Dasara Teaser: ಉತ್ತರ ಕರ್ನಾಟಕ ಭಾಷೆ ಮಾತನಾಡಿದ ನಾನಿ! ದಸರಾ ಟೀಸರ್ ವೈರಲ್

ದಸರಾ ಚಿತ್ರದಲ್ಲಿ ಉತ್ತರ ಕರ್ನಾಟಕದ ಭಾಷೆ ಬಳಕೆ!

ದಸರಾ ಚಿತ್ರದಲ್ಲಿ ಉತ್ತರ ಕರ್ನಾಟಕದ ಭಾಷೆ ಬಳಕೆ!

ದಸರಾ ಸಿನಿಮಾ ಹಿಟ್ ಆಗುತ್ತದೆ. ಕಳೆದ ವರ್ಷ ಟ್ರಿಪಲ್ ಆರ್, ಕೆಜಿಎಫ್-2, ಕಾಂತಾರ ಸಿನಿಮಾ ಬಂದು ಹಿಟ್ ಲಿಸ್ಟ್ ಸೇರಿವೆ. ಅದೇ ರೀತಿ ನಮ್ಮ ದಸರಾ ಚಿತ್ರವೂ ಆ ಹಿಟ್ ಲಿಸ್ಟ್​ಗೆ ಸೇರಲಿದೆ ಎಂದು ನಾನಿ ಟೀಸರ್ ರಿಲೀಸ್ ಸಮಯದಲ್ಲಿ ಹೇಳಿದ್ದಾರೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಟಾಲಿವುಡ್​​ನಲ್ಲಿ ಬಿಗ್ ಬಜೆಟ್​ನ ದಸರಾ (Dasara Movie Teaser Released) ಚಿತ್ರ ಭರ್ಜರಿ ಸದ್ದು ಮಾಡುತ್ತಿದೆ. ಎಲ್ಲ ಭಾಷೆಯ ಸ್ಟಾರ್​ಗಳು ಈ ಚಿತ್ರದ ಟೀಸರ್ ರಿಲೀಸ್ ಮಾಡಿದ್ದಾರೆ. ತಮ್ಮದೆ ರೀತಿಯಲ್ಲಿ ಚಿತ್ರಕ್ಕೆ ಗುಡ್ ಲಕ್ ಹೇಳಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ (Pan India Release) ಹೀಗೆ ಪಂಚ ಭಾಷೆಯಲ್ಲಿ ರಿಲೀಸ್ ಆಗುತ್ತಿರೋ ಈ ಚಿತ್ರದ ಟೀಸರ್​ ಸೂಪರ್ ಆಗಿದೆ. ವಿಶೇಷವಾಗಿ ಕನ್ನಡದ ಟೀಸರ್​ನಲ್ಲಿ (Dasara Kannada Teaser Released) ಉತ್ತರ ಕರ್ನಾಟಕದ ಭಾಷೆಯನ್ನ ಬಳಸಲಾಗಿದೆ. ಗಂಡುಮೆಟ್ಟಿದ ನಾಡಿನ ಖಡಕ್ ಭಾಷೆಯನ್ನು ನಾಯಕ ನಟ ನಾನಿ (Telugu Actor Nani Movie) ಇಲ್ಲಿ ಮಾತನಾಡುತ್ತಾರೆ. ಕನ್ನಡದ ಈ ಟೀಸರ್​ನ ವಿಶ್ಲೇಷಣೆ ಇಲ್ಲಿದೆ ಓದಿ.


ಟಾಲಿವುಡ್ ದಸರಾ ಚಿತ್ರದ ಕನ್ನಡ ಟೀಸರ್ ಹೇಗಿದೆ?
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರಿಲೀಸ್ ಮಾಡಿದ ದಸರಾ ಚಿತ್ರದ ಟೀಸರ್ ಹೇಗಿದೆ ಗೊತ್ತೇ? ಇದರಲ್ಲಿ ಏನು ವಿಶೇಷವಾಗಿದೆ. ಸಿನಿಮಾದಲ್ಲಿ ಬರುವ ಪಾತ್ರಗಳ ಪರಿಚಯ ಹೇಗೆ ಆಗಿದೆ. ನಾಯಕನ ಎಂಟ್ರಿ ಹೇಗಿದೆ? ನಾಯಕ ನಾನಿ ಡೈಲಾಗ್ ಹೇಗಿವೆ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಪುಟ್ಟದಾಗಿಯೇ ಉತ್ತರ ಸಿಕ್ಕಿದೆ.


Tollywood Dasara Movie Kannada Teaser Review
ಟಾಲಿವುಡ್ ದಸರಾ ಚಿತ್ರದ ಕನ್ನಡ ಟೀಸರ್ ಹೇಗಿದೆ?


ಟಾಲಿವುಡ್​ನ ದಸರಾ ಚಿತ್ರದ ಟೀಸರ್ ಜಬರ್​ದಸ್ತ್ ಆಗಿಯೇ ಇದೆ. ಇದರಲ್ಲಿ ನಾಯಕ ನಟ ನಾನಿ ಸೂಪರ್ ಆಗಿಯೇ ಕಾಣಿಸಿಕೊಂಡಿದ್ದಾರೆ. ರಗಢ್ ರೋಲ್​ ಆಗಿರೋದ್ರಿಂದಲೋ ಏನೋ? ಹೊಡೆಯೋ ಡೈಲಾಗ್ ಕೂಡ ಸಖತ್ ಆಗಿಯೇ ಬಂದಿವೆ.
ದಸರಾ ಚಿತ್ರದಲ್ಲಿ ಉತ್ತರ ಕರ್ನಾಟಕದ ಭಾಷೆ ಬಳಕೆ!
ಮೆಗಾ ಬಜೆಟ್​ನ ದಸರಾ ಎಲ್ಲ ಭಾಷೆಯಲ್ಲೂ ಬರ್ತಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಹೀಗೆ ಎಲ್ಲ ಭಾಷೆಯಲ್ಲೂ ಬರ್ತಿರೋ ಈ ಚಿತ್ರಕ್ಕೆ ನೇಟಿವಿಟಿ ಟಚ್ ಕೊಡಲಾಗಿದೆ.


ಆಯಾ ಭಾಷೆಯ ಪ್ರಾದೇಶಿಕ ಭಾಷೆಯ ಸೊಗಡನ್ನು ಡಬ್ಬಿಂಗ್​ನಲ್ಲೂ ತರಲಾಗಿದೆ. ಆ ಲೆಕ್ಕದಲ್ಲಿ ರಕ್ಷಿತ್ ಶೆಟ್ಟಿ ರಿಲೀಸ್ ಮಾಡಿರೋ ದಸರಾ ಚಿತ್ರದ ಕನ್ನಡದ ಟೀಸರ್ ಫುಲ್ ಖಡಕ್ ಆಗಿಯೇ ಇದೆ.


ನಾಯಕ ನಟ ನಾನಿಯ ಸಖತ್ ಖಡಕ್ ಡೈಲಾಗ್
ಈ ಚಿತ್ರದಲ್ಲಿ ನಾನಿಯ ಪಾತ್ರ ಖಡಕ್ ಆಗಿಯೇ ಇದೆ. ಈ ಹಿನ್ನೆಲೆಯಲ್ಲಿ ಎಲ್ಲ ಭಾಷೆಯಲ್ಲಿ ಇದನ್ನ ಆಯಾ ಭಾಷೆಯನ್ನು ಖಡಕ್ ಆಗಿಯೇ ತೋರಲಾಗಿದೆ. ಕನ್ನಡದಲ್ಲಿ ಉತ್ತರ ಕರ್ನಾಟಕದ ಭಾಷೆಯನ್ನ ಬಳಸಿಕೊಳ್ಳಲಾಗಿದೆ. ಉತ್ತರ ಕರ್ನಾಟಕದ ರಗಢ್ ಭಾಷೆಯನ್ನೆ ನಾನಿಯ ಪಾತ್ರ ಇಲ್ಲಿ ಮಾತನಾತ್ತದೆ. ಅದರ ಝಲಕ್ ನಿಮಗೆ ಕನ್ನಡ ಟೀಸರ್​ನಲ್ಲಿ ಸಿಗುತ್ತದೆ.
ತೆಲುಗು ದಸರಾ ಚಿತ್ರದಲ್ಲಿ ಕನ್ನಡಿಗ ದೀಕ್ಷಿತ್ ಶೆಟ್ಟಿ
ದಸರಾ ಚಿತ್ರ ಬಿಗ್ ಬಜೆಟ್​​ನಲ್ಲಿ ತಯಾರಾಗಿದೆ. ಈ ಬಿಗ್ ಬಜೆಟ್​​ ಚಿತ್ರದಲ್ಲಿ ಕನ್ನಡದ ದಿಯಾ ಚಿತ್ರದ ನಾಯಕ ನಟ ದೀಕ್ಷಿತ್ ಶೆಟ್ಟಿ ಕೂಡ ಅಭಿನಯಿಸಿದ್ದಾರೆ. ಮಹಾನಟಿ ಚಿತ್ರ ಖ್ಯಾತಿಯ ನಟಿ ಕೀರ್ತಿ ಸುರೇಶ್ ಇಲ್ಲಿ ನಾನಿಗೆ ಜೋಡಿ ಆಗಿದ್ದಾರೆ. ಖಡಕ್ ಕಂಠಸಿರಿಯ ನಟ ಸಾಯಿ ಕುಮಾರ್ ಅವರೂ ಈ ಚಿತ್ರದಲ್ಲಿ ಖಡಕ್ ರೋಲ್​ ಮಾಡಿದ್ದಾರೆ.


ಇದೇ ಮಾರ್ಚ್-30ಕ್ಕೆ ದಸರಾ Pan India ರಿಲೀಸ್
ದಸರಾ ಚಿತ್ರ ಹಾಡುಗಳಿಂದಲೇ ಸದ್ದು ಮಾಡಿದೆ. ಸಂತೋಷ್ ನಾರಾಯಣನ್ ಸಂಗೀತದ ಹಾಡುಗಳು ಈಗಾಗಲೇ ಮೋಡಿ ಮಾಡಿವೆ. ಚಿತ್ರದ ಟೀಸರ್ ಅಂತೂ ಬೇಜಾನ್ ಭರವಸೆ ಮೂಡಿಸಿದೆ.


ಚಿತ್ರದ ಟೀಸರ್ ಸಮಯದಲ್ಲಿ ನಾಯಕ ನಟ ನಾನಿ ಮಾತನಾಡಿದ್ದಾರೆ. ಚಿತ್ರದ ಬಗ್ಗೆ ಭಾರೀ ಭರವಸೆಯಲ್ಲಿಯೇ ಹೇಳಿಕೊಂಡಿದ್ದಾರೆ. ಅವರ ಮಾತು ಕೇಳಿದ್ರೆ, ಈ ಚಿತ್ರದ ನಾನಿಗೆ ತುಂಬಾ ಖುಷಿ ತಂದಿದೆ ಅಂತಲೇ ಹೇಳಬಹುದು. ದೊಡ್ಡ ಹಿಟ್ ಆಗೋ ಭರವಸೆಯನ್ನು ನಾನಿಗೆ ಮೂಡಿಸಿದೆ ಅಂತಲೇ ತಿಳಿಯಬಹುದು. ಅದೇನೂ ಅನ್ನೋದು ಇಲ್ಲಿದೆ ಓದಿ.


Tollywood Dasara Movie Kannada Teaser Review
ನಾಯಕ ನಟ ನಾನಿಯ ಸಖತ್ ಖಡಕ್ ಡೈಲಾಗ್


ದಸರಾ ಸಿನಿಮಾ ಹಿಟ್ ಆಗುತ್ತದೆ. ಕಳೆದ ವರ್ಷ ಟ್ರಿಪಲ್ ಆರ್, ಕೆಜಿಎಫ್-2, ಕಾಂತಾರ ಸಿನಿಮಾ ಬಂದು ಹಿಟ್ ಲಿಸ್ಟ್ ಸೇರಿವೆ. ಅದೇ ರೀತಿನೇ ನಮ್ಮ ದಸರಾ ಚಿತ್ರವೂ ಆ ಹಿಟ್ ಲಿಸ್ಟ್​ಗೆ ಸೇರಲಿದೆ ಎಂದು ನಾನಿ ಟೀಸರ್ ರಿಲೀಸ್ ಸಮಯದಲ್ಲಿ ಹೇಳಿದ್ದಾರೆ.


ಇದನ್ನೂ ಓದಿ: Keerthy Suresh: ದಳಪತಿ ವಿಜಯ್ ಜೊತೆ 'ಮಹಾನಟಿ' ಮದುವೆ! ವದಂತಿ ಬಗ್ಗೆ ಕೀರ್ತಿ ಸುರೇಶ್ ತಾಯಿ ಕೊಟ್ರು ಸ್ಪಷ್ಟನೆ


ದಸರಾ ಸಿನಿಮಾವನ್ನು ಶ್ರೀಕಾಂತ್ ಒಡೆಲಾ ನಿರ್ದೇಶನದ ಮಾಡಿದ್ದಾರೆ. ಬಹು ದಿನಗಳಿಂದಲೂ ಈ ಚಿತ್ರದ ಮೇಲೆ ಕೆಲಸ ಮಾಡಿದ್ದಾರೆ. ಮಾರ್ಚ್-30 ರಂದು ಈ ಚಿತ್ರದ ಎಲ್ಲ ಶ್ರಮಕ್ಕೂ ಒಂದು ರಿಸಲ್ಟ್ ಸಿಗಲಿದೆ. ಸದ್ಯಕ್ಕೆ ಚಿತ್ರದ ಟೀಸರ್ ಫುಲ್ ಸೌಂಡ್ ಮಾಡುತ್ತಿದೆ.

First published: