ಡಿಸೆಂಬರ್ 2 ರಂದು ಬಿಡುಗಡೆಯಾದ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರ ಅಖಾಂಡ (Akhanda) ಚಿತ್ರವು 2021 ರ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ. ಬಿಡುಗಡೆಯಾದ ಎರಡು ತಿಂಗಳಾದರು ಸಹ ಚಲನಚಿತ್ರವು (Film) ಇನ್ನೂ ಕೆಲವು ಚಿತ್ರಮಂದಿರಗಳಲ್ಲಿ ಓಡುತ್ತಿದೆ, ಆದರೆ ಅದು ಕಲೆಕ್ಷನ್ಗೆ ಸೇರುವುದಿಲ್ಲ. ಬಾಲಕೃಷ್ಣ-ಬೋಯಪತಿ (Bayopati) ಜೋಡಿಯ ಮೂರನೇ ಚಿತ್ರ ವಿಶ್ವಾದ್ಯಂತ 120 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿದೆ. ಇದು ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದಿದ್ದರೂ, ಚಲನಚಿತ್ರವು ಪ್ರೇಕ್ಷಕರಿಗೆ ಇಷ್ಟವಾಗಿದೆ ಎಂಬುದರಲ್ಲಿ ಯಾವುದೇ ಸುಳ್ಳಿಲ್ಲ,
ಅದರಲ್ಲೂ ವಿಶೇಷವಾಗಿ ಭಾರತೀಯ ಪುರಾಣದ ಅಂಶಗಳು ಜನರನ್ನು ಸೆಳೆದಿವೆ. ಈ ಚಿತ್ರವು ನಂದಮೂರಿ ಬಾಲಕೃಷ್ಣ ಅವರ ವೃತ್ತಿಜೀವನದಲ್ಲಿ ಟಾಪ್ ಗಳಿಕೆಯಾದ ಚಿತ್ರ ಎಂದು ಸಹ ಹೇಳಲಾಗಿದೆ. ಇನ್ನು ಈ ಚಿತ್ರದ ಮುಂದಿನ ಭಾಗ ಸಹ ಬರಲಿದೆ ಎಂಬ ಗುಸುಗುಸು ಇದ್ದು, ಸಧ್ಯದಲ್ಲೇ ತಯಾರಿ ಆರಂಭವಾಗಲಿದೆ ಎನ್ನಲಾಗುತ್ತಿದೆ.
ಬಾಲಕೃಷ್ಣ ಮತ್ತು ಬೋಯಪತಿ ಶ್ರೀನು ಇಬ್ಬರೂ ಖಂಡಿತವಾಗಿಯೂ ಚಿತ್ರದ ಮುಂದುವರಿದ ಭಾಗದ ಬಗ್ಗೆ ಆಲೋಚಿಸಿದ್ದಾರೆ. ಚಿತ್ರದಲ್ಲಿನ ಕೊನೆಯ ಭಾಗದಲ್ಲಿ, ಅಖಂಡ (ಅಘೋರ) ಪಾತ್ರದಲ್ಲಿ ಬಾಲಕೃಷ್ಣ ತನ್ನ ಸೊಸೆಗೆ ಭವಿಷ್ಯದಲ್ಲಿ ಯಾವುದೇ ರೀತಿಯ ತೊಂದರೆಯಾದರೆ ಖಂಡಿತವಾಗಿಯೂ ಅವಳಿಗೆ ಸಹಾಯ ಮಾಡಲು ಹಿಂತಿರುಗುತ್ತೇನೆ ಎಂದು ಭರವಸೆ ನೀಡುತ್ತಿರುವುದು ಕಂಡುಬರುತ್ತದೆ. ಚಿತ್ರಕ್ಕೆ ಈ ಓಪನ್ ಎಂಡ್ ಎಂದರೆ ಸೀಕ್ವೆಲ್ ಗೆ ತುಂಬಾ ಒಳ್ಳೆಯ ಸ್ಕೋಪ್ ಇದೆ.
ಇದನ್ನೂ ಓದಿ: ಹೋಮ್ ಲೋನ್-ಕಾರ್ ಲೋನ್ ಬಾಲಯ್ಯ `ಸೈಕ್ಲೋನ್’, ಏನ್ ಮಸ್ತ್ ಡೈಲಾಗ್ಸ್ ಹೊಡಿತಾರಪ್ಪ ಈ ಆಂಟಿ!
ಈ ಚಿತ್ರದ ತಯಾರಕರು ಇನ್ನೂ ಸ್ಕ್ರಿಪ್ಟ್ ಅನ್ನು ನಿರ್ಧರಿಸದಿದ್ದರೂ, ಫ್ರ್ಯಾಂಚೈಸ್ ಅನ್ನು ಹೇಗೆ ಮುಂದಕ್ಕೆ ಕೊಂಡೊಯ್ಯುವುದು ಎಂಬುದರ ಕುರಿತು ಅವರು ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಈ ಚಿತ್ರತಂಡವು ಶೀಘ್ರದಲ್ಲೇ ಭೇಟಿಯಾಗಿ ಡ್ರಾಫ್ಟ್ ಅನ್ನು ಅಂತಿಮಗೊಳಿಸಿ ಲಾಕ್ ಮಾಡಲು ಯೋಜಿಸುತ್ತಿದೆ, ”ಎಂದು ಮೂಲವೊಂದು ತಿಳಿಸಿದೆ.
ಬಾಲಕೃಷ್ಣ ಅವರು ಈಗಾಗಲೇ ಎರಡು ಸಿನಿಮಾಗಳಲ್ಲಿ ನಿರ್ದೇಶಕ ಗೋಪಿಚಂದ್ ಮಾಲಿನೇನಿ ಮತ್ತು ಇನ್ನೊಂದು ಚಲನಚಿತ್ರ ನಿರ್ಮಾಪಕ ಅನಿಲ್ ರವಿಪುಡಿ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಮತ್ತೊಂದೆಡೆ, ಬೋಯಪತಿ ಈಗಾಗಲೇ ತಮ್ಮ ಮುಂದಿನ ಚಿತ್ರದಲ್ಲಿ ಬ್ಯುಸಿಯಿದ್ದು, ಅದು ಮತ್ತೊಂದು ಕಮರ್ಷಿಯಲ್ ಎಂಟರ್ಟೈನರ್ ಆಗಲಿದೆ. ಚಿತ್ರ ನಿರ್ಮಾಪಕರು ಅಲ್ಲು ಅರ್ಜುನ್ ಮತ್ತು ಚಿರಂಜೀವಿ ಅವರೊಂದಿಗೆ ಮುಂಚಿತವಾಗಿ ಮಾತುಕತೆ ನಡೆಸುತ್ತಿದ್ದಾರೆ. ಆದ್ದರಿಂದ ಅಖಂಡ 2 2023 ರ ಮೊದಲಾರ್ಧದಲ್ಲಿ ಮಾತ್ರ ಪ್ರೇಕ್ಷಕರಿಗೆ ಸಿಗಲಿದೆ ಎನ್ನಲಾಗಿದೆ.
ಒಂದು ಸಿನಿಮಾ ಸೂಪರ್ ಹಿಟ್ ಆದಾಗ ಅದರ ಸೀಕ್ವೆಲ್ ಬಗ್ಗೆ ಬೇಡಿಕೆ ಹೆಚ್ಚಾಗುತ್ತೆ. ಅದರಂತೆ ಬಾಲಕೃಷ್ಣ ಅಭಿಮಾನಿಗಳು 'ಅಖಂಡ 2' ಬೇಕು ಅಂತ ಒತ್ತಡ ಹೇರಿದ್ದು, ನಿರ್ದೇಶಕ ಬೋಯಪಟ್ಟಿ ಶ್ರೀನು ಪಾಸಿಟಿವ್ ಉತ್ತರ ನೀಡಿದ್ದರು. ಟಾಲಿವುಡ್ ದಿಗ್ಗಜ ಬಾಲಕೃಷ್ಣ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ದೊಡ್ಡ ಯಶಸ್ಸು ಕಂಡಿರಲಿಲ್ಲ. ಇನ್ನೊಂದು ಕಡೆ ಬೋಯಪಟ್ಟು ಶ್ರೀನು ಕೂಡ ಸೋಲಿನ ಸುಳಿಗೆ ಸಿಕ್ಕು ಒದ್ದಾಡುತ್ತಿದ್ದರು. ಒಂದು ಅದ್ಭುತ ಗೆಲುವಿಗಾಗಿ ಎದುರು ನೋಡುತ್ತಿದ್ದ ಇಬ್ಬರಿಗೂ ಮರುಜನ್ಮ ನೀಡಿದ್ದು 'ಅಖಂಡ'. ಹೀಗಾಗಿ ಈ ಜೋಡಿ ಮತ್ತೆ ಸಿನಿಮಾ ಮಾಡಲಿದ್ದಾರೆ.
ಇದನ್ನೂ ಓದಿ: ವ್ಹಾ.. ವ್ಹಾ.. ಈ ಫೋಟೋಗಳಲ್ಲಿ ಥೇಟ್ ಅಮ್ಮನಂತೆ ಕಾಣ್ತಾರೆ ಜಾಹ್ನವಿ ಕಪೂರ್!
ಟಾಲಿವುಡ್ ಬಾಕ್ಸಾಫೀಸ್ನಲ್ಲಿ ಹೊಸ ಅಧ್ಯಾಯ ಬರೆದ ಸಿನಿಮಾ 'ಅಖಂಡ'. ಲೆಜೆಂಡ್ ಬಾಲಕೃಷ್ಣಗೆ 'ಅಖಂಡ' ಸಿನಿಮಾ ಸೂಪರ್ ಸಕ್ಸಸ್ ತಂದುಕೊಟ್ಟಿತ್ತು. ಬಾಲಕೃಷ್ಣ ಅಬ್ಬರಕ್ಕೆ ಗಲ್ಲಾಪಟ್ಟಿಗೆಯಲ್ಲಿ ಪತರಗುಟ್ಟಿ ಹೋಗಿತ್ತು.ಹೊಸ ದಾಖಲೆಯನ್ನು ಬಾಲಯ್ಯ ಅವರ ಅಖಂಡ ಸಿನಿಮಾ ಕ್ರಿಯೆಟ್ ಮಾಡಿದೆ. 150 ಕೋಟಿ ಕ್ಲಬ್ ಸೇರಿ ಹೊಸ ದಾಖಲೆ ಸೃಷ್ಟಿಸಿದೆ. 150 ಕೋಟಿ ಕ್ಲಬ್ ಸೇರಿದ ಬಾಲಯ್ಯ ಅವರ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ