gopal Varma) ವರ್ಮಾ ಹಳೆ ಕಥೆಯೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯಾರಿಗೂ ತಿಳಿಯದೇ ಇರೋ ವಿಷಯ ಇದೇನೂ ಅಲ್ಲ. ಆದರೆ ಇದು ಅಷ್ಟೇ ರೋಚಕವಾಗಿಯೇ ಇದೆ. ಇದನ್ನ (Varma Untold Story) ಓದುತ್ತ ಹೋದ್ರೆ, ಇಂಟ್ರಸ್ಟ್ ಹುಟ್ಟಿಕೊಳ್ಳುತ್ತದೆ. ಇದರಲ್ಲಿರೋ ಆ ಅಸಲಿ ಮ್ಯಾಟರ್ ಹಾಗಿದೆ. ಅದನ್ನ ಇಲ್ಲಿ ಹೇಳ್ತಿದ್ದೇವೆ. ಇದು ರಾಮ್ ಗೋಪಾಲ್ ವರ್ಮಾ ಚಿತ್ರ ಬದುಕಿನ ಆರಂಭದ ದಿನಗಳ ಕಥೆ ಆಗಿದೆ. ಆ ಒಂದು (Ram Gopal Varma) ಆರಂಭದ ದಿನಗಳಲ್ಲಿ ಏನೆಲ್ಲ ಆಗಿತ್ತು? ರಾಮ್ ಗೋಪಾಲ್ ವರ್ಮಾ ಒಬ್ಬ ಸಕ್ಸಸ್‌ಫುಲ್ ಡೈರೆಕ್ಟರ್ ಆಗಿದ್ದು ಹೇಗೆ ? ಮೊದಲ (RGV Untold Story) ಸಿನಿಮಾ ಸಿಕ್ಕದ್ದು ಹೇಗೆ ? ಈ ಎಲ್ಲ ವಿಚಾರ ಇಲ್ಲಿದೆ.
ಸಿವಿಲ್ ಇಂಜಿನಿಯರ್ RGV ಡೈರೆಕ್ಟರ್ ಆಗಿದ್ದು ಹೇಗೆ ?
ರಾಮ್ ಗೋಪಾಲ್ ವರ್ಮಾ ವಿದ್ಯಾವಂತರು. ವಿಜಯವಾಡದಲ್ಲಿರೋ ಸಿದ್ಧಾರ್ಥ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಮಾಡಿದ್ದರು. ಹಾಗಂತ ಹಮ್ಮು-ಬಿಮ್ಮು ಏನೂ ಇರಲಿಲ್ಲ. ಓದಿದ್ದು ಇಂಜಿನಿಯರಿಂಗ್ ಆದರೂ ಕ್ಯಾಸೆಟ್ ಅಂಗಡಿ ಇಡೋ ಮೂಲಕ ಹೊಸ ಉದ್ಯೋಗ ಶುರು ಮಾಡಿದ್ದರು.
ತಂದೆ ಕೃಷ್ಣಂ ರಾಜು ಅವರಿಗೆ ಇದು ಅಷ್ಟೇನೂ ಒಪ್ಪಿಗೆ ಇರಲಿಲ್ಲ. ಮಗನ ಈ ನಡೆಗೆ ಸಣ್ಣದೊಂದು ಬೇಸರವೂ ಇತ್ತು. ಆದರೆ ಮಗನನ್ನ ಒಂದ್ ಒಳ್ಳೆ ಕೆಲಸಕ್ಕೆ ಹಚ್ಚಬೇಕು ಅಂತಲೇ ತುಡಿಯುತ್ತಿದ್ದರು. ಹಾಗಾಗಿಯೇ ತಾವು ಸೌಂಡ್ ರೆಕಾರ್ಡಿಸ್ಟ್ ಆಗಿ ಕೆಲಸ ಮಾಡುತ್ತಿದ್ದ, ನಾಗಾರ್ಜುನ್ ಅವರ ಅನ್ನಪೂರ್ಣ ಸ್ಟುಡಿಯೋಸ್‌ನಲ್ಲಿಯೇ ಏನಾದರು ಕೆಲಸ ಕೊಡಿಸಬೇಕು ಅಂತಲೇ ಪ್ಲಾನ್ ಮಾಡಿದ್ದರು.
RGV ಅನ್ನಪೂರ್ಣ ಸ್ಟುಡಿಯೋಸ್‌ಗೆ ಬಂದದ್ದು ಹೇಗೆ?
ಆ ಪ್ರಕಾರ ಯುವ ರಾಮ್ ಗೋಪಾಲ್ ವರ್ಮಾ ಅವರನ್ನ ತಂದೆ ಕೃಷ್ಣಂ ರಾಜು ಅನ್ನಪೂರ್ಣ ಸ್ಟುಡಿಯೋಸ್‌ಗೆ ತಂದು ಬಿಟ್ಟರು. ಆ ವೇಳೆಗೆ ನಾಗಾರ್ಜುನ್ ಮತ್ತು ನಾಗೇಶ್ವರ್ ರಾವ್ ಅವರ "ಕಲೆಕ್ಟರ್ ಗಾರಿ ಅಬ್ಬಾಯಿ" ಸಿನಿಮಾದ ಚಿತ್ರೀಕರಣ ನಡೆದಿತ್ತು. ಈ ಒಂದು ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಸೇರಿದ್ದರು.
ಈ ಸಿನಿಮಾ ಆದ್ಮೇಲೆ ರಾಮ್ ಗೋಪಾಲ್ ವರ್ಮಾ ಇದೇ ಬ್ಯಾನರ್‌ನಲ್ಲಿ ಉಳಿದರು. ಇದೇ ಬ್ಯಾನರ್‌ನ ರಾವುಗಾರಿಲ್ಲು ಸಿನಿಮಾದಲ್ಲೂ ವರ್ಮಾ ಸಹಾಯಕ ನಿರ್ದೇಶಕರಾಗಿಯೇ ಕೆಲಸ ಮಾಡಿದರು.
RGV ಹೇಳಿದ್ದ ಆ ಕಥೆಯನ್ನ ನಾಗಾರ್ಜುನ್ ರಿಜೆಕ್ಟ್ ಮಾಡಿದ್ದೇಕೆ ?
ಇದೇ ಸಮಯದಲ್ಲಿಯೇ ರಾಮ್ ಗೋಪಾಲ್ ವರ್ಮಾ ನಟ ನಾಗಾರ್ಜುನ್ ಅವರಿಗೂ ಹತ್ತಿರವಾದರು. ತಮ್ಮಲ್ಲಿದ್ದ ಕಥೆಗಳನ್ನ ಹೇಳುವಷ್ಟು ಆತ್ಮೀಯತೆ ಬೆಳೆದಿತ್ತು. ಆಗಲೇ ರಾಮ್ ಗೋಪಾಲ್ ವರ್ಮಾ ಒಂದು ಕಥೆ ಹೇಳಿದ್ದರು. ಆ ಕಥೆಗೆ "ರಾತ್ರಿ" ಅನ್ನೋ ಹೆಸರಿತ್ತು. ಆದರೆ ಅದು ಹಾರರ್ ಕಥೆ ಆಗಿತ್ತು. ಕೇಳಿದ್ದ ನಾಗಾರ್ಜುನ್ ರಿಜೆಕ್ಟ್ ಮಾಡಿದ್ದರು.
ಆದರೆ ರಾಮ್ ಗೋಪಾಲ್ ವರ್ಮಾ ಅಷ್ಟಕ್ಕೆ ಸುಮ್ಮನೆ ಆಗಲಿಲ್ಲ. ತಮ್ಮ ಕಾಲೇಜಿನಲ್ಲಿ ನಡೆದ ಒಂದು ಘಟನೆಯನ್ನ ಕಥೆ ಮಾಡಿಕೊಳ್ತಾರೆ. ಆ ಕಥೆಯನ್ನೆ ನಾಗಾರ್ಜುನ್ ಮುಂದೆ ಹೇಳುತ್ತಾರೆ. ಆ ಕಥೆಯನ್ನ ಒಪ್ಪಿದ್ದ ನಾಗಾರ್ಜುನ್ ಓಕೆ ನೋ ಪ್ರಾಬ್ಲಂ ಈ ಕಥೆಯನ್ನ ಸಿನಿಮಾ ಮಾಡೋಣ ಅಂತಾರೆ.
ಆದರೆ ರಾಮ್ ಗೋಪಾಲ್ ವರ್ಮಾ ಆಗತಾನೇ ಸಿನಿಮಾ ರಂಗಕ್ಕೆ ಬಂದಿದ್ದರು. ಅವರಿಗೆ ಇನ್ನೂ ಚಿತ್ರಕಥೆ ರಚಿಸೋ ಕಲೆ ಗೊತ್ತಿರಲಿಲ್ಲ. ಹಾಗಾಗಿಯೆ ಅವರು ಕೆ.ರಾಘವೇಂದ್ರ ರಾವ್ ಅವರ ಸಹಾಯ ಕೇಳುತ್ತಾರೆ. ಅವರು ಕಥೆ ಕೇಳಿ ಒಂದಷ್ಟು ಬದಲಾವಣೆ ಹೇಳ್ತಾರೆ.
ಟಾಲಿವುಡ್‌ನಲ್ಲಿ ಹೊಸ ಅಲೆ ಎಬ್ಬಿಸಿದ್ದ ಸೂಪರ್ ಹಿಟ್ "ಶಿವ" ಸಿನಿಮಾ
ಹೌದು ಹಾಗೆ ಶುರುವಾದ ಆ ಸಿನಿಮಾದ ಹೆಸರು "ಶಿವ" ಅಕ್ಟೋಬರ್-05,1989 ರಂದು ಈ ಚಿತ್ರ ರಿಲೀಸ್ ಆಗಿತ್ತು. ಇಡೀ ಟಾಲಿವುಡ್ ಸೇರಿದಂತೆ ಎಲ್ಲೆಡೆ ಈ ಸಿನಿಮಾ ಹೊಸ ಅಲೆಯನ್ನ ಎಬ್ಬಿಸಿತ್ತು. ಬಿಸಿರಕ್ತದ ಯುವಕರೆಲ್ಲ ಸಿನಿಮಾ ನೋಡಿ ಥ್ರಿಲ್ ಆಗಿದ್ದರು.
ಸಿನಿಮಾ ಸೂಪರ್ ಹಿಟ್ ಆಯಿತು. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು ಈ ಸಿನಿಮಾ. ಈ ಚಿತ್ರ ಬರೋ ಮೊದಲು ಬೇರೆ ರೀತಿಯ ಸಿನಿಮಾಗಳೇ ಇದ್ದವು. ಆದರೆ ಶಿವ ಸಿನಿಮಾ ಹೊಸ ಕ್ರೇಜ್ ಹುಟ್ಟಹಾಕಿತ್ತು.
ರಾಮ್ ಗೋಪಾಲ್ ವರ್ಮಾ ಮೊದಲ ಚಿತ್ರದ ಬಜೆಟ್ ಎಷ್ಟು ಗೊತ್ತೇ?
ಅಂತಹ ಈ ಚಿತ್ರವನ್ನ ನಾಗಾರ್ಜುನ್ ಅವರ ಬ್ಯಾನರ್‌ನಲ್ಲಿಯೇ ತಯಾರಿಸಲಾಗಿತ್ತು. ಕೇವಲ 75 ಲಕ್ಷ ಬಜೆಟ್‌ನಲ್ಲಿ ಇಡೀ ಸಿನಿಮಾ ರೆಡಿ ಆಗಿತ್ತು. ಕೋಟಿ ಕೋಟಿ ದುಡ್ಡನ್ನ ಈ ಸಿನಿಮಾ ಬಾಚಿಕೊಂಡಿತ್ತು. ಈ ಮೂಲಕ ದಕ್ಷಿಣದಲ್ಲಿ ರಾಮ್ ಗೋಪಾಲ್ ವರ್ಮಾ ಎಂಬ ರಿಯಲಿಸ್ಟಿಕ್ ಡೈರೆಕ್ಟರ್ ಹುಟ್ಟಿಕೊಂಡಿದ್ದರು.
ಇದನ್ನೂ ಓದಿ: Kichcha Sudeepa: ಕಿಚ್ಚ ಸುದೀಪ್ ಕಂಠಸಿರಿಯಲ್ಲಿ ವಿಷ್ಣು ಹಾಡು, ವಿಡಿಯೋ ಫುಲ್ ವೈರಲ್!
ದಕ್ಷಿಣದ ರಾಮ್ ಗೋಪಾಲ್ ವರ್ಮಾ ಕೊಟ್ಟ ಸಿನಿಮಾಗಳು ಸಾಕಷ್ಟು ಇವೆ. ಅವುಗಳನ್ನ ನೋಡಿದ್ರೆ ತುಂಬಾ ಖುಷಿನೂ ಆಗುತ್ತದೆ. ಆದರೆ ಈಗ ರಾಮ್ ಗೋಪಾಲ್ ವರ್ಮಾ ಬದಲಾಗಿದ್ದಾರೆ. ಸಿನಿಮಾಗಳು ಅಷ್ಟೇನೂ ಕೈ ಹಿಡಿಯುತ್ತಿಲ್ಲ ನೋಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ