ಈ ಒಂದು ಕಾರಣಕ್ಕೆ ಮುಂಜಾನೆ ಹಾಸಿಗೆಯಲ್ಲೇ ಒಂದು ಗಂಟೆ ಅತ್ತಿದ್ದರಂತೆ ನಟಿ ಸಮಂತಾ!

ಮಜಿಲಿ ಸಿನಿಮಾ ಸೋತು ಹೋದರೆ? ಈ ವಿಚಾರ ನೆನಪಾದಾಗೆಲ್ಲ ಸಮಂತಾಗೆ ಭಯ ಕಾಡುತ್ತಿತ್ತು. ಸಿನಿಮಾ ಬಿಡುಗಡೆ ದಿನವಂತೂ ಅವರು ತುಂಬಾ ನರ್ವಸ್​ ಆಗಿದ್ದರಂತೆ.

Rajesh Duggumane | news18
Updated:May 20, 2019, 1:51 PM IST
ಈ ಒಂದು ಕಾರಣಕ್ಕೆ ಮುಂಜಾನೆ ಹಾಸಿಗೆಯಲ್ಲೇ ಒಂದು ಗಂಟೆ ಅತ್ತಿದ್ದರಂತೆ ನಟಿ ಸಮಂತಾ!
ನಾಗ ಚೈತನ್ಯ-ಸಮಂತಾ
  • News18
  • Last Updated: May 20, 2019, 1:51 PM IST
  • Share this:
ನಟಿ ಸಮಂತಾ ಅಕ್ಕಿನೇನಿ ಹಾಗೂ ಪತಿ ನಾಗ ಚೈತನ್ಯ ಅಭಿನಯದ ‘ಮಜಿಲಿ’ ಚಿತ್ರದ ಬಗ್ಗೆ ಒಳ್ಳೆಯ ಟಾಕ್​ ಕೇಳಿಬಂದಿದೆ. ಸಿನಿಮಾ ನೋಡಿದ ಅನೇಕರು ಚಿತ್ರವನ್ನು ಮೆಚ್ಚಿಕೊಂಡಿದ್ದರು. ಅಚ್ಚರಿ ಎಂದರೆ, ಈ ಸಿನಿಮಾ ಬಿಡುಗಡೆ ಆಗುವ ದಿನ ಮುಂಜಾನೆ ಸಮಂತಾ ಒಂದು ಗಂಟೆ ಅತ್ತಿದ್ದರಂತೆ! ಇದಕ್ಕೆ ಕಾರಣ ಮಾತ್ರ ತುಂಬಾ ವಿಚಿತ್ರವಾಗಿದೆ.

ಸಮಂತಾ-ನಾಗ ಚೈತನ್ಯ ವಿವಾಹವಾದ ನಂತರ ಇದೇ ಮೊದಲ ಬಾರಿಗೆ ತೆರೆಮೇಲೆ ಒಂದಾಗಿದ್ದರು. ಹಾಗಾಗಿ, ಹೆಚ್ಚು ಕಾಳಜಿವಹಿಸಿ ಈ ಜೋಡಿ ಕಥೆ ಆಯ್ಕೆ ಮಾಡಿಕೊಂಡಿತ್ತು. ಸಿನಿಮಾ ಗೆದ್ದೇ ಗೆಲ್ಲುತ್ತದೆ ಎನ್ನುವ ನಂಬಿಕೆ ಸಮಂತಾ ಅವರದ್ದಾಗಿತ್ತಂತೆ. ಇದೇ ಕಾರಣಕ್ಕೆ ಅವರು ಚಿತ್ರದ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು.

ಆದರೆ, ಸಿನಿಮಾ ಸೋತು ಹೋದರೆ? ಈ ವಿಚಾರ ನೆನಪಾದಾಗೆಲ್ಲ ಸಮಂತಾಗೆ ಭಯ ಕಾಡುತ್ತಿತ್ತು. 'ಮಜಿಲಿ' ಬಿಡುಗಡೆ ಆಗುವ ದಿನವಂತೂ ಅವರು ತುಂಬಾ ನರ್ವಸ್​ ಆಗಿದ್ದರಂತೆ. ಸುದ್ದಿಗೋಷ್ಠಿ ಒಂದರಲ್ಲಿ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ.

“ನನ್ನ ‘ಮಜಿಲಿ’ ಚಿತ್ರ ಬಿಡುಗಡೆ ದಿನ ಬೆಳಿಗ್ಗೆ 3 ಗಂಟೆಗೆ ಹಾಸಿಗೆಯಿಂದ ಎದ್ದೆ. ನಂತರ ಎರಡು ಗಂಟೆ ಪ್ರಾರ್ಥನೆ ಮಾಡಿದ್ದೆ. ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಗ್ಗೆ ಕೇಳಿ ಬಂದ ಟಾಕ್​ ಬಗ್ಗೆ ನೋಡಿದೆ. ಎಲ್ಲರೂ ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಇದನ್ನು ನೋಡಿ ನಾನು ಒಂದು ಗಂಟೆ ನಿರಂತರವಾಗಿ ಅತ್ತಿದ್ದೆ. ನನ್ನ ಖುಷಿಗೆ ಪಾರವೇ ಇರಲಿಲ್ಲ,” ಎಂದು ಸಮಂತಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕುಟುಂಬಕ್ಕಾಗಿ ಗ್ಲಾಮರ್​ ತೊರೆದಿದ್ದ ಸಮಂತಾ ಈಗ ಮತ್ತೆ ಹಾಟ್​ ಸೀನ್​ಗಳಿಗೆ ರೆಡಿ? ಇಲ್ಲಿದೆ ಉತ್ತರ

First published:May 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading