Samantha Akkineni: ಸಿನಿಮಾ ಕೆಲಸಕ್ಕೆ ಬ್ರೇಕ್ ಹಾಕಿ ಈ ಕೆಲಸದಲ್ಲಿ ಬ್ಯುಸಿ ಆಗಲಿದ್ದಾರೆ ನಟಿ ಸಮಂತಾ ಅಕ್ಕಿನೇನಿ!

‘ವಿವಾಹದ ನಂತರ ನನಗೆ ಸಿನಿಮಾ ಆಫರ್​ಗಳು ಕಡಿಮೆ ಆಗಿದೆ’ ಎಂದು ಸಮಂತಾ ಈ ಮೊದಲು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು! ಹಾಗಾಗಿ ಅವರು ಸಿನಿಮಾ ಕೆಲಸಗಳಿಗೆ ಬ್ರೇಕ್​ ನೀಡಲಿದ್ದಾರೆ ಎನ್ನಲಾಗುತ್ತಿದೆ.

Rajesh Duggumane | news18
Updated:August 13, 2019, 1:23 PM IST
Samantha Akkineni: ಸಿನಿಮಾ ಕೆಲಸಕ್ಕೆ ಬ್ರೇಕ್ ಹಾಕಿ ಈ ಕೆಲಸದಲ್ಲಿ ಬ್ಯುಸಿ ಆಗಲಿದ್ದಾರೆ ನಟಿ ಸಮಂತಾ ಅಕ್ಕಿನೇನಿ!
ಸಮಂತಾ ಅಕ್ಕಿನೇನಿ
Rajesh Duggumane | news18
Updated: August 13, 2019, 1:23 PM IST
ಮದುವೆಯ ನಂತರವೂ ಹೆಚ್ಚು ಬೇಡಿಕೆ ಉಳಿಸಿಕೊಂಡವರು ನಟಿ ಸಮಂತಾ ಅಕ್ಕಿನೇನಿ. ವಿವಾಹದ ನಂತರ ‘ರಂಗಸ್ಥಳಂ’, ‘ಓಹ್​ ಬೇಬಿ’ಯಂಥ ಹಿಟ್​ ಚಿತ್ರ ನೀಡಿದ ಖ್ಯಾತಿ ಸಮಂತಾ ಅವರಿಗಿದೆ. ಇಷ್ಟು ಬೇಡಿಕೆ ಇದ್ದರೂ ಸಮಂತಾ ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ಇದಕ್ಕೆ ಕಾರಣವೇನು ಎನ್ನುವ ವಿಚಾರ ಈಗ ಬಹಿರಂಗವಾಗಿದೆ.

ತಮಿಳಿನಲ್ಲಿ ಹಿಟ್​ ಆಗಿದ್ದ ‘96’ ಸಿನಿಮಾದಲ್ಲಿ ಸಮಂತಾ ಅಭಿನಯಿಸುತ್ತಿದ್ದು, ಮೂಲ ಚಿತ್ರದಲ್ಲಿ ತ್ರಿಶಾ ನಿರ್ವಹಿಸಿದ್ದ ಪಾತ್ರಕ್ಕೆ ಅವರು ಬಣ್ಣ ಹಚ್ಚುತ್ತಿದ್ದಾರೆ. ಇದಲ್ಲದೆ ಅಮೇಜಾನ್​ ವೆಬ್​ ಸೀರೀಸ್​ನಲ್ಲಿ ನಟಿಸಲು ಸಮಂತಾ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಇದಕ್ಕೆ ತಮಿಳಿನ ಖ್ಯಾತ ನಿರ್ದೇಶಕರೊಬ್ಬರು ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ ಎಂಬುದು ಮೂಲಗಳ ಮಾಹಿತಿ. ಈ ಎರಡು ಪ್ರಾಜೆಕ್ಟ್​ ನಂತರ ಅವರು ಏನು ಮಾಡಲಿದ್ದಾರೆ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡಿದೆ.

‘ವಿವಾಹದ ನಂತರ ನನಗೆ ಸಿನಿಮಾ ಆಫರ್​ಗಳು ಕಡಿಮೆ ಆಗಿದೆ’ ಎಂದು ಸಮಂತಾ ಈ ಮೊದಲು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು! ಅಂತೆಯೇ ಈಗ ಸಿನಿಮಾ ಕೆಲಸಗಳಿಗೆ ಚಿಕ್ಕ ಬ್ರೇಕ್​ ನೀಡಿ, ತಮ್ಮದೇ ಬಟ್ಟೆ ಬ್ರ್ಯಾಂಡ್​ ಆರಂಭಿಸುವ ಆಲೋಚನೆಯಲ್ಲಿ ಸಮಂತಾ ಇದ್ದಾರೆ. ಇದರ ಜೊತೆಗೆ ದಿನ ನಿತ್ಯ ಬಳಕೆ ಮಾಡುವ ಸೌಂದರ್ಯ ವಧರ್ಕಗಳ ಮಾರಾಟ ಮಳಿಗೆ ಆರಂಭಿಸುವ ಉದ್ದೇಶವೂ ಅವರಿಗಿದೆಯಂತೆ.

ಇದನ್ನೂ ಓದಿ: ಕುಟುಂಬಕ್ಕಾಗಿ ಗ್ಲಾಮರ್​ ತೊರೆದಿದ್ದ ಸಮಂತಾ ಈಗ ಮತ್ತೆ ಹಾಟ್​ ಸೀನ್​ಗಳಿಗೆ ರೆಡಿ? ಇಲ್ಲಿದೆ ಉತ್ತರ

ಈಗಾಗಲೇ ಬಾಲಿವುಡ್​ ಹಾಗೂ ಟಾಲಿವುಡ್​ನ ಅನೇಕ ನಟ-ನಟಿಯರು ತಮ್ಮದೇ ಬಟ್ಟೆ ಬ್ರ್ಯಾಂಡ್​ ಆರಂಭಿಸಿ ಕ್ಲಿಕ್​ ಆಗಿದ್ದಾರೆ. ಸಮಂತಾಗೂ ಹೀಗೆ ತಮ್ಮದೇ ಹೆಸರಿನಲ್ಲೊಂದು ಬಟ್ಟೆ ಬ್ರ್ಯಾಂಡ್​ ಆರಂಭಿಸಬೇಕು ಎನ್ನುವ ಕನಸಿದೆ. ಈಗ ಆ ಕನಸನ್ನು ಸಮಂತಾ ಈಡೇರಿಸಿಕೊಳ್ಳಲಿದ್ದಾರೆ.

First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...